ಬೀಟ್‌ರೂಟ್‌….ಕೆಂಪುಗಡ್ಡೆಯಲ್ಲಿ ಅಡಗಿದೆ ಸಹಸ್ರಾರು ಪೋಷಕಾಂಶ

ಜೀಣಕ್ರಿಯೆ ಮತ್ತು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಯಲ್ಲಿ ಬೆಳ್ಳುಳ್ಳಿಯಷ್ಟೇ ಬೀಟ್‌ರೂಟ್‌ ಕೂಡ ಪರಿಣಾಮಕಾರಿ.

Team Udayavani, Sep 9, 2020, 5:55 PM IST

ಬೀಟ್‌ರೂಟ್‌….ಕೆಂಪುಗಡ್ಡೆಯಲ್ಲಿ ಅಡಗಿದೆ ಸಹಸ್ರಾರು ಪೋಷಕಾಂಶ

ಪ್ರತಿದಿನದ ಅಡುಗೆಯಲ್ಲಿ ಬಳಸಲ್ಪಡುವ ಬೀಟ್‌ರೂಟ್‌ ಎಂಬ ಕೆಂಪುಗಡ್ಡೆಯಲ್ಲಿ ಅಡಗಿರುವ ಪೋಷಕಾಂಶಗಳು ಸಹಸ್ರಾರು. ಹೆಚ್ಚಿನವರು ಈ ಬೀಟ್‌ ರೂಟ್‌ನ್ನು ಇಷ್ಟಪಡುವುದಿಲ್ಲ, ಹಾಗಂತ ದ್ವೇಷಿಸುತ್ತಾರೆ ಎಂದಲ್ಲ. ಆಹಾರವಾಗಿ ಉಪಯೋಗಿಸುವವರು ವಿರಳ. ಆದರೆ ಇಲ್ಲಿದೆ ನೋಡಿ ಪ್ರತಿದಿನವೂ ಬೀಟ್‌ರೂಟ್‌ ನ್ನು ನಿಮ್ಮ ಆಹಾರದಲ್ಲಿ ಉಪಯೋಗಿಸಲು ಹಲವು ಕಾರಣಗಳು. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ನಿಶ್ಶಕ್ತಿಯಿಂದ ಬಳಲುತ್ತಿರುವವರೇ ಹೆಚ್ಚು. ಜಂಕ್‌ಫ‌ುಡ್‌ ಗಳ ಸೇವನೆಯಿಂದಾಗಿ ರಕ್ತಹೀನತೆ ಕಾಯಿಲೆಯಿಂದ ಬೇಸರಗೊಂಡಿರುವವರಿಗೆ ಈ ಬೀಟ್‌ರೂಟ್‌ ಸಿದೌœಷಧ ಎಂದರೆ ತಪ್ಪಾಗಲಾರದು.

ಅಪಾರ ಆರೋಗ್ಯ ಗುಣಗಳು ಕೆನೊಪೊಡಿಯೇಶಿಯ ಕುಟುಂಬಕ್ಕೆ ಸೇರಿದ ಬೀಟ್‌ರೂಟ್‌ನ ವೈಜ್ಞಾನಿಕ ಹೆಸರು ಬೆಟಾ ವಲ್ಗಾರಿಸ್‌ಎಲ್‌. ಬೀಟ್‌ರೂಟ್‌ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧ ವಾಗಿದ್ದು, ತಿಂದ ತತ್‌ಕ್ಷಣ ಶಕ್ತಿಯನ್ನು ನೀಡು ತ್ತದೆ. ಇದರಲ್ಲಿರುವ ನೈಟ್ರೇಟ್‌ ಅಪ ಧಮನಿಯ ಸ್ನಾಯುಗಳನ್ನು ಪ್ರಚೋದಿಸಿ ರಕ್ತ ಸುಗಮವಾಗಿ ಹರಿಯುವಂತೆ ಮಾಡುತ್ತದೆ. ಅದಲ್ಲದೆ ಈ ನೈಟ್ರೇಟ್‌ ಅಂಶ ಜೀರ್ಣ ಕಾರಿಯಾಗಿರುವುದರಿಂದ ಮಲ ಬದ್ಧತೆ ನಿವಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

ದೇಹದ ಆಯಾಸ, ಅಶಕ್ತಿಯನ್ನು ನಿವಾರಿಸಲು ಬೀಟ್‌ರೂಟ್‌ ರಸಕ್ಕೆ ನಿಂಬೆರಸ ಮತ್ತು ಸಕ್ಕರೆ ಬೆರೆಸಿ ಕುಡಿದರೆ ಉತ್ತಮ. ಒಂದು ಕಪ್‌ ಬೀಟ್‌ರೂಟ್‌ನಲ್ಲಿ 58 ಗ್ರಾಂ ಕ್ಯಾಲೊರಿಗಳಿವೆ. ಆದರೆ ಈ ಕ್ಯಾಲೊರಿ ದೇಹದ ತೂಕ ಹೆಚ್ಚಿಸುವ ಬದಲು ಕೂದಲು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಜೀಣಕ್ರಿಯೆ ಮತ್ತು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಯಲ್ಲಿ ಬೆಳ್ಳುಳ್ಳಿಯಷ್ಟೇ ಬೀಟ್‌ರೂಟ್‌ ಕೂಡ ಪರಿಣಾಮಕಾರಿ.

ತರಕಾರಿಯಾಗಿ ಮಾತ್ರ ವಲ್ಲದೆ ಔಷಧಿಯಾಗಿಯೂ ಬಳಸಲ್ಪಡುವ ಬೀಟ್‌ರೂಟ್‌ ವ್ಯಾಯಾಮ ಮಾಡುವವರಿಗೆ ಶಕ್ತಿದಾಯಕ. ಗರ್ಭಿಣಿಯರು ನಿತ್ಯಆಹಾರದಲ್ಲಿ ಬೀಟ್‌ರೂಟ್‌ ಸೇವಿಸುವು ದರಿಂದ ಅವಶ್ಯವಾದ ಫೋಲಿಕ್‌ ಆಮ್ಲದ ಪೂರೈಕೆಯಾಗುತ್ತದೆ. ಜತೆಗೆ ಶಿಶುವಿನ ಬೆನ್ನುಹುರಿ ಬೆಳವಣಿಗೆಗೆ ನೆರವಾಗುತ್ತದೆ.

ರೋಮನ್ನರು ಇದನ್ನು ಲೈಂಗಿಕ ಶಕ್ತಿ ಯನ್ನು ವೃದ್ಧಿಸಲು ಬಳಸುತ್ತಿದ್ದರಂತೆ. ನಿತ್ಯ ಆಹಾರದಲ್ಲಿ ಬೀಟ್‌ರೂಟ್‌ ಇದ್ದರೆ ಹೃದಯ ರೋಗಗಳು, ಪಾರ್ಶ್ವವಾಯುಗಳನ್ನು ದೂರವಿಡಲು ಸಹಕಾರಿ. ಮಧುಮೇಹಕ್ಕೆ ಇದು ಸ್ವ ನಿಯಂತ್ರಿತ ಇನ್ಸುಲಿನ್‌ ಎನ್ನಲಾಗಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವರಿಗೆ ಉಪಕಾರಿ. ಹಿಮೋ ಗ್ಲೋಬಿನ್‌ ವೃದ್ಧಿಸುವ ಮೂಲಕ, ರಕ್ತದಲ್ಲಿ ರುವ ಕಲ್ಮಶವನ್ನೂ ತೆಗೆದುಹಾಕುತ್ತದೆ.

ಕ್ಯಾನ್ಸರ್‌, ರಕ್ತದೊತ್ತಡ ಮತ್ತು ಹುಟ್ಟು ಸಮಸ್ಯೆಗಳನ್ನು ನಿವಾರಿಸಲು ಬೇಕಾದಂತಹ ಪೋಷಕಾಂಶಗಳೊಂದಿಗೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಬೀಟ್‌ರೂಟ್‌ ನಮ್ಮ ದೇಹಕ್ಕೆ ನೀಡುತ್ತದೆ. ಮೂತ್ರ ಸಂಬಂಧಿ ರೋಗಗಳಿರುವವರು ಸೌತೆಕಾಯಿ, ಕ್ಯಾರೆಟ್‌ ಮತ್ತು ಬೀಟ್‌ ರೂಟ್‌ ರಸವನ್ನು ಸಮಪ್ರಮಾಣದಲ್ಲಿ ಬೆರಸಿ ಕುಡಿದರೆ ಒಳ್ಳೆಯದು.

ಮೂತ್ರಕೋಶ ದಲ್ಲಿ ಕಲ್ಲು ಇರುವವರಿಗೆ ಬೀಟ್‌ರೂಟ್‌ ಹಿತಕರವಲ್ಲ. ಸ್ತನ, ವೃಷಣ ಮತ್ತು ಪ್ರಾಸ್ಟ್ರೇಟ್‌ ಗ್ರಂಥಿಯ ಕ್ಯಾನ್ಸರ್‌ ಬೆಳವಣಿಗೆ ಯನ್ನು ತಡೆಯುವಲ್ಲಿ ಇದರಲ್ಲಿರುವ ಬೀಟಾ ನಿಯಾಸಿನ್‌ ಸಹಕಾರಿ. ದೇಹದಲ್ಲಾಗುವ ರಾಸಾಯನಿಕ ಕ್ರಿಯೆಗಳನ್ನು ಸರಿ ಯಾದ ಕ್ರಮದಲ್ಲಿ ನಡೆಸಲು ಬೀಟ್‌ರೂಟ್‌ನ ಕೆಂಪು ಬಣ್ಣದಲ್ಲಿರುವ ಬೆಟೈನ್‌ ನೆರವಾಗುತ್ತದೆ. ಬೀಟ್‌ರೂಟ್‌ ನಲ್ಲಿರುವ ಪೋಷಕಾಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಉಳಿಸಿಕೊಳ್ಳುವುದಕ್ಕೆ ಅದನ್ನು ಹಸಿಯಾಗಿ ಅಥವಾ ಹದವಾಗಿ ಬೇಯಿಸಿ ತಿನ್ನುವುದು ಉತ್ತಮ.

ಟಾಪ್ ನ್ಯೂಸ್

sakath movie

‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್‌ ಥ್ರಿಲ್‌!

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ದೇಶವೀಗ ಆರೋಗ್ಯಯುತ

ನಮ್ಮ ದೇಶವೀಗ ಆರೋಗ್ಯಯುತ

“ಆಯುಷ್ಮಾನ್‌’ಗೆ ಖಾಸಗಿ ಆಸ್ಪತ್ರೆಗಳನ್ನು ಆಕರ್ಷಿಸಲು ಕ್ರಮ

“ಆಯುಷ್ಮಾನ್‌’ಗೆ ಖಾಸಗಿ ಆಸ್ಪತ್ರೆಗಳನ್ನು ಆಕರ್ಷಿಸಲು ಕ್ರಮ

Untitled-1

ಶ್ರವಣ ಶಕ್ತಿ ವೈಕಲ್ಯವುಳ್ಳವರಿಗಾಗಿ ಸಂವಹನ ಕಾರ್ಯತಂತ್ರಗಳು

ವಾಯು ಮಾಲಿನ್ಯ : ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ

ವಾಯು ಮಾಲಿನ್ಯ : ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ

ರೈಲಿನಲ್ಲಿ ಮತ್ತೆ ಸಿಗುತ್ತೆ ಆಹಾರ!

ರೈಲಿನಲ್ಲಿ ಮತ್ತೆ ಸಿಗುತ್ತೆ ಆಹಾರ!

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

2act

ರಾಜ್ಯದ ತಿದ್ದುಪಡಿ ಕಾಯ್ದೆ ವಾಪಸ್‌ ಆಗಲಿ

sakath movie

‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್‌ ಥ್ರಿಲ್‌!

1maraton

ಮೀಸಲು ಅರಣ್ಯದಲ್ಲಿ ಮ್ಯಾರಥಾನ್ ಗೆ ಪರಿಸರ ಪ್ರಿಯರ ವಿರೋಧ

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.