Udayavni Special

ಕಪ್ಪಾ ವೈರಸ್‌ : ಲಸಿಕೆಯ ಎರಡೂ ಡೋಸ್‌ ಪಡೆದಲ್ಲಿ ರಕ್ಷಣೆ ಸಾಧ್ಯ


Team Udayavani, Jul 17, 2021, 7:05 AM IST

ಕಪ್ಪಾ ವೈರಸ್‌ : ಲಸಿಕೆಯ ಎರಡೂ ಡೋಸ್‌ ಪಡೆದಲ್ಲಿ ರಕ್ಷಣೆ ಸಾಧ್ಯ

ಕೊರೊನಾ ವೈರಸ್‌ನ ಹೊಸ ಹೊಸ ರೂಪಾಂತರಗಳು ವಿಜ್ಞಾನಿಗಳು ಮತ್ತು ವೈದ್ಯಕೀಯ ಸಂಶೋಧಕರಿಗೆ ನಿರಂತರವಾಗಿ ಸವಾಲೊಡ್ಡುತ್ತಿವೆ. ಡೆಲ್ಟಾ ಪ್ಲಸ್‌ ರೂಪಾಂತರಿ ಪ್ರಕರಣಗಳ ನಡುವೆ ದೇಶದಲ್ಲಿ ಕೊರೊನಾದ ಕಪ್ಪಾ ರೂಪಾಂತರಿಯ 7 ಪ್ರಕರಣಗಳು ದೃಢಪಟ್ಟಿದ್ದು ಜನರಲ್ಲಿ ತುಸು ಕಳವಳನ್ನುಂಟು ಮಾಡಿದೆ. ಇತ್ತೀಚೆಗೆ ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ಈ ರೂಪಾಂತರಿ ವೈರಸ್‌ ಪತ್ತೆಯಾಗಿದ್ದು, ಡೆಲ್ಟಾದಂತೆಯೇ ಕಪ್ಪಾ ಕೂಡ ಎರಡನೇ ಬಾರಿಗೆ ರೂಪಾಂತರಗೊಂಡ ಕೊರೊನಾ ವೈರಸ್‌ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಜೈಪುರದ ಎಸ್‌ಎಂಎಸ್‌ ವೈದ್ಯಕೀಯ ಕಾಲೇಜು, ದಿಲ್ಲಿ ಲ್ಯಾಬ್‌ ಮತ್ತು ಪುಣೆಯ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ ಜೀನೋಮ್‌ಗೆ ಕಳುಹಿಸಲಾಗಿದ್ದ 174 ಮಾದರಿಗಳಲ್ಲಿ 166 ಮಾದರಿಗಳು ಡೆಲ್ಟಾ ರೂಪಾಂತರಿ ಮತ್ತು 5 ಕಪ್ಪಾ ರೂಪಾಂತರಿ ವೈರಸ್‌ ಎಂಬುದು ದೃಢಪಟ್ಟಿದೆ. ಅಲ್ಲದೆ ಲಕ್ನೋದ ಕಿಂಗ್‌ ಜಾರ್ಜ್‌ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದ 109 ಮಾದರಿಗಳಲ್ಲಿ 107 ಡೆಲ್ಟಾ ಪ್ಲಸ್‌ ಮತ್ತು 2 ಮಾದರಿಗಳು ಕಪ್ಪಾ ರೂಪಾಂತರಿಗಳೆಂದು ಕಂಡು ಬಂದಿವೆ.

ಏನಿದು ಕಪ್ಪಾ ರೂಪಾಂತರಿ ವೈರಸ್‌?
ಈಗಾಗಲೇ ದೇಶದಲ್ಲಿ ಎರಡನೇ ಅಲೆಯ ವೇಳೆ ಜನರನ್ನು ತೀವ್ರವಾಗಿ ಬಾಧಿಸಿದ ಡೆಲ್ಟಾ ವೈರಸ್‌ನಂತೆ ಕಪ್ಪಾ ಕೂಡ ಕೊರೊನಾ ವೈರಸ್‌ನ ದ್ವಿ ರೂಪಾಂತರಿಯಾಗಿದೆ, ಈ ವೈರಸ್‌ ಎರಡು ಬಾರಿ ಮಾರ್ಪಾಡು ಕಂಡಿದ್ದು ಇದನ್ನು ಬಿ.1.617.1 ಎಂದೂ ಕರೆಯಲಾಗುತ್ತದೆ. E484Q ಮತ್ತು L453R ಈ ವೈರಸ್‌ನ ಎರಡು ರೂಪಾಂತರಿಗಳಾಗಿವೆ. ಇದು ಕೊರೊನಾದ ಹೊಸ ರೂಪಾಂತರಿಯೇನಲ್ಲ. ಡಬ್ಲ್ಯುಎಚ್‌ಒ ಪ್ರಕಾರ ಕಪ್ಪಾ ರೂಪಾಂತರಿ ವೈರಸ್‌ ಭಾರತದಲ್ಲಿ 2020ರ ಅಕ್ಟೋಬರ್‌ನಲ್ಲಿ ಡೆಲ್ಟಾ ರೂಪಾಂತರಿಯ ಜತೆಯಲ್ಲಿಯೇ ಪತ್ತೆಯಾಗಿತ್ತು. ಈ ರೂಪಾಂತರಿಯ ಆನುವಂಶಿಕ ಬದಲಾವಣೆಯ ಬಗೆಗೆ ಅರಿವಿರುವುದರಿಂದ ಇದು ಅಷ್ಟೇನೂ ಅಪಾಯಕಾರಿಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಕೊರೊನಾ ವೈರಸ್‌ನ ಇತರ ರೂಪಾಂತರಿಯಂತೆ ಸಹಜವಾಗಿದ್ದು ಈ ವೈರಸ್‌ನ ಹರಡುವಿಕೆಯ ತೀವ್ರತೆ, ಅದು ಮಾನವನ ದೇಹದ ಮೇಲೆ ಬೀರಬಹುದಾದ ಪರಿಣಾಮ ಇತ್ಯಾದಿಗಳ ಬಗ್ಗೆ ಸ್ಪಷ್ಟತೆ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಜನತೆಗೆ ವೈದ್ಯರು ಧೈರ್ಯ ತುಂಬಿದ್ದಾರೆ. ಆದರೆ ಈ ರೂಪಾಂತರಿ ವೈರಸ್‌ ಈಗಾಗಲೇ ಅನೇಕ ದೇಶಗಳಲ್ಲಿ ಪತ್ತೆಯಾಗಿದ್ದು ಸಮುದಾಯವನ್ನು ವ್ಯಾಪಿಸುವ ಸಾಧ್ಯತೆಗಳಿವೆಯಾದರೂ ಈ ಸೋಂಕು ತಗಲಿದವರು ಸೂಕ್ತ ಚಿಕಿತ್ಸೆ ಪಡೆದುಕೊಂಡದ್ದೇ ಆದಲ್ಲಿ ಶೀಘ್ರ ಗುಣಮುಖರಾಗಲು ಸಾಧ್ಯ.

ಕೊರೊನಾ ನಿರೋಧಕ ಲಸಿಕೆಗಳು ಪರಿಣಾಮಕಾರಿಯೇ?
ಕಪ್ಪಾ ರೂಪಾಂತರಿ ವೈರಸ್‌ ಮಾನವ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹಾನಿಗೊಳಿಸುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕೆ ಬಲವಾದ ಸಾಕ್ಷ್ಯಾಧಾರಗಳಿಲ್ಲ. ಆದರೆ ಕಪ್ಪಾ ರೂಪಾಂತರಿ ವಿರುದ್ಧ ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಐಸಿಎಂಆರ್‌ ಹೇಳಿದೆ. ಮತ್ತೂಂದೆಡೆ ಆಕ್ಸ್‌ಫ‌ರ್ಡ್‌ ವಿವಿ ನಡೆಸಿದ ಅಧ್ಯಯನದ ಪ್ರಕಾರ ಕೊವಿಶೀಲ್ಡ್‌ ಕೂಡ ಕಪ್ಪಾ ರೂಪಾಂತರಿಯಿಂದ ರಕ್ಷಣೆ ನೀಡುತ್ತದೆ. ಪ್ರಸ್ತುತ ಭಾರತದ ಹೆಚ್ಚಿನ ಜನರಿಗೆ ಕೊವ್ಯಾಕ್ಸಿನ್‌ ಮತ್ತು ಕೊವಿಶೀಲ್ಡ್‌ ಲಸಿಕೆಯನ್ನು ನೀಡಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ. ಕೆಲವೊಂದು ವೈದ್ಯಕೀಯ ಸಂಶೋಧನೆಗಳು ಮತ್ತು ಅಧ್ಯಯನದ ಪ್ರಕಾರ ಕೊರೊನಾ ಲಸಿಕೆಯ ಒಂದು ಡೋಸ್‌ ಸಾಮಾನ್ಯವಾಗಿ ಅಲ್ಫಾ ಮತ್ತು ಡೆಲ್ಟಾ ರೂಪಾಂತರಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಒಂದು ಡೋಸ್‌ ಲಸಿಕೆ ತೆಗೆದುಕೊಂಡವರ ಪೈಕಿ ಕೇವಲ ಶೇ.10ರಷ್ಟು ಮಂದಿಗೆ ಮಾತ್ರ ಈ ರೂಪಾಂತರಿಗಳನ್ನು ತಡೆದುಕೊಳ್ಳಲು ಸಾಧ್ಯವಾಗಿದ್ದರೆ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರ ಪೈಕಿ ಶೇ. 95ರಷ್ಟು ಮಂದಿ ಡೆಲ್ಟಾ ಮತ್ತು ಬೀಟಾ ವೈರಸ್‌ಗಳಿಂದ ರಕ್ಷಣೆಯನ್ನು ಪಡೆದುಕೊಂಡಿದ್ದಾರೆ. ಕಪ್ಪಾ ರೂಪಾಂತರಿ ಕೂಡ ಡೆಲ್ಟಾದಂತೆ ದ್ವಿ ರೂಪಾಂತರಿ ವೈರಸ್‌ ಆಗಿರುವುದರಿಂದ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದುಕೊಂಡರೆ ಉತ್ತಮ ಅಷ್ಟು ಮಾತ್ರವಲ್ಲದೆ ಎಲ್ಲ ರೀತಿಯ ಕೊರೊನಾ ರೂಪಾಂತರಿ ವೈರಸ್‌ಗಳಿಂದ ರಕ್ಷಣೆ ಸಾಧ್ಯ.

ಟಾಪ್ ನ್ಯೂಸ್

ಮೈಸೂರಿನಲ್ಲಿ ಧಾರಾಕಾರ ಮಳೆ: ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

ಮೈಸೂರಿನಲ್ಲಿ ಧಾರಾಕಾರ ಮಳೆ: ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

1-shrk

ಜೈಲಿಗೆ ಬಂದು ಪುತ್ರನ ಭೇಟಿಯಾದ ಶಾರುಖ್; ಹೈಕೋರ್ಟ್ ನಲ್ಲಿ ಜಾಮೀನು?

metro

ಮೆಟ್ರೋ : ವರ್ಷದಲ್ಲಿ ಸೆಂಚುರಿ

ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 260 ಅಂಕ ಜಿಗಿತ, ನಿಫ್ಟಿ ದಾಖಲೆ

ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 260 ಅಂಕ ಜಿಗಿತ, ನಿಫ್ಟಿ ದಾಖಲೆ

ಕಾಲೇಜುಗಳಲ್ಲಿ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ: ಸಿಎಂ ಬೊಮ್ಮಾಯಿ

ಕಾಲೇಜುಗಳಲ್ಲಿ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ: ಸಿಎಂ ಬೊಮ್ಮಾಯಿ

ಲಲಿತಕಲಾ

ಕೌಶಲ್ಯ ಅಭಿವೃದ್ಧಿಗಾಗಿ ಹೊಸ ಪರಿಕಲ್ಪನೆಗೆ ಒತ್ತು

ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :  ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

covid

ಪರಿಸ್ಥಿತಿಯ ಆಧಾರದ ಮೇಲೆ ಮಕ್ಕಳಿಗೆ ಕೋವಿಡ್ ಲಸಿಕೆ :ವಿ.ಕೆ.ಪಾಲ್

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ಆರೋಗ್ಯಕ್ಕೆ ಮತ್ತೂಂದು ಕ್ಲೋನ್‌ ಯೋಜನೆ?

ಆರೋಗ್ಯಕ್ಕೆ ಮತ್ತೊಂದು ಕ್ಲೋನ್‌ ಯೋಜನೆ?

ಮಕ್ಕಳಿಗೂ ಬಂತು ಲಸಿಕೆ… ಕೋವಿಡ್ 19 ಲಸಿಕೆ ನೀಡಲು ಡಿಸಿಜಿಐ ಗ್ರೀನ್ ಸಿಗ್ನಲ್

ಮಕ್ಕಳಿಗೂ ಬಂತು ಲಸಿಕೆ… ಕೋವಿಡ್ 19 ಲಸಿಕೆ ನೀಡಲು ಡಿಸಿಜಿಐ ಗ್ರೀನ್ ಸಿಗ್ನಲ್

MUST WATCH

udayavani youtube

ಉದಯವಾಣಿ ಕಚೇರಿಯಲ್ಲಿ ‘ಸಲಗ’ !

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

ಹೊಸ ಸೇರ್ಪಡೆ

ಮೈಸೂರಿನಲ್ಲಿ ಧಾರಾಕಾರ ಮಳೆ: ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

ಮೈಸೂರಿನಲ್ಲಿ ಧಾರಾಕಾರ ಮಳೆ: ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

8

ವೀರಶೈವ ಭವನ ಶೀಘ್ರ ಲೋಕಾರ್ಪಣೆ: ಬಬ್ಬಳ್ಳಿ

ಹೃದೃೋಗ

ದೇಶದಲ್ಲಿ ಶೇ.50 ಮಂದಿ ಸೋಮಾರಿಗಳು

1-shrk

ಜೈಲಿಗೆ ಬಂದು ಪುತ್ರನ ಭೇಟಿಯಾದ ಶಾರುಖ್; ಹೈಕೋರ್ಟ್ ನಲ್ಲಿ ಜಾಮೀನು?

7

ಸಚಿವ ಈಶ್ವರಪ್ಪಗೆ ಘೇರಾವ್‌: ಗುತ್ತಿಗೆದಾರ ವಿರುದ್ದ ಕ್ರಮಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.