ರೋಗ ನಿರೋಧಕತೆ


Team Udayavani, Feb 5, 2017, 3:45 AM IST

Immunizations.jpg

ಜಾಗತಿಕ ಸನ್ನಿವೇಶ
ಒಂದು ಕ್ರಿಯಾಶೀಲ ರೋಗನಿರೋಧಕ ವ್ಯವಸ್ಥೆಯು ಡಿಫ್ತಿàರಿಯಾ, ಟೆಟನಸ್‌, ನಾಯಿಕೆಮ್ಮು ಮತ್ತು ದಡಾರ ಪ್ರಕರಣಗಳಿಂದ ಉಂಟಾಗುವ ಸುಮಾರು 2ರಿಂದ 3 ದಶಲಕ್ಷ ಮರಣ ಪ್ರಕರಣಗಳನ್ನು ತಡೆಯಬಹುದು ಎಂದು  ವಿಶ್ವ ಆರೋಗ್ಯ ಸಂಸ್ಥೆಯು (WHO) ಅಭಿಪ್ರಾಯ ಪಡುತ್ತದೆ. 

ಜಗತ್ತಿನಾದ್ಯಂತ ಈಗಲೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸುಮಾರು 22.6 ದಶಲಕ್ಷ ನವಜಾತ ಶಿಶುಗಳು ಚುಚ್ಚುಮದ್ದುಗಳ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. 194 ಸದಸ್ಯ ರಾಜ್ಯಗಳ-ವಿಶ್ವ ಆರೋಗ್ಯ ಸಭೆಯು, ಜಾಗತಿಕ ರೋಗನಿರೋಧಕ ಕಾರ್ಯಾಚರಣೆ ಯೋಜನೆಯನ್ನು  2012 ಮೇಯಲ್ಲಿ ಅಂಗೀಕರಿಸಿತು. 2020ರ ಹೊತ್ತಿಗೆ ಎಲ್ಲ ಜನಸಮುದಾಯದಲ್ಲೂ ಲಭ್ಯ ಇರುವ ಚುಚ್ಚುಮದ್ದುಗಳನ್ನು ಉಪಯೋಗಿಸಿಕೊಂಡು ಜಗತ್ತಿನಾದ್ಯಂತ ಲಕ್ಷಾಂತರ ಮರಣಗಳನ್ನು ತಡೆಯುವ ಉದ್ದೇಶವನ್ನು ಇದು ಹೊಂದಿದೆ.
  
2015ರಲ್ಲಿ, ಸುಮಾರು 86% ನವಜಾತ ಶಿಶುಗಳು (112 ದಶಲಕ್ಷ)3 ಡೋಸ್‌ ಡಿಫ್ತಿàರಿಯಾ, ನಾಯಿಕೆಮ್ಮು, ಟೆಟನಸ್‌ ಚುಚ್ಚುಮದ್ದನ್ನು ಪಡೆದಿದ್ದು, ಇದು  ಆ ಮಕ್ಕಳಿಗೆ ಸೋಂಕುಕಾರಕ ಕಾಯಿಲೆಗಳ  ಗಂಭೀರ ತೊಡಕುಗಳು, ವೈಕಲ್ಯ ಮತ್ತು ಮರಣಗಳಿಂದ ರಕ್ಷಣೆಯನ್ನು ನೀಡಿದೆ. 2015ರಲ್ಲಿ, 126 ರಾಷ್ಟ್ರಗಳು ಈಕಖ3 ಚುಚ್ಚುಮದ್ದು ನೀಡಿಕೆ ಯೋಜನೆಯ ಕನಿಷ್ಠ 90% ಪ್ರಮಾಣವನ್ನು ಪೂರೈಸಿವೆ. 

ಜಾಗತಿಕ ರೋಗ
ನಿರೋಧಕ  ವ್ಯಾಪ್ತಿ

ರೋಗನಿರೋಧಕತೆ ಮತ್ತು ಚುಚ್ಚುಮದ್ದು ನೀಡಿಕೆ: ವ್ಯಾಕ್ಸಿನೇಷನ್‌ ಎಂಬುದು ಚುಚ್ಚು ಮದ್ದು ನೀಡುವಿಕೆಗೆ ನಿಖರವಾಗಿ ಬಳಸುವಂತಹ ಶಬ್ದ-ಅಂದರೆ ರೋಗನಿರೋಧಕತೆಯ ಉದ್ದೇಶಕ್ಕಾಗಿ ಚುಚ್ಚುಮದ್ದನ್ನು (ಇಂಜೆಕ್ಷನ್‌) ಪಡೆಯುವುದನ್ನು ಅಥವಾ ಡ್ರಾಪ್ಸ್‌ ನುಂಗುವುದನ್ನು ಇದು ಸೂಚಿಸುತ್ತದೆ. ಚುಚ್ಚುಮದ್ದನ್ನು ಪಡೆಯುವ ಮತ್ತು ಚುಚ್ಚುಮದ್ದನ್ನು ಪಡೆದ ಕಾರಣದಿಂದ ಆ ಕಾಯಿಲೆಯಿಂದ ಪ್ರತಿರಕ್ಷಣೆ ಪಡೆಯುವ ಎರಡೂ ಪ್ರಕ್ರಿಯೆಗೂ “ಇಮ್ಯುನೈಸೇಷನ್‌’ ಎಂಬ ಶಬ್ದವನ್ನು ಬಳಸುತ್ತಾರೆ. ಇಮ್ಯುನೈಸೇಷನ್‌ ಎನ್ನುವುದನ್ನು ರೋಗಪ್ರತಿರೋಧಕತೆ ಅಥವಾ ರೋಗನಿರೋಧಕತೆ ಎಂದೂ ಸಹ ಅರ್ಥಮಾಡಿಕೊಳ್ಳಬಹುದು. 

ಇಮ್ಯುನೈಸೇಷನ್‌ ಎಂದರೇನು?
ಇಮ್ಯುನೈಸೇಷನ್‌ ಎಂಬುದು ವ್ಯಕ್ತಿಯಲ್ಲಿ, ಸಾಮಾನ್ಯವಾಗಿ ಚುಚ್ಚುಮದ್ದಿನ ಮೂಲಕ ಪ್ರತಿರಕ್ಷಣೆಯನ್ನು ಉಂಟುಮಾಡುವ ಅಥವಾ ಒಂದು ಸೋಂಕಿನ ಕಾಯಿಲೆಗೆ ರೋಗನಿರೋಧಕತೆಯನ್ನು ಉಂಟು ಮಾಡುವ ಒಂದು ಪ್ರಕ್ರಿಯೆ. ಚುಚ್ಚುಮದ್ದುಗಳು, ಸೋಂಕು ಅಥವಾ ಕಾಯಿಲೆಯ ವಿರುದ್ಧ ವ್ಯಕ್ತಿಗೆ ರಕ್ಷಣೆ ನೀಡಲು ದೇಹದ ಸ್ವಯಂ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಂದರೆ ರೋಗನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುತ್ತವೆ. ಇಮ್ಯುನೈಸೇಷನ್‌ ಅಥವಾ ರೋಗನಿರೋಧಕತೆ ಎಂಬುದು, ಕೆಲವು ರೋಗಗಳ ವಿರುದ್ಧ ನಿಮ್ಮ ಮಗುವಿಗೆ ರಕ್ಷಣೆ ಒದಗಿಸಲು ಇರುವ ಸರಳ, ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನ. ಚುಚ್ಚುಮದ್ದನ್ನು ಚುಚ್ಚಿಸಿಕೊಳ್ಳುವುದರಿಂದ ಆಗುವ ಸಣ್ಣಪುಟ್ಟ ಅಡ್ಡ ಪರಿಣಾಮಗಳಿಗೆ ಹೋಲಿಸಿದರೆ, ಚುಚ್ಚಿಸಿಕೊಳ್ಳದೇ ಇರುವುದರಿಂದ ಉಂಟಾಗಬಹುದಾದ ಅಪಾಯವು ಕೆಲವು ಪಟ್ಟು ಹೆಚ್ಚಾಗಿರುತ್ತದೆ.  

ರೋಗ ನಿರೋಧಕತೆ 
ನಮಗೆ ಯಾಕೆ ಆವಶ್ಯಕ?

ಸೋಂಕುಕಾರಕ ರೋಗಗಳನ್ನು ನಿವಾರಿಸುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರೋಗನಿರೋಧಕಗಳು ಬಹಳ ಪರಿಣಾಮಕಾರಿ ಸಾಧನ ಎಂಬುದಾಗಿ ರುಜುವಾತಾಗಿವೆ. ಇದು ನಾವು ನಮ್ಮ ಆರೋಗ್ಯಕ್ಕಾಗಿ ಮಾಡುವ ಅತ್ಯಂತ ಸಣ್ಣ ಮಟ್ಟದ ಖರ್ಚು.  ವಿಶೇಷ ಪರಿಣಾಮಕಾರಿ ಕಾರ್ಯ ವಿಧಾನಗಳ ಮೂಲಕ, ತಲುಪಲು ಅಸಾಧ್ಯವಿರುವ ಮತ್ತು ಅಪಾಯದ ಸ್ಥಿತಿಯಲ್ಲಿ ಇರುವ ಜನಸಮುದಾಯಕ್ಕೂ ಇಂದು ಈ ವ್ಯವಸ್ಥೆಯು ತಲುಪಲು ಸಾಧ್ಯವಾಗಿದೆ.  ಮಕ್ಕಳಿಗೆ ಬಾಲ್ಯದಲ್ಲಿ ನಿಯಮಿತವಾಗಿ ಲಸಿಕೆ ಅಥವಾ ಚುಚ್ಚುಮದ್ದುಗಳನ್ನು ಕೊಡುವ ಮೂಲಕ ತಡೆಯಬಹುದಾದ ಪ್ರಮುಖ ಕಾಯಿಲೆಗಳು ಅಂದರೆ – ಬಾಲಕ್ಷಯ, ಡಿಫ್ತಿàರಿಯ, ಟೆಟನಸ್‌ ಅಥವಾ ಧನುರ್ವಾಯು, ನಾಯಿಕೆಮ್ಮು (ಪಟ್ಯುìಸಿಸ್‌), ಪೋಲಿಯೋಮೈಲೈಟೀಸ್‌ (ಪೋಲಿಯೋ), ದಡಾರ, ಕೆಪ್ಪಟೆ, ರುಬೆಲ್ಲಾ, ಹೆಮೋಫಿಲಸ್‌ ಇನ್‌ಫ‌ುÉಯೆಂಝಾ ಟೈಪ್‌ ಬಿ (ಹಿಬ್‌) ಮತ್ತು ಹೆಪಟೈಟಿಸ್‌ ಬಿ ಈ ಎಲ್ಲ ಕಾಯಿಲೆಗಳು ಬಹಳ ಗಂಭೀರ ಸ್ವರೂಪದ ತೊಂದರೆಗಳಿಗೆ ಮತ್ತು ಕೆಲವು ಬಾರಿ ಮರಣಕ್ಕೂ ಕಾರಣವಾಗಬಲ್ಲವು. ರೋಗನಿರೋಧಕಗಳನ್ನು ಇಂಜೆಕ್ಷನ್‌ ರೂಪದಲ್ಲಿ ಅಥವಾ ಪೋಲಿಯೋದಂತಹ ಪ್ರಕರಣಗಳಾಗಿದ್ದರೆ, ಡ್ರಾಪ್ಸ್‌ ರೂಪದಲ್ಲಿ ಬಾಯಿಯ ಮೂಲಕ ತೆಗೆದುಕೊಳ್ಳಬಹುದು. 

ರೋಗನಿರೋಧಕವು 
ಹೇಗೆ ಕೆಲಸ ಮಾಡುತ್ತದೆ?

ಯಾರಾದರೂ ಚುಚ್ಚುಮದ್ದನ್ನು ಚುಚ್ಚಿಸಿ ಕೊಂಡರೆ ಅಥವಾ ನುಂಗಿದರೆ, ಆ ವ್ಯಕ್ತಿಯ ದೇಹವು ರೋಗಕ್ಕೆ ಒಡ್ಡಿಕೊಂಡ ರೀತಿಯಲ್ಲಿಯೇ ಒಂದು ಪ್ರತಿರೋಧಕ ಪ್ರತಿಕ್ರಿಯೆಯನ್ನು ಉತ್ಪಾದಿಸುತ್ತದೆ, ಆದರೆ ರೋಗಿಗೆ ಕಾಯಿಲೆ ಉಂಟಾಗುವುದಿಲ್ಲ.  ಒಂದು ವೇಳೆ ಆ ವ್ಯಕ್ತಿಯು ಭವಿಷ್ಯದಲ್ಲಿ ಆ ಕಾಯಿಲೆಯ ಸಂಪರ್ಕಕ್ಕೆ ಬಂದರೆ, ಆತ ಈಗಾಗಲೇ ಆ ಕಾಯಿಲೆಯ ವಿರುದ್ಧ ರೋಗನಿರೋಧಕವನ್ನು ತೆಗೆದುಕೊಂಡಿರುವ ಕಾರಣ, ದೇಹವು ಬಹಳ ವೇಗವಾಗಿ ಪ್ರತಿರೋಧಕ ಪ್ರತಿಕ್ರಿಯೆಯನ್ನು ತೋರಿಸುತ್ತದೆ ಮತ್ತು ಕಾಯಿಲೆ ಬೀಳುವುದರಿಂದ ಆತನನ್ನು ರಕ್ಷಿಸುತ್ತದೆ. 
 
ರೋಗ ನಿರೋಧಕತೆಯು ಎಷ್ಟು 
ಸಮಯ ಕೆಲಸ ಮಾಡುತ್ತದೆ?

ಸಾಮಾನ್ಯವಾಗಿ, ಒಂದು ಸಹಜ ರೀತಿಯ ನಿರೋಧಕ ವ್ಯವಸ್ಥೆಯು ಕಾರ್ಯವೆಸಗಲು ಕೆಲವು ವಾರಗಳು ಬೇಕಾಗುತ್ತವೆ. ಅಂದರೆ ಚುಚ್ಚುಮದ್ದನ್ನು ಚುಚ್ಚಿಸಿಕೊಂಡ ಕೂಡಲೇ ಸೋಂಕಿನಿಂದ ರಕ್ಷಣೆ ಸಿಗುವುದಿಲ್ಲ.  ದೀರ್ಘ‌ಕಾಲೀನ ರಕ್ಷಣೆಯನ್ನು ನಿರ್ಮಿಸಲು ಹೆಚ್ಚಿನ ರೋಗನಿರೋಧಕಗಳನ್ನು ಹಲವಾರು ಬಾರಿ ನೀಡಬೇಕಾಗುತ್ತದೆ. ಉದಾ: ಕೇವಲ ಒಂದೆರಡು ಡೋಸ್‌ಗಳಷ್ಟು ಡಿಫ್ತಿàರಿಯಾ-ಪಟ್ಯೂìಸಿಸ್‌ (ನಾಯಿಕೆಮ್ಮು)-ಟೆಟನೆಸ್‌ ಚುಚ್ಚುಮದ್ದು (ಡಿಪಿಟಿ) ಪಡೆದಿರುವ ಮಗುವು, ಈ ಕಾಯಿಲೆಗಳ ವಿರುದ್ಧ ಭಾಗಶಃ ಸುರಕ್ಷಿತವಾಗಿರಬಹುದು. ರೋಗನಿರೋಧಕ ಡೋಸ್‌ಗಳನ್ನು ಪೂರ್ತಿಯಾಗಿ ಪಡೆದಿಲ್ಲದ ಮಗುವು ಒಂದು ವೇಳೆ ಭವಿಷ್ಯದಲ್ಲಿ ಈ ಕಾಯಿಲೆಗಳಿಗೆ ಒಡ್ಡಿಕೊಂಡರೆ ಮಗುವಿನಲ್ಲಿ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. 

ರೋಗನಿರೋಧಕದ ಸುರಕ್ಷತೆಯ 
ಪರಿಣಾಮವು ಎಷ್ಟು ಸಮಯ 
ಇರುತ್ತದೆ?

ರೋಗನಿರೋಧಕದ ಸುರಕ್ಷತೆಯ ಪರಿಣಾಮವು ಯಾವಾಗಲೂ ಜೀವನಪರ್ಯಂತ ಇರುವುದಿಲ್ಲ. ಭಾರತದ ಸಂಪೂರ್ಣ ರೋಗನಿರೋಧಕ ಯೋಜನೆಯ ಪ್ರಕಾರ ಮಕ್ಕಳು ರೋಗನಿರೋಧಕಗಳಿಂದ ತಡೆ-ಸಾಧ್ಯವಿರುವ 7 ವಿಧದ ಕಾಯಿಲೆಗಳ ವಿರುದ್ಧ ಪ್ರತಿರಕ್ಷಣೆ ಅಂದರೆ ರೋಗನಿರೋಧಕತೆಯನ್ನು ಪಡೆಯುತ್ತಾರೆ.  ಈ 7 ವಿಧದ ಕಾಯಿಲೆಗಳಲ್ಲಿ ಚುಚ್ಚುಮದ್ದಿನ ಪರಿಣಾಮವಾಗಿ ಜೀವನಪರ್ಯಂತ ರೋಗನಿರೋಧಕ ರಕ್ಷಣೆ ಸಿಗುವ ಕಾಯಿಲೆಗಳು ಅಂದರೆ, ದಡಾರ, ಹೆಪಟೈಟಿಸ್‌-ಬಿ ಮತ್ತು ಪೋಲಿಯೋ, ಡಿಫ್ತಿàರಿಯಾ ಮತ್ತು ಟೆಟೆನಸ್‌. ಚುಚ್ಚುಮದ್ದುಗಳ ರೋಗನಿರೋಧಕ ಪರಿಣಾಮವು 10 ವರ್ಷಗಳವರೆಗೆ ಇರುತ್ತದೆ. ಆ ಬಳಿಕ ಒಂದು ಬೂಸ್ಟರ್‌ ಡೋಸ್‌ ಅನ್ನು ಕೊಡಬಹುದು.  ಆದರೆ ನಾಯಿಕೆಮ್ಮಿನಂತಹ ಕಾಯಿಲೆಗಳಿಗೆ ಒಂದು ಪೂರ್ಣ ರೋಗನಿರೋಧಕ ಡೋಸ್‌ ಅನ್ನು ತೆಗೆದುಕೊಂಡ ಬಳಿಕ 6-12 ವರ್ಷಗಳ ವರೆಗೆ ಅವು ರಕ್ಷಣೆಯನ್ನು ಒದಗಿಸುತ್ತವೆ.

ರೋಗನಿರೋಧಕವನ್ನು ಪಡೆಯುವ ಎಲ್ಲರೂ ಕಾಯಿಲೆಯ ವಿರುದ್ಧ 
ರಕ್ಷಣೆಯನ್ನು ಪಡೆಯುತ್ತಾರೆಯೇ?

ಒಂದುವೇಳೆ ಚುಚ್ಚುಮದ್ದಿನ ಎಲ್ಲ ಡೋಸ್‌ಗಳನ್ನು ಪಡೆದಿದ್ದರೂ ಸಹ, ಎಲ್ಲರಿಗೂ ಕಾಯಿಲೆಯ ವಿರುದ್ಧ ರಕ್ಷಣೆ ಸಿಕ್ಕೇ ಸಿಗುತ್ತದೆ ಎಂದು ಹೇಳುವುದು ಅಸಾಧ್ಯ. ದಡಾರ, ಕೆಪ್ಪಟೆ, ರುಬೆಲ್ಲಾ, ಟೆಟನಸ್‌, ಪೋಲಿಯೋ, ಹೆಪಟೈಟಿಸ್‌-ಬಿ ಮತ್ತು ಹಿಬ್‌ ವ್ಯಾಕ್ಸಿನ್‌ಗಳು, ಚುಚ್ಚುಮದ್ದಿನ ಪೂರ್ಣ ಡೋಸ್‌ ಅನ್ನು ಪಡೆದಿರುವ 95% ಗಿಂತಲೂ ಹೆಚ್ಚು ಮಕ್ಕಳಿಗೆ ಆ ರೋಗನಿರೋಧಕಗಳು ಸಂಪೂರ್ಣ ಸುರಕ್ಷತೆಯನ್ನು ನೀಡಬಲ್ಲವು. 

ರೋಗನಿರೋಧಕಗಳ 
ಅಡ್ಡ ಪರಿಣಾಮಗಳು 
ಯಾವುವು?

ಚುಚ್ಚುಮದ್ದು ನೀಡಿದ ಜಾಗದಲ್ಲಿ ಕೆಂಪಗಾಗುವುದು ಅಥವಾ ಹುಣ್ಣುಗಳಾಗುವುದು ಮತ್ತು ಸೌಮ್ಯ ರೂಪದ ಜ್ವರ ಇವು ಇಮ್ಯುನೈಸೇಷನ್‌ ಅಥವಾ ಚುಚ್ಚುಮದ್ದು ರೂಪದ ರೋಗನಿರೋಧಕಗಳ ಪ್ರಮುಖ ಅಡª ಪರಿಣಾಮಗಳು.

ನನ್ನ ಮಗುವಿಗೆ ನಾನು 
ಚುಚ್ಚುಮದ್ದನ್ನು ಯಾಕೆ ಕೊಡಿಸಬೇಕು?

ಚುಚ್ಚುಮದ್ದು ನೀಡುವಿಕೆ ಎಂಬುದು ಮಗುವಿಗೆ ಅಪಾಯಕಾರಿ ಕಾಯಿಲೆಗಳ ವಿರುದ್ಧ ರಕ್ಷಣೆ ಪಡೆಯಲು ಇರುವಂತಹ ಅತ್ಯಂತ ಪರಿಣಾಮಕಾರಿ ವಿಧಾನ.  ಒಂದುವೇಳೆ ನೀವು ವಾಸ ಮಾಡುತ್ತಿರುವ ಜನಸಮುದಾಯದಲ್ಲಿ ಕಾಯಿಲೆಯ ಪ್ರಕರಣಗಳು ಇದ್ದರೂ ಸಹ, ಚುಚ್ಚುಮದ್ದು ನೀಡಿದ್ದರೆ ಆ ಕಾಯಿಲೆಯು ನಿಮ್ಮ ಮಗುವಿಗೆ ಬರಬಹುದಾದ ಸಾಧ್ಯತೆ ಬಹಳ ಕಡಿಮೆ. ಒಂದು ಜನಸಮುದಾಯದಲ್ಲಿನ ಸಾಕಷ್ಟು ಜನರು ಚುಚ್ಚುಮದ್ದನ್ನು ಪಡೆದವರಾಗಿದ್ದರೆ, ವ್ಯಕ್ತಿಯಿಂದ ವ್ಯಕ್ತಿಗೆ ಕಾಯಿಲೆ ಅಥವಾ ಸೋಂಕು ಹರಡದೆ ಆ ಕಾಯಿಲೆಯು ಹಾಗೆಯೇ ನಾಶಗೊಳ್ಳುತ್ತದೆ. ಜಗತ್ತಿನಿಂದ ಸಿಡುಬನ್ನು ಇದೇ ರೀತಿಯಲ್ಲಿ ಹೊಡೆದೋಡಿಸಲಾಯಿತು  ಮತ್ತು ಇದೇ ಕ್ರಮದಲ್ಲಿ ಪೋಲಿಯೋ ಜಗತ್ತಿನ ಅನೇಕ ದೇಶಗಳಿಂದ ಮಾಯವಾಗುತ್ತಿದೆ.  

ನನ್ನ ಮಗುವು ಸಕಾಲದಲ್ಲಿ ಚುಚ್ಚುಮದ್ದನ್ನು ಪಡೆಯದಿದ್ದರೂ ಸಹ ಆತನ ರೋಗನಿರೋಧಕ ವ್ಯವಸ್ಥೆಯು ಸಕ್ರಿಯವಾಗಿರುತ್ತದೆಯೇ?
ನಿಮ್ಮ ಮಗುವು ಸಕಾಲದಲ್ಲಿ ಅಂದರೆ ವಯಸ್ಸಿಗೆ ಅನುಗುಣವಾಗಿ ಚುಚ್ಚುಮದ್ದುಗಳನ್ನು ಪಡೆದರೆ ಮಾತ್ರವೆ, ಅಪಾಯ ಸಾಧ್ಯತೆ ಇರುವ ಗಂಭೀರ ಕಾಯಿಲೆಗಳಿಂದ ರಕ್ಷಣೆಯನ್ನು ಪಡೆಯಲು ಸಾಧ್ಯ.  

ನನ್ನ ಮಗುವು ಈ ಚುಚ್ಚುಮದ್ದುಗಳನ್ನು 
ಪಡೆಯದಿದ್ದರೆ ಏನಾಗಬಹುದು?

ಮೊದಲನೆಯದಾಗಿ: ಒಂದುವೇಳೆ ನಿಮ್ಮ ಮಗುವು ಯಾವತ್ತೂ ಈ ಕಾಯಿಲೆಗಳ ಸಂಪರ್ಕಕ್ಕೆ ಬಾರದೆ ಅಥವಾ ಸೋಂಕುಗಳಿಗೆ ಒಡ್ಡಿಕೊಳ್ಳದೆ ಹಾಗೆಯೆ ಮುಂದುವರಿದರೆ ಏನೂ ಆಗುವುದಿಲ್ಲ.

ಎರಡನೆಯದಾಗಿ: ಒಂದು ವೇಳೆ ನಿಮ್ಮ ಮಗುವು ತನ್ನ ಬಾಲ್ಯದಲ್ಲಿ ಅಥವಾ ಬೆಳೆದ ಮೇಲೆ ಇವುಗಳಲ್ಲಿ ಯಾವುದಾದರೂ ಕಾಯಿಲೆಗೆ ಒಡ್ಡಿಕೊಂಡರೆ, ಆತನಿಗೆ ಅಥವಾ ಆಕೆಗೆ ಈ ಕಾಯಿಲೆ ಬರಬಹುದಾದ ಅಪಾಯ ಸಾಧ್ಯತೆ ಹೆಚ್ಚು ಇದೆ. ನಿಮ್ಮ ಮಗುವಿಗೆ ಸೌಮ್ಯರೂಪದಲ್ಲಿ ಕಾಯಿಲೆಯ ಪ್ರಭಾವ ಉಂಟಾಗಿ ಆತ ಕೆಲವು ದಿನಗಳ ಕಾಲ ಮನೆಯಲ್ಲಿಯೇ ಇರಬೇಕಾಗಿ ಬರಬಹುದು ಅಥವಾ ಕಾಯಿಲೆ ತೀವ್ರವಾಗಿ ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶ ಬರಬಹುದು ಅಥವಾ ಗಂಭೀರ ಸ್ವರೂಪವನ್ನು ತಾಳಿ ಮರಣ  ಹೊಂದುವ ಸಾಧ್ಯತೆಯೂ ಇದೆ. ಇಷ್ಟೇ ಅಲ್ಲ ನಿಮ್ಮ ಮಗುವಿನಿಂದ ಆ ಕಾಯಿಲೆಯು ಸುರಕ್ಷಿತರಾಗಿಲ್ಲದ ಇತರರಿಗೆ, ಅಂದರೆ ಇನ್ನಷ್ಟೆ ಚುಚ್ಚುಮದ್ದನ್ನು ಕೊಡಬೇಕಾಗಿರುವ ಬಹಳ ಎಳೆಯ ಮಗುವಿಗೆ ಹರಡುವ ಸಾಧ್ಯತೆಯೂ ಇದೆ. ನೀವು ವಾಸಮಾಡುತ್ತಿರುವ ಸಮುದಾಯದಲ್ಲಿನ ಬಹಳ ಮಕ್ಕಳು ಸುರಕ್ಷಿತರಾಗಿಲ್ಲದಿದ್ದರೆ, ಸೋಂಕು ಹರಡುವ ಮೂಲಕ ಇವರಲ್ಲಿ ಹಲವರು ತೀವ್ರವಾಗಿ 
ಕಾಯಿಲೆ ಬೀಳಬಹುದು ಮತ್ತು ಕೆಲವರು ಮರಣಹೊಂದುವ ಸಾಧ್ಯತೆಗಳೂ ಇವೆ.   

ಮಕ್ಕಳಿಗೆ ಅಷ್ಟೊಂದು ಬಗೆಯ ಚುಚ್ಚುಮದ್ದುಗಳು ಯಾಕೆ?
ಎಳೆಯ ಮಕ್ಕಳ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯು ಬೆಳೆದ ಮಕ್ಕಳ ಅಥವಾ ಪ್ರೌಢ ವಯಸ್ಕರ ರೋಗನಿರೋಧಕ ವ್ಯವಸ್ಥೆಯ ಹಾಗೆ ಸಕ್ರಿಯವಾಗಿ ಕೆಲಸ ಮಾಡುವುದಿಲ್ಲ, ಯಾಕೆಂದರೆ ಎಳೆಯ ಮಕ್ಕಳ ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯು ಪೂರ್ತಿಯಾಗಿ ವಿಕಸನಗೊಂಡಿರದೆ ಅದು ಇನ್ನೂ ಬೆಳವಣಿಗೆಯ ಹಂತದಲ್ಲಿ ಇರುತ್ತದೆ. ಮಗುವು ತನ್ನ ಜೀವಿತದ ಮೊದಲ ಕೆಲವು ತಿಂಗಳುಗಳಲ್ಲಿ, ಹೆಚ್ಚಿನ ಸೋಂಕುಗಳಿಂದ ರಕ್ಷಣೆಯನ್ನು ಪಡೆಯಲು, ತಾನು ತಾಯಿಯ ಗರ್ಭದಲ್ಲಿ ಇರುವಾಗ ತಾಯಿಯಿಂದ ಪಡೆದ ಆಂಟಿಬಾಡಿಗಳು ಅಥವಾ ಪ್ರತಿಕಾಯಗಳನ್ನು ಉಪಯೋಗಿಸಿಕೊಳ್ಳುತ್ತದೆ. ಒಂದುವೇಳೆ, ತಾಯಿಯಿಂದ ಪಡೆದ ಈ ಪ್ರತಿಕಾಯಗಳ ಪ್ರಭಾವವು ಜನನಾನಂತರ ಕಡಿಮೆ ಆದರೆ, ಮಗುವಿಗೆ ತೀವ್ರ ಸೋಂಕು ಕಾಣಿಸಿಕೊಳ್ಳುವ ಅಪಾಯ ಎದುರಾಗುತ್ತದೆ.  ಹಾಗಾಗಿ ಈ ಪ್ರತಿಕಾಯಗಳ ಪ್ರಭಾವವು ಕಡಿಮೆ ಆಗುವ ಮೊದಲೇ ಚುಚ್ಚುಮದ್ದನ್ನು ಕೊಟ್ಟು ಮಗುವಿನ ರೋಗನಿರೋàಧಕ ವ್ಯವಸ್ಥೆಯನ್ನು ಸಕ್ರಿಯಗೊಳಿಸುವುದು ಅತ್ಯಾವಶ್ಯಕ. 

ಡಾ| ಸ್ನೇಹಾ ದೀಪಕ್‌ ಮಲ್ಯ , 
ಅಸಿಸ್ಟಂಟ್‌ ಪೊಫೆಸರ್‌, 

ಡಾ| ದಿವಾಕರ್‌ ಎಸ್‌. ನಾಯಕ್‌ , 
ಮಾಜಿ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ, 
ಕಮ್ಯೂನಿಟಿ ಮೆಡಿಸಿನ್‌ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ.

– ಮುಂದಿನ  ವಾರಕ್ಕೆ  

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.