ದೇಹ ಮತ್ತು ಸಂಬಂಧ; ಜೀರ್ಣಾಂಗದಲ್ಲಾಗುವ ಬದಲಾವಣೆಗಳು

ಕೆಲವೊಮ್ಮೆ ಇದು ಇತರ ದೈಹಿಕ ಕಾಯಿಲೆಗಳ ಅಥವಾ ಮಾತ್ರೆಗಳ ಅಡ್ಡ ಪರಿಣಾಮಗಳಿಂದಾಗಬಹುದು

Team Udayavani, Sep 26, 2022, 2:54 PM IST

Anatomy, Body health, Health tips, Eyes, Udayavani News, ದೇಹ ಮತ್ತು ಸಂಬಂಧ, ಜೀರ್ಣಾಂಗ, ಆರೋಗ್ಯ ಟಿಪ್ಸ್

ಸಾಮಾನ್ಯವಾಗಿ ಮಾತನಾಡುವಾಗ ದೇಹ ಮತ್ತು ಮನಸ್ಸಿನ ಸಂಬಂಧದ ಬಗ್ಗೆ ಮಾತುಗಳನ್ನು ಕೇಳಿರಬಹುದು: “ಸಿಟ್ಟಿನಿಂದ ನನ್ನ ರಕ್ತ ಕುದಿಯುತ್ತಿದೆ’, “ಆ ವಿಷಯ ನೆನಪಿಸಿಕೊಂಡರೆ ಸಾಕು, ನನಗೆ ತಲೆ ನೋವು ಶುರುವಾಗುತ್ತದೆ’, “ನನ್ನ ಮನಸ್ಸಿಗೆ ಚುಚ್ಚಿ ಮಾತನಾಡಿದ’, “ನನ್ನ ಎದೆ ಒಡೆದುಬಿಟ್ಟ’, “ನನ್ನ ಮನಸ್ಸು ಭಾರವಾಗಿದೆ’, ಹೆದರಿ ನನ್ನ ಎದೆ ಝಲ್‌ ಎಂದಿತು’, “ಗಾಬರಿಯಾಗಿ ನನ್ನ ಬಾಯಿ ಒಣಗಿಹೋಯಿತು’ ಇತ್ಯಾದಿ. ಇವೆಲ್ಲ ಆಡುಭಾಷೆಯಲ್ಲಿ ಬಳಸುವ ಶಬ್ದಗಳಾಗಿರಬಹುದು; ಆದರೆ ಇವುಗಳು ದೇಹ ಮತ್ತು ಮನಸ್ಸಿನ ಸಂಬಂಧಗಳ ಬಗ್ಗೆ ಸುಳಿವು ನೀಡುತ್ತವೆ. ನಮ್ಮ ಆಲೋಚನೆಗಳ, ಭಾವನೆಗಳ, ನಂಬಿಕೆಗಳ, ವರ್ತನೆಗಳ, ನೆನಪುಗಳ, ಹಿಂದಿನ ಅನುಭವಗಳ ಮತ್ತು ವ್ಯಕ್ತಿತ್ವದ ಸಮ್ಮಿಶ್ರಣವೇ ನಮ್ಮ ಮನಸ್ಸೆಂದು ಅರ್ಥ ಮಾಡಿಕೊಳ್ಳಬಹುದು. ಇದರರ್ಥವೆಂದರೆ, ಕಂಡುಬರುವ ಎಲ್ಲ ದೈಹಿಕ ಲಕ್ಷಣಗಳು ಮಿದುಳಿಗೆ/ಮನಸ್ಸಿಗೆ ಸಂಬಂಧಿಸಿದವು ಮಾತ್ರ ಎಂದಲ್ಲ, ವ್ಯಕ್ತಿಯೊಬ್ಬ ಅನುಭವಿಸುವ ದೈಹಿಕ ಲಕ್ಷಣಗಳು ನಿಜವಾದರೂ ಕೆಲವೊಮ್ಮೆ ಅವುಗಳ ಕಂಡುಬರುವಿಕೆ, ತೀವ್ರತೆ, ಕಡಿಮೆಯಾಗುವುದು ಮನಸ್ಸಿಗೆ/ಮಿದುಳಿಗೆ ಸಂಬಂಧಪಟ್ಟಂತೆ ಇರಬಹುದು.

ಇದು ಹೇಗೆ ಸಾಧ್ಯ?
ದೇಹ ಮತ್ತು ಮಿದುಳು ನಿರಂತರವಾಗಿ ಸಂದೇಶ ಕಳಿಸುತ್ತ ಸಂಪರ್ಕದಲ್ಲಿರುತ್ತವೆ. ಈ ಸಂದೇಶಗಳು, ಮಿದುಳು ಮತ್ತು ದೇಹಕ್ಕೆ ಅಗತ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಸೂಚಿಸುತ್ತಿರುತ್ತವೆ. ಉದಾಹರಣೆಗೆ, ನೀವು ನಡೆದುಕೊಂಡು ಹೋಗುತ್ತಿರುವಾಗ ವಿಷಸರ್ಪವೊಂದು ನಿಮ್ಮ ಕಡೆ ಬರುತ್ತಿದ್ದರೆ, ನಿಮ್ಮ ಕಣ್ಣುಗಳು ನಿಮ್ಮ ಮಿದುಳಿಗೆ ವಿಷಸರ್ಪದ ಸಂದೇಶ ಕಳಿಸುತ್ತವೆ; ಅನಂತರ ತತ್‌ಕ್ಷಣವೇ ನಿಮ್ಮ ಮಿದುಳು ಅಪಾಯದಿಂದ ದೂರವಿರಲು ಏನು ಮಾಡಬೇಕೆಂದು ನಿಮ್ಮ ದೇಹಕ್ಕೆ ಸಂದೇಶ ಕಳಿಸುತ್ತದೆ. ನಿಮ್ಮ ಹೊಟ್ಟೆ ಖಾಲಿಯಾದಾಗ, ನಿಮ್ಮ ದೇಹಕ್ಕೆ ಶಕ್ತಿ ಬೇಕಾದಾಗ ನಿಮ್ಮ ಮಿದುಳಿಗೆ ಅದರ ಸಂದೇಶ ತಲುಪಿ ಆಹಾರ ಹುಡುಕಲು ಮಿದುಳು ದೇಹಕ್ಕೆ ಸಂದೇಶ ಕಳಿಸುತ್ತದೆ. ಇದೇ ರೀತಿ ಆರೋಗ್ಯಕರವಾಗಿರಲು ದೇಹ ಮತ್ತು ಮನಸ್ಸು ನಿರಂತರ ಸಂಪರ್ಕದಲ್ಲಿರುತ್ತವೆ. ಅಪಾಯದ ಸನ್ನಿವೇಶಗಳಲ್ಲಿ ಫೈಟ್‌ ಅಥವಾ ಫ್ಲೈಟ್‌ ಎನ್ನುವ ಪ್ರತಿಕ್ರಿಯೆ ಕಾರ್ಯನಿರ್ವಹಿಸುತ್ತದೆ. ಮೇಲಿನ ಸನ್ನಿವೇಶದಲ್ಲಿ ವಿಷಸರ್ಪ ಸಮೀಪ ಬಂದಾಗ ಅಲ್ಲಿಂದ ಓಡಿಹೋಗಬಹುದು ಅಥವಾ ಹಾವಿನ ಜತೆ ಹೋರಾಡಬಹುದು. ಹಾವಿನಿಂದಾಗಿ ಭಯದ ಭಾವನೆ ಬಂದು ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತವೆ: ಎದೆಬಡಿತ ಜೋರಾಗುತ್ತದೆ, ಉಸಿರಾಟ ತೀವ್ರವಾಗುತ್ತದೆ, ಬಾಯಿ ಒಣಗುತ್ತದೆ, ಮೈಯೆಲ್ಲ ಬೆವರುತ್ತದೆ, ಕೈ-ಕಾಲುಗಳ ಸ್ನಾಯುಗಳಲ್ಲಿ ರಕ್ತಸಂಚಾರ ಹೆಚ್ಚಾಗುತ್ತದೆ. ಈ ಬದಲಾವಣೆಗಳಿಂದಾಗಿ ನಿಮ್ಮ ದೇಹವು ಅಲ್ಲಿಂದ ಓಡಿಹೋಗಲು ಅಥವಾ ಹೋರಾಡಲು ಸಿದ್ಧವಾಗಿ ಬಿಡುತ್ತದೆ. ಈ ತರಹ ಗಾಬರಿಯಿಂದ ದೇಹದಲ್ಲಿ ಬದಲಾವಣೆಯಾಗುವುದು ಹಾರ್ಮೋನುಗಳು ಮತ್ತು ಕೆಲವು ರಸಾಯನಗಳಿಂದ. ಪುರಾತನ ಕಾಲದಲ್ಲಿ, ನಮ್ಮ ಪೂರ್ವಜರಾದ ಪ್ರಾಣಿಗಳಲ್ಲಿ ಈ ತರಹದ ಬದಲಾವಣೆಗಳು ಬಾಹ್ಯ ಜಗತ್ತಿನ ಅಪಾಯಗಳಿಂದ ರಕ್ಷಿಸಿಕೊಳ್ಳಲು ಅತ್ಯಗತ್ಯವಾಗಿದ್ದವು. ದುರದೃಷ್ಟವಶಾತ್‌ ಇಂದಿನ ಆಧುನಿಕ ಜಗತ್ತಿನಲ್ಲಿ ಇವುಗಳು ಹೆಚ್ಚು ಸಹಾಯಕವಾಗಿಲ್ಲ. ಇಂದಿನ ಸಮಯದಲ್ಲಿ, ಬಾಹ್ಯ ಅಪಾಯಗಳ ಬದಲಾಗಿ ನಮ್ಮ ಚಿಂತೆಗಳು ಮತ್ತು ಭಾವನೆಗಳು ಈ ತರಹದ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತಿವೆ. ಆದರೆ ಈ ಪ್ರತಿಕ್ರಿಯೆಗಳು ನಮ್ಮ ಚಿಂತೆ ಅಥವಾ ಭಾವನೆಗಳನ್ನು ಕಡಿಮೆ ಮಾಡಲು ಅಥವಾ ಸಮಸ್ಯೆ ಬಗೆಹರಿಸಲು ಯಾವುದೇ ರೀತಿಯಲ್ಲೂ ಉಪಯೋಗಕಾರಿಯಾಗಿಲ್ಲ.

ಜೀರ್ಣಾಂಗದಲ್ಲಾಗುವ ಬದಲಾವಣೆಗಳು
ಒತ್ತಡದ ಸನ್ನಿವೇಶಗಳಲ್ಲಿ ಹೊಟ್ಟೆ ಸರಿಯಿಲ್ಲ (ಉದಾ: ಕಸಿವಿಸಿಯಾಗುವುದು, ಎದೆ ಉರಿ, ಆಹಾರ ಪಚನವಾಗದಿರುವುದು, ಹುಳಿ ತೇಗು, ಗ್ಯಾಸ್‌ ತುಂಬಿದ ಹಾಗಾಗುವುದು, ವಾಕರಿಕೆ, ಭೇದಿ ಇತ್ಯಾದಿ) ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ. ಹೀಗಾಗಲು ಕಾರಣವೆಂದರೆ ಜೀರ್ಣಾಂಗ ಮತ್ತು ಮಿದುಳಿನ ನರಸಂಪರ್ಕ. ಇದೇ ಕಾರಣಕ್ಕಾಗಿ ಕೆಲವೊಮ್ಮೆ ಜೀರ್ಣಾಂಗ ವನ್ನು ಸಣ್ಣ ಮಿದುಳೆಂದು ಕೂಡ ಕರೆಯಲಾಗುತ್ತದೆ.

ಹೃದಯದ ಲಕ್ಷಣಗಳು
ಒತ್ತಡದ ಮತ್ತು ಪ್ರಚೋದಕ ಸನ್ನಿವೇಶಗಳಿಗೆ ತಕ್ಕಂತೆ ಹೃದಯದ ಕಾರ್ಯವೈಖರಿಯಲ್ಲಿ ಬದಲಾವಣೆಗಳಾಗುತ್ತವೆ. ಉದಾ: ಒತ್ತಡ ಅಥವಾ ಪ್ರಚೋದಕ ಸನ್ನಿವೇಶವಿದ್ದಾಗ ಹೃದಯಬಡಿತದ ಗತಿ (ಹಾರ್ಟ್‌ ಬೀಟ್‌) ಮತ್ತು ರಕ್ತದೊತ್ತಡ (ಬಿಪಿ – ಬ್ಲಿಡ್‌ ಪ್ರಶರ್‌) ಹೆಚ್ಚಾಗುವುದು. ಈ ಬದಲಾವಣೆಗಳು ಅಹಿತಕರವೆನಿಸಿದರೂ ಅಪಾಯಕಾರಿಯೇನಲ್ಲ; ಇವುಗಳು ತನ್ನಷ್ಟಕ್ಕೆ ತಾನೇ ಸ್ವಲ್ಪ ಸಮಯದಲ್ಲಿ ಏನೂ ಹಾನಿಯುಂಟುಮಾಡದೆ ಕಡಿಮೆಯಾಗುತ್ತವೆ. ಆದರೆ ಈ ರೀತಿ ಲಕ್ಷಣಗಳು ಕಂಡುಬಂದಾಗ ತನಗೇನೋ ಹೃದಯಸಂಬಂಧಿ ಗಂಭೀರ ಕಾಯಿಲೆ ಇದೆಯೆಂದು ಚಿಂತೆಗೀಡಾಗುತ್ತಾರೆ. ಕ್ರಮೇಣ ಇದೇ ಚಿಂತೆ, ಇರುವ ಒತ್ತಡದೊಂದಿಗೆ ಸೇರಿಕೊಂಡು ಗಾಬರಿಯುಂಟುಮಾಡುತ್ತದೆ. ಅನಂತರ ಈ ಗಾಬರಿಯಿಂದಾಗಿ ಪುನಃ ಹೃದಯದ ಲಕ್ಷಣಗಳು ಕಂಡುಬರುತ್ತವೆ. ಇದು ಒಂದು ಚಕ್ರದ ತರಹ ಮುಂದುವರಿಯಲಾರಂಭಿಸುತ್ತದೆ.

ದೈಹಿಕ ನೋವು
ನೋವೆನ್ನುವುದು ಒಂದು ಜಟಿಲವಾದ ಲಕ್ಷಣ. ಯಾಕೆಂದರೆ ಇದು ಒಂದು ವೈಯಕ್ತಿಕ ಅನುಭವ ಹಾಗೂ ಇದನ್ನು ರಕ್ತ ಪರೀಕ್ಷೆಯ ಮೂಲಕ ಅಥವಾ ಸ್ಕ್ಯಾನಿಂಗ್‌ ಮೂಲಕ ಪತ್ತೆಹಚ್ಚಲು ಸಾಧ್ಯವಿಲ್ಲ. ಇದು ಒಂದು ದೈಹಿಕ ಮತ್ತು ಮಾನಸಿಕ ಅನುಭವ ಹಾಗೂ ದೇಹ ಮತ್ತು ಮನಸ್ಸುಗಳೆರಡು ಇದರ ಮೇಲೆ ಪ್ರಭಾವ ಬೀರುತ್ತವೆ. ಉದಾ: ಒತ್ತಡದ ಸನ್ನಿವೇಶಗಳು, ಭಯ, ಆತಂಕ, ಖನ್ನತೆ, ಇತ್ಯಾದಿಗಳು ನೋವಿನ ಅನುಭವದ ಮೇಲೆ ಪರಿಣಾಮ ಬೀರುತ್ತವೆ. ಮೈಗ್ರೇನ್‌ ಮತ್ತಿತರ ತಲೆನೋವುಗಳು ಹಲವರಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಉಲ್ಬಣಗೊಳ್ಳುವುದನ್ನು ಸಾಮಾನ್ಯವಾಗಿ ನೋಡಬಹುದು.

ಚರ್ಮದ ಕಾಯಿಲೆಗಳು
ಅರ್ಟಿಕೇರಿಯಾ, ಸೊರಿಯಾಸಿಸ್‌, ಎಕಿlಮಾ ತರಹದ ಚರ್ಮದ ಕಾಯಿಲೆಗಳು ಒತ್ತಡದ ಸನ್ನಿವೇಶಗಳಲ್ಲಿ ಹೆಚ್ಚಾಗುವುದು ಸಾಮಾನ್ಯವಾಗಿ ಕಂಡುಬಂದಿದೆಯಲ್ಲದೆ ಚಿಕಿತ್ಸೆ ನಡೆಯುತ್ತಿದ್ದರೂ ಲಕ್ಷಣಗಳು ಉಲ್ಬಣಗೊಳ್ಳುತ್ತವೆ ಮತ್ತು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಪೂರ್ಣ ಪ್ರಮಾಣದಲ್ಲಿ ಫ‌ಲಕಾರಿಯಾಗುವುದಿಲ್ಲ. ಈ ರೀತಿ ಲಕ್ಷಣಗಳು ಹೆಚ್ಚಾದಾಗ ಒತ್ತಡ ಹೆಚ್ಚಾಗಿ ಪುನಃ ಚರ್ಮದ ಕಾಯಿಲೆ ಹೆಚ್ಚಾಗುತ್ತದೆ, ಇದು ಒಂದು ಚಕ್ರದ ತರಹ ಮುಂದುವರಿಯುತ್ತದೆ.

ಉಸಿರಾಟದ ತೊಂದರೆಗಳು
ಉಸಿರುಗಟ್ಟುವುದು ತುಂಬಾ ಅಹಿತಕರ ಅನುಭವ. ಇದನ್ನು ಯಾವಾಗಲೋ ಒಮ್ಮೆಯಾದರೂ ಎಲ್ಲರೂ ಅನುಭವಿಸಿರುತ್ತಾರೆ. ಉದಾ: ಬಿಟ್ಟು ಹೋಗುತ್ತಿರುವ ಬಸ್ಸನ್ನು ಹಿಡಿಯಲು ಓಡಿದಾಗ. ಉಸಿರುಗಟ್ಟುವುದು ಅಸ್ತಮಾ ಅಥವಾ ಸಿಒಪಿಡಿ ಕಾಯಿಲೆಯಲ್ಲಿಯೂ ಕಂಡುಬರುತ್ತದೆ. ಈ ರೀತಿ ಉಸಿರುಗಟ್ಟುವುದು ತುಂಬಾ ಆತಂಕವಾಗುವಂತಹ ಅನುಭವ; ತನಗೇನೋ ಸೀರಿಯಸ್‌ ಆಗಿಬಿಡುತ್ತದೆ ಅಥವಾ ಇದೇ ಕೊನೆಯ ಉಸಿರೆನ್ನುವಂತಹ ಆಲೋಚನೆ ಬಂದರೆ ಈ ರೀತಿಯ ಉಸಿರುಗಟ್ಟುವುದು ಇನ್ನೂ ಹೆಚ್ಚಾಗುತ್ತದೆ. ಕೆಲವೊಮ್ಮೆ ಇದು ಪುಕ್ಕಲುತನದ ಕಾಯಿಲೆ (ಪ್ಯಾನಿಕ್‌ ಡಿಸಾರ್ಡರ್‌) ರೂಪವಾಗಿ ಮಾರ್ಪಾಡಾಗುತ್ತದೆ.

ಸುಸ್ತಾಗುವುದು/
ಆಯಾಸವಾಗುವುದು
ನೋವಿನ ತರಹವೇ ಸುಸ್ತಾಗುವುದು ಕೂಡ ಒಂದು ವೈಯಕ್ತಿಕ ಅನುಭವವಾಗಿದ್ದು,
ವಿವಿಧ ದೈಹಿಕ ಹಾಗೂ ಮಾನಸಿಕ ವಿಷಯಗಳು ಇದರ ಮೇಲೆ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ತುಂಬಾ ಕೆಲಸ ಮಾಡಿದಾಗ, ನಿದ್ರೆ ಇರದಾಗ ಆಯಾಸವೆನಿಸುತ್ತದೆ. ಕೆಲವೊಮ್ಮೆ ಇದು ಇತರ ದೈಹಿಕ ಕಾಯಿಲೆಗಳ ಅಥವಾ ಮಾತ್ರೆಗಳ ಅಡ್ಡ ಪರಿಣಾಮಗಳಿಂದಾಗಬಹುದು. ಇದಲ್ಲದೆ ವ್ಯಕ್ತಿಯೊಬ್ಬನ ಆಲೋಚನೆಗಳು ಮತ್ತು ಭಾವನೆಗಳು ಇದರ ಮೇಲೆ ಪರಿಣಾಮ ಬೀರುತ್ತವೆ. ಉದಾ: ಕೆಟ್ಟ ವಿಷಯ ಕೇಳಿದಾಗ ಸುಸ್ತಾಗುವುದು, ಒಳ್ಳೆಯ ವಿಷಯ ಕೇಳಿದಾಗ ಮೈಯಲ್ಲಿ ಏನೋ ಚೇತನ ಬಂದಂತಾಗುವುದು.

ದೇಹ ಮತ್ತು ಮಿದುಳಿನ ಸಂಬಂಧವನ್ನು
ತಮ್ಮ ಆರೋಗ್ಯ ಕಾಯ್ದುಕೊಳ್ಳುವ ಕೆಲವು ವಿಧಾನಗಳು
1. ತಮ್ಮ ದೈಹಿಕ ಆರೋಗ್ಯ ಕಾಯ್ದುಕೊಳ್ಳುವುದು: ಹಿತವಾದ – ಪೋಷಕಾಂಶಗಳುಳ್ಳ ಆಹಾರ ಸೇವಿಸುವುದು. ನಿಯಮಿತವಾಗಿ ವ್ಯಾಯಾಮ ಮಾಡುವುದು. ನೀವು ಮಾಡಬಹುದಾದ ಮತ್ತು ನಿಮಗೆ ಸಂತೋಷವೆನಿಸುವ ದೈಹಿಕ ಚಟುವಟಿಕೆಯನ್ನು ಆಯ್ದುಕೊಳ್ಳಿ. ಇವುಗಳಿಂದಾಗಿ ದೈನಂದಿನ ಜೀವನದ ಒತ್ತಡಗಳು ಕಡಿಮೆಯಾಗುತ್ತವೆ. ನಿದ್ರೆಗೆ ಮತ್ತು ವಿಶ್ರಾಂತಿಗೆ ಸಾಕಷ್ಟು ಸಮಯ ಮೀಸಲಿಡಿ ಮತ್ತು ನಿದ್ರೆಯ ದಿನಚರಿಯೊಂದಿದ್ದರೆ ಇನ್ನೂ ಒಳ್ಳೆಯದು. ಮದ್ಯಪಾನದಿಂದ ದೂರವಿದ್ದಷ್ಟು ಒಳ್ಳೆಯದು.
2. ರಿಲ್ಯಾಕ್ಸ್‌ಆಗಲು ಕಲಿಯಿರಿ: ರಿಲ್ಯಾಕ್ಸ್‌ ಆಗಿರಲು ಕಲಿಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು:
-ಸಂಗೀತ ಕೇಳುವುದು
-ಧ್ಯಾನ/ ಅಧ್ಯಾತ್ಮದಲ್ಲಿ ತೊಡಗುವುದು
-ಸಂಗೀತ, ಚಿತ್ರ ಬಿಡಿಸುವುದು ಇತ್ಯಾದಿ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು
3. ಇತರರ ಜತೆಗೆ ಮಾತನಾಡುವುದು: ಸಾಮಾನ್ಯವಾಗಿ ಒತ್ತಡವಿದ್ದಾಗ ಇತರರೊಂದಿಗೆ ಮಾತನಾಡುವುದನ್ನು ತಳ್ಳಿಹಾಕುತ್ತಾರೆ. ಆದರೆ ತಮ್ಮ ಸಮಸ್ಯೆಗಳ ಬಗ್ಗೆ ಇತರರ ಜತೆಗೆ ಚರ್ಚಿಸುವುದು ಉತ್ತಮ. ಹೀಗೆ ಮಾಡಿದಾಗ ಒತ್ತಡ ಕಡಿಮೆಯಾಗುತ್ತದೆಯಲ್ಲದೆ, ಇರುವ ಸಮಸ್ಯೆಗೆ ಪರಿಹಾರ ಹುಡುಕಲು ಸಹಾಯವಾಗುತ್ತದೆ.
4. ನಿಮ್ಮ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಿ: ವಿವಿಧ ಸಂದರ್ಭಗಳಲ್ಲಿ ಬರುವ ನಿಮ್ಮ ಆಲೋಚನೆಗಳನ್ನು ಅವಲೋಕಿಸಿ: ಯಾವ ಭಾವನೆಗಳ ಜತೆಗೆ ಯಾವ ಆಲೋಚನೆ ಬಂದದ್ದು, ಅದರೊಂದಿಗೆ ಹೊಮ್ಮಿದ ನಡವಳಿಕೆ, ದೇಹದಲ್ಲಾದ ಬದಲಾವಣೆಗಳು ಇತ್ಯಾದಿ. ಈ ಅವಲೋಕನದಿಂದ ಆಗುವ ಉಪಯೋಗವೇನೆಂದರೆ, ಮುಂದೆ ಕಂಡುಬರುವ ಇತರ ಸನ್ನಿವೇಶಗಳಲ್ಲಿ ವ್ಯಕ್ತಿಯು ತನ್ನ ದೇಹ ಮತ್ತು ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಬಹುದು.
5. ಸನ್ನಿವೇಶಗಳನ್ನು ವಿಭಿನ್ನ ಆಯಾಮಗಳಿಂದ ನೋಡಲು/ ಪರಾಮರ್ಶಿಸಲು ಪ್ರಯತ್ನಿಸಿ: ಜಟಿಲ ಪರಿಸ್ಥಿತಿಯಲ್ಲಿ ಏಕೆ ಹೀಗಾಯಿತು ಎನ್ನುವುದರ ಜತೆಗೆ ಈ ಸನ್ನಿವೇಶ ಮೂಡಲು ಪೂರಕವಾದ ಎಲ್ಲ ವಿಷಯಗಳ ಅವಲೋಕನ ಮಾಡಿ; ಲಭ್ಯವಿರುವ ಎಲ್ಲ ದಾರಿಗಳ ಬಗ್ಗೆ ಅವಲೋಕಿಸಿ; ಲಭ್ಯವಿರುವ ಎಲ್ಲ ಸಹಾಯ ಹಸ್ತಗಳ ಬಗ್ಗೆ ಅರಿತುಕೊಳ್ಳಿ; ಪರಿಸ್ಥಿತಿ ಸುಧಾರಿಸಿದರೆ ಅಥವಾ ಬಿಗಡಾಯಿಸಿದರೆ ಆಗುವ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ.
6. ನಿಮಗೆ ಮುಖ್ಯವೆನಿಸುವ ವಿಷಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ: ನಿಮ್ಮ ಕುಟುಂಬ, ನಿಮ್ಮ ಹವ್ಯಾಸಗಳು, ನಿಮ್ಮ ಜೀವನದಲ್ಲಿ ಅತೀ ಹೆಚ್ಚಿನ ಪ್ರಾಮುಖ್ಯ ಹೊಂದಿದ್ದರೆ ನಿಮ್ಮ ಹೆಚ್ಚಿನ ಸಮಯವನ್ನು ಅವುಗಳಿಗಾಗಿ ಮೀಸಲಿಡಿ. ನೆನಪಿಡಿ ನೀವು ಕಳೆಯುವ ಸಮಯ ನಿಮ್ಮ ಆಯ್ಕೆಗಳಿಗಾಗಿ ಇರಬೇಕೇ ಹೊರತು ಇತರರ ವಿಚಾರಗನುಗುಣವಾಗಿಯಲ್ಲ.
7. ಮನಸ್ಸಿಗೆ ಸಂತೋಷ ಸಿಗುವ ಚಟುವಟಿಕೆಗಳನ್ನು ಹುಡುಕಿ: ಸ್ನೇಹಿತರ/ಕುಟುಂಬದ ಜತೆಗೆ ಹೋಗುವುದು, ಆಟ ಆಡುವುದು, ಇಷ್ಟವಾದ ಕಾರ್ಯಕ್ರಮ ನೋಡುವುದು, ಹರಟೆ ಹೊಡೆಯುವುದು ಇತ್ಯಾದಿ.

ಈ ರೀತಿ ದೇಹ ಮತ್ತು ಮನಸ್ಸಿನ ಸಂಬಂಧ ಟು – ವೇ ರಸ್ತೆಯ ಹಾಗೆ ಇರುವಂಥದ್ದು – ಸಂಚಾರ ಎರಡೂ ದಿಕ್ಕಿನಲ್ಲಿ ಆಗುತ್ತದೆಯಲ್ಲದೆ ಒಂದರಲ್ಲಿನ ಬದಲಾವಣೆ ಇನ್ನೊಂದರ ಮೇಲೆ ಪರಿಣಾಮ ಬೀರುತ್ತದೆ. ಇವೆರಡರ ನಡುವಿನ ಸಂಬಂಧ ಅರ್ಥ ಮಾಡಿಕೊಂಡು ಆರೋಗ್ಯವಂತರಾಗಿರಲು ಹಲವಾರು ವಿಧಾನಗಳನ್ನು ಪಾಲಿಸಬಹುದು.

ಡಾ| ರವೀಂದ್ರ ಮುನೋಳಿ
ಸಹ ಪ್ರಾಧ್ಯಾಪಕರು,
ಮನೋರೋಗ ಚಿಕಿತ್ಸಾ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

tdy-1

ಬಾಲಕಿಗೆ ಲೈಂಗಿಕ ಕಿರುಕುಳ: 18 ವರ್ಷ ಸಜೆ, ದಂಡ  

ವಿಟ್ಲ: 5 ವಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ

ವಿಟ್ಲ: 5 ವಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ

ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರ ಪಠಣ

ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರ ಪಠಣ

tdy-1

ಮೊಬೈಲ್‌ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ:ಏನಿದು‌ ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್

ಕ್ಯಾಂಪ್ಕೋ ಲಿಮಿಟೆಡ್; ರೈತರ, ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಸಹಕಾರಿ ಸಂಸ್ಥೆ…

ಕ್ಯಾಂಪ್ಕೋ ಲಿಮಿಟೆಡ್; ರೈತರ, ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಸಹಕಾರಿ ಸಂಸ್ಥೆ…ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಣ್ಣಿನ ಪೊರೆ ನಿವಾರಣೆಗೆ ವರದಾನ ಫೇಕೊ ಇಮಲ್ಸಿಫಿಕೇಶನ್‌

ಕಣ್ಣಿನ ಪೊರೆ ನಿವಾರಣೆಗೆ ವರದಾನ ಫೇಕೊ ಇಮಲ್ಸಿಫಿಕೇಶನ್‌

DOCTOR

ಸ್ತನ ಕ್ಯಾನ್ಸರ್‌ ತಪಾಸಣೆ

ಶ್ರವಣ ದೋಷಕ್ಕೆ ಪ್ರಮುಖ ಕಾರಣಗಳು…ಪರಿಹಾರವೇನು?

ಶ್ರವಣ ದೋಷಕ್ಕೆ ಪ್ರಮುಖ ಕಾರಣಗಳು…ಪರಿಹಾರವೇನು?

ದೀರ್ಘ‌ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

5

ಮಾದಕ ವಸ್ತುಗಳ ಬಗ್ಗೆ ತಪ್ಪು ನಂಬಿಕೆಗಳು

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

tdy-2

ಶಾಲಾ ಕಟ್ಟಡದಿಂದ ಬಿದ್ದು ಯುವಕ ಸಾವು

tdy-1

ಬಾಲಕಿಗೆ ಲೈಂಗಿಕ ಕಿರುಕುಳ: 18 ವರ್ಷ ಸಜೆ, ದಂಡ  

ವಿಟ್ಲ: 5 ವಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ

ವಿಟ್ಲ: 5 ವಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.