Females Health: ಲಘು ರಕ್ತಸ್ರಾವ ಮತ್ತು ಋತುಸ್ರಾವ್ರ ವ್ಯತ್ಯಾಸ ತಿಳಿಯಿರಿ


Team Udayavani, Sep 15, 2024, 10:29 AM IST

4-female-health

ಸ್ಪಾಟಿಂಗ್‌ ಮತ್ತು ಋತುಸ್ರಾವ ಈ ಎರಡರಲ್ಲಿಯೂ ಯೋನಿಯ ಮೂಲಕ ರಕ್ತಸ್ರಾವ ಉಂಟಾಗುತ್ತದೆ. ಆದರೆ ಇವೆರಡೂ ವಿಭಿನ್ನ ದೇಹಶಾಸ್ತ್ರೀಯ ಪ್ರಕ್ರಿಯೆಗಳಾಗಿದ್ದು, ಮಹಿಳೆಯರ ಆರೋಗ್ಯದ ಮೇಲೆ ಇವೆರಡರ ಪರಿಣಾಮಗಳು ಕೂಡ ಭಿನ್ನವಾಗಿರುತ್ತವೆ. ಇವೆರಡರ ವ್ಯತ್ಯಾಸವನ್ನು ತಿಳಿದುಕೊಳ್ಳುವ ಮೂಲಕ ಸ್ತ್ರೀಯರು ತಮ್ಮ ಪ್ರಜನನ ಆರೋಗ್ಯವನ್ನು ಹೆಚ್ಚು ಚೆನ್ನಾಗಿ ಕಾಪಾಡಿಕೊಳ್ಳಬಹುದಾಗಿದೆ.

ಮಹಿಳೆಯ ಸಮಗ್ರ ಕಲ್ಯಾಣದಲ್ಲಿ ಋತುಚಕ್ರವು ಆರೋಗ್ಯಪೂರ್ಣವಾಗಿರುವುದು ಬಹಳ ಮುಖ್ಯವಾಗಿದೆ, ಆದರೆ ಬಹುತೇಕ ಬಾರಿ ಈ ವಿಷಯವು ಮೂಢನಂಬಿಕೆ, ತಪ್ಪು ಕಲ್ಪನೆ ಮತ್ತು ತಪ್ಪಾದ ತಿಳಿವಳಿಕೆಗಳಿಂದಾಗಿ ನಿಗೂಢವಾಗಿಯೇ ಉಳಿದಿರುತ್ತದೆ. ಮಹಿಳೆಯ ಪ್ರಜನನ ಆರೋಗ್ಯದ ತಿಳಿವಳಿಕೆ ಮತ್ತು ನಿರ್ವಹಣೆಯಲ್ಲಿ ಲಘು ರಕ್ತಸ್ರಾವ ಅಥವಾ ಸ್ಪಾಟಿಂಗ್‌ ಮತ್ತು ಋತುಸ್ರಾವಗಳ ನಡುವಣ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಬಹಳ ಪ್ರಧಾನವಾಗಿದೆ. ಇವೆರಡರಲ್ಲಿಯೂ ಯೋನಿಯಿಂದ ರಕ್ತಸ್ರಾವ ಉಂಟಾಗುತ್ತದೆಯಾದರೂ ಇವೆರಡೂ ಮಹಿಳೆಯ ಆರೋಗ್ಯದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುವ ಭಿನ್ನ ಭಿನ್ನ ವಿಷಯಗಳಾಗಿವೆ.

ಮಹಿಳೆಯ ನಿಯಮಿತ ಋತುಚಕ್ರದ ದಿನಗಳಿಂದ ಹೊರತಾದ ದಿನಗಳಲ್ಲಿ ಯೋನಿ ಯಿಂದ ಅಲ್ಪ ಪ್ರಮಾಣದಲ್ಲಿ ರಕ್ತಸ್ರಾವ ಆಗು ವುದನ್ನು ಸ್ಪಾಟಿಂಗ್‌ ಅಥವಾ ಲಘು ರಕ್ತಸ್ರಾವ ಎಂದು ಕರೆಯಲಾಗುತ್ತದೆ. ಋತುಚಕ್ರದ ದಿನಗಳ ಸ್ರಾವಕ್ಕೆ ಹೋಲಿಸಿದರೆ ಸ್ಪಾಟಿಂಟ್‌ ತೀರಾ ಲಘು ಪ್ರಮಾಣದ್ದಾಗಿದ್ದು, ಪ್ಯಾಡ್‌ ಬದಲಾಗಿ ಪ್ಯಾಂಟಿ ಲೈನರ್‌ ಉಪಯೋಗಿಸಿದರೆ ಸಾಕಾಗುತ್ತದೆ. ಈ ಸ್ರಾವದ ಬಣ್ಣವು ಗುಲಾಬಿ ಯಿಂದ ತೊಡಗಿ ಕಂದು ಬಣ್ಣದ ವರೆಗೆ ಬೇರೆ ಬೇರೆ ಬಣ್ಣಗಳಲ್ಲಿ ಇರಬಹುದು; ಜತೆಗೆ ಇದರ ಅವಧಿಯು ಕೆಲವು ತಾಸುಗಳಿಂದ ಹಿಡಿದು ಕೆಲವು ದಿನಗಳ ವರೆಗೆ ಇರಬಹುದಾಗಿದೆ. ಸ್ಪಾಟಿಂಗ್‌ ಹಲವು ಅಂಶಗಳಿಂದಾಗಿ ಉಂಟಾಗಬಹುದು; ಇವುಗಳಲ್ಲಿ ಅಂಡ ಬಿಡುಗಡೆ, ಹಾರ್ಮೋನ್‌ ಅಸಮತೋಲನ, ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಇನ್ನಿತರ ಯಾವುದೇ ದೇಹಾರೋಗ್ಯ ಸಮಸ್ಯೆಗಳು ಆಗಿರಬಹುದು.

ಇನ್ನೊಂದೆಡೆ ಋತುಸ್ರಾವವು ನಿಯಮಿತವಾದ ಋತುಚಕ್ರದ ಭಾಗವಾಗಿ ಉಂಟಾಗುತ್ತದೆ. ಇದರಲ್ಲಿ ಗರ್ಭಕೋಶದ ಒಳಪದರವು ಕಳಚಿಕೊಳ್ಳುವುದರ ಫ‌ಲವಾಗಿ ರಕ್ತ ಮತ್ತು ಅಂಗಾಂಶಗಳು ಸ್ರಾವವಾಗಿ ಹರಿಯುತ್ತವೆ. ಸ್ಪಾಟಿಂಗ್‌ಗೆ ಹೋಲಿಸಿದರೆ ಋತುಸ್ರಾವವು ಹೆಚ್ಚು ಪ್ರಮಾಣದಲ್ಲಿದ್ದು, ಸತತವಾಗಿರುತ್ತದೆ ಮತ್ತು ಸರಾಸರಿ ಮೂರರಿಂದ ಏಳು ದಿನಗಳ ವರೆಗೆ ನಡೆಯುತ್ತದೆ. ಈ ಸ್ರಾವವು ಕಡು ಕೆಂಪು ಬಣ್ಣದಿಂದ ಗಾಢ ಕಂದು ಬಣ್ಣದ ವರೆಗೆ ಇರಬಹುದು. ಇದೊಂದು ಸಹಜ ಜೀವಶಾಸ್ತ್ರೀಯ ಪ್ರಕ್ರಿಯೆಯಾಗಿರುವುದರಿಂದ ಋತುಚಕ್ರಗಳು ತಮ್ಮ ನಿಯಮಿತತೆ ಮತ್ತು ಗುಣಲಕ್ಷಣಗಳ ಮೂಲಕ ಮಹಿಳೆಯ ಪ್ರಜನನ ಆರೋಗ್ಯದ ಮೇಲೆ ಅಮೂಲ್ಯ ಮಾಹಿತಿಗಳನ್ನು ಒದಗಿಸಬಲ್ಲವಾಗಿವೆ.

ಸ್ಪಾಟಿಂಗ್‌ ಮತ್ತು ಋತುಸ್ರಾವಗಳ ವ್ಯತ್ಯಾಸವನ್ನು ಗುರುತಿಸಿಕೊಳ್ಳುವುದು ಒಟ್ಟಾರೆ ಆರೋಗ್ಯದ ಮೇಲೆ ನಿಗಾ ಇರಿಸಿಕೊಳ್ಳುವುದಕ್ಕೆ ಬಹಳ ಮುಖ್ಯವಾಗಿದೆ. ಯಾವಾಗಾದರೊಮ್ಮೆ ಸ್ಪಾಟಿಂಗ್‌ ಉಂಟಾಗುವುದರಿಂದ ಯಾವುದೇ ಅಪಾಯ ಇಲ್ಲವಾದರೂ ಸತತವಾಗಿ ಅಥವಾ ಅಸಹಜವಾಗಿ ರಕ್ತಸ್ರಾವ ಉಂಟಾಗುವುದು ಎಚ್ಚರಿಕೆಯ ಕರೆಘಂಟೆಯಾಗಿರುತ್ತದೆ. ರಕ್ತಸ್ರಾವದ ಸಮಯ, ಅವಧಿ, ಬಣ್ಣ ಮತ್ತು ರಕ್ತಸ್ರಾವ ದಪ್ಪಗಿದೆಯೋ ತೆಳುವಾಗಿದೆಯೋ ಎಂಬ ಅಂಶ ಹಾಗೂ ಹೊಟ್ಟೆನೋವು ಅಥವಾ ಸ್ರಾವ ದುರ್ವಾಸನೆಯಿಂದ ಕೂಡಿರುವಂತಹ ಸಂಬಂಧಿತ ಇತರ ಅಂಶಗಳು ಸಮಸ್ಯೆಯ ಮೂಲ ಕಾರಣವನ್ನು ಗುರುತಿಸುವುದಕ್ಕೆ ಸಹಾಯ ಮಾಡಬಲ್ಲವು. ಉದಾಹರಣೆಗೆ, ಗರ್ಭ ಧರಿಸಿದ ಪ್ರಾರಂಭದ ಸಮಯದಲ್ಲಿ ಸ್ಪಾಟಿಂಗ್‌ ಕಂಡುಬಂದರೆ ಗರ್ಭ ಧಾರಣೆಗೆ ಸಂಬಂಧಿಸಿದ ಸಂಭಾವ್ಯ ಸಮಸ್ಯೆಯನ್ನು ಸೂಚಿಸಿದರೆ ಋತುಚಕ್ರಬಂಧವಾದ ಬಳಿಕ ಸ್ಪಾಟಿಂಗ್‌ ಕಾಣಿಸಿಕೊಳ್ಳುವುದು ಹೆಚ್ಚು ಗಂಭೀರವಾದ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದಾಗಿದೆ.

ಹಾರ್ಮೋನ್‌ ವ್ಯತ್ಯಯ, ಗರ್ಭಕೋಶದ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳ ಸಹಿತ ಅನೇಕ ಕಾರಣಗಳು ಸ್ಪಾಟಿಂಗ್‌ ಮತ್ತು ಋತುಸ್ರಾವಕ್ಕೆ ಕೊಡುಗೆ ನೀಡಬಲ್ಲವು. ಸಂತಾನ ನಿಯಂತ್ರಣ ಗುಳಿಗೆಗಳು, ಥೈರಾಯ್ಡ ಸಮಸ್ಯೆಗಳು ಇತ್ಯಾದಿ ಕಾರಣಗಳಿಂದ ಉಂಟಾಗುವ ಹಾರ್ಮೋನ್‌ ಅಸಮತೋಲನವು ಋತುಚಕ್ರವನ್ನು ವ್ಯತ್ಯಯಗೊಳಿಸಿ ಸ್ಪಾಟಿಂಗ್‌ ಗೆ ಕಾರಣವಾಗಬಹುದು. ಪಾಲಿಪ್ಸ್‌ ಅಥವಾ ಗಡ್ಡೆ (ಫೈಬ್ರಾಯ್ಡ) ಗಳಂತಹ ಗರ್ಭಕೋಶದ ಸಮಸ್ಯೆಗಳಿಂದಲೂ ಋತುಚಕ್ರದಲ್ಲಿ ವ್ಯತ್ಯಯ ಉಂಟಾಗಿ ಸ್ಪಾಟಿಂಗ್‌ ಸಮಸ್ಯೆ ತಲೆದೋರಬಹುದಾಗಿದೆ. ಇದರ ಜತೆಗೆ ಎಂಡೊಮೆಟ್ರಿಯೋಸಿಸ್‌, ಪೆಲ್ವಿಕ್‌ ಇನ್‌ ಫ್ಲಮೇಟರಿ ಡಿಸೀಸ್‌ ಅಥವಾ ಕ್ಯಾನ್ಸರ್‌ನಂತಹ ನಿರ್ದಿಷ್ಟ ಅನಾರೋಗ್ಯಗಳು ಸ್ಪಾಟಿಂಗ್‌ ಅಥವಾ ಋತುಸ್ರಾವದ ಸಂದರ್ಭ ಅಸಹಜ ರಕ್ತಸ್ರಾವ ಲಕ್ಷಣಗಳಾಗಿ ತಮ್ಮ ಇರುವಿಕೆಯನ್ನು ತೋರ್ಪಡಿಸಬಹುದು.

ನಿಗಾ ಇರಿಸಿ

ತಮ್ಮ ತಮ್ಮ ಋತುಚಕ್ರದ ನಿಯಮಿತತೆಯ ಮೇಲೆ ನಿಗಾ ಇರಿಸುವುದು ಮತ್ತು ಯಾವುದೇ ವ್ಯತ್ಯಯಗಳು ಕಂಡುಬಂದಲ್ಲಿ ಗುರುತಿಸುವುದರ ಮೂಲಕ ಮಹಿಳೆಯರು ತಮ್ಮ ಪ್ರಜನನ ಆರೋಗ್ಯದ ಮೇಲೆ ನಿಯಂತ್ರಣ ಹೊಂದಬಹುದಾಗಿದೆ. ಸ್ಪಾಟಿಂಗ್‌ ಮತ್ತು ಸಹಜ ಋತುಸ್ರಾವಗಳ ನಡುವಣ ವ್ಯತ್ಯಾಸವನ್ನು ತಿಳಿದುಕೊಳ್ಳುವ ಮೂಲಕ ಮಹಿಳೆಯರು ತಮ್ಮ ಅನಾರೋಗ್ಯ ಲಕ್ಷಣಗಳನ್ನು ಆರೋಗ್ಯ ಸೇವಾ ಪೂರೈಕೆದಾರರಿಗೆ ಪರಿಣಾಮಕಾರಿಯಾಗಿ ತಿಳಿಯಪಡಿಸಬಹುದಾಗಿದೆ. ಆ ಮೂಲಕ ಸರಿಯಾದ ರೋಗಪತ್ತೆ ಮತ್ತು ಸೂಕ್ತ ಚಿಕಿತ್ಸೆಯ ಒದಗಣೆ ಸಾಧ್ಯವಾಗುತ್ತದೆ. ಋತುಸ್ರಾವ ಮತ್ತು ಋತುಚಕ್ರ ಆರೋಗ್ಯದ ಬಗೆಗೆ ಜನರ ನಡುವೆ ಇರುವ ತಪ್ಪುಕಲ್ಪನೆ, ಕೀಳು ಭಾವನೆಗಳನ್ನು ದೂರ ಮಾಡಿ ಈ ವಿಷಯಗಳ ಕುರಿತಾಗಿ ಮುಕ್ತ ಚರ್ಚೆ, ಸಂವಾದ ಸಾಧ್ಯವಾಗುವಂತೆ ಮಾಡಬೇಕಾದ ಅಗತ್ಯವಿದೆ. ತಿಳಿವಳಿಕೆ ಮತ್ತು ಶಿಕ್ಷಣಗಳ ಸಂಸ್ಕೃತಿಯನ್ನು ಬೆಳೆಸುವುದರ ಮೂಲಕ ಮಹಿಳೆಯರು ತಮ್ಮ ಪ್ರಜನನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ನೀಡುವಂತೆ ಮತ್ತು ಅಗತ್ಯ ಬಿದ್ದಾಗ ಯಾವುದೇ ಹಿಂಜರಿಕೆ ಇಲ್ಲದೆ ವೈದ್ಯಕೀಯ ಆರೈಕೆ ಪಡೆಯುವಂತೆ ಮಾಡಬಹುದಾಗಿದೆ.

ಎರಡೂ ಜನನಾಂಗದಿಂದ ರಕ್ತಸ್ರಾವವೇ; ಆದರೆ…

ಒಟ್ಟಾರೆಯಾಗಿ ಹೇಳುವುದಾದರೆ, ಸ್ಪಾಟಿಂಗ್‌ ಮತ್ತು ಋತುಸ್ರಾವ ಈ ಎರಡರಲ್ಲಿಯೂ ಯೋನಿಯ ಮೂಲಕ ರಕ್ತಸ್ರಾವ ಉಂಟಾಗುತ್ತದೆ. ಆದರೆ ಇವೆರಡೂ ವಿಭಿನ್ನ ದೇಹಶಾಸ್ತ್ರೀಯ ಪ್ರಕ್ರಿಯೆಗಳಾಗಿದ್ದು, ಮಹಿಳೆಯರ ಆರೋಗ್ಯದ ಮೇಲೆ ಇವೆರಡರ ಪರಿಣಾಮಗಳು ಕೂಡ ಭಿನ್ನವಾಗಿರುತ್ತವೆ. ಇವೆರಡರ ಗುಣಲಕ್ಷಣಗಳು, ಸಂಭಾವ್ಯ ಕಾರಣಗಳನ್ನು ಅರ್ಥ ಮಾಡಿಕೊಂಡು ತಮ್ಮ ಋತುಚಕ್ರದ ಮೇಲೆ ನಿಗಾ ಇರಿಸಿಕೊಳ್ಳುವ ಮೂಲಕ ಮಹಿಳೆಯರು ತಮ್ಮ ಪ್ರಜನನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಸಕ್ರಿಯ ಹೆಜ್ಜೆಗಳನ್ನು ಇರಿಸಬಹುದಾಗಿದೆ. ಋತುಚಕ್ರ ಆರೋಗ್ಯದ ಸುತ್ತ ಇರುವ ತಪ್ಪು ಕಲ್ಪನೆಗಳು ಮತ್ತು ಕೀಳು ಭಾವನೆಗಳನ್ನು ತೊಡೆದುಹಾಕಿ ಮುಕ್ತ ಸಂವಾದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಮೂಲಕ ಮಹಿಳೆಯರು ತಮ್ಮ ಗರಿಷ್ಠ ಪ್ರಜನನ ಆರೋಗ್ಯಕ್ಕಾಗಿ ಯಾವುದೇ ಹಿಂಜರಿಕೆ ಇಲ್ಲದೆ ವೈದ್ಯಕೀಯ ನೆರವನ್ನು ಪಡೆಯುವಂತೆ ಮಾಡಬಹುದಾಗಿದೆ.

ಗೈನಕಾಲಜಿಸ್ಟ್‌ ಸಂಪರ್ಕಿಸಿ

ಸ್ತ್ರೀಯರು ಜನನಾಂಗದಲ್ಲಿ ತಮಗೆ ಉಂಟಾಗಿರುವ ಯಾವುದೇ ರೀತಿಯ ಅಸಹಜ ರಕ್ತಸ್ರಾವಕ್ಕೆ ನಿಖರವಾದ ಕಾರಣವನ್ನು ಪತ್ತೆಹಚ್ಚುವುದಕ್ಕಾಗಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು. ವೈದ್ಯಕೀಯ ಹಿನ್ನೆಲೆ ವಿವರ, ದೈಹಿಕ ಪರೀಕ್ಷೆ ಮತ್ತು ಅಗತ್ಯವಾದ ಪ್ರಯೋಗಾಲಯ ಪರೀಕ್ಷೆಗಳ ಮೂಲಕ ಗೈನಕಾಲಜಿಸ್ಟ್‌ ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಬಲ್ಲರು. ಆದಷ್ಟು ಬೇಗನೆ ಸಮಸ್ಯೆಯನ್ನು ಪತ್ತೆಹಚ್ಚಿ ಸೂಕ್ತವಾದ ಚಿಕಿತ್ಸೆಯನ್ನು ಆರಂಭಿಸುವುದು ಗರಿಷ್ಠ ಪ್ರಜನನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅತ್ಯಂತ ಮುಖ್ಯವಾಗಿದೆ.

-ಡಾ| ಲಿನ್ಸೆಲ್‌ ಟೆಕ್ಸೀರಾ

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞೆ

ಒಬಿಜಿ ವಿಭಾಗ, ಕೆಎಂಸಿ ಆಸ್ಪತ್ರೆ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Asthma: ಎತ್ತರ ಪ್ರದೇಶಗಳು ಮತ್ತು ಅಸ್ತಮಾ

8-health

Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

7(1)

Health: ಆಹಾರ ಚೆನ್ನಾಗಿ ಜಗಿದು ನುಂಗಿ ನೆತ್ತಿಗೆ ಹತ್ತದಿರಲಿ!

Operation ಥಿಯೇಟರ್‌ ಒಳಗೆ ಏನು ನಡೆಯುತ್ತದೆ?

Operation ಥಿಯೇಟರ್‌ ಒಳಗೆ ಏನು ನಡೆಯುತ್ತದೆ?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

4

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

2

Theft Case: ಬ್ಯಾಂಕಿನಿಂದ ಹಣದ ಬ್ಯಾಗ್‌ ಕಳವು ಪ್ರಕರಣ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.