Udayavni Special

ಆರೋಗ್ಯಪೂರ್ಣ ಜೀವನ ಪಡೆಯೋಣ

ಪಾರಂಪರಿಕ ಆಹಾರ ಸೂತ್ರ ಪಾಲಿಸೋಣ

Team Udayavani, Jul 2, 2019, 9:14 AM IST

9

ಪ್ರಾಪಂಚದಲ್ಲಿಯೇ ಭಾರತೀಯ ಆರೋಗ್ಯ ಶಾಸ್ತ್ರವು ಉನ್ನತ ಸ್ಥಾನದಲ್ಲಿದೆ. ನಮ್ಮ ಪಾರಂಪರಿಕ ವೈದ್ಯಕೀಯ ಶಾಸ್ತ್ರವು ಇಡೀ ಜಗತ್ತಿಗೆ ಆರೋಗ್ಯ ರಕ್ಷಣೆಯಲ್ಲಿ ಮಾರ್ಗದರ್ಶಕವಾಗಿದೆ. ಆದರೂ ನಾವಿಂದು ವ್ಯಾಧಿಗ್ರಸ್ತರಾಗುತ್ತ ಎಲ್ಲ ಕಾಯಿಲೆಗಳಲ್ಲೂ ಎತ್ತಿದ ಕೈ ಆಗುತ್ತಿದ್ದೇವೆ.

ಬೇರೆ ದೇಶಗಳ ಪ್ರಜೆಗಳಿಗಿಂತ ಹೆಚ್ಚು ರೋಗಗ್ರಸ್ತರಾಗುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಇಂದಿನ ದಿನಗಳಲ್ಲಿ ನಾವು ಕಣ್ಣು, ಮೂಗು, ನಾಲಿಗೆ ಬಯಸುವ ತಿನಿಸುಗಳನ್ನು ಬಹುವಾಗಿ ಸೇವಿಸುತ್ತಿರುವುದು. ಮತ್ತು ಇಷ್ಟವಾದ ತಿನಿಸುಗಳನ್ನು ಇಂತಿಷ್ಟೇ ಸೇವಿಸಬೇಕೆಂಬುದಿಲ್ಲ, ಇಂತಹ ಸಮಯವೆಂಬುದಿಲ್ಲ, ಇಂತಹ ಸ್ಥಳವೆಂಬುದಿಲ್ಲದೇ ಆರೋಗ್ಯದ ನಿಯಮಗಳನ್ನು ಗಾಳಿಗೆ ತೂರಿ ಹೊಟ್ಟೆ ತುಂಬುತ್ತಿದ್ದೇವೆ. ಮತ್ತು ಅನವಶ್ಯಕವಾದ ಬೊಜ್ಜನ್ನು ದೇಹಕ್ಕೆ ಸೇರಿಸುತ್ತಿದ್ದೇವೆ.

ಭಾರತದ 61 ಪ್ರತಿಶತ ಸಾವುಗಳು ಬದಲಾದ ಜೀವನ ಶೈಲಿಯಿಂದ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಎಂದು ವೈಜ್ಞಾನಿಕ ಸಂಶೋಧನೆಗಳು ದೃಢಪಡಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ, ಬೊಜ್ಜುತನ ಮತ್ತು ಹೃದಯ ರೋಗಗಳನ್ನು ತಡೆಗಟ್ಟುವಲ್ಲಿ ಹಾಗೂ ಉಪಚರಿಸುವಲ್ಲಿ ಮುಖ್ಯವಾದ 4 ಅಂಶಗಳನ್ನು ತಿಳಿಸಿತ್ತು. ಅದೆಂದರೆ ಶಾರೀರಿಕ ವ್ಯಾಯಾಮ, ದುಶ್ಚಟಗಳಿಂದ ದೂರ, ಸಸ್ಯಾಹಾರ ಮತ್ತು ಉದ್ವೇಗ ಶಮನ.

ಒತ್ತಡರಹಿತನಾದ ಮನುಷ್ಯನನ್ನು ಈ ಕಾಲಘಟ್ಟದಲ್ಲಿ ಹುಡುಕುವುದೇ ಕಷ್ಟ ಸಾಧ್ಯವೆಂದಾಗಿದೆ. ಕಳೆದ 3-4 ದಶಮಾನಗಳಿಂದ ಮಾನವನ ಜೀವನ ವಿಧಾನದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಅದರಲ್ಲಿ ಮುಖ್ಯವಾಗಿ ದೈಹಿಕ ಶ್ರಮ ಬಹಳಷ್ಟು ಕಡಿಮೆಯಾಗಿರುವುದಲ್ಲದೇ ಆಹಾರದ ಶೈಲಿ ಬದಲಾವಣೆಯಾಗಿದೆ ಮತ್ತು ಮಾನಸಿಕ ಒತ್ತಡವು ಯಥೇತ್ಛವಾಗಿ ಹೆಚ್ಚಿದೆ. ಒತ್ತಡ ಇಂದು ಸರ್ವವ್ಯಾಪಿ ಆವರಿಸಿ ಮಾನವನ ಮಾನಸಿಕ ನೆಮ್ಮದಿ ಹಾಳು ಮಾಡಿ ರೋಗಗ್ರಸ್ತರನ್ನಾಗಿಸುತ್ತಿದೆ.

ಎಲ್ಲ ಮನೋದೈಹಿಕ ಕಾಯಿಲೆಗಳು ವ್ಯಾಯಾಮರಹಿತ ಮತ್ತು ಬದಲಾದ ಜೀವನ ಶೈಲಿಯಿಂದ ಕಾಣಿಸಿಕೊಳ್ಳುತ್ತಿರುವ ತೊಂದರೆಗಳಾಗಿವೆ. ಇದಕ್ಕೆ ವಾತಾವರಣ ದೋಷಗಳು, ಮಾನಸಿಕ ವ್ಯಥೆೆಗಳು, ಒತ್ತಡ ಕೂಡ ಬಹುಮುಖ್ಯ ಕಾರಣಗಳೆಂದು ಅಂದಾಜಿಸಲಾಗಿದೆ. ಇದು ಕೇವಲ ತಮ್ಮೊಂದಿಗೆ ಮಾತ್ರ ಕೊನೆಗೊಳ್ಳದೇ ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಯುವ ಅಥವಾ ತಮ್ಮಿಂದ ತಮ್ಮ ಮಕ್ಕಳಿಗೆ ಬರಬಹುದಾದ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಮಧುಮೇಹ, ಹೃದಯ ತೊಂದರೆ ಮತ್ತು ಪಾರ್ಶ್ವವಾಯುವಿಗೂ ಕಾರಣವಾಗಬಹುದು.

ಮಾನಸಿಕ ಆರೋಗ್ಯವು ಅತಿ ಮುಖ್ಯ ಅಂಶ. ನ್ಯಾಶನಲ್‌ ಮಾನಸಿಕ ಆರೋಗ್ಯ ಸಂಶೋಧನೆಯಲ್ಲಿ ಕಂಡು ಬಂದ ಆಘಾತಕಾರಿ ಅಂಶಗಳೆಂದರೆ ಪ್ರತಿ 6ನೇ ಒಬ್ಬ ಭಾರತೀಯನು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಶೇ.8 ಜನರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆಂಬುದು ಬೆಳಕಿಗೆ ಬಂದಿದೆ. ಮಾನಸಿಕ ಅನಾರೋಗ್ಯವು ಅತಿ ಹೆಚ್ಚು 30 ರಿಂದ 49 ವಯಸ್ಸಿನವರಲ್ಲಿ ಹೆಚ್ಚಿನದಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ 60ಕ್ಕಿಂತ ಹೆಚ್ಚಿನ‌ ವಯಸ್ಸಿನವರಲ್ಲಿಯೂ ಅ ಧಿಕವಾಗಿ ಕಾಣಿಸಿಕೊಳ್ಳುತ್ತದೆ.

ಮುಂದುವರಿಯುತ್ತಿರುವ ನಮ್ಮ ದೇಶದ ಜನರಲ್ಲಿ ಸಾತ್ವಿಕ ಆಹಾರ‌ ಬಗ್ಗೆ ಇದ್ದ ಸದಭಿರುಚಿ ಕ್ಷೀಣಿಸಿ, ರಜೋಗುಣ ಹಾಗೂ ತಮೋಗುಣವನ್ನು ವೃದ್ಧಿಸುವ ಆಹಾರ ಬಗ್ಗೆ ಜನರ ಒಲವು ಹೆಚ್ಚುತ್ತಿದೆ. ಹೀಗಾಗಿ ನಮ್ಮ ಜೀವನ ಮಟ್ಟ ಸುಧಾರಿಸಿದೆ ಎನ್ನುವುದಕ್ಕಿಂತ ನಮ್ಮ ಜೀವನ ಶೈಲಿ ಹಾಳಾಗಿದೆ ಎನ್ನುವುದು ಸೂಕ್ತ. ಹಾಳಾದ ಜೀವನ ಶೈಲಿಯಿಂದಾಗಿ ಬಹಳಷ್ಟು ಖಾಯಿಲೆಗಳು ಅಧಿಕವಾಗತೊಡಗಿದೆ.

ಪ್ರಕೃತಿದತ್ತ ಜೀವನಶೈಲಿ
ಆರೋಗ್ಯವಂತ ಮನುಷ್ಯನೇ ನಿಜವಾದ ಭಾಗ್ಯವಂತನು. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲವೆಂಬುದು ಅಕ್ಷರಶಃ ಸತ್ಯ. ಆರೋಗ್ಯವೆಂದರೆ ಕೇವಲ ರೋಗರಹಿತವಾಗಿರದೇ ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು.ಈ ರೀತಿಯಆರೋಗ್ಯವನ್ನು ಕಾಪಾಡಿ ಕೊಳ್ಳುವುದರಲ್ಲಿ ಪ್ರಕೃತಿ ಚಿಕಿತ್ಸೆಯ ಪಾತ್ರ ಅತಿ ಮಹತ್ವದ್ದಾಗಿದೆ.
ಸದೃಢ ಶರೀರ ಹಾಗೂ ಸ್ವಸ್ಥ ಮನಸ್ಸನು °ರೂಪಿಸಲು, ಜೀವನಕ್ರಮದಲ್ಲಿಯೇ ಮಹತ್ತರ ಪರಿವರ್ತನೆ ತರಲು ಪ್ರಕೃತಿ ಚಿಕಿತ್ಸೆ ಮತ್ತು ಯೋಗಮಾರ್ಗ ಜನಪ್ರಿಯವಾಗುತ್ತಿದೆ.

ಜೀವನದಲ್ಲಿ ಕಾಣ ಬರುತ್ತಿರುವ ಒತ್ತಡ, ಉದ್ವೇಗ, ಅತೃಪ್ತಿ, ಅರಿಷ‌ಡ್ವರ್ಗಗಳ
ಅಧಿ ಪತ್ಯ ಇವುಗಳ ಮೇಲೆ ನಿಯಂತ್ರಣ ಸಾಧಿ ಸಿ ಬದುಕನ್ನು ಊಧ್ವಮುಖೀ ಯಾಗಿಸಲು ಪ್ರಕೃತಿ ಚಿಕಿತ್ಸೆ ಮತ್ತು ಯೋಗ‌ವೇ ಏಕೈಕ ಮಾರ್ಗ. ಪ್ರತಿದಿನ ಎರಡು ಬಾರಿ ಧ್ಯಾನ ಅಥವಾ ಪ್ರಾರ್ಥನೆ ದಿನಕ್ಕೆ ಒಂದು ಅಥವಾ ಎರಡು ಬಾರಿ ಪ್ರಾರ್ಥನೆ ಮಾಡುವುದರಿಂದ ನಮ್ಮ ಉದ್ವೇಗ, ಒತ್ತಡ, ಚಿಂತೆ ದೂರವಾಗಿ ಮನಸ್ಸಿನಲ್ಲಿ ಶಾಂತಿ ನೆಲೆಯೂರುತ್ತದೆ. ಜತೆಗೆ ಮಾನಸಿಕ ಉದ್ವೇಗ ಶಮನಗೊಳಿಸುತ್ತದೆ. ಆಹಾರ ದೇಹಕ್ಕೆ ಶಕ್ತಿ ನೀಡಿದರೆ ಪ್ರಾರ್ಥನೆ ಮನಸ್ಸಿಗೆ ಶಕ್ತಿ ನೀಡುತ್ತದೆ.

ನಿತ್ಯ ಕನಿಷ್ಠ ಒಂದು ಗಂಟೆ ಯೋಗಾಭ್ಯಾಸ
ಯೋಗವು ನಮ್ಮ ಪುರಾತನ ಶಾಸ್ತ್ರ. ಇದು ಒಂದು ಜೀವನ ಶೈಲಿ ಹಾಗೂ ಕಲೆ. ಒಬ್ಬ ಮನುಷ್ಯನ ಸರ್ವೋನ್ನತ ಏಳ್ಗೆೆಗೆ ಇದು ತುಂಬಾ ಸಹಕಾರಿ. ಯೋಗವು ಇಂದು ವಿಶ್ವಮಾನ್ಯವಾಗಿ ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆಯುತ್ತಿದೆ. ಎಲ್ಲ  ಪಂಥದ ಜನರೂ ಒಂದಲ್ಲ ಒಂದು ಕಾರಣಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಸದೃಢ ಶರೀರ ಹಾಗೂ ಸ್ವಸ್ಥ ಮನಸ್ಸನ್ನು ರೂಪಿಸಲು, ಜೀವನಕ್ರಮದಲ್ಲಿಯೇ ಮಹತ್ತರ ಪರಿವರ್ತನೆ ತರಲು ಯೋಗಮಾರ್ಗ ಸರ್ವವ್ಯಾಪಿಯಾಗುತ್ತಿದೆ. ಜೀವನದಲ್ಲಿ ಕಾಣ ಬರುತ್ತಿರುವ ಒತ್ತಡ, ಉದ್ವೇಗ, ಅತೃಪ್ತಿ, ಅರಿಷಡ್ವರ್ಗಗಳ ಅಧಿ ಪತ್ಯ ಇವುಗಳ ಮೇಲೆ ನಿಯಂತ್ರಣ ಸಾ ಧಿಸಿ ಬದುಕನ್ನು ಊಧ್ವಮುಖೀಯಾಗಿಸಲು ಯೋಗವೇ ಏಕೈಕ ಮಾರ್ಗ. ಯೋಗವು ಪಂಚಕೋಶ (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ)ಗಳನ್ನು ಸಮತೋಲನಗೊಳಿಸಿ ಮನುಷ್ಯನನ್ನು ಆರೋಗ್ಯವಂತನನ್ನಾಗಿಸುತ್ತದೆ.

ಈ ಅಭ್ಯಾಸವು ನರಮಂಡಲ, ಹಾರ್ಮೋನ್‌ಗಳು  ಹಾಗೂ ಮನಸ್ಸನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದರಿಂದ ದೇಹಕ್ಕೆ ಉಂಟಾಗುವ ವ್ಯಾ ಧಿಯನ್ನು ತಡೆಗಟ್ಟುವುದಲ್ಲದೇ ಅದರ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಯೋಗಾಸನದ ಅಭ್ಯಾಸವು ದೇಹವನ್ನು ದಂಡಿಸಿ  ಮಾಂಸ ಖಂಡಗಳನ್ನು ಬಲಿಷ್ಠಗೊಳಿಸುವುದಲ್ಲದೆ ದೈಹಿಕ-ಮಾನಸಿಕ ಶಾಂತಿ ಒದಗಿಸುತ್ತದೆ. ಪ್ರಾಣಾಯಾಮದ ಅಭ್ಯಾಸವು ಒಂದು ಕ್ರಮಬದ್ಧವಾದ ಉಸಿರಾಟದ ಪ್ರಕ್ರಿಯೆ. ಇದು ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ದೇಹಕೆ Rಉಲ್ಲಾಸ ಒದಗಿಸುತ್ತದೆ. ಧ್ಯಾನದ ಅಭ್ಯಾಸವು ಮನಸ್ಸನ್ನು ಸಂಪೂರ್ಣವಾಗಿ ಎಲ್ಲ ರೀತಿಯ  ಆಲೋಚನೆಗಳಿಂದ ನಮ್ಮನ್ನು ಮುಕ್ತವಿರಿಸಿ ಮಾನಸಿಕ ನೆಮ್ಮದಿ ನೀಡುವುದಲ್ಲದೆ ಒತ್ತಡ ನಿವಾರಿಸುತ್ತದೆ.

ಅನ್ನಮಯ ಕೋಶ: ಇದನ್ನು ಸಮಸ್ಥಿತಿಗೆ ತರಲು ಆಸನಗಳು, ಕ್ರಿಯೆಗಳು ಮತ್ತು ಆಹಾರವು ಅತಿ ಮುಖ್ಯವಾದ ಅಂಶಗಳಾಗಿವೆ.
ಪ್ರಾಣಮಯ ಕೋಶ: ನಾಡಿಗಳ ಶುದ್ಧಿ ಹಾಗೂ ನಾಡಿಗಳ ಮುಖಾಂತರ
ದೇಹದ ಚಟುವಟಿಕೆಗಳನ್ನು ಹೆಚ್ಚಿಸುವ ಪ್ರಾಣಾಯಾಮ ಮಾಡುವುದು.
ಮನೋಮಯಕೋಶ: ಧ್ಯಾನದ ಅಭ್ಯಾಸವು ಚಿಂತೆಗಳಿಂದ ನಮ್ಮನ್ನು ದೂರವಿಡುವುದು.
ವಿಜ್ಞಾನಮಯ ಕೋಶ: ರೋಗದ ಬಗೆಗಿನ ತಿಳಿವಳಿಕೆ ಮತ್ತು ಅದರ ಪರಿಹಾರವನ್ನು ಸೂಕ್ತವಾಗಿ ತಿಳಿಸುವುದು.
ಆನಂದಮಯ ಕೋಶ: ಈ ಎಲ್ಲ ಕೋಶಗಳು ಒಂದಕ್ಕೊಂದು ಸರಿದೂಗಿದಾಗ ನಾವು ಇದನ್ನು ತಲುಪಬಹುದು.

ಪ್ರಕೃತಿ ಚಿಕಿತ್ಸೆಯ ಪ್ರಕಾರ  ನಮ್ಮ ದಿನಚರಿ ಇಂತಿರಬೇಕು
“”ಬ್ರಹ್ಮಿಮುಹೂರ್ತೆಉತ್ತಿಷ್ಠೆ ಉಷಃ ಪಾನಂ ಮಲಮೂತ್ರ ವಿಸರ್ಜನಂ ದಂತದಾವನಂ ಅಂಗಮರ್ದನಂ ಶಿರಸ್ನಾನಂ ಇಷ್ಟದೇವತಾ ಪ್ರಾರ್ಥನಂ ಸ್ವಾಧ್ಯಾಯಃ” (ಬೆಳಿಗ್ಗೆ ಸೂರ್ಯೋದಯಕ್ಕೂ ಮುಂಚೆ ಎದ್ದು ನೀರು ಕುಡಿದು, ಮಲ-ಮೂತ್ರ ವಿಸರ್ಜಿಸಿ, ಹಲ್ಲುಗಳನ್ನು ಉಜ್ಜಿ ನಂತರ ಎಣ್ಣೆಯನ್ನು ದೇಹಕ್ಕೆ ಹಚ್ಚಿ ತಲೆಸ್ನಾನ ಮಾಡಿ ಇಷ್ಟ ದೇವರ ಪ್ರಾರ್ಥನೆಯೊಂದಿಗೆ ಸ್ವಅಧ್ಯಯನ ಮಾಡಿಕೊಳ್ಳುವುದು)

ಕ್ರಮಬದ್ಧ ದಿನಚರಿ
* ಬೆಳಿಗ್ಗೆ 5 ಗಂಟೆಯೊಳಗೆ ಹಾಸಿಗೆಯಿಂದ ಎದ್ದು 2 ರಿಂದ 4 ಲೋಟ ನೀರನ್ನು ತೆಗೆದುಕೊಂಡು ಮಲ ಮೂತ್ರ ವಿಸರ್ಜನೆ ಮಾಡಿ ಯೋಗಾಭ್ಯಾಸ ಮಾಡಬೇಕು.
* ಬೆಳಗ್ಗೆ 7 ಗಂಟೆ ಸುಮಾರಿಗೆ ಒಂದು ತಾಜಾ ತರಕಾರಿ ಅಥವಾ ಹಣ್ಣಿನ ರಸವನ್ನು ತೆಗೆದುಕೊಳ್ಳುವುದು.
* ಬೆಳಗ್ಗೆ 8 ಗಂಟೆಗೆ ಉಪಹಾರ ತೆಗೆದುಕೊಳ್ಳುವುದು. ಆದಷ್ಟು ಉಪಹಾರವು ಮೊಳಕೆ ಕಾಳುಗಳು ಅಥವಾ ತರಕಾರಿ ಅಥವಾ ಹಣ್ಣುಗಳು ಅಥವಾ ಕಡಿಮೆ ಪ್ರಮಾಣದಲ್ಲಿ ಬೇಯಿಸಿದ ಆಹಾರದಿಂದ ಕೂಡಿರಬೇಕು.
* ಮಧ್ಯಾಹ್ನ 12ರಿಂದ 1 ಗಂಟೆಯೊಳಗೆ ಊಟ. ಇದರಲ್ಲಿ 2 ಚಪಾತಿ ಅಥವಾ ಅನ್ನ, ಬೇಯಿಸಿದ ತರಕಾರಿಗಳು, ಪಲ್ಯ, ಮಜ್ಜಿಗೆ ಅಥವಾ ಸೂಪನ್ನು ತೆಗೆದುಕೊಳ್ಳುವುದು.
* ಸಂಜೆ 4 ಗಂಟೆಗೆ ತಾಜಾ ಹಣ್ಣಿನ ರಸ ಅಥವಾ ಎಳನೀರು ಅಥವಾ ಬಾರ್ಲಿ ನೀರನ್ನು ತೆಗೆದುಕೊಳ್ಳುವುದು.
* ರಾತ್ರಿ 6.30 ರಿಂದ 7.30 ಗಂಟೆಗಳೊಳಗಾಗಿ ಊಟ. 2 ಚಪಾತಿ ಅಥವಾ ರೊಟ್ಟಿ ಜತೆಗೆ ಬೇಯಿಸಿದ ತರಕಾರಿಗಳು, ಸೂಪ್‌ಅಥವಾ ಮಜ್ಜಿಗೆ ಇಲ್ಲವಾದರೆ ಕೇವಲ ತರಕಾರಿಗಳು ಅಥವಾ ಹಣ್ಣುಗಳನ್ನು ತೆಗೆದುಕೊಳ್ಳುವುದು.


ಡಾ| ಗಂಗಾ ಧರ ವರ್ಮ ಬಿ.ಆರ್‌.

ತಜ್ಞ ವೈದ್ಯರು, ಸರ್ಕಾರಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ,  ದಾವಣಗೆರೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಲಸೆ ಕಾರ್ಮಿಕರ ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ

ವಲಸೆ ಕಾರ್ಮಿಕರ ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಗೆ ಐದನೇ ಬಲಿ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಗೆ ಐದನೇ ಬಲಿ

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

ಮದುವೆಗೂ ಮುನ್ನ ಅಪ್ಪನಾಗುತ್ತಿರುವ ಹಾರ್ದಿಕ್‌ ಪಾಂಡ್ಯಾ  

ಮದುವೆಗೂ ಮುನ್ನ ಅಪ್ಪನಾಗುತ್ತಿರುವ ಹಾರ್ದಿಕ್‌ ಪಾಂಡ್ಯ

suresh-kumar

ಮಕ್ಕಳ ಸುರಕ್ಷತೆ, ಆತ್ಮವಿಶ್ವಾಸಕ್ಕೆ  ಮೊದಲ ಆದ್ಯತೆ: ಸುರೇಶ್‌ ಕುಮಾರ್‌

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಹುಪಯೋಗಿ ಕಪ್ಪು ಉಪ್ಪು 

ಬಹುಪಯೋಗಿ ಕಪ್ಪು ಉಪ್ಪು 

Nuts

ಡ್ರೈಫ್ರೂಟ್ಸ್ ನಿಮ್ಮ ಲೈಂಗಿಕ ಜೀವನಕ್ಕೆ ಉತ್ತೇಜಕ ; ಯಾವೆಲ್ಲಾ ಬೀಜಗಳ ಸೇವನೆ ಇದಕ್ಕೆ ಪೂರಕ?

Running-For-Health-730

ಓಡುವುದರಿಂದ ಬೇಗನೆ ಸಾವು ಬರುವುದಿಲ್ಲ! ; ಸಮೀಕ್ಷೆ ಹೇಳುವುದೇನು?

001

ನ್ಯುಮೋನಿಯಾ ತಡೆಗೆ ಕೈಜೋಡಿಸಿ

coffe-n

ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್‌ ಕಾಫಿ ಕುಡಿದರೆ ಮೈಗ್ರೇನ್‌!

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ವಲಸೆ ಕಾರ್ಮಿಕರ ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ

ವಲಸೆ ಕಾರ್ಮಿಕರ ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಗೆ ಐದನೇ ಬಲಿ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಗೆ ಐದನೇ ಬಲಿ

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

ಒಲಿಂಪಿಕ್‌ ತ್ರಿವಳಿ ಸ್ವರ್ಣ ವಿಜೇತ ಬಾಬಿ ಜೋ ಮೋರೊ ನಿಧನ

ಒಲಿಂಪಿಕ್‌ ತ್ರಿವಳಿ ಸ್ವರ್ಣ ವಿಜೇತ ಬಾಬಿ ಜೋ ಮೋರೊ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.