ಆರೋಗ್ಯ ವರ್ತಮಾನ

Team Udayavani, Apr 2, 2019, 10:27 AM IST

ಅಸ್ತಮಾ ನಿಯಂತ್ರಣಕ್ಕೆ ವಿಟಮಿನ್‌ ಡಿ ಸಹಕಾರಿ
ಎಲುಬುಗಳು ಗಟ್ಟಿಮುಟ್ಟಾಗಿರುವುದಕ್ಕೆ ಸಹಾಯವನ್ನು ಮಾಡುವ ವಿಟಮಿನ್‌ ಡಿ ಮಕ್ಕಳಲ್ಲಿ ಅಸ್ತಮಾ ಕಂಟ್ರೋಲ್‌ ಮಾಡುವುದಕ್ಕೂ ಸಹಾಯ ಮಾಡುತ್ತದೆ ಎಂಬ ವಿಷಯ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಮನೆಗಳಲ್ಲಿ ವಾಯುಮಾಲಿನ್ಯದ ಮಟ್ಟ, ರಕ್ತದಲ್ಲಿ ವಿಟಮಿನ್‌ ಡಿ ಮಟ್ಟ ಮತ್ತು ಅಸ್ತಮದ ಲಕ್ಷಣಗಳ ಮೇಲೆ 120 ಶಾಲಾ ಮಕ್ಕಳನ್ನು ಪರೀಕ್ಷಿಸಲಾಯಿತು. ಅದರಲ್ಲಿ 1/3 ಭಾಗದಷ್ಟು ಮಕ್ಕಳಲ್ಲಿ ಈ ಸಮಸ್ಯೆ ಇರುವುದು ತಿಳಿದುಬಂದಿದೆ. ವಿಟಮಿನ್‌ ಡಿ ಪೋಷಕಾಂಶದ ಪ್ರಮಾಣದ ದೇಹದಲ್ಲಿ ಹೆಚ್ಚಿದ್ದರೆ ಅಸ್ತಮಾವನ್ನು ಕಡಿಮೆಗೊಳಿಸಬಹುದೆಂದು ಸಂಶೋಧನೆಯಲ್ಲಿ ಕಂಡುಹಿಡಿಯಲಾಗಿದೆ.
ಗರ್ಭಿಣಿ ಧೂಮಪಾನ; ಮಕ್ಕಳಲ್ಲಿ ಬೊಜ್ಜು
ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಧೂಮಪಾನ ಮಾಡಿದರೆ ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಸಂಶೋಧನೆಯ ಪ್ರಕಾರ ಗರ್ಭಿಣಿಯೂ ಧೂಮಪಾನ ಮಾಡಿದರೆ ಮುಂದೆ ಮಕ್ಕಳು ಬೊಚ್ಚು ಸಮಸ್ಯೆ ಎದುರಿಸುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಸಂಶೋಧನೆಯ ಪ್ರಕಾರ ಗರ್ಬಿಣಿ ಮಹಿಳೆಯು ಧೂಮಪಾನ ಮಾಡಿದರೆ ಜೀವಕೋಶಗಳ ಅಭಿವೃದ್ಧಿಗೆ ಪೂರಕವಾದ ಜೀನ್‌ಗಳಲ್ಲಿ ವ್ಯತ್ಯಾಸ ಉಂಟುಮಾಡುತ್ತದೆ ಮತ್ತು ಬೊಜ್ಜಿಗೆ ಕಾರಣವಾಗುತ್ತದೆ ಎಂಬ ವಿಷಯವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ