ಮಾನಸಿಕ ಆಘಾತ ಅನಾರೋಗ್ಯಕ್ಕೆ ಕಾರಣ

Team Udayavani, Jul 15, 2019, 4:00 PM IST

ಜೀವನದಲ್ಲಿ ನಡೆದ ಘಟನೆಗಳನ್ನು ಮರೆಯುವುದು ಅಷ್ಟು ಸುಲಭದ ವಿಷಯವಲ್ಲ. ಅದರಲ್ಲೂ ಆಘಾತಕಾರಿ ಘಟನೆಗಳು ಮನುಷ್ಯನ ಮಾನಸಿಕ ಆರೋಗ್ಯವನ್ನು ಹಾಳುಗೆಡವುತ್ತದೆ. ಕೆಲವು ಈ ಘಟನೆಗಳಿಂದ ಬಹುಬೇಗನೇ ಹೊರಬಂದರೇ ಇನ್ನೂ ಕೆಲವರು ಅವುಗಳನ್ನು ನೆನಪಿಸಿಕೊಳ್ಳತ್ತಾ ಅದರಲ್ಲೇ ದಿನ ಕಳೆಯುತ್ತಾರೆ. ಈ ಸಮಸ್ಯೆಯನ್ನು ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ ಎಂದು ಕರೆಯುತ್ತಾರೆ. ಇದು ಬಗೆಹರಿಯದ ಕಾಯಿಲೆಯೇನಲ್ಲ. ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು.

ಯಾವುದಾದರೊಂದು ಘಟನೆ ಒಬ್ಬ ವ್ಯಕ್ತಿಯ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿದೆ. ಆ ಘಟನೆ ಸಂತೋಷ ಅಥವಾ ದುಃಖವನ್ನು ತರಬಹುದು. ಇವೆರಡನ್ನು ಹೊರತುಪಡಿಸಿ ಆ ಘಟನೆ ವ್ಯಕ್ತಿಯ ಮಾನಸಿಕ ತೊಂದರೆಗೂ ಕಾರಣವಾಗಬಹುದು. ಅಂದರೆ ಘಟನೆಯನ್ನೇ ಯೋಚಿಸಿ, ಹೆದರಿ ಆತಂಕವನ್ನೂ ಸೃಷ್ಟಿಸಬಹುದು.

ಗಾಯಗಳು, ಕಾರು ಅಪಘಾತಗಳು, ಭೂಕಂಪಗಳು , ಮಕ್ಕಳ ದುರುಪಯೋಗ ಇಂತಹ ಘಟನೆಗಳು ತರುವ ಆಘಾತ ಅಥವಾ ಒತ್ತಡ ವನ್ನು ಪಿ.ಟಿ.ಎಸ್‌.ಡಿ(ಪೋಸ್ಟ್‌-ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌) ಎನ್ನಬಹುದು. ಆದರೆ ಆಘಾತದ ಪರಿಣಾಮಗಳು ನಿಧಾನವಾಗಿ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಬಲ್ಲದು. ಆಘಾತ ಅನುಭವಿಸಿದವರಿಗೆ ಪಿ.ಟಿ.ಎಸ್‌.ಡಿ. ಬಗ್ಗೆ ಗೊತ್ತಿರುವುದಿಲ್ಲ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಸಮಯದಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ.

ಒಂದು ಕಹಿ ಘಟನೆಯ ನಂತರ ಬದಲಾಗಿರುವ ಭಾವನಾತ್ಮಕ ಆರೋಗ್ಯದ ಮೊದಲಿನ ಚಿಹ್ನೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ, ಆಘಾತಕಾರಿ ಘಟನೆ ನಡೆದ ಒಂದು ತಿಂಗಳ ಅನಂತರವೂ ಮಾನಸಿಕ ಆರೋಗ್ಯದ ಮೇಲೆ ಆಘಾತದ ಪರಿಣಾಮಗಳನ್ನು ಗುರುತಿಸಬಹುದು. ಈ ಸಂದರ್ಭದಲ್ಲಿ ವೃತ್ತಿಪರ ಸಲಹೆಗಾರರಿಂದ ಸಲಹೆ ಪಡೆಯುವುದು ಸೂಕ್ತ ದಾರಿಯಾಗಿದೆ. ಇದು ಮಾನಸಿಕ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ಪರಿಣಾಮಕಾರಿ ಮಾರ್ಗವಾಗಿದೆ.

ಸಂಬಂಧಗಳು, ವೈಯಕ್ತಿಕ ಮೌಲ್ಯ, ಆತಂಕಗಳು, ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಬೀರಿರುತ್ತವೆ. ಈ ಬಗ್ಗೆ ಅರಿವಿದ್ದರೂ ಘಟನೆಯ ಪ್ರಾಮುಖ್ಯವನ್ನು ಅವರು ಗುರುತಿಸುವುದಿಲ್ಲ. ಅವರು ಯಾವಾಗಲೂ ಭಯ ಅಥವಾ ಅಸಹಾಯಕತೆಯಿಂದ ಪ್ರತಿಕ್ರಿಯೆ ನೀಡುತ್ತಾರೆ. ಕೆಲವರು ಬಹು ಬೇಗ ಗುಣ ಹೊಂದುವುದಿಲ್ಲ. ಅಂಥವರು ಹೆಚ್ಚಾಗಿ ಭಯ ಮತ್ತು ದುಃಖದಿಂದ ಬಳಲುತ್ತಾರೆ. ಅವರು ಪ್ರಪಂಚವನ್ನು ಸಹಜವಾಗಿ ನೋಡುವುದಿಲ್ಲ. ಅಂಥವರು ಅಲ್ಪಾವಧಿಯ ಕೌನ್ಸೆಲಿಂಗಿನಿಂದ ಬೇಗ ಗುಣವಾಗಿ ಬೆಳವಣಿಗೆ ಹೊಂದುವ ಸಾಧ್ಯತೆ ಇರುತ್ತದೆ.

ಹೀಗೆ ಮಾಡಿ
ಪ್ರೀತಿಪಾತ್ರರೊಂದಿಗೆ, ಸಾಕುಪ್ರಾಣಿಗಳ ಜೊತೆ ಬೆರೆಯುವುದರಿಂದ, ವ್ಯಾಯಾಮ, ಯೋಗ ಮುಂತಾದವುಗಳನ್ನು ಮಾಡುವುದರಿಂದ ನಾವು ಆಘಾತಗಳಿಂದ ಬೇಗ ಚೇತರಿಸಿಕೊಳ್ಳಬಹುದು. ಆರಂಭಿಕ ಹಂತದಲ್ಲೇ ಈ ಸಮಸ್ಯೆ ಅರಿವಿಗೆ ಬಂದಲ್ಲಿ ಅದನ್ನು ಮರೆಯುವ ಸಲುವಾಗಿ ಇತರ ಚಟುವಟಿಕೆಗಳಲ್ಲಿ ವ್ಯಕ್ತಿಯನ್ನು ಸಕ್ರೀಯವಾಗಿ ಭಾಗವಹಿಸುವಂತೆ ಮಾಡಬೇಕಾಗುತ್ತದೆ. ಆಗ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ.ಆ ಮೂಲಕ ನೆಮ್ಮದಿಯಾಗಿ ಬದುಕಬಹುದು.

ಪಿ.ಟಿ.ಎಸ್‌.ಡಿ ಲಕ್ಷಣಗಳು
·ಖನ್ನತೆ, ನಿರಾಸಕ್ತಿ ಮತ್ತು ತತ್‌ಕ್ಷಣ ಕೋಪಗೊಳ್ಳುವಿಕೆ
·ಸಂಭವಿಸಿದ ಆಘಾತಕಾರಿ ಘಟನೆಗಳನ್ನು ನೆನೆಪು
·ನಿದ್ರಾಹೀನತೆ
·ಕೆಟ್ಟ ಕನಸುಗಳು
·ಒತ್ತಡ ನಿಭಾಯಿಸಲು ಮಾದಕದ್ರವ್ಯದ ಸೇವನೆ
·ಏಕಾಂಗಿತನ
·ಸಂಬಂಧಗಳಲ್ಲಿ ಬಿರುಕು

ಪಿ.ಟಿ.ಎಸ್‌.ಡಿ ಕಾರಣಗಳು
·ಪಿ.ಟಿ.ಎಸ್‌.ಡಿ ಯಿಂದ ಬಳಲುತ್ತಿರುವವರು ಕೆಲವು ಘಟನೆಗಳಿಂದ ಮಾನಸಿಕವಾಗಿ ಕುಗ್ಗಿರಬಹುದು.
·ಲೈಂಗಿಕ ದುರ್ಬಳಕೆ ಅಥವಾ ಭಾವನಾತ್ಮಕ ನಿಂದನೆಗಳು ಮನಸ್ಸಿನಲ್ಲಿ ಮನಸ್ಸಿಗೆ ಆಘಾತವನ್ನು ತಂದಿರಬಹುದು.
·ರಸ್ತೆ ಅಪಘಾತಗಳು ಅಥವಾ ಇನ್ನಿತರ ಅಪಘಾತಗಳಿಂದ ತಮ್ಮ ಹತ್ತಿರದ ವ್ಯಕ್ತಿಗಳನ್ನು ಕಳೆದುಕೊಳ್ಳುವಿಕೆ
·ಗುಣಮುಖವಾಗದ ಗಂಭೀರ ಆರೋಗ್ಯ ಸಮಸ್ಯೆಗಳು
·ಹೆರಿಗೆ ಸಮಯದ ನೋವು
·ಪಿ.ಟಿ.ಎಸ್‌.ಡಿ ಸಮಸ್ಯೆಗೆ ಒಳಗಾದವರಿಗೆ ಇತರರನ್ನು ನಂಬುವ ಮತ್ತು ಅರ್ಥಪೂರ್ಣ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗಬಹುದು.

ಒಬ್ಬಂಟಿಯಾಗಿ ಇರಲು ಬಯಸಬಹುದು. ಆ ಆಘಾತ ಬಿಡದೆ ಕಾಡಬಹುದು. ಇದರಿಂದ ಹೊರ ಬರಲು ಅವರಿಗೆ ಮೊದಲಾಗಿ ಆಪ್ತರು ಸಹಕರಿಸಬೇಕಾಗುತ್ತದೆ. ಆ ಬಳಿಕವೂ ಅವರ ನಡುವಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದಲ್ಲಿ ಮಾನಸಿಕ ವೈದ್ಯರನ್ನು ಭೇಟಿಯಾಗಿ ಕೌನ್ಸೆಲಿಂಗ್‌ ಪಡೆಯಬೇಕಾಗುತ್ತದೆ.

ಪ್ರೀತಿಯ ಆರೈಕೆ ಅಗತ್ಯ

ಒಮ್ಮೊಮ್ಮೆ ಆಘಾತದ ಪರಿಣಾಮವು ಸಣ್ಣದಾಗಿರಬಹುದು. ಆದರೆ ಪದೇ ಪದೇ ಅದೇ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅದು ಹೆಚ್ಚು ಪರಿಣಾಮ ಬೀರಬಹುದು. ಮೊದಲಾಗಿ ಅವರಿಗೆ ಪ್ರೀತಿಯ ಆರೈಕೆ ಬಹಳ ಮುಖ್ಯ. ಪಿ.ಟಿ.ಎಸ್‌.ಡಿ ಯಿಂದ ಬಳಲುತ್ತಿರುವುದನ್ನು ಸರಿಯಾಗಿ ತಿಳಿಯದೇ ಈ ಕುರಿತು ನಿರ್ಧಾರ ಮಾಡಲು ಸಾಧ್ಯವಿಲ್ಲ.
– ಡಾ| ಶಿವಶಂಕರ್‌ ವೈದ್ಯರು

••••ಪ್ರಜ್ಞಾ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದಲ್ಲಿ ಪ್ರಾಣಿ, ಮಾನವ ಸಂಘರ್ಷ ಹತೋಟಿಗೆ ಬಂದಿದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಪ್ರಾಣಿದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ ಶೇ.50 ಇಳಿಕೆ...

  • ಬೆಂಗಳೂರು: ದೇಶದಲ್ಲಿ ಏಕ ಚಕ್ರಾಧಿಪತ್ಯ ವ್ಯವಸ್ಥೆ ಬರುತ್ತಿದ್ದು, ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಜೀವಂತವಾಗಿವೆ ಎನ್ನುವುದನ್ನು...

  • ಬೆಂಗಳೂರು: ಮಳೆ ಬಂದರೆ ನೀರು ಅಂಗಡಿಗಳಿಗೆ ನುಗ್ಗುತ್ತದೆ. ರಸ್ತೆ ಸಂಚಾರ ದುಸ್ತರವಾಗುತ್ತದೆ. ಒಳಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳ...

  • ಬೆಂಗಳೂರು: ಬಟ್ಟೆ ವ್ಯಾಪಾರಿಯೊಬ್ಬರನ್ನು ಅವರ ಮನೆಯ ಸ್ನಾನದ ಕೊಣೆಯಲ್ಲಿ ಚಾಕುವಿನಿಂದ ಇರಿದು ಕೊಂದು, ಬೆಂಕಿ ಹಚ್ಚಿ ಸುಟ್ಟ ಘಟನೆ ರಾಜಾಜಿನಗರದ ಬಾಷ್ಯಂ ವೃತ್ತದ...

  • ಕೊರಟಗೆರೆ: "ಮೂರು ಸಲ ಮುಖ್ಯಮಂತ್ರಿಯಾಗುವ ಅವ ಕಾಶವಿದ್ದರೂ ರಾಜಕೀಯ ಕುತಂತ್ರದಿಂದ ಕೈ ತಪ್ಪಿತು' ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದರು....

  • ಬೆಂಗಳೂರು: ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಮತ್ತೂಮ್ಮೆ ಅವಕಾಶ ಕಲ್ಪಿಸಲಾಗಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ-ಭಾನುವಾರ ಸಾವಿರಾರು ಮಂದಿ ಭೇಟಿ...