ಕರಿಬೇವು ತಿನ್ನಿ ತೂಕ ಇಳಿಸಿ

Team Udayavani, Jun 21, 2019, 1:20 PM IST

t-19

ಕರಿಬೇವು ಭಾರತೀಯ ಸಾಂಪ್ರದಾಯಿಕ ಅಡುಗೆಯಲ್ಲಿ ಮಹತ್ತರ ಪಾತ್ರವಹಿಸುವ ಸಾಮಾಗ್ರಿ. ರುಚಿಯಾದ ಅಡುಗೆ ಪೂರ್ಣಗೊಳ್ಳುವುದು ಉಗ್ಗರಣೆಗೆ ಕರಿಬೇವಿನ ಬಿದ್ದರಷ್ಟೇ ರುಚಿ. ಕರಿಬೇವು ಅಡುಗೆಗೆ ರುಚಿ ಕೊಡುವುದು ಮಾತ್ರವಲ್ಲ ಆರೋಗ್ಯಕರ ಪ್ರಯೋಜನಗಳು ಕೂಡ ಇವೆ. ಕರಿಬೇವಿನ ಪ್ರಮುಖ ಕೆಲಸ ದೇಹದಲ್ಲಿನ ಕೊಬ್ಬು ಕರಗಿಸುವುದು.

ತಿನ್ನುವ ಆಹಾರ ಆರೋಗ್ಯಕರವಾಗಿದ್ದರೆ ದೇಹಕ್ಕೆ ಬೇಕಾದ ಅಗತ್ಯದ ಪೋಷಕಾಂಶಗಳನ್ನು ಸಿಗುತ್ತದೆ ಮಾತ್ರವಲ್ಲದೇ ದೇಹದಲ್ಲಿರುವ ಕ್ಯಾಲೋರಿ ಕುಗ್ಗುತ್ತದೆ. ದೇಹದಲ್ಲಿ ಕ್ಯಾಲೋರಿ ಕಡಿಮೆಗೊಳಿಸಿ ಪೋಷಕಾಂಶ ನೀಡುವ ಆಹಾರ ಪದಾರ್ಥಗಳಲ್ಲಿ ಒಂದು ಈ ಕರಿಬೇವು.

ಆರೋಗ್ಯ ಪ್ರಯೋಜನಗಳು
ಆಯುರ್ವೇದದ ಪ್ರಕಾರ ಮುಂಜಾನೆ ಒಂದು ಹಿಡಿಯಷ್ಟು ಕರಿಬೇವನ್ನು ಸೇವಿಸುವುದರಿಂದ ಆರೋಗ್ಯವಂತ ದೇಹವನ್ನು ಹೊಂದಬಹುದು. ಕೊಬ್ಬು ಕರಗಿಸುವ ಗುಣವನ್ನು ಹೊಂದಿರುವ ಅತ್ಯಗತ್ಯ ಅಂಶ ಮಹನಿಂಬೈನ್‌ ಹೊಂದಿದೆ. ಅಂತೆಯೇ ದೇಹದ ತೂಕ ಹೆಚ್ಚಾಗಲು ಕಾರಣವಾಗಿರುವ ಲಿಪಿಡ್‌, ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು, ರಕ್ತದಲ್ಲಿನ ಅಸಮತೋಲ ನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ದಿನನಿತ್ಯದ ಆಹಾರದಲ್ಲಿ ಕರಿಬೇವನ್ನು ಹೆಚ್ಚಾಗಿ ಸೇವಿಸುವುದರಿಂದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು.

ಇನ್ನೊಂದು ವಿಧಾನ
ಒಂದು ಗ್ಲಾಸ್‌ ನೀರನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಅನಂತರ ಅದಕ್ಕೆ 10-15 ಕರಿಬೇವು ಎಲೆಗಳನ್ನು ಹಾಕಿ ಚನ್ನಾಗಿ ಕುದಿಸಿ. ಅನಂತರ ಈ ನೀರನ್ನು ಆರಲು ಬಿಟ್ಟು ಬಳಿಕ ಬಟ್ಟೆಯಲ್ಲಿ ಶೋಧಿಸಿ ಕುಡಿಯಿರಿ. ರುಚಿಗೆ ಬೇಕಾದರೆ ಜೇನುತುಪ್ಪ ಅಥವಾ ನಿಂಬೆ ರಸವನ್ನು ಸೇರಿಸಿಕೊಳ್ಳಬಹುದು. ಫ‌ಲಿತಾಂಶಕ್ಕಾಗಿ 20 ಅಥವಾ 30 ದಿನ ಈ ರಸವನ್ನು ಕುಡಿಯಬೇಕು.

ಸೇವನೆ ಹೇಗೆ?
ಕರಿಬೇವು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಆಹಾರದಲ್ಲಿ ಅವುಗಳನ್ನು ಸೇರಿಸುವುದನ್ನು ಎಂದಿಗೂ ನಿಲ್ಲಿಸಬಾರದು. ದೇಹದ ತೂಕ ಇಳಿಕೆಗೆ ಒಂದಷ್ಟು ಎಲೆಗಳನ್ನು ಬೆಳಿಗ್ಗೆ ಎದ್ದ ಕೂಡಲೇ ಹಾಗೆಯೇ ಜಗಿದು ಸೇವಿಸಬಹುದು.

-   ಆರ್‌.ಕೆ

ಟಾಪ್ ನ್ಯೂಸ್

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೋಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !

Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !

CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ

CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ

Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್‌ ಟವರ್‌ ಹತ್ತಿದ ಯುವಕ

Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್‌ ಟವರ್‌ ಹತ್ತಿದ ಯುವಕ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

ಹೊಸ ಸೇರ್ಪಡೆ

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೋಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ

ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ

ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.