Udayavni Special

ರುಮಟಾಯ್ಡ್‌ ಆರ್ಥ್ರೈಟಿಸ್ – ಸಂಧಿಗಳ ಜನ್ಮಜಾತ ಶತ್ರು


Team Udayavani, Oct 31, 2020, 6:00 PM IST

artho.jpg

ಸಂಧಿ ವಾತ (ಗಂಟು ನೋವು) ವಿವಿಧ ರೀತಿಗಳಲ್ಲಿ ಜನಸಂಖ್ಯೆಯಲ್ಲಿನ ಅಂದಾಜು 15% ಜನರಲ್ಲಿ  ಕಂಡುಬರುತ್ತದೆ. ಇದು ಯಾವುದೇ ವಯೋಮಾನದವರಲ್ಲಿ  ಶುರುವಾಗಬಹುದು – ಎರಡು ವರ್ಷದ ಮಗುವಿನಿಂದ ಹಿಡಿದು 80ರ ಹರೆಯದಲ್ಲಿಯೂ ಸಂಧಿವಾತ ತನ್ನ ಪರಿಣಾಮ ಬೀರಬಹುದು. ಸಂಧಿವಾತ ತನ್ನಿಂದ ತಾನೇ ಒಂದು ಕಾಯಿಲೆಯಲ್ಲಿ  ಅಥವಾ ರೋಗದ ಹೆಸರಲ್ಲ. ಸಾಮಾನ್ಯವಾಗಿ ಅದು ಬೇರೊಂದು ಮೂಲ ಕಾಯಿಲೆಯ ಲಕ್ಷಣವಾಗಿರುತ್ತದೆ. ಈ ಮೂಲ ಕಾಯಿಲೆಯ ಪರಿಣಾಮ ಸಂಧಿ ಗಳಲ್ಲಿ ಮಾತ್ರವಲ್ಲದೆ ಬೇರೆ ಅಂಗಾಂಗಗಳಲ್ಲಿಯೂ ನೋಡ ಸಿಗಬಹುದು. ಇದನ್ನು ನಾವು ಜ್ವರಕ್ಕೆ ಹೋಲಿಸಬಹುದು: “”ಜ್ವರ” ತನ್ನಿಂದ ತಾನೇ ಒಂದು ಕಾಯಿಲೆ ಅಥವಾ ರೋಗದ ಹೆಸರಲ್ಲ. ಅದು ಬೇರೊಂದು ಮೂಲ ಕಾಯಿಲೆಯ (ಉದಾ: ವೈರಲ್‌ ಜ್ವರ, ಮಲೇರಿಯಾ, ಟೈಫೋçಡ್‌ ಇತ್ಯಾದಿ, ಹಲವಾರು ಕ್ಯಾನ್ಸರ್‌ಗಳು) ಲಕ್ಷಣವಾಗಿರುತ್ತದೆ. ಆದುದರಿಂದ ಜ್ವರವನ್ನು ಗುಣಪಡಿಸಬೇಕಾದರೆ, ವೈದ್ಯರು ಜ್ವರದ ಮೂಲ ಕಾರಣವನ್ನು (ಡಯಾಗ್ನೊàಸಿಸ್‌ ಹುಡುಕಿ ಅದರ ಉಪಚಾರವನ್ನು ಮಾಡಬೇಕಾಗಿರುತ್ತದೆ. ಅದೇ ರೀತಿಯಲ್ಲಿ ಗಂಟು ನೋವು (ಸಂಧಿವಾತ) ಹಲವಾರು ಕಾರಣಗಳಿಂದಾಗಿ ಉದ್ಭವಿಸ ಬಹುದು. ಇಂತಹ ರೋಗಿಯಲ್ಲಿ ಇಮ್ಯುನೋಲೊಜಿ ಮತ್ತು ರುಮೊಟೋಲೊಜಿ ತಜ್ಞರ ಪ್ರಾಥಮಿಕ ಗುರಿಯು ಆ ರೋಗಿಯ ಸಂಧಿ ವಾತದ ಮೂಲ ಕಾರಣವನ್ನು ಗುರುತಿಸಿ, ಅದನ್ನು ಉಪಶಮನಗೊಳಿಸುವುದಾಗಿದೆ. ಇದು ಸರಿಯಾದ ರೀತಿಯಲ್ಲಿ ಮಾಡಿದ್ದಲ್ಲಿ , ಸಂಧಿವಾತವನ್ನು ಗುಣಪಡಿಸಬಹುದು.

ಸಂಧಿವಾತದ ಲಕ್ಷಣವಿರುವ ಹಲವಾರು (ನೂರೈವತ್ತಕ್ಕಿಂತಲೂ ಹೆಚ್ಚು) ಕಾಯಿಲೆಗಳಲ್ಲಿ ರೊಮಟೋçಡ್‌ ಆಥೆùìಟಿಸ್‌ (ಆರ್‌.ಎ. ಎಂದು ಸಂಕ್ಷಿಪ್ತವಾಗಿ ಬರೆಯುತ್ತೇವೆ) ಪ್ರಮುಖ ಹಾಗೂ ಅತೀ ಹೆಚ್ಚು ಸಂಖ್ಯೆಯಲ್ಲಿ ನೋಡಲು ಸಿಗುವಂತಹ ಕಾಯಿಲೆ. ಆರ್‌.ಎ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಆದರೆ ಗಂಡಸರಲ್ಲಿಯೂ ಕೂಡ ಇದು ಕಾಣಬಹುದು. ಮತ್ತು ಯಾವುದೇ ವಯಸ್ಸಿನಲ್ಲಿ ಹಾಗೂ ಋತುವಿನಲ್ಲಿ  ಶುರುವಾಗಬಹುದು.

ಇಷ್ಟೆಲ್ಲ ತೊಂದರೆ ಉಂಟು ಮಾಡುವ ಆರ್‌.ಎ. ಯಾವ ಕಾರಣದಿಂದ ಉಂಟಾಗುತ್ತದೆ? ಇದರ ಉತ್ತರ: ನಮ್ಮ ದೇಹದಲ್ಲಿನ ರೋಗ ಪ್ರತಿರೋಧಕ ವ್ಯವಸ್ಥೆ .

ಈ ರೋಗ ಪ್ರತಿರೋಧಕ ಶಕ್ತಿಯು ನಮ್ಮ ದೇಹದ ರಕ್ಷಣೆಗಾಗಿ ಇರುವಂತಹ ಒಂದು ವ್ಯವಸ್ಥೆ . ಆದರೆ ಆರ್‌.ಎ. ರೋಗಿಗಳಲ್ಲಿ  “”ಬೇಲಿಯೇ ಎದ್ದು ಹೊಲ ಮೇಯ್ದಂತೆ’, ಈ ಶಕ್ತಿಯು ತನ್ನದೇ ದೇಹದ ಮೇಲೆ ಆಕ್ರಮಣ ಮಾಡಲಾರಂಭಿಸುತ್ತದೆ. ಇದನ್ನು ಆಟೋ – ಇಮ್ಯುನಿಟಿ  ಎಂದು ಕರೆಯುತ್ತಾರೆ.  ಇಂತಹ ಶಕ್ತಿಶಾಲಿಯಾದ ಆಕ್ರಮಣದ ಮುಂದೆ ಗಂಟುಗಳು ಹಾಗೂ ಇತರ ಅಂಗಾಂಗಗಳು ತತ್ತರಿಸಿ ಹೋಗಿ ಅವುಗಳಲ್ಲಿ ಶಾಶ್ವತ ವಾದ ಹಾನಿಯಾಗುತ್ತದೆ. ಈ ಹಾನಿ ಯುಂಟಾದ ನಂತರ ಅದನ್ನು ಸರಿಪರಿಸಲು ಸಾಧ್ಯವಿಲ್ಲ. ಆದುದ ರಿಂದ ನಮ್ಮ ಚಿಕಿತ್ಸೆಯ ಗುರಿ ರೋಗ ಪ್ರತಿರೋಧಕ ವ್ಯವಸ್ಥೆಯ ಆಕ್ರಮಣವನ್ನು ತಡೆಗಟ್ಟಿ ಗಂಟುಗಳನ್ನು ರಕ್ಷಿಸುವುದಾಗಿದೆ.

ಗಂಟು ನೋವಿನ ಕಾರಣವನ್ನು ಆರ್‌.ಎ. ಎಂದು ಕಂಡು ಹಿಡಿದ ನಂತರ, ಇದರ ಚಿಕಿತ್ಸೆ ಮಾಡಲು ಇಂದು ನಮ್ಮಲ್ಲಿ ಹತ್ತಕ್ಕಿಂತಲೂ ಹೆಚ್ಚಾದ ವಿವಿಧ ರೀತಿಯ ಔಷಧಗಳಿವೆ. ಕಳೆದ ಹತ್ತು ವರ್ಷಗಳಲ್ಲಿ ಆರ್‌.ಎ.ಯ ಚಿಕಿತ್ಸೆ ಅತ್ಯಂತ ಶೀಘ್ರ ರೀತಿಯಲ್ಲಿ ಮುಂದುವರೆದಿದ್ದು, ಯಾವುದೇ ಒಂದು ಔಷಧದಿಂದ ಗಂಟು ನೋವು ಕಡಿಮೆಯಾಗದಿದ್ದಲ್ಲಿ ರೋಗಿಯು ನಿರಾಶರಾಗಬೇಕಾಗಿಲ್ಲ. ಆರ್‌.ಎ.ಗೆ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಔಷಧಗಳು (ಮೆಥೋಟ್ರೆಕ್ಸೇಟ್‌, ಸಲ್ಫಾಸಲಾಜಿನ್‌ ಇತ್ಯಾದಿ)ಯಾವುದೇ ರೋಗಿಯಲ್ಲಿ ವಿಫ‌ಲವಾದಲ್ಲಿ, “”ಬಯೋಲೊಜಿಕ್ಸ್‌”(ಉದಾ: ಇನ್‌ಫ್ಲಿಕ್ಸಿಮೇಬ್‌, ಇಟಾನರ್ಸೆಪ್ಟ್, ರಿಟುಕ್ಸಿಮೇಬ್‌ ಇತ್ಯಾದಿ) ಔಷಧಗಳು ಉತ್ತಮವಾದ ಪರಿಣಾಮವನ್ನು ತೋರಿಸುತ್ತಿವೆ. ಇಂತಹ ಪರಿಣಾಮಕಾರಿಯಾದ ಚಿಕಿತ್ಸೆಯಿಂದಾಗಿ ಇಂದು ಆರ್‌.ಎ. ರೋಗಿಗಳು ಸಹಜ ಜೀವನವನ್ನು ನಡೆಸಬಹುದಾಗಿದೆ; ರೋಗಿಗಳು ತಮಗೆ ಇಷ್ಟವಾದ ಯಾವುದೇ ಚಟುವಟಿಕೆಯನ್ನು ಸುಲಭವಾಗಿ ನಡೆಸಿ (ಉದಾ: ಆಟೋಟ, ಪ್ರವಾಸ, ಉದ್ಯೋಗ) ಸಂಪೂರ್ಣವಾದ ಸಾಮಾಜಿಕ ಜೀವನವನ್ನು ಆನಂದಿಸಬಹುದಾಗಿದೆ.

ಆದ್ದರಿಂದ ನಾವು ತಿಳಿಯಬೇಕಾದ ಮುಖ್ಯವಾದ ಅಂಶ ಏನೆಂದರೆ: ರೋಗದ ಶೀಘ್ರ ಗುರುತಿಸುವಿಕೆ ಹಾಗೂ ಚಿಕಿತ್ಸೆಯಿಂದ ಆರ್‌.ಎ.ಯನ್ನು ಸೋಲಿಸಬಹುದು ಹಾಗೂ ರೋಗಿಯ ಮುಖದ ಮೇಲೆ ಮಾಸಿದ ನಗುವನ್ನು ಹಿಂದಿರುಗಿಸಬಹುದು. ಇದೇ ಪ್ರತಿಯೊಬ್ಬ ರುಮಟೋಲೊಜಿ ತಜ್ಞರ ಮುಖ್ಯ ಗುರಿ.

ಈ ಕಾಯಿಲೆಯ ಮುಖ್ಯ ಲಕ್ಷಣಗಳು
ಗಂಟು ನೋವು ಹಾಗೂ ಊತ ಇದು ಒಂದು ಅಥವಾ ಅನೇಕ ಗಂಟುಗಳಲ್ಲಿ ಇರಬಹುದು. ಇದು ಬೆರಳು, ಕೈ, ಮಣಿಕಟ್ಟು  ಮೊಣಕೈ, ಭುಜ, ಕತ್ತು, ಸೊಂಟ, ಮೊಣಕಾಲು, ಕಾಲಿನ ಗಂಟುಗಳಲ್ಲಿ ತನ್ನ ಪರಿಣಾಮವನ್ನು ಬೀರುತ್ತದೆ.

ಬೆಳಗ್ಗಿನ ಜಾವದಲ್ಲಿ ಗಂಟುಗಳಲ್ಲಿ ಗಡಸುತನ  ಇದರಿಂದಾಗಿ ಗಂಟುಗಳನ್ನು ಮಡಚುವುದರಲ್ಲಿ  ಹಾಗೂ ತೆರೆಯುವುದರಲ್ಲಿ  ನೋವು ಹಾಗೂ “”ಟೈಟ್‌” ಆಗಿ ಬಿಗಿ ಹಿಡಿದುಕೊಂಡ ಹಾಗೆ ಅನಿಸುವುದು (ಉದಾ: ಮುಷ್ಟಿ ಮಾಡಲು ಕಷ್ಟ ಸಾಧ್ಯ, ಮೊಣಕಾಲು ಮಡಚಿ ಶೌಚಾಲಯದ ಉಪಯೋಗ ಮಾಡಲಸಾಧ್ಯ ಇತ್ಯಾದಿ).

ಈ ಸ್ಥಿತಿಯಲ್ಲಿ ಆರ್‌.ಎ.ಯ ಚಿಕಿತ್ಸೆ  ಸರಿಯಾದ ರೀತಿಯಲ್ಲಿ  ನಡೆಯದಿದ್ದಲ್ಲಿ, ಗಂಟು ನೋವು ಹಾಗೂ ಊತವೂ ಹೆಚ್ಚಾಗಿ ರೋಗಿಗಳು (ಎಷ್ಟೇ ಸಣ್ಣ ವಯಸ್ಸಿನವರಾದರೂ) ಹಾಸಿಗೆ ಹಿಡಿಯುವ ಪರಿಸ್ಥಿತಿಗೆ ಬಂದು ತಮ್ಮ ಸಾಮಾಜಿಕ ಜೀವನ ಹಾಗೂ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಹುದು. ಇದರಿಂದಾಗುವ ಮಾನಸಿಕ ಪರಿಣಾಮವು ಸಾವಿಗಿಂತಲೂ ದುಸ್ತರ ಎಂದು ಹಲವಾರು ರೋಗಿಗಳು ಹೇಳಿದ್ದುಂಟು!

ಕೆಲವು ತಿಂಗಳು/ವರ್ಷಗಳಲ್ಲಿ ಆರ್‌.ಎ. ಮುಂದುವರಿದು, ಗಂಟುಗಳಲ್ಲಿನ ಎಲುಬುಗಳು ಸವೆದು, ಗಂಟುಗಳು ತಮ್ಮ ಆಕಾರವನ್ನು ಕಳೆದುಕೊಳ್ಳುವವು. ಇದರಿಂದಾಗಿ ಕೈ ಹಾಗೂ ಕಾಲುಗಳು ಆಕಾಶಗೆಟ್ಟು ವಕ್ರವಾಗುವವು. ಇಂತಹ ಕೈಗಳು ನೋಡಲು ಅಸಹ್ಯ ಮಾತ್ರವಲ್ಲದೆ, ರೋಗಿಯು ತನ್ನ ಕೈಯಿಂದ ಯಾವುದೇ ಕಾರ್ಯಕಲಾಪವನ್ನು ಮಾಡಲು ಅಸಮರ್ಥರಾಗಬಹುದು. ಉದಾ: ಹಲ್ಲುಜ್ಜುವುದು, ಸ್ನಾನ ಮಾಡುವುದು, ಬಟ್ಟೆ ಉಡುವುದು, ತಿನ್ನುವುದು – ಇಂತಹ ದೈನಂದಿನ ಚಟುವಟಿಕೆಗಳು ಕೂಡ ಅಸಾಧ್ಯವಾಗಬಹುದು. ಈ ಮೊದಲೇ ತಿಳಿಸಿದಂತೆ, ಸಂಧಿವಾತ ಇರುವ ಕಾಯಿಲೆಗಳು ಶರೀರದ ಅನ್ಯ ಅಂಗಾಂಗಗಳ ಮೇಲೆ ಕೂಡ ಪರಿಣಾಮ ಬೀರುತ್ತವೆ. ಈ ಮಟ್ಟಿನಲ್ಲಿ ಆರ್‌.ಎ. ಕೂಡ ಇದೇ ರೀತಿಯಲ್ಲಿ ಶರೀರದ ಈ ಕೆಳಗಿನ ಅಂಗಾಂಗಗಳ ಮೇಲೆ ಪರಿಣಾಮ ಬೀರಬಹುದು.

ಕಣ್ಣು  (ಕೆಂಪಗಾಗುವುದು, ಕಣ್ಣು ನೋವು, ದೃಷ್ಟಿ ಕಡಿಮೆಯಾಗುವುದು – ಸ್ಕಿರೈಟಿಸ್‌, ಎಪಿಸ್ಲಿರೈಟಿಸ್‌ ; ಕಣ್ಣು ಒಣಗುವುದು – ಜೋಗ್ರೆನ್‌ ಸಿಂಡ್ರೋಮ್‌)

ಚರ್ಮ (ಚರ್ಮದಲ್ಲಿ ಊತಗಳು – ರುಮಟೋçಡ್‌ ನೊಡ್ಯುಲ್‌, ಚರ್ಮದಲ್ಲಿ ರಕ್ತಸ್ರಾವದಂತಹ ಬಿಂದುಗಳು – ಪರ್‌ಪುರಾ)

ಎಲುಬು (ಎಲುಬುಗಳು ದುರ್ಬಲವಾಗಿ ಫ್ರಾಕ್ಚರ್‌ ಆಗುವುದು -ಓಸ್ಟಿಯೋಪೊರೋಸಿಸ್‌)

ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗಿ ಪದೇ ಪದೇ ಸೋಂಕು ರೋಗಗಳಾಗುವುದು.

ಮಾಂಸಖಂಡಗಳು (ನಿತ್ರಾಣ, ಮಾಂಸಖಂಡಗಳ ನಿಶ್ಯಕ್ತಿ -ಮಯೋಪಥಿ)

ಶ್ವಾಸಕೋಶಗಳು (ಉಸಿರುಗಟ್ಟುವುದು, ಒಣ ಕೆಮ್ಮು -ಐ.ಎಲ್‌.ಡಿ.)

ಹೃದಯ (ಹೃದಯಘಾತದ ಸಾಧ್ಯತೆ ಹೆಚ್ಚಾಗುವುದು)

ರಕ್ತನಾಳಗಳು ಹಾಗೂ ನರಗಳು (ನಿತ್ರಾಣ, ಗ್ಯಾಂಗ್ರೀನ್‌-ವ್ಯಾಸ್ಕಾಲೈಟಿಸ್‌) ಗಂಟು ನೋವಿನ ರೋಗಿಗಳು ಶೀಘ್ರವಾಗಿ ಇಮ್ಯುನೋಲೊಜಿ ಮತ್ತು ರುಮಟೋಲೊಜಿ ತಜ್ಞರನ್ನು ಕಂಡು ಆರ್‌.ಎ.ಯನ್ನು ಗುರುತಿಸಿ, ಅದರ ಚಿಕಿತ್ಸೆ ಮಾಡಿದ್ದಲ್ಲಿ  ಈ ಎಲ್ಲಾ ತೊಂದರೆಗಳನ್ನು  ತಡೆಯಬಹುದು.

– ಡಾ| ಸಜ್ಜನ್‌ ಶೆಣೈ ಎನ್‌.,   
ವಿಶೇಷಜ್ಞರು – ಇಮ್ಯುನೋಲೊಜಿ ಮತ್ತು ರುಮಟೋಲೊಜಿ
ಕ್ಲಿನಿಕಲ್‌ ಇಮ್ಯುನೋಲೊಜಿ ಮತ್ತು ರುಮಟೋಲೊಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Dress

ಶುಲ್ಕ ಸಮರ: ಸರಕಾರಕ್ಕೆ ಸವಾಲು; ಸರಕಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಡ್ಡು

ಜುಲೈನೊಳಗೆ 30 ಕೋಟಿ ಮಂದಿಗೆ ಲಸಿಕೆ

ಜುಲೈನೊಳಗೆ 30 ಕೋಟಿ ಮಂದಿಗೆ ಲಸಿಕೆ

BSY

ಮೂಲ-ವಲಸಿಗ ಫೈಟ್‌ ಜೋರು; ಸಂಪುಟ ಸರ್ಜರಿ ಮಾತುಗಳ ಬೆನ್ನಲ್ಲೇ ಹೊಸ ಬೆಳವಣಿಗೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಪಿಂಚಣಿ ಗೋಲ್‌ಮಾಲ್‌; ಸಂಧ್ಯಾ ಸುರಕ್ಷಾ ಸಹಿತ ಮಾಸಾಶನ ಯೋಜನೆಗಳಲ್ಲಿ ವಂಚನೆ

ಪಿಂಚಣಿ ಗೋಲ್‌ಮಾಲ್‌; ಸಂಧ್ಯಾ ಸುರಕ್ಷಾ ಸಹಿತ ಮಾಸಾಶನ ಯೋಜನೆಗಳಲ್ಲಿ ವಂಚನೆ

ಅಧಿಕಾರ ಹಸ್ತಾಂತರ ಹೇಗಿರಲಿದೆ?

ಅಧಿಕಾರ ಹಸ್ತಾಂತರ ಹೇಗಿರಲಿದೆ?

JIVAYAN

ಬದುಕಿನಲ್ಲಿ ಅಮೃತವಿದೆ; ಸವಿದರೆ ಚಿರಂಜೀವಿಗಳಾಗುತ್ತೇವೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೌಂದರ್ಯ ಕಾಪಾಡಲು ಯೋಗದ ದಾರಿ

ಸೌಂದರ್ಯ ಕಾಪಾಡಲು ಯೋಗದ ದಾರಿ

ಅನಾರೋಗ್ಯಕರ ಜೀವನ ಶೈಲಿ; ಹೊಟ್ಟೆಯ ಬೊಜ್ಜು ಕರಗಿಸುವ ಯೋಗಾಸನ

ಅನಾರೋಗ್ಯಕರ ಜೀವನ ಶೈಲಿ; ಹೊಟ್ಟೆಯ ಬೊಜ್ಜು ಕರಗಿಸುವ ಯೋಗಾಸನ

ದೇಹಕ್ಕೆ ಧನಾತ್ಮಕ ಶಕ್ತಿ…ರುದ್ರಾಕ್ಷಿ ಧಾರಣೆ ಆರೋಗ್ಯಕ್ಕೂ ಒಳ್ಳೆಯದು

ದೇಹಕ್ಕೆ ಧನಾತ್ಮಕ ಶಕ್ತಿ…ರುದ್ರಾಕ್ಷಿ ಧಾರಣೆ ಆರೋಗ್ಯಕ್ಕೂ ಒಳ್ಳೆಯದು

yoga-kshema

ಹೃದಯಘಾತದ ಅರಿವಿರಲಿ

ಮನೆಯೇ ಸ್ವರ್ಗ: ಮಾನಸಿಕ ಪ್ರತಿರಕ್ಷಣಾ ಗುಣ ಬೆಳೆಸಿಕೊಳ್ಳುವುದು ಹೇಗೆ?

ಮನೆಯೇ ಸ್ವರ್ಗ: ಮಾನಸಿಕ ಪ್ರತಿರಕ್ಷಣಾ ಗುಣ ಬೆಳೆಸಿಕೊಳ್ಳುವುದು ಹೇಗೆ?

MUST WATCH

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

ಹೊಸ ಸೇರ್ಪಡೆ

Dress

ಶುಲ್ಕ ಸಮರ: ಸರಕಾರಕ್ಕೆ ಸವಾಲು; ಸರಕಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಡ್ಡು

ಜುಲೈನೊಳಗೆ 30 ಕೋಟಿ ಮಂದಿಗೆ ಲಸಿಕೆ

ಜುಲೈನೊಳಗೆ 30 ಕೋಟಿ ಮಂದಿಗೆ ಲಸಿಕೆ

BSY

ಮೂಲ-ವಲಸಿಗ ಫೈಟ್‌ ಜೋರು; ಸಂಪುಟ ಸರ್ಜರಿ ಮಾತುಗಳ ಬೆನ್ನಲ್ಲೇ ಹೊಸ ಬೆಳವಣಿಗೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಪಿಂಚಣಿ ಗೋಲ್‌ಮಾಲ್‌; ಸಂಧ್ಯಾ ಸುರಕ್ಷಾ ಸಹಿತ ಮಾಸಾಶನ ಯೋಜನೆಗಳಲ್ಲಿ ವಂಚನೆ

ಪಿಂಚಣಿ ಗೋಲ್‌ಮಾಲ್‌; ಸಂಧ್ಯಾ ಸುರಕ್ಷಾ ಸಹಿತ ಮಾಸಾಶನ ಯೋಜನೆಗಳಲ್ಲಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.