Udayavni Special

ನಾವು ಮುಖ ಕವಚವನ್ನು ಏಕೆ ಧರಿಸಬೇಕು?

Team Udayavani, May 25, 2021, 2:48 PM IST

cats

1 ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೆ ಕೋವಿಡ್‌ ಬಂದಿದೆ, ಯಾರಿಗೆ ಕೋವಿಡ್‌ ಬಂದಿಲ್ಲ ಮತ್ತು ಯಾರಿಗೆ ಕೋವಿಡ್‌ ಲಸಿಕೆಯಾಗಿದೆ, ಆಗಿಲ್ಲ ಎಂದು ಎಲ್ಲರಿಗೂ ಗೊತ್ತಾಗುವುದಿಲ್ಲ. ಆದ್ದರಿಂದ ಸಾರ್ವತ್ರಿಕ ಮಾಸ್ಕ್ ಧಾರಣೆ ಕೊರೋನಾ ರೋಗದ ಸೋಂಕನ್ನು ತಡೆಯಲು ಸಹಾಯಮಾಡುತ್ತದೆ ಎಂದು ಪರಿಣಿತರು ಸಲಹೆ ಮಾಡಿದ್ದಾರೆ.

2 ಒಬ್ಬ ವ್ಯಕ್ತಿ ನನಗೆ ಕೋವಿಡ್‌ ಬಂದು ಹೋಗಿಯಾಗಿದೆ, ನಾನು ಮಾಸ್ಕ್ ಧರಿಸುವುದಿಲ್ಲ ಹೇಳಿದಲ್ಲಿ ಆತ/ಆಕೆಗೆ ನಾವು ಪರವಾಗಿಲ್ಲ, ಮಾಸ್ಕ್ ಧರಿಸುವುದು ಬೇಡ ಎಂದು ಹೇಳಿ ಸಹಕರಿಸಿದಲ್ಲಿ ಅದೇ ರೀತಿ ಇನ್ನೂ ಹತ್ತೋ ನೂರೋ ಜನರು ನಮಗೂ ಕೋವಿಡ್‌ ಬಂದಾಗಿದೆ- ನಾವೂ ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿದಲ್ಲಿ, ಎಲ್ಲರಿಗೂ ಕೋವಿಡ್‌ ಬಂದು ಹೋಗಿದೆ ಎಂದು ಪರಿಶೀಲಿಸುವುದಾದರೂ ಹೇಗೆ?

3 ಒಮ್ಮೆ ಕೋವಿಡ್‌ ಬಂದವರಿಗೆ ಮತ್ತೂಮ್ಮೆ ಬರುವುದಿಲ್ಲ ಎನ್ನುವುದು ನೂರಕ್ಕೆ ನೂರು ನಿಜವಲ್ಲ. ಇದರ ಸಂಭವನೀಯತೆ ಕಮ್ಮಿ ಇದ್ದರೂ ಯಾರಿಗೆ ಮತ್ತೆ ಬರಬಹುದು,ಯಾರಿಗೆಬರಲಾರದುಎಂದುಹೇಳಲಿಕ್ಕೆ, ಊಹಿಸಲಿಕ್ಕೆ ನಮ್ಮಲ್ಲಿ ಪರಿಕರವಿಲ್ಲ.

4 ಕೋವಿಡ್‌ ಲಸಿಕೆ ತೀವ್ರತರವಾದ ಕೋವಿಡ್‌ ಬರುವುದನ್ನು ಮಾತ್ರ ತಡೆಗಟ್ಟುತ್ತದೆ. ಎಲ್ಲಪ್ರಮುಖ ಆರೋಗ್ಯ ಸಂಸ್ಥೆಗಳ ಮಾರ್ಗಸೂಚಿಗಳ ಪ್ರಕಾರ, ಕೋವಿಡ್‌ ಲಸಿಕೆಯ ನಂತರ ಸಾರ್ವತ್ರಿಕ ಸುರಕ್ಷಾ ಕ್ರಮಗಳನ್ನು ಬಳಸುವುದು ಒಳ್ಳೆಯದು. ಮಾಸ್ಕ್ ಈ ಬಗೆಯ ಸುರಕ್ಷಾ ಕ್ರಮ.

5 ನಮಗೆ ಕೋವಿಡ್‌ ಬಂದಿರಲಿ ಅಥವಾ ನಾವು ಕೋವಿಡ್‌ ಲಸಿಕೆ ತೆಗೆದುಕೊಂಡಿರಲಿ, ನಾವು ಸೋಂಕನ್ನು ಇನ್ನೊಬ್ಬರಿಗೆ ಹರಡುತ್ತೀವೋ ಇಲ್ಲವೋ ಅನ್ನುವುದು ಇನ್ನೂ ವಿವಾದಾಸ್ಪದ ವಿಷಯ. ಈ ಸೋಂಕನ್ನು ಇನ್ನೊಬ್ಬರಿಗೆ ಹರಡುವ ಪ್ರಮಾಣ ಕಮ್ಮಿಯಿರಬಹುದು. ಆದರೆ, ಯಾರಿಂದ ಯಾರಿಗೆ ಸೋಂಕು ಹರಡುತ್ತದೆ ಎಂದು ಹೇಳಲಾಗುವುದಿಲ್ಲ.

6 ಮಾಸ್ಕ್ ಧರಿಸಬೇಕೇ ಬೇಡವೇ ಅನ್ನುವುದು ಈ ಪ್ಯಾಂಡೆಮಿಕ್‌ ಶುರುವಾದಾಗಿನಿಂದ ಬಹುಚರ್ಚೆಗೆ ಒಳಗಾದ ವಿಷಯ. ನಮಗೆ ಬೇಕಾದ ಹೈಪಾಥಿಸಿಸ್‌ಗೆ ತಕ್ಕಹಾಗೆ ವೈದ್ಯಕೀಯ ಜರ್ನಲ್‌ ಗಳು ಪೂರಕವಾದ ಸಾಕ್ಷಿಯನ್ನು ಒದಗಿಸಬಹುದು. ಇಂಥ ಸಮಯದಲ್ಲಿ ನಮಗಿರುವ ಆಧಾರ ಪರಿಣಿತ ಸಮಿತಿಗಳು ಆಗಾಗ್ಗೆ ಒದಗಿಸುವ ಮಾರ್ಗಸೂಚಿಗಳು. ಈ ಎಲ್ಲ ಮಾರ್ಗಸೂಚಿಗಳನ್ನು ನಾವು ಆದಷ್ಟೂ ಅನುಸರಿಸಲು ಪ್ರಯತ್ನ ಪಡಬೇಕು ಎಂದು ನಮ್ಮ ಅನಿಸಿಕೆ.

7 ಅಮೆರಿಕಾದಲ್ಲಿ ಮಾಸ್ಕ್ ಕಡ್ಡಾಯವನ್ನು ಸಡಿಲಗೊಳಿಸಿರುವುದು ಬಹಳಷ್ಟು ಜನಕ್ಕೆಕೋವಿಡ್‌ ಸೋಂಕು ತಗುಲಿದೆ, ಹಾಗಾಗಿ ಅವರು ಸುರಕ್ಷಿತರು ಎಂಬ ಆಧಾರದ ಮೇಲೆ ಅಲ್ಲ. ಸಾಕಷ್ಟು ಜನ ಲಸಿಕೆ ತೆಗೆದುಕೊಂಡಿದ್ದಾರೆ ಎಂಬ ಅಂಶದಿಂದ.

8 ಅಮೇರಿಕಾದಲ್ಲಿ ಮಾಸ್ಕ್ ಕಡ್ಡಾಯ ಸಡಿಲ ಗೊಂಡಿದ್ದರೂ ವೈದ್ಯಕೀಯ ಸಿಬ್ಬಂದಿ, ವಿಮಾನ ನಿಲ್ದಾಣ ಮತ್ತು ವಿಮಾನಗಳು, ಶಾಲೆಗಳು, ಜೈಲು, ನಿರಾಶ್ರೀತರ ತಾಣಗಳು ಇತರೇ ಜಾಗದಲ್ಲಿಇನ್ನೂಮಾಸ್ಕ್ ಹಾಕಬೇಕೆಂಬ ನಿಯಮವಿದೆ.

9 ಈ ಮಾಸ್ಕ್ ಕಡ್ಡಾಯ ಸಡಿಲಗೊಂಡದ್ದು ಅಮೆರಿಕಾದಲ್ಲಿ ನಡೆದ ಸಂಶೋಧನೆಗಳಿಂದ. ಅಂದರೆ ಫೈಜರ್‌ ಮತ್ತು ಮಡರ್ನಾ ಲಸಿಕೆ ತೆಗೆದುಕೊಂಡವರ ಮೇಲೆ ನಡೆದ ಸಂಶೋಧನೆಗಳಿಂದ. ಭಾರತದ ಲಸಿಕೆಗಳಾದ ಕೋವಿಶೀಲ್ಡ… ಮತ್ತು ಕೋವ್ಯಾಕ್ಸಿನ್‌ ತೆಗೆದುಕೊಂಡವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. 10ಆದ್ದರಿಂದ ಎಲ್ಲ ವೈಜ್ಞಾನಿಕ ವರದಿಗಳೂ, ನಿಮಗೆ ಕೋವಿಡ್‌ ಬಂದು ಗುಣವಾಗಿದ್ದರೂ, ಕೋವಿಡ್‌ ಲಸಿಕೆ ತೆಗೆದುಕೊಂಡಿದ್ದರೂ ನೀವು ಸಾರ್ವತ್ರಿಕ ಸುರಕ್ಷಾ ಕ್ರಮಗಳನ್ನು ಪಾಲಿಸಿ ಎಂದೇ ಹೇಳುತ್ತವೆ.

ಡಾಕ್ಟ್ರ ಸಲಹೆ : ಡಾ. ಗುರುಪ್ರಸಾದ ಕಾಗಿನೆಲೆ 

ಟಾಪ್ ನ್ಯೂಸ್

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮ್ಮಾಯಿ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :  ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

covid

ಪರಿಸ್ಥಿತಿಯ ಆಧಾರದ ಮೇಲೆ ಮಕ್ಕಳಿಗೆ ಕೋವಿಡ್ ಲಸಿಕೆ :ವಿ.ಕೆ.ಪಾಲ್

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ಆರೋಗ್ಯಕ್ಕೆ ಮತ್ತೂಂದು ಕ್ಲೋನ್‌ ಯೋಜನೆ?

ಆರೋಗ್ಯಕ್ಕೆ ಮತ್ತೊಂದು ಕ್ಲೋನ್‌ ಯೋಜನೆ?

ಮಕ್ಕಳಿಗೂ ಬಂತು ಲಸಿಕೆ… ಕೋವಿಡ್ 19 ಲಸಿಕೆ ನೀಡಲು ಡಿಸಿಜಿಐ ಗ್ರೀನ್ ಸಿಗ್ನಲ್

ಮಕ್ಕಳಿಗೂ ಬಂತು ಲಸಿಕೆ… ಕೋವಿಡ್ 19 ಲಸಿಕೆ ನೀಡಲು ಡಿಸಿಜಿಐ ಗ್ರೀನ್ ಸಿಗ್ನಲ್

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.