Smoke: ನಿಶ್ಶಬ್ದ ಅಪಾಯ: ಪರೋಕ್ಷ ಧೂಮಪಾನದ ಕುರಿತು ತಿಳಿವಳಿಕೆ: ಅಪಾಯಗಳು ಮತ್ತು ತಡೆ


Team Udayavani, Aug 6, 2024, 2:56 PM IST

1-health

ಧೂಮಪಾನಿಗಳ ಒಡನಾಟದಲ್ಲಿ ಇರುವುದರಿಂದ ನೀವು ನಿಮಗೆ ಗೊತ್ತಿಲ್ಲದೆಯೇ ನಿಮ್ಮ ಆರೋಗ್ಯಕ್ಕೆ ಅಪಾಯ ತಂದುಕೊಳ್ಳಬಹುದು ಎಂಬುದು ನಿಮಗೆ ಗೊತ್ತಿದೆಯೇ? ಧೂಮಪಾನಿಗಳ ಹತ್ತಿರ ಇದ್ದಾಗ ಅವರು ಸೇದಿ ಬಿಟ್ಟ ಹೊಗೆಯನ್ನು ನೀವು ಉಸಿರಾಡಿದರೆ ಹೃದ್ರೋಗಗಳಿಂದ ತೊಡಗಿ ಶ್ವಾಸಾಂಗ ಸಮಸ್ಯೆಗಳ ವರೆಗೆ ಅನೇಕ ಗಂಭೀರ ಅನಾರೋಗ್ಯಗಳು ನಿಮ್ಮನ್ನು ಕೂಡ ಬಾಧಿಸಬಲ್ಲವು ಎಂಬುದು ನಿಮಗೆ ತಿಳಿದಿದೆಯೇ?

ತಂಬಾಕಿನ ಹೊಗೆಗೆ ಅಲ್ಪ ಕಾಲ ಕೂಡ ಒಡ್ಡಿಕೊಳ್ಳುವುದರಿಂದ ತೀವ್ರ ತೊಂದರೆ ಎದುರಾಗಬಹುದು ಎಂಬುದು ಗೊತ್ತಿದೆಯೇ? ಪರೋಕ್ಷ ಧೂಮಪಾನದಿಂದಲೂ ಸ್ವತಃ ಧೂಮಪಾನದಿಂದ ಉಂಟಾಗುವಷ್ಟೇ ಅಪಾಯಗಳು ಎದುರಾಗುತ್ತವೆ ಎಂಬ ಬಗ್ಗೆ ಎಂದಾದರೂ ಆಲೋಚಿಸಿದ್ದೀರಾ? ಈ ಅಪಾಯಗಳ ಬಗ್ಗೆ ತಿಳಿದುಕೊಂಡು, ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಬಯಸುವಿರಾದರೆ ಮುಂದೆ ಓದಿ.

ಧೂಮಪಾನಿಗಳು ಅಥವಾ ಹೊಗೆಯ ಮೂಲಗಳ ಸನಿಹ ಇರುವ ಸಂದರ್ಭದಲ್ಲಿ ತಂಬಾಕಿನ ಹೊಗೆಯನ್ನು ಇತರರು ಉದ್ದೇಶಪೂರ್ವಕವಲ್ಲದೆ ಉಸಿರಾಡುವುದಕ್ಕೆ ಪರೋಕ್ಷ ಧೂಮಪಾನ ಎನ್ನಲಾಗುತ್ತದೆ. ಇದು ಮುಖ್ಯವಾಗಿ ಎರಡು ವಿಧವಾಗಿ ಇರುತ್ತದೆ: ಪ್ರಧಾನ ವಾಹಿನಿಯ ಹೊಗೆ ಮತ್ತು ಪ್ರಧಾನ ವಾಹಿನಿಯಲ್ಲದ ಹೊಗೆ. ಸಿಗರೇಟು, ಬೀಡಿ ಅಥವಾ ಸಿಗಾರ್‌ ಇತ್ಯಾದಿಗಳನ್ನು ಸೇದುತ್ತಿರುವ ವ್ಯಕ್ತಿ ಹೊರಬಿಟ್ಟ ಹೊಗೆಯು ಪ್ರಧಾನ ವಾಹಿನಿಯ ಹೊಗೆಯಾದರೆ; ಉರಿಯುತ್ತಿರುವ ಸಿಗರೇಟು, ಪೈಪ್‌, ಸಿಗಾರ್‌ ಅಥವಾ ಹುಕ್ಕಾದಿಂದ ಬಿಡುಗಡೆಯಾಗುವ ಹೊಗೆಯು ಪ್ರಧಾನ ವಾಹಿನಿಯಲ್ಲದ ಹೊಗೆಯಾಗಿದೆ.

ಪರೋಕ್ಷ ಧೂಮಪಾನದ ಎರಡೂ ವಿಧಗಳು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿದ್ದು, ಅದನ್ನು ಉಸಿರಾಡುವ ಧೂಮಪಾನಿಗಳಲ್ಲದವರಿಗೆ ಆರೋಗ್ಯ ಅಪಾಯಗಳನ್ನು ಒಡ್ಡುತ್ತವೆ. ವ್ಯಕ್ತಿಯೊಬ್ಬ ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಂಡಾಗ ಅವರು ಉದ್ದೇಶಪೂರ್ವಕವಾಗಿಯಲ್ಲದೆ ಹೊಗೆಯನ್ನು ಉಸಿರಾಡುತ್ತಿರುತ್ತಾರೆ ಅಥವಾ “ಪರೋಕ್ಷ ಧೂಮಪಾನ’ ನಡೆಸುತ್ತಾರೆ.

ಧೂಮಪಾನಿಗಳಲ್ಲದವರು ಇಂತಹ ಪರೋಕ್ಷ ಧೂಮಪಾನಕ್ಕೆ ಹೊಟೇಲ್‌ಗ‌ಳು, ಕಚೇರಿಗಳು, ಸಾರ್ವಜನಿಕ ಸಾರಿಗೆ, ಕಾರುಗಳು ಇತ್ಯಾದಿಗಳಲ್ಲಿ ತುತ್ತಾಗಬಹುದು. ಪರೋಕ್ಷ ಧೂಮಪಾನದಲ್ಲಿ ಹೊಗೆ ತೆಳುವಾಗಿದ್ದರೂ ಪರೋಕ್ಷ ಧೂಮಪಾನವು ಪ್ರತ್ಯಕ್ಷ ಧೂಮಪಾನದಷ್ಟೇ ವಿಷಕಾರಿಯಾಗಿರುತ್ತದೆ.

ಅದು ಇಂಗಾಲದ ಮೊನಾಕ್ಸೈಡ್‌, ನೈಟ್ರೊಸಮೈನ್‌ ಗಳು ಮತ್ತು ಅಮೋನಿಯಾವನ್ನು ಹೊಂದಿರುತ್ತದೆ. ಪರೋಕ್ಷ ಧೂಮಪಾನದಲ್ಲಿ ಸುರಕ್ಷಿತ ಮಟ್ಟ ಎಂಬುದಿಲ್ಲ. ಧೂಮಪಾನಿಗಳು ಇದ್ದಾಗ ಕೊಠಡಿಯ ಕಿಟಕಿ ಬಾಗಿಲು ತೆರೆದಿಡುವುದು ಅಥವಾ ಧೂಮಪಾನಿಯು ಇನ್ನೊಂದು ಕೊಠಡಿಯಲ್ಲಿ ಸಿಗರೇಟು ಸೇದುವುದರಿಂದ ಅಪಾಯ ಕಡಿಮೆ ಆಗುವುದಿಲ್ಲ. ಕಿಟಕಿ ಬಾಗಿಲು ತೆರೆದಿದ್ದರೂ ಧೂಮಪಾನಿ ಸಿಗರೇಟು ಸೇದಿ ಮುಗಿಸಿದ ಬಳಿಕ ಹೊಗೆ 2-3 ತಾಸುಗಳ ಕಾಲ ಗಾಳಿಯಲ್ಲಿರುತ್ತದೆ.

ಪರೋಕ್ಷ ಧೂಮಪಾನದಿಂದ ಆರೋಗ್ಯ ಅಪಾಯಗಳು ಮತ್ತು ಪರಿಣಾಮಗಳು

ಎಲ್ಲ ವಿಧವಾದ ಪರೋಕ್ಷ ಧೂಮಪಾನಗಳು ಕೂಡ ಅಪಾಯಕಾರಿ. ಪರೋಕ್ಷ ಧೂಮಪಾನದಿಂದ ಧೂಮಪಾನ ಸಂಬಂಧಿ ಆರೋಗ್ಯ ಅಪಾಯಗಳು ಎದುರಾಗುತ್ತವೆ. ಅದು ಶ್ವಾಸಕೋಶದ ಕ್ಯಾನ್ಸರ್‌, ಹೃದ್ರೋಗಗಳು ಮತ್ತು ಲಕ್ವಾಕ್ಕೆ ಕಾರಣವಾಗಬಹುದು. ಕೆಮ್ಮು ಮತ್ತು ತಲೆನೋವು, ಗಂಟಲು ನೋವು ಹಾಗೂ ಕಣ್ಣು ಮತ್ತು ಮೂಗಿನ ತೊಂದರೆಗಳು ಪರೋಕ್ಷ ಧೂಮಪಾನದ ಕೆಲವು ಅಲ್ಪಕಾಲೀನ ಪರಿಣಾಮಗಳಾಗಿವೆ.

ಧೂಮಪಾನಿಗಳು ಇರುವ ಮನೆಯಲ್ಲಿ ಬೆಳೆಯುವ ಶಿಶುಗಳು ಮತ್ತು ಸಣ್ಣ ವಯಸ್ಸಿನ ಮಕ್ಕಳು ಆರಂಭಿಕ ತಿಂಗಳುಗಳಲ್ಲಿ ವಿವಿಧ ಶ್ವಾಸಾಂಗ ಅನಾರೋಗ್ಯಗಳಿಗೆ ತುತ್ತಾಗುವ ಅಪಾಯ ಹೆಚ್ಚು. ಎಳೆಯ ಮಕ್ಕಳಿಗೆ ಪರೋಕ್ಷ ಧೂಮಪಾನದಿಂದ ಅಪಾಯ ಹೆಚ್ಚು ಏಕೆಂದರೆ ಅವರ ದೇಹ ಇನ್ನೂ ಬೆಳೆಯುತ್ತಿರುತ್ತದೆ ಮತ್ತು ವಯಸ್ಕರಿಗೆ ಹೋಲಿಸಿದರೆ ಅವರ ಉಸಿರಾಟದ ವೇಗ ಹೆಚ್ಚಿರುತ್ತದೆ.

ಇದರಿಂದ ಉಂಟಾಗುವ ಶ್ವಾಸಾಂಗ ಅನಾರೋಗ್ಯಗಳಲ್ಲಿ ಪದೇಪದೆ ಕೆಮ್ಮು, ಉಬ್ಬಸ, ಮಧ್ಯ ಕಿವಿಯ ಸೋಂಕುಗಳು (ಕಿವಿ ಸೋರುವುದು) ಮಾತ್ರವಲ್ಲದೆ ಉಲ್ಬಣಗೊಂಡ ಅಸ್ತಮಾ ಲಕ್ಷಣಗಳು, ಬ್ರೊಂಕೈಟಿಸ್‌, ಬ್ರೊಂಕಿಯೊಲೈಟಿಸ್‌ ಮತ್ತು ನ್ಯುಮೋನಿಯಾದಂತಹ ಹೆಚ್ಚು ಗಂಭೀರವಾದ ಅನಾರೋಗ್ಯಗಳು ಸೇರಿವೆ. ಇಷ್ಟು ಮಾತ್ರವಲ್ಲದೆ ತಂಬಾಕಿನ ಹೊಗೆಯನ್ನು ಉಸಿರಾಡಿದರೆ ಮಕ್ಕಳ ಶ್ವಾಸಕೋಶದ ಬೆಳವಣಿಗೆ ಬಾಧಿತವಾಗಬಹುದಾಗಿದ್ದು, ಅವರ ಶ್ವಾಸಕೋಶಗಳು ಪೂರ್ಣವಾಗಿ ಬೆಳವಣಿಗೆಯಾಗದೆ ದುರ್ಬಲಗೊಳ್ಳಬಹುದಾಗಿದೆ.

ಹಾಗೆಯೇ, ಗರ್ಭಿಣಿಯು ತಂಬಾಕಿನ ಹೊಗೆಯನ್ನು ಉಸಿರಾಡಿದರೆ ಆಕೆಯ ಗರ್ಭದಲ್ಲಿರುವ ಶಿಶುವಿಗೆ ಕೂಡ ಅಪಾಯಕಾರಿ ರಾಸಾಯನಿಕಗಳಿಂದ ಅಪಾಯ ಎದುರಾಗುತ್ತದೆ, ಇದರಿಂದ ಆರೋಗ್ಯ ಅಪಾಯಗಳು ಉಂಟಾಗಬಹುದು. ಸಾಧ್ಯತೆಗಳು ಕಡಿಮೆ ಇದ್ದರೂ ಜನಿಸುವ ಶಿಶುವಿನ ದೇಹತೂಕ ಕಡಿಮೆಯಾಗಿರುವುದು, ಅವಧಿಪೂರ್ವ ಹೆರಿಗೆ ಅಥವಾ ಶಿಶುವಿನ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳು ಇಲ್ಲದಿಲ್ಲ. ಇಷ್ಟುಮಾತ್ರವಲ್ಲದೆ ಪರೋಕ್ಷ ಧೂಮಪಾನವನ್ನು ಅನುಭವಿಸುವ ಶಿಶು ಏಕಾಗ್ರತೆ ಮತ್ತು ಕಲಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದಾಗಿದ್ದು, ಶೀಘ್ರ ವೈದ್ಯಕೀಯ ವಿಶ್ಲೇಷಣೆ ಮತ್ತು ಚಿಕಿತ್ಸೆ ಅಗತ್ಯವಾಗಬಹುದು.

ಪರೋಕ್ಷ ಧೂಮಪಾನದಿಂದ ನಾನು ಮತ್ತು ನನ್ನ ಜತೆ ಇರುವವರನ್ನು ರಕ್ಷಿಸಿಕೊಳ್ಳುವುದು ಹೇಗೆ?

ಪರೋಕ್ಷ ಧೂಮಪಾನದ ಬಹುತೇಕ ಪ್ರಕರಣಗಳು ಮನೆಯಲ್ಲಿ ನಡೆಯುತ್ತವೆ. ಮನೆಯಲ್ಲಿರುವ ಧೂಮಪಾನಿಯು ಹೊಗೆ ಸೇದಿದ ಬಳಿಕ ಕಿಟಕಿ ಬಾಗಿಲುಗಳು ತೆರೆದಿದ್ದರೂ ಹೊಗೆಯು ಹಲವು ತಾಸುಗಳ ವರೆಗೆ ಗಾಳಿಯಲ್ಲಿದ್ದು, ಕೊಠಡಿಯಿಂದ ಕೊಠಡಿಗೆ ಹರಡುತ್ತಿರುತ್ತದೆ. ನೀವು ಮತ್ತು ನಿಮ್ಮವರನ್ನು ಪರೋಕ್ಷ ಧೂಮಪಾನದಿಂದ ರಕ್ಷಿಸಿಕೊಳ್ಳುವ ಅತ್ಯುತ್ತಮ ಮಾರ್ಗ ಎಂದರೆ ಮನೆಯನ್ನು ಹೊಗೆಯಿಂದ ಮುಕ್ತವಾಗಿರಿಸಿಕೊಳ್ಳುವುದು; ಅಂದರೆ ಧೂಮಪಾನಿಯು ದುಶ್ಚಟವನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಮಾಡುವುದು.

ಲಕ್ಷಣಗಳು

ದೀರ್ಘ‌ಕಾಲ ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಂಡ ಬಳಿಕ ಈ ಕೆಳಕಂಡ ಲಕ್ಷಣಗಳು ಉಂಟಾಗಿದ್ದರೆ ಕೂಡಲೇ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ:

 ಸತತ ಕೆಮ್ಮು

 ಉಸಿರಾಡುವಾಗ ಸಶಬ್ದ ಉಬ್ಬಸ

 ಉಸಿರಾಡಲು ಕಷ್ಟ ಅಥವಾ ಉಸಿರು ಹಿಡಿದುಕೊಳ್ಳುವುದು

 ಎದೆ ಬಿಗಿದುಕೊಳ್ಳುವುದು ಅಥವಾ ತೊಂದರೆ

ವೈದ್ಯಕೀಯ ನೆರವು ಪಡೆಯಬೇಕಾದ ಇತರ ಕೆಲವು ಲಕ್ಷಣಗಳು ಎಂದರೆ

 ಪದೇಪದೆ ಶೀತವಾಗುವುದು ಅಥವಾ ಶ್ವಾಸಾಂಗ ಸೋಂಕುಗಳು

 ಉಬ್ಬಸ, ಮೂಗಿನಲ್ಲಿ ಸಿಂಬಳ ಸುರಿಯುತ್ತಿರುವುದು ಅಥವಾ ಅಂಟಾದ ಸಿಂಬಳ, ಕಣ್ಣು ತುರಿಕೆಯಂತಸ ಲಕ್ಷಣಗಳನ್ನು ಹೊಂದಿರುವ ಅಲರ್ಜಿಕ್‌ ರಿನೈಟಿಸ್‌

 ಇಸುಬು (ಎಸ್ಜಿಮಾ) ದಂತಹ ಚರ್ಮದ ಅನಾರೋಗ್ಯಗಳು

ಧೂಮಪಾನ ತ್ಯಜಿಸುವುದು ಸವಾಲಾಗಬಹುದು; ಆದರೆ ನೀವು ಪರೋಕ್ಷ ಧೂಮಪಾನದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದಾದ ಮಾರ್ಗಗಳಿವೆ:

 ನೀವು ಧೂಮಪಾನಿಯಾಗಿದ್ದರೆ ಅಥವಾ ಮನೆಯಲ್ಲಿ ಧೂಮಪಾನಿ ಇದ್ದರೆ ಮನೆಯಿಂದ ಹೊರಗೆ ಹೋಗಿ ಧೂಮಪಾನ ಮಾಡುವಂತೆ ಹೇಳಿ. ಮನೆಗೆ ಬರುವ ಧೂಮಪಾನಿಗಳಿಗೂ ಹಾಗೆಯೇ ಮಾಡಲು ಹೇಳಿ.

 ನೀವು ಅಥವಾ ಇನ್ಯಾರಾದರೂ ಕಾರು, ವಾಹನದಲ್ಲಿ ಧೂಮಪಾನ ಮಾಡಲು ಬಿಡಬೇಡಿ.

ಇ-ಸಿಗರೇಟುಗಳು ಮತ್ತು ವ್ಯಾಪಿಂಗ್‌: ಯುವ ಜನತೆಯಲ್ಲಿ ಹೊಸ ಸವಾಲು

ಇತ್ತೀಚೆಗಿನ ವರ್ಷಗಳಲ್ಲಿ ಇ-ಸಿಗರೇಟುಗಳು ಮತ್ತು ವ್ಯಾಪಿಂಗ್‌ ಪರೋಕ್ಷ ಧೂಮಪಾನದ ವಿರುದ್ಧ ಹೋರಾಟದಲ್ಲಿ ಅದರಲ್ಲೂ ವಿಶೇಷವಾಗಿ ಯುವ ಜನತೆಯಲ್ಲಿ ಹೊಸ ಸಮಸ್ಯೆಗಳನ್ನು ಸೃಷ್ಟಿಸಿದೆ. ವ್ಯಾಪಿಂಗ್‌ ನಿಕೋಟಿನ್‌ ಚಟಕ್ಕೆ ಕಾರಣವಾಗಿ ಸಿಗರೇಟ್‌ ಸೇವನೆಯ ಚಟ ಬೆಳೆಸಿಕೊಳ್ಳಲು ಕಾರಣವಾಗಬಹುದು. ಇ-ಸಿಗರೇಟುಗಳು ಮತ್ತು ವ್ಯಾಪಿಂಗ್‌ನ ಅಪಾಯಗಳ ಬಗ್ಗೆ ಮಕ್ಕಳು, ಹದಿಹರಯದವರು ಮತ್ತು ಹೆತ್ತವರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಈ ಅಪಾಯಕಾರಿ ಉತ್ಪನ್ನಗಳಿಂದ ಯುವಜನತೆಯನ್ನು ರಕ್ಷಿಸಲು ಕಠಿನ ನಿಯಮಗಳು ಮತ್ತು ಉತ್ತಮ ಸಾರ್ವಜನಿಕ ಶಿಕ್ಷಣ ಅತ್ಯಾವಶ್ಯಕವಾಗಿದೆ.

ಸಕ್ರಿಯ ಧೂಮಪಾನಿಗಳು ಮತ್ತು ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುವವರಿಗೆ ಸಹಾಯವಾಗಿ ಪುನರ್ವಸತಿ ಅತ್ಯಂತ ಅಗತ್ಯವಾಗಿದೆ. ಈ ಕಾರ್ಯಕ್ರಮಗಳು ನಿಕೋಟಿನ್‌ ಚಟವನ್ನು ಮುರಿಯಲು, ಧೂಮಪಾನ ವರ್ಜನೆಯ ಪರಿಸ್ಥಿತಿಗೆ ಹೊಂದಿಕೊಳ್ಳುವ ಕೌಶಲಗಳು ಮತ್ತು ಆರೋಗ್ಯಪೂರ್ಣ ಅಭ್ಯಾಸಗಳನ್ನು ಕಲಿಸಿಕೊಡುತ್ತವೆ; ಇದರಿಂದ ಒಳಗೊಂಡ ಎಲ್ಲರಿಗೂ ದೀರ್ಘ‌ಕಾಲೀನ ಆರೋಗ್ಯಯುತ ಜೀವನ ಸಾಧ್ಯವಾಗುತ್ತದೆ. ಅಲ್ಲದೆ ಧೂಮಪಾನ ಸಂಬಂಧಿ ಅನಾರೋಗ್ಯಗಳಿಂದ ಬಾಧಿತರಾದವರ ಆರೋಗ್ಯ ಮತ್ತು ಕಲ್ಯಾಣಕ್ಕೆ ಪುನರ್ವಸತಿಯು ಒತ್ತು ನೀಡುತ್ತದೆ.

ಅಂತಿಮವಾಗಿ ಹೇಳುವುದಾದರೆ, ಪರೋಕ್ಷವಾಗಲಿ, ಪ್ರತ್ಯಕ್ಷವಾಗಲಿ; ಧೂಮಪಾನದಿಂದ ಆರೋಗ್ಯದ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಧೂಮಪಾನಿಗಳಲ್ಲಿ ತಮಗಾಗಿ ಮತ್ತು ತಮ್ಮ ಕುಟುಂಬದವರಿಗಾಗಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಬಹಳ ಮುಖ್ಯವಾಗಿದೆ.

ಆದರೆ ಪರೋಕ್ಷ ಧೂಮಪಾನದ ಅಪಾಯಗಳನ್ನು ತಡೆಗಟ್ಟುವಲ್ಲಿ ತಡೆಯೇ ಹೆಚ್ಚು ಪರಿಣಾಮಕಾರಿಯಾದ ಕಾರ್ಯತಂತ್ರವಾಗಿದೆ. ಸಮಗ್ರ ಧೂಮರಹಿತ ಕಾನೂನುಗಳು ಮತ್ತು ಪೊಲೀಸರ ಸಹಾಯದಿಂದ ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಹೊಗೆರಹಿತ ವಾತಾವರಣವನ್ನು ಸೃಷ್ಟಿಸುವುದು ಅಗತ್ಯವಾಗಿದೆ.

ಈ ಕ್ರಮಗಳಿಂದ ಧೂಮಪಾನಿಗಳಲ್ಲದವರು ಪರೋಕ್ಷ ಧೂಮಪಾನದ ಅಪಾಯಗಳಿಗೆ ತುತ್ತಾಗುವುದನ್ನು ತಡೆಯುವುದು ಮಾತ್ರವಲ್ಲದೆ ಧೂಮಪಾನಿಗಳು ಆ ಕೆಟ್ಟ ಚಟದಿಂದ ವಿಮುಖವಾಗಲು ಹಾಗೂ ಯುವಜನತೆ ತಂಬಾಕು ಬಳಕೆಯ ದುವ್ಯìಸನಕ್ಕೆ ತುತ್ತಾಗದಂತೆ ಕಾಪಾಡಲು ನೆರವಾಗುತ್ತವೆ. ಪರೋಕ್ಷ -ಪ್ರತ್ಯಕ್ಷ ಧೂಮಪಾನ ತಡೆಗೆ ಯಾರೊಬ್ಬರೂ ಸರಕಾರವೇ ಕ್ರಮ ಕೈಗೊಳ್ಳಬೇಕು ಎಂದು ಕಾಯಬಾರದು.

ನೀವೇ ಧೂಮಪಾನಿಗಳಾಗಿದ್ದಲ್ಲಿ ನಿಮ್ಮ ಮನೆ ಮತ್ತು ವಾಹನವನ್ನು ಹೊಗೆಮುಕ್ತಗೊಳಿಸುವುದಾಗಿ ಶಪಥ ಮಾಡಲು ಇದು ಸಕಾಲ. ಈ ಉಪಕ್ರಮಗಳು ಸರಿಯಾಗಿ ಅನುಸರಣೆಯಾಗುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಹೊಗೆಮುಕ್ತ ಆರೋಗ್ಯಕರ ಗಾಳಿಯನ್ನು ಉಸಿರಾಡುವ ಮೂಲಕ ಗರಿಷ್ಠ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮಾಡಬಹುದಾಗಿದೆ.

-ಮೇಘನಾ

ಅಸಿಸ್ಟೆಂಟ್‌ ಪ್ರೊಫೆಸರ್‌

ಪೃಥ್ವಿ ಆರ್‌. ನಾಯಕ್‌

ಅಸಿಸ್ಟೆಂಟ್‌ ಪ್ರೊಫೆಸರ್‌

ರೆಸ್ಪಿರೇಟರಿ ಥೆರಪಿ ವಿಭಾಗ

ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರೆಸ್ಪಿರೇಟರಿ ಥೆರಪಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

ವಿರೋಧಿಗಳಿಗೆ ಏಡ್ಸ್‌ ಸೋಂಕು ಹರಡುವ ಜಾಲ: ಮುನಿರತ್ನ ವಿರುದ್ಧ ಡಿಕೆಸು ಆರೋಪ

ವಿರೋಧಿಗಳಿಗೆ ಏಡ್ಸ್‌ ಸೋಂಕು ಹರಡುವ ಜಾಲ: ಮುನಿರತ್ನ ವಿರುದ್ಧ ಡಿಕೆಸು ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-redmeat

Red Meat: ಮಧುಮೇಹ ಉಂಟಾಗುವ ಅಪಾಯ ಮತ್ತು ಕೆಂಪು ಮಾಂಸ ಸೇವನೆಗಿರುವ ಸಂಬಂಧ

5-body-weight

Body Weight: ಕ್ರೀಡಾಳುಗಳ ಸಾಧನೆಯ ಮೇಲೆ ಕ್ಷಿಪ್ರ ದೇಹತೂಕ ಏರಿಳಿತದ ಪರಿಣಾಮಗಳು

4-female-health

Females Health: ಲಘು ರಕ್ತಸ್ರಾವ ಮತ್ತು ಋತುಸ್ರಾವ್ರ ವ್ಯತ್ಯಾಸ ತಿಳಿಯಿರಿ

19

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

16

Health: ಸ್ತನ ಕಸಿ ಮತ್ತು ಕ್ಯಾನ್ಸರ್‌ ಪರಸ್ಪರ ಸಂಬಂಧ ಇದೆಯೇ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Madikeri ಭಾಗದ ಅಪರಾಧ ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.