ದೇಹದ ತೂಕ ಇಳಿಸಿ

ಆ್ಯಪಲ್‌ ಸೈಡರ್‌ ವಿನೇಗರ್‌ಸೇವಿಸಿ

Team Udayavani, Jun 28, 2019, 2:48 PM IST

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು, ಇನ್ಸುಲಿನ್‌ ಮಟ್ಟವನ್ನು ಸರಿಯಾದ ಪ್ರಮಾಣದಲ್ಲಿ ಕಾಪಾಡಿಕೊಳ್ಳುವುದು, ಚಯಾಪಚಯವನ್ನು ಸುಧಾರಿಸುವುದು ಮತ್ತು ಮೊಡವೆಗಳಿಗೆ ಚಿಕಿತ್ಸೆ ನೀಡುವುದು ಅತೀ ಮುಖ್ಯ. ಇದಕ್ಕೆ ಆ್ಯಪಲ್‌ ಸೈಡರ್‌ ವಿನೇಗರ್‌ ಹೆಚ್ಚು ಪ್ರಯೋಜನಕಾರಿ. ಇಷ್ಟೇ ಅಲ್ಲ, ದೇಹದ ತೂಕ ಕಡಿಮೆ ಮಾಡಲೂ ಆ್ಯಪಲ್‌ ಸೈಡರ್‌ ವಿನೇಗರ್‌ ಪರಿಣಾಮಕಾರಿ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಆ್ಯಪಲ್‌ ಸೈಡರ್‌ ವಿನೇಗರ್‌ ಆ್ಯಸಿಟಿಕ್‌ ಆಮ್ಲವನ್ನು ಹೊಂದಿರುತ್ತದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತ¨. ರಕ್ತವು ಹೆಚ್ಚು ಕೊಬ್ಬನ್ನು ಹೀರಿಕೊಳ್ಳದಂತೆ ತಡೆಯುತ್ತದೆ. ತೂಕ ಇಳಿಸಲು ಸಹಾಯವಾಗುತ್ತದೆ. ಆ್ಯಪಲ್‌ ಸೈಡರ್‌ ವಿನೇಗರ್‌ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಕಿಣ್ವಗಳನ್ನು ಹೊಂದಿರುತ್ತದೆ. ಇದರಿಂದ ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ.

ಸಲಾಡ್‌ನಲ್ಲಿ ಬಳಕೆ
ಸಲಾಡ್‌ನಲ್ಲಿಯೂ ಆ್ಯಪಲ್‌ ಸೈಡರ್‌ ವಿನೇಗರ್‌ ಬಳಸಬಹುದು. 50 ಮಿಲಿ ನೀರು, 50 ಮಿಲಿ ಆ್ಯಪಲ್‌ ಸೈಡ ರಲ್‌ ವಿನೇಗರ್‌, ಅರ್ಧ ಚಮಚ ಕರಿಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಆಯ್ಕೆಯ ತರಕಾರಿಯೊಂದಿಗೆ ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಸೇವಿಸಿ.

ಸೇವನೆ ಹೇಗೆ?
8- 10 ಗ್ಲಾಸ್‌ ನೀರಿಗೆ 2- 3 ಚಮಚ ಆ್ಯಪಲ್‌ ಸೈಡರ್‌ ವಿನೇ ಗರ್‌ ಸೇವಿಸಿ ಒಂದು ಚಮಚ ನಿಂಬೆ ರಸ, ಒಂದು ಚಮಚ ದಾಲಿcನ್ನಿ ಪುಡಿ ಹಾಕಿ ಇಡಿ. ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿ. ಇದನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು, ತಂಪು ಪಾನೀಯವಾಗಿ ಬಳಸಬಹುದು.

ಇನ್ನೊಂದು ವಿಧಾನದಲ್ಲಿ ಒಂದು ಲೋಟ ನೀರಿಗೆ ಎರಡು ಚಮಚ ಜೇನುತುಪ್ಪ ಮತ್ತು 1 ಚಮಚ ಆ್ಯಪಲ್‌ ಸೈಡರ್‌ ವಿನೇಗರ್‌ ಮಿಶ್ರಣ ಮಾಡಿ. ಸೇವಿಸುವ ಮೊದಲು ಈ ಪದಾರ್ಥಗಳನ್ನು ಚೆನ್ನಾಗಿ ಕಲಸಿ. ಇನ್ನು ಹಸಿರು ಚಹಾಕ್ಕೆ 1 ಚಮಚ ಆ್ಯಪಲ್‌ ಸೈಡರ್‌ ವಿನೇಗರ್‌, ಎರಡು ಚಮಚ ಜೇನು ತುಪ್ಪ ಸೇರಿಸಿ ದಿನದಲ್ಲಿ 2- 3 ಬಾರಿ ಕುಡಿಯುವುದರಿಂದಲೂ ದೇಹದ ತೂಕ ಇಳಿಕೆಗೆ ಸಹಕಾರಿಯಾಗುತ್ತದೆ.

-  ಧನ್ಯಶ್ರೀ ಬೋಳಿಯಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ