
ಕೋವಿಡ್ ಲಸಿಕೆ ಕಡ್ಡಾಯ; ಜಾರಿ ಸಾಧ್ಯವೇ?
Team Udayavani, Jan 19, 2022, 8:00 AM IST

ನಾವು ಯಾರಿಗೂ ಲಸಿಕೆ ಪಡೆಯುವಂತೆ ಒತ್ತಡ ಹಾಕುತ್ತಿಲ್ಲ, ಇದನ್ನು ಕಡ್ಡಾಯವನ್ನೂ ಮಾಡಿಲ್ಲ ಎಂದು ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ, ಸುಪ್ರೀಂಕೋರ್ಟ್ ಮುಂದೆ ಅಲವತ್ತುಕೊಂಡಿದೆ. ಲಸಿಕೆ ನೀಡುವ ದಿನದ ಆರಂಭದಿಂದಲೂ ಲಸಿಕೆ ಕಡ್ಡಾಯದ ಕುರಿತ ಚರ್ಚೆಗಳು ನಡೆಯುತ್ತಲೇ ಇವೆ. ಲಸಿಕೆಯನ್ನು ಕಡ್ಡಾಯ ಮಾಡಿದರೆ, ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಂತೆ ಎಂದು ಹೇಳಲಾಗುತ್ತಲೇ ಇದೆ. ಹಾಗಾದರೆ, ಲಸಿಕೆಯನ್ನು ಕಡ್ಡಾಯ ಮಾಡಬಹುದೇ? ಮಾಡಿದ್ದರೆ ಯಾವ ದೇಶಗಳಲ್ಲಿ ಮಾಡಲಾಗಿದೆ ಎಂಬ ಕುರಿತ ಒಂದು ನೋಟ ಇಲ್ಲಿದೆ..
ಕಡ್ಡಾಯವಲ್ಲ, ಆದರೂ ಕಡ್ಡಾಯ…!
ವಿಶೇಷವೆಂದರೆ, ಭಾರತದಲ್ಲಿ ಸೋಮವಾರವಷ್ಟೇ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಲಸಿಕೆ ಕಡ್ಡಾಯ ವಲ್ಲ ಎಂದಿದೆ. ಆದರೆ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಸಿಕೆ ಕಡ್ಡಾಯ ನಿಯಮ ಪರೋಕ್ಷವಾಗಿ ಜಾರಿಯಲ್ಲಿದೆ. ಅಂದರೆ, ಮಾಲ್‌ಗಳು, ಸಿನೆಮಾ ಮಂದಿರಗಳು ಸೇರಿ ಕೆಲವು ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶ ಪಡೆಯಲು ಎರಡೂ ಡೋಸ್ ಲಸಿಕೆ ತೆಗೆದುಕೊಂಡಿರುವ ಪ್ರಮಾಣಪತ್ರ ತೋರಿಸಬೇಕು.
ಹಾಗಾದರೆ ಎಲ್ಲಿ ಕಡ್ಡಾಯ ಮಾಡಲಾಗಿದೆ?
ಆಸ್ಟ್ರಿಯಾ – ಬರುವ ಫೆಬ್ರವರಿಯಿಂದ 18 ತುಂಬಿದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಇಲ್ಲಿ ಗರ್ಭಿಣಿಯರು ಮತ್ತು ವೈದ್ಯಕೀಯ ಸಮಸ್ಯೆ ಹೊಂದಿರುವವರಿಗೆ ಮಾತ್ರ ವಿನಾಯಿತಿ.
ಫ್ರಾನ್ಸ್ – ಬಾರ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಿಗೆ ಲಸಿಕೆ ಪಡೆಯದೇ ಇರುವವರಿಗೆ ಪ್ರವೇಶವಿಲ್ಲ. ಕೆಲವು ಸ್ಥಳಗಳಿಗೆ ನೆಗೆಟಿವ್ ವರದಿ ತೋರಿಸಿ ಪ್ರವೇಶಿಸಬಹುದು.
ಜರ್ಮನಿ – ಇತ್ತೀಚೆಗಷ್ಟೇ ಜರ್ಮನ್ ಛಾನ್ಸೆಲರ್ ಓಲಾಫ್ ಸ್ಕೋಜ್ ಪಾರ್ಲಿಮೆಂಟ್‌ನಲ್ಲಿ ಎಲ್ಲ ವಯಸ್ಕರಿಗೆ ಲಸಿಕೆ ಕಡ್ಡಾಯ ಬಗ್ಗೆ ಘೋಷಿಸಿದ್ದಾರೆ.
ಇಟಲಿ-ಇದೇ ತಿಂಗಳ ಆರಂ ಭದಿಂದಲೇ 50 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ತೀರ್ಮಾನಿಸಲಾಗಿದೆ.
ಇಂಗ್ಲೆಂಡ್ – ಸದ್ಯ ಆರೋಗ್ಯ ಕಾರ್ಯಕರ್ತರು ಮತ್ತು ಸಾಮಾಜಿಕ ಕ್ಷೇಮ ಕಾರ್ಯಕರ್ತರಿಗೆ ಮಾತ್ರ ಲಸಿಕೆ ಕಡ್ಡಾಯ ಮಾಡಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Gaming App Case:ಬಾಲಿವುಡ್ ನಟ ರಣಬೀರ್ ಕಪೂರ್ ಗೆ ಜಾರಿ ನಿರ್ದೇಶನಾಲಯದ ಸಮನ್ಸ್ ಜಾರಿ

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ