ಕಿವಿಗೂ ಬೇಕು ಉತ್ತಮ ಆರೈಕೆ

Team Udayavani, Apr 23, 2019, 7:56 AM IST

ಕಿವಿಯನ್ನು ಮೂರು ವಿಭಾಗಗಳಾಗಿ ವಿಂಗಡಿ ಸಲಾಗಿದೆ. ಹೊರ, ಮಧ್ಯ ಮತ್ತು ಒಳಗಿನ ಭಾಗ. ಈ ಮೂರು ಭಾಗಗಳು ಶಬ್ಧ ಕೇಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೇಹದ ಉಳಿದ ಭಾಗಗಳಿಗೆ ನೀಡುವಷ್ಟು ಕಾಳಜಿ ಕಿವಿಯ ಮೇಲೆ ಯಾರೂ ನೀಡುವುದಿಲ್ಲ. ಹೀಗಾಗಿಯೇ ಹೆಚ್ಚಿನವರಿಗೆ ಕಿವಿಯ ಸಮಸ್ಯೆ ಬಹುಬೇಗನೆ ಕಾಡಲಾರಂಭಿಸುತ್ತದೆ.

ಕಿವಿ ನೋವಿನ ಬಗ್ಗೆ ಇರಲಿ ಎಚ್ಚರ
ಕಿವಿ ನೋವಿಗೆ ದೀರ್ಘ‌ ಮತ್ತು ಅಲ್ಪಕಾಲದ ಕಿವಿ ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಏನಾದರೂ ಸಿಕ್ಕಿ ಹಾಕಿಕೊಂಡಿರುವುದು, ಗಾಯ, ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್‌ ಸೋಂಕು ಕಾರಣವಾಗಿರುತ್ತದೆ. ಸಣ್ಣ ನೋವಿದ್ದರೆ ಮನೆ ಮದ್ದು ಸಾಕಾಗುತ್ತದೆ. ಒಂದು ವೇಳೆ ನೋವು ತೀವ್ರವಾದರೆ ವೈದ್ಯರನ್ನು ಕಾಣುವುದು ಅಗತ್ಯ. ಕಿವಿ ನೋವು ತೀವ್ರವಾದಾಗ ಬಾಹ್ಯ ಕಿವಿ ಕಾಲುವೆಯಲ್ಲಿ ನೋವು, ತುರಿಸುವಿಕೆ, ಝೇಂಕರಿಸುವ ಶಬ್ಧ, ಊದಿಕೊಂಡ ಕಿವಿ, ಕೇಳಿಸದೇ ಇರುವುದು, ವಿಯಿಂದ ದ್ರವ ವಿಸರ್ಜನೆ ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ.

ಮನೆ ಮದ್ದು
ಮಾನ್ಯವಾದ ಕಿವಿನೋವನ್ನು ಮನೆ ಮದ್ದಿನ ಮೂಲಕ ನಿಯಂತ್ರಿಸಬಹುದು. ಮುಖ್ಯವಾಗಿ ನೋವಿರುವ ಕಿವಿಗೆ ಬಿಸಿ ನೀರಿನ ಬಾಟಲ್ ಅಥವಾ ಪ್ಯಾಡ್‌ನಿಂದ ಕಿವಿಯ ಮೇಲೆ ಒತ್ತಿ ಹಿಡಿಯುವುದು, ಬಿಸಿ ನೀರಿನಲ್ಲಿ ಸ್ವಚ್ಛವಾದ ಬಟ್ಟೆಯನ್ನು ಮುಳುಗಿಸಿ ನೀರನ್ನು ಹಿಂಡಿ ಆ ಬಟ್ಟೆಯನ್ನು ಕಿವಿಯ ಮೇಲಿರಿಸಬಹುದು. ಬೆಳ್ಳುಳ್ಳಿ ರಸದ ಒಂದೆರಡು ಹನಿಯನ್ನು ನೋವಿರುವ ಕಿವಿಗೆ ಹಾಕುವುದು. ಈರುಳ್ಳಿಯನ್ನು ಕತ್ತರಿಸಿ ಸ್ವಲ್ಪ ಬಿಸಿ ಮಾಡಿ ತಣ್ಣಗಾದ ಬಳಿಕ ಅದರ ರಸ ತೆಗೆದು ಒಂದೆರಡು ಹನಿ ಕಿವಿಗೆ ಬಿಡಬಹುದು. ಉಪ್ಪನ್ನು ಸ್ವಲ್ಪ ಬಿಸಿ ಮಾಡಿ ದಪ್ಪನೆಯ ಕಾಲು ಚೀಲದಲ್ಲಿ ಹಾಕಿ ನೋವಿರುವ ಕಿವಿಯ ಅಡಿಯಲ್ಲಿ 8- 10 ಬಾರಿ ಇಡುವುದರಿಂದಲೂ ಕಿವಿನೋವು ಶಮನವಾಗುವುದು.

ಮಾವಿನ ಎಲೆಯನ್ನು ಜಜ್ಜಿ ರಸ ತೆಗೆದು ಬಿಸಿ ಮಾಡಿ 3- 4 ಹನಿ ಕಿವಿಗೆ ಹಾಕುವುದರಿಂದ ನೋವು ನಿವಾರಣೆ ಸಾಧ್ಯವಿದೆ. ಈ ಎಲ್ಲ ಕ್ರಮಗಳನ್ನು ಅನುಸರಿಸುವ ಮುಂಚೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಬಹುಮುಖ್ಯ.

ಆಲಿಸಲು ಪ್ರಮುಖ ಸಾಧನವಾದ ಕಿವಿ ಆರೈಕೆಯೂ ಅಗತ್ಯ. ಹೀಗಾಗಿ ಇಯರ್‌ ಫೋನ್‌ ಅಥವಾ ಹೆಡ್‌ ಫೋನ್‌ನಲ್ಲಿ ಜೋರಾಗಿ ನಿರಂತರ ಹಾಡು ಕೇಳು ವುದರಿಂದ ಕಿವಿಯ ಡ್ರಮ್‌ ಛಿದ್ರವಾಗುವ ಅಥವಾ ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದ್ದರಿಂದ ಶಬ್ದವನ್ನು ಕಡಿಮೆ ಮಾಡಿ ಹಾಡು ಕೇಳಿ. ಇಯರ್‌ ಫೋನ್‌ಗಳ ಬಳಕೆ ಕಡಿಮೆ ಮಾಡುವುದು ಉತ್ತಮ.

ಕಿವಿಯ ಮೇಣವು ತುಂಬಾ ಲಾಭಕಾರಿ ಯಾಗಿದೆ. ಕಿವಿಯು ತನ್ನಿಂದ ತಾನೇ ಸ್ವಚ್ಛವಾಗುತ್ತಾ ಹೋಗುತ್ತದೆ. ಕಿವಿಯ ಮೇಣವನ್ನು ಸ್ವಚ್ಛ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಯಾಕೆಂದರೆ ಕಿವಿಗೆ ಎಷ್ಟು ಬೇಕೋ ಅಷ್ಟು ಮೇಣವನ್ನು ಮಾತ್ರ ಕಿವಿ ಉತ್ಪಾದಿಸುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚು ಮೇಣವನ್ನು ಉತ್ಪಾದಿಸುವುದಿಲ್ಲ. ಆದರೆ ಅದನ್ನು ಬಲವಂತವಾಗಿ ತೆಗೆಯುವಾಗ ಎಚ್ಚರ ವಹಿಸಬೇಕು.

ಚೂಪಾದ ವಸ್ತುಗಳನ್ನು ಕಿವಿ ಯೊಳಗೆ ಹಾಕುವುದು ಅಪಾಯಕಾರಿ. ಇದರಿಂದ ಶಾಶ್ವತವಾಗಿ ಟೈಂಪನಿಕ್‌ ಮೆಂಬರೆನ್ಸ್‌ಗೆಹಾನಿಯಾಗ ಬಹುದು. ಚೂಪಾದ ವಸ್ತುಗಳಿಂದ ಕಿವಿಯ ಒಳಗಿನ ಭಾಗದಲ್ಲಿ ಹಾನಿಯಾಗಬಹುದು. ಇದರಿಂದ ಸೋಂಕು ಕಾಣಿಸಿ ಕೊಳ್ಳಬಹುದು. ಇಯರ್‌ ಕ್ಯಾಂಡಲಿಂಗ್‌ ಕಿವಿಯ ಮೇಣವನ್ನು ಕರಗಿಸುವಲ್ಲಿ ತುಂಬಾ ಆರೋಗ್ಯಕಾರಿ. ಇದರ ಮೂಲಕ ಕಿವಿ ಸ್ವಚ್ಛಗೊಳಿಸಬಹುದು ಎನ್ನುತ್ತದೆ ಸಂಶೋಧನೆಗಳು.

ಸಮಸ್ಯೆ ಉಲ್ಬಣಿಸುವ ಮುನ್ನ ಎಚ್ಚೆತ್ತುಕೊಳ್ಳಿ
ದೇಹದ ಎಲ್ಲ ಭಾಗಗಳಂತೆ ಕಿವಿಯ ಆರೈಕೆ ಕೂಡ ಮುಖ್ಯ. ಸಮಸ್ಯೆ ಉಲ್ಬಣಿಸುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೇ ಶಾಶ್ವತವಾಗಿ ಕೇಳುವ ಸಾಮರ್ಥ್ಯ ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಕಿವಿಗೆ ಚೂಪಾದ ವಸ್ತುಗಳನ್ನು ಹಾಕುದಾಗಲಿ ಮಾಡಬಾರದು. ಇದು ಕಿವಿ ತಮಟೆಯ ಸಮಸ್ಯೆಗೆ ಕಾರಣವಾಗುತ್ತದೆ.
ಡಾ| ವಿಶ್ವಾಸ್‌, ಕರಂಗಲ್ಪಾಡಿ

ವೈದ್ಯರ ಸಲಹೆ ಪಡೆಯಿರಿ
ಕಿವಿಯಲ್ಲಿ ನೋವು , ಸೋಂಕು ದೀರ್ಘ‌ಕಾಲದಿಂದ ಕಾಣಿಸಿಕೊಂಡಾಗ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ದೀರ್ಘ‌ಕಾಲದ ನೋವಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಸಮಸ್ಯೆಯಾಗಲಿದೆ.

••ಪ್ರಜ್ಞಾ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ