ಕೋವಿಡ್ ಲಕ್ಷಣ ಇದ್ದರೂ ನೆಗೆಟಿವ್ ಬರಲು ಕಾರಣ ಏನು ಗೊತ್ತಾ?

Team Udayavani, Apr 26, 2021, 4:56 PM IST

ಜಹಗ್ದಸ

ಕೋವಿಡ್  ಸೋಂಕಿನ ಪ್ರಕರಣಗಳು ನಿತ್ಯ ಹೆಚ್ಚಾಗುತ್ತಲೇ ಇವೆ. ಇದರ ನಡುವೆ ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್​, ವೆಂಟಿಲೇಟರ್​ ಕೊರತೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡೋದು ಸರ್ಕಾರಕ್ಕೆ ಮತ್ತು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಕೆಲವರಿಗೆ ಕೋವಿಡ್ ಲಕ್ಷಣಗಳು ಇದ್ದರೂ ಕೂಡ ವರದಿ ಬಂದಾಗ ನೆಗೆಟಿವ್ ಎಂದು ತೋರಿಸುತ್ತದೆ.  ಕೋವಿಡ್ ನ ಎಲ್ಲಾ ಲಕ್ಷಣಗಳನ್ನ ಹೊಂದಿದ ಬಳಿಕವೂ ಕೆಲವರಿಗೆ ನೆಗೆಟಿವ್​ ರಿಪೋರ್ಟ್ ತೋರಿಸುತ್ತಿದ್ದು ಜನರನ್ನ ಗೊಂದಲಕ್ಕೆ ತಳ್ಳಿದೆ.

ದೇಶದಲ್ಲಿ ಕೋವಿಡ್ ಕೇಸ್​ ಹೆಚ್ಚಾಗುತ್ತಿರೋದರ ಜೊತೆಗೆ ಕೊರೊನಾ ಪರೀಕ್ಷಾ ವರದಿ ನೀಡಲು ವಿಳಂಬ ಮಾಡ್ತಿರೋದಕ್ಕೂ ನಾವು ಸಾಕ್ಷಿಯಾಗುತ್ತಿದ್ದೇವೆ. ಕೊರೊನಾ ಎರಡನೇ ಅಲೆಯ ಭೀಕರತೆಯ ನಡುವೆಯೇ ಕೊರೊನಾ ವರದಿಯಲ್ಲಿ ವಿಳಂಬ ಹಾಗೂ ಸುಳ್ಳು ನೆಗೆಟಿವ್​ ವರದಿಗಳು ಕೊರೊನಾ ನಿರ್ವಹಣೆಯಲ್ಲಿ ದೇಶ ವಿಫಲವಾಗುತ್ತಿರೋದಕ್ಕೆ ಹಿಡಿದ ಕೈಗನ್ನಡಿ ಆಗಿದೆ.

ಆರ್​ಟಿ ಪಿಸಿಆರ್​ ಟೆಸ್ಟ್​​ಗಳು ಸೂಕ್ಷ್ಮ ರೀತಿಯಲ್ಲಿ ವೈರಸ್​ಗಳನ್ನ ಪತ್ತೆ ಮಾಡಲು ನೆರವಾಗುತ್ತವೆ. ಆದರೆ ಯಾವುದೇ ಪರೀಕ್ಷಾ ವಿಧಾನಗಳು 100 ಪ್ರತಿಶತ ನಿಖರ ಎಂದು ಹೇಳಲು ಆಗೋದಿಲ್ಲ.

ಸಂಶೋಧಕರು ಹೇಳುವ ಮಾಹಿತಿಯ ಪ್ರಕಾರ ಆರ್​ಟಿ – ಪಿಸಿಆರ್​ ಟೆಸ್ಟ್​ ವೈರಸ್​ ಪತ್ತೆ ಮಾಡುವಲ್ಲಿ ತುಂಬಾನೇ ಸಹಕಾರಿ. ಆದರೆ ವಿವಿಧ ಕಾರಣಗಳಿಂದಾಗಿ ಈ ಆರ್​ಟಿ ಪಿಸಿಆರ್​ ಟೆಸ್ಟ್​​ನ ನಿಖರತೆಯಲ್ಲಿ ವ್ಯತ್ಯಾಸ ಉಂಟಾಗುತ್ತೆ ಎಂದು ಅಂದಾಜಿಸಲಾಗಿದೆ.

ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಹೀಗೆ ಜನರು ತಪ್ಪಾದ ಪರೀಕ್ಷಾ ವರದಿಯನ್ನ ಹೊಂದುತ್ತಿರೋದು ನಿಜಕ್ಕೂ ಆಘಾತಕಾರಿ ಮಾಹಿತಿಯಾಗಿದೆ. ಇದರಿಂದ ಕೊರೊನಾ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ತಪ್ಪು ವರದಿಗಳಿಂದಾಗಿ ಸೋಂಕಿತನ ಚಿಕಿತ್ಸೆಯಲ್ಲಿ ವಿಳಂಬ ಆಗೋದು ಹಾಗೂ ಇದರಿಂದಾಗಿ ಸೌಮ್ಯ ಲಕ್ಷಣಗಳನ್ನ ಹೊಂದಿರುವ ವ್ಯಕ್ತಿ ಮುಂದೆ ಗಂಭೀರ ಲಕ್ಷಣಗಳಿಂದ ಬಳಲುವ ಸಾಧ್ಯತೆ ಹೆಚ್ಚಿರಲಿದೆ.

ಕೊರೊನಾ ಎರಡನೆ ಅಲೆಯಿಂದಾಗಿ ಪ್ರಯೋಗಾಲಯದ ಸಿಬ್ಬಂದಿಗೆ ಮೇಲೆ ಹೆಚ್ಚುತ್ತಿರುವ ಒತ್ತಡ ಹಾಗೂ ಹೆಚ್ಚೆಚ್ಚು ಪರೀಕ್ಷೆಗಳು ಈ ರೀತಿ ತಪ್ಪು ವರದಿ ಬರಲು ಕಾರಣವಾಗಿದೆ. ಆರ್​ಟಿ – ಪಿಸಿಆರ್​ ಟೆಸ್ಟ್​ಗಳು ಯಾವ ಸಮಯದಲ್ಲಿ ಗಂಟಲುದ್ರವ ಸಂಗ್ರಹ ಮಾಡಿದರು ಎಂಬ ಆಧಾರದ ಮೇಲೆಯೂ ನಿಂತಿರುತ್ತೆ. ಅಲ್ಲದೇ ಸರಿಯಾಗಿ ಸ್ವ್ಯಾಬ್​​ ಸಂಗ್ರಹ ಮಾಡದ ಸಂದರ್ಭದಲ್ಲಿ ಅಥವಾ ನಿಖರವಾದ ತಾಪಮಾನದಲ್ಲಿ ಸ್ವ್ಯಾಬ್​​ಗಳನ್ನ ಇಡದೇ ಹೋದಲ್ಲಿ ವೈರಾಣುಗಳನ್ನ ಪತ್ತೆ ಮಾಡೋದು ಕಷ್ಟವಾಗಲಿದೆ.

ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿ ವೈರಾಣುಗಳು ಇದ್ದಲ್ಲಿ ಪರೀಕ್ಷಾ ವರದಿ ನೆಗೆಟಿವ್​ ಬರುವ ಸಾಧ್ಯತೆ ಇದೆ. ಗುರುತಿಸಲು ಆಗದೇ ಇರುವಷ್ಟು ಕಡಿಮೆ ಪ್ರಮಾಣದಲ್ಲಿ ವೈರಸ್ ದೇಹದಲ್ಲಿ ಇದ್ದರೆ ನೆಗೆಟಿವ್​ ರಿಪೋರ್ಟ್ ಬರಬಹುದು.

ಸೋಂಕಿನ ಲಕ್ಷಣ ಶುರುವಾದ ಕೂಡಲೇ ಪರೀಕ್ಷೆ ಮಾಡಿಸಿದ್ರೂ ಒಮ್ಮೊಮ್ಮೆ ತಪ್ಪು ವರದಿ ಬರಬಹುದು. ಹೀಗಾಗಿ ಲಕ್ಷಣಗಳು ಕಾಣಿಸಿಕೊಂಡ 3- 4 ದಿನ ಐಸೋಲೇಟ್​ ಆಗಿ ಬಳಿಕ ಪರೀಕ್ಷೆಗೆ ಒಳಗಾಗೋದು ಉತ್ತಮ.

ಒಂದು ವೇಳೆ ಲಕ್ಷಣಗಳು ಇದ್ದ ಬಳಿಕವೂ ನಿಮ್ಮ ವರದಿಯಲ್ಲಿ ನೆಗೆಟಿವ್​ ಎಂದು ತೋರಿಸುತ್ತಿದ್ದರೆ ನೀವು ಮಾಡಬಹುದಾದ ಉತ್ತಮ ಕೆಲಸ ಅಂದರೆ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗುವುದು. ಅಲ್ಲದೇ ಎರಡನೇ ಪರೀಕ್ಷೆಯ ವರದಿಯ ಫಲಿತಾಂಶ ಬರುವವರೆಗೂ ಕ್ವಾರಂಟೈನ್​ನಲ್ಲೇ ಇರೋದು ಇನ್ನೂ ಸೂಕ್ತವಾಗಿದೆ.

ಅಲ್ಲದೇ ನಿತ್ಯ ನಿಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಗಮನವಿರಲಿ. ಎರಡನೇ ವರದಿ ಬರುವವರೆಗೂ ವೈದ್ಯರ ಸಂಪರ್ಕದಲ್ಲಿರಿ. ಸರಿಯಾದ ಚಿಕಿತ್ಸೆಯನ್ನ ಪಡೆಯುವುದು ಅವಶ್ಯಕವಾಗಿದೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.