ಹೆತ್ತವರಿಂದ ಮಗುವಿಗೆ ಎಚ್‌ಐವಿ ಪ್ರಸರಣ ತಡೆ ಹೇಗೆ?


Team Udayavani, Jun 20, 2019, 6:05 PM IST

HIV

ಸಾಂದರ್ಭಿಕ ಚಿತ್ರ.

-ಮುಂದುವರಿದುದು
ಪ್ರಸವದ ಮೂರು ತಿಂಗಳಲ್ಲಿ ಗರ್ಭಿಣಿಯ ಹೆಚ್‌.ಐ.ವಿ. ಫ‌ಲಿತಾಂಶ ಪಾಸಿಟಿವ್‌ ಬಂದರೆ, ಎ.ಆರ್‌.ಟಿ. ಕೇಂದ್ರದಲ್ಲಿ ನೋಂದಣಿಯಾಗಿ ಎ.ಆರ್‌.ಟಿ. ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ಈ ಚಿಕಿತ್ಸೆಯನ್ನು ಜೀವನದ ಪರ್ಯಂತ ತೆಗೆದುಕೊಳ್ಳಬೇಕು ಮತ್ತು ಹೆರಿಗೆಯನ್ನು ಐಸಿಟಿಸಿ ವ್ಯವಸ್ಥೆಯಿರುವ ಹೆರಿಗೆ ಆಸ್ಪತ್ರೆಯಲ್ಲಿಯೇ ಮಾಡಿಸಿಕೊಳ್ಳಬೇಕು. ಯಾಕೆಂದರೆ ಹೆರಿಗೆಯ ನಂತರ ಮಗು ಜನಿಸಿದ 72 ಘಂಟೆಗಳ ಒಳಗಾಗಿ ಮಗುವಿನ ತೂಕದ ಮೇರೆಗೆ ನೆವರಪಿನ್‌ ದ್ರಾವಣವನ್ನು 6 ವಾರಗಳ ತನಕ ಶಿಶುವಿಗೆ ಕೊಡಲಾಗುತ್ತದೆ. ಮತ್ತು ಆರು ವಾರದಲ್ಲಿ ಶಿಶು ಐಸಿಟಿಸಿ/ಈ.ಐ.ಡಿ. ಸೆಂಟರ್ನನಲ್ಲಿ ಹೆಚ್‌.ಐ.ವಿ. ಮೊದಲ ಪರೀಕ್ಷೆಗೊಳಪಡಬೇಕು. 6 ವಾರಗಳ ನಂತರ ನೆವರಪಿನ್‌ ದ್ರಾವಣವನ್ನು ನಿಲ್ಲಿಸಿ ಸಿ.ಪಿ.ಟಿ. ದ್ರಾವಣವನ್ನು ಮಗುವಿನ ತೂಕದ ಆದಾರದ ಮೇಲೆ ಕೊಡಲಾಗುತ್ತದೆ. ಮಗುವಿನ ಮರುಪರೀಕ್ಷೆ 6 ತಿಂಗಳು, 12 ತಿಂಗಳು ಮತ್ತು 18 ತಿಂಗಳಲ್ಲಿ ಕೊನೆಯ ಪರೀಕ್ಷೆಯಾಗಿರುತ್ತದೆ. ಮಗುವಿನ ಫ‌ಲಿತಾಂಶ ನೆಗೆಟಿವ್‌ ಎಂದಾದರೆ ಸಿ.ಪಿ.ಟಿ. ದ್ರಾವಣವನ್ನು ನಿಲ್ಲಿಸಬೇಕು ಮತ್ತು ಪಾಸಿಟಿವ್‌ ಬಂದರೆ ಮುಂದುವರಿಸಬೇಕು.

ಕೆಲವೊಮ್ಮೆ ಹೆರಿಗೆಯ ಸಂದರ್ಭದಲ್ಲಿ ಎಚ್‌.ಐ.ವಿ. ಪಾಸಿಟಿವ್‌ ಎಂದು ಗೊತ್ತಾದ ತಾಯಿಗೆ ಎ.ಆರ್‌.ಟಿ. ಚಿಕಿತ್ಸೆಯನ್ನು ತಕ್ಷಣ ಕೊಡಲಾಗುತ್ತದೆ. ನೆವರಪಿನ್‌ ದ್ರಾವಣವನ್ನು ಮಗು ಜನಿಸಿದ 72 ಗಂಟೆಯೊಳಗಾಗಿ 12 ವಾರಗಳ ತನಕ ಕೊಡಲಾಗುತ್ತದೆ.

ಒಟ್ಟಾರೆಯಾಗಿ ಪ್ರಸವದ ಮೂರು ತಿಂಗಳಿಂದ ಹೆರಿಗೆಯಾದ 18 ತಿಂಗಳುಗಳ ತನಕ ತಾಯಿ ಮಗುವಿನ ಅನುಸರಣೆ ಅಗತ್ಯ. ಇದನ್ನು ಐಸಿಟಿಸಿಯ ಆಪ್ತ ಸಮಾಲೋಚಕರು ನಿರ್ವಹಿಸುತ್ತಾರೆ. ಮಗುವಿನ ಹೆಚ್‌.ಐ.ವಿ. ಫ‌ಲಿತಾಂಶ ಪಾಸಿಟಿವ್‌ ಬಂದರೆ ಎ.ಆರ್‌.ಟಿ. ಕೇಂದ್ರದಲ್ಲಿ ನೊಂದಣಿಯಾಗಿ ಚಿಕಿತ್ಸೆ ನೀಡಲಾಗುತ್ತದೆ.

ಐಸಿಟಿಸಿ ಎಂದರೆ ಒಬ್ಬ ವ್ಯಕ್ತಿಯು ಸ್ವ ಇಚ್ಛೆಯಿಂದ ಅಥವಾ ಸಲಹೆಯ ಮೇರೆಗೆ ಹೆಚ್‌.ಐ.ವಿ. ಆಪ್ತ ಸಲಹೆ ಹಾಗೂ ಪರೀಕ್ಷೆಗೆ ಒಳಗಾಗುವ ಸ್ಥಳ.

ಐಸಿಟಿಸಿಯ ಪ್ರಮುಖ ಕೆಲಸಗಳೆಂದರೆ
– ಹೆಚ್‌.ಐ.ವಿ. ಏಡ್ಸ್‌ ಹರಡುವ ವಿಧಾನಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಮೂಲಭೂತ ಮಾಹಿತಿಯನ್ನು ಒದಗಿಸುವುದು.
– ಪರೀಕ್ಷೆಗೆ ಮುಂಚೆ ಹಾಗೂ ಪರೀಕ್ಷಾ ನಂತರದ ಆಪ್ತಸಮಾಲೋಚನೆ.
– ಪ್ರಾಥಮಿಕ ಹಂತದಲ್ಲಿಯೇ ಹೆಚ್‌.ಐ.ವಿ.ಯನ್ನು ಪತ್ತೆ ಮಾಡುವುದು.
– ನಡವಳಿಕೆ ಬದಲಾವಣೆಯನ್ನು ಪ್ರೇರೇಪಿಸಿ, ಅಪಾಯದ ಸಾಧ್ಯತೆಯನ್ನು ಕಡಿಮೆಗೊಳಿಸುವುದು.
– ಹೆಚ್‌.ಐ.ವಿ. ತಡೆಗಟ್ಟುವ, ಆರೈಕೆ ಮತ್ತು ಚಿಕಿತ್ಸೆಯ ಸೇವೆಗಳ ಸಂಪರ್ಕವನ್ನು ಜನರಿಗೆ ಒದಗಿಸುವುದು.
ಐಸಿಟಿಸಿಯಲ್ಲಿ ಯಾರು ಬೇಕಾದರೂ ತಮ್ಮ ಹೆಚ್‌.ಐ.ವಿ. ಸ್ಥಿತಿಯನ್ನು ತಿಳಿದುಕೊಳ್ಳಲು ಪರೀಕ್ಷಿಸಬಹುದು. ಹೆಚ್‌.ಐ.ವಿ./ಏಡ್ಸ್‌ ಆಪ್ತ ಸಲಹೆ. ಅರ್ಥಿ ಹಾಗೂ ಅಪ್ತ ಸಲಹೆಗಾರರ ನಡುವೆ ನಡೆಯುವ ಗೌಪ್ಯ ಸಂಭಾಷಣೆ. ಈ ಸಂಭಾಷಣೆಯು ಹೆಚ್‌.ಐ.ವಿ./ಏಡ್ಸ್‌ ಮಾಹಿತಿ ನೀಡುವ ಹಾಗೂ ನಡವಳಿಕೆಯಲ್ಲಿ ಬದಲಾವಣೆ ತರುವ ಗುರಿಯಿಟ್ಟುಕೊಂಡಿದೆ. ಅಂತೆಯೇ ಹೆಚ್‌.ಐ.ವಿ. ಪರೀಕ್ಷೆ ಮಾಡಿಸಿಕೊಳ್ಳುವ ತೀರ್ಮಾನ ತೆಗೆದುಕೊಳ್ಳಲು ಹಾಗೂ ಆ ಪರೀಕ್ಷೆಯ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಆಪ್ತ ಸಲಹೆ ಸಹಾಯ ಮಾಡುತ್ತದೆ.

ಹೆಚ್‌.ಐ.ವಿ. ಸೋಂಕು ತಗುಲಿದಾಗಿನಿಂದ ಹೆಚ್‌.ಐ.ವಿ. ಪ್ರತಿಕಾಯಗಳನ್ನು ರಕ್ತದಲ್ಲಿ ಪತ್ತೆ ಹಚ್ಚುವವರೆಗಿನ (3-6 ತಿಂಗಳು) ನಡುವಿನ ಅವಧಿಯನ್ನು ವಿಂಡೋ ಅವಧಿ ಎನ್ನುತ್ತಾರೆ. ಐಸಿಟಿಸಿಯಲ್ಲಿ ಅಂಟಿಬಾಡಿಗಳು ಇನ್ನೂ ಅಭಿವೃದ್ಧಿಯಾಗಿರದ ವಿಂಡೋ ಅವಧಿಯಲ್ಲಿ ಸೋಂಕಿತರನ್ನು ಪರೀಕ್ಷೆ ಮೂಲಕ ಪತ್ತೆ ಹಚ್ಚುವುದು ಕಷ್ಟ ಸಾಧ್ಯ. ಈ ಅವಧಿಯಲ್ಲಿ ವ್ಯಕ್ತಿ ಸೋಂಕಿತನಾಗಿದ್ದರೂ ಪರೀಕ್ಷೆ ನೆಗೆಟಿವ್‌ ಫ‌ಲಿತಾಂಶವನ್ನು ನೀಡಬಹುದು. ಇದನ್ನು ಫಾಲ್ಸ್‌ ನೆಗೆಟಿವ್‌ ಎನ್ನಲಾಗುತ್ತದೆ. ಆದ್ದರಿಂದ ಐಸಿಟಿಸಿಗಳಲ್ಲಿ ಅಪಾಯತೆಯನ್ನು ನಿರ್ಧರಿಸಿ, ಹೆಚ್‌.ಐ.ವಿ. ಸೋಂಕಿಗೆ ತೆರೆದುಕೊಂಡ ಭೂತಕಾಲದ ಸಂಭವನೀಯ ಸಮಯವನ್ನು ನಿರ್ಧರಿಸಿ, ವ್ಯಕ್ತಿಯು ವಿಂಡೋ ಅವಧಿಯಲ್ಲಿರಬಹುದೆಂಬ ಸಂಶಯದಿಂದ ಮೂರು ತಿಂಗಳ ನಂತರ ಮರುಪರೀಕ್ಷಿಸುವಂತೆ ಆಪ್ತಸಮಾಲೋಚನೆ ನೀಡಲಾಗುತ್ತದೆ.

ಹೆಚ್‌.ಐ.ವಿ. ಸೋಂಕಿತರಾದವರು ತಮ್ಮ ಸ್ಥಿತಿಯ ಬಗ್ಗೆ ತಿಳಿದಿರಬೇಕಾದದ್ದು ಅವಶ್ಯವಾಗಿರುತ್ತದೆ. ಇಲ್ಲವಾದಲ್ಲಿ ಆತ/ಆಕೆ ತಿಳಿಯದೆಯೇ ಇತರರಿಗೆ ವೈರಸ್‌ಗಳನ್ನು ಹರಡಬಹುದು. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯದೆ ಹೋಗಬಹುದು. ಸೋಂಕಿತ ವ್ಯಕ್ತಿ ಹೆಚ್‌.ಐ.ವಿ. ಇರುವಿಕೆಯನ್ನು ಸರಳ ರಕ್ತ ಪರೀಕ್ಷೆಯ ಮೂಲಕ ಪತ್ತೆ ಹಚ್ಚಿಸಿಕೊಳ್ಳಬಹುದು.

ಹೆಚ್‌.ಐ.ವಿ./ಏಡ್ಸ್‌ನಿಂದ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸುವ ಜೊತೆಗೆ ಅವರ ಭಾವನೆ ಹಾಗೂ ಅವಶ್ಯಕತೆಗಳಿಗೆ ಬೆಂಬಲ ನೀಡಿ, ಅವರು ಸಮಾಜದಲ್ಲಿ ಇತರರಂತೆ ಸಕಾರಾತ್ಮಕ ಜೀವನ ನಡೆಸಿಕೊಂಡು ಭಿನ್ನತೆಯ ಪರದೆಯಿಂದ ಹೊರತರಲು ಮತ್ತು ಹೆಚ್‌.ಐ.ವಿ. ಭಾದಿತ ಮಹಿಳೆಯರನ್ನು ಸಶಕ್ತಗೊಳಿಸಿ ಅವರಿಗಾಗಿ ಇರುವ ಸರಕಾರದ ಸೇವೆಗಳನ್ನು ಸರಿಯಾಗಿ ತಲುಪಿಸುವಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.