Udayavni Special

ಹೀಗಿರಲಿ ತಾಯಂದಿರ ನವ ಮಾಸದ ಪಯಣ : ಆಹಾರ, ಯೋಗಾಭ್ಯಾಸ


Team Udayavani, Apr 14, 2021, 2:15 PM IST

ಹೀಗಿರಲಿ ತಾಯಂದಿರ ನವ ಮಾಸದ ಪಯಣ : ಆಹಾರ, ಯೋಗಾಭ್ಯಾಸ

ಐರ್ಲೆಂಡ್‌ ದೇಶಾದ್ಯಂತ ಇತ್ತೀಚೆಗಷ್ಟೇ  ತಾಯಂದಿರ ದಿನವನ್ನು ಆಚರಿಸಲಾಯಿತು.  ತಾಯ್ತನ ಎನ್ನುವುದು ಪ್ರತಿಯೊಂದು ಹೆಣ್ಣಿಗೂ ವಿಶೇಷ ಅನುಭೂತಿ ಕೊಡುವಂಥದ್ದು. 9 ತಿಂಗಳ ಸುದೀರ್ಘ‌ ಪಯಣದಲ್ಲಿ ನೂರಾರು ಗೊಂದಲಗಳು  ಮೂಡುವುದು ಸಹಜ. ಗರ್ಭಿಣಿಯಾದಾಗ ಏನು ಮಾಡಬಹುದು ಎನ್ನುವುದನ್ನು ಆಯುರ್ವೇದ ಮತ್ತು  ಯೋಗಶಾಸ್ತ್ರಗಳು ಹೀಗೆ ತಿಳಿಸಿವೆ.

ಸೌಮನ್ಯಸಂ ಗರ್ಭಧಾರಣಾನಂ ಶ್ರೇಷ್ಠ ಎನ್ನುತ್ತಾರೆ ಆಯುರ್ವೇದ ಆಚಾರ್ಯರು. ಅಂದರೆ ಬೇರೆ ಎಲ್ಲ ಅಂಶಗಳಿಗಿಂತಲೂ ತಾಯಿಯಾಗಲು ಒಂದು ಹೆಣ್ಣು ಸುಂದರ ಮನಸ್ಸು ಹೊಂದಿರುವುದು ಬಹುಮುಖ್ಯ ಎಂದರ್ಥ. ಸೇವಿಸುವ ಆಹಾರದಿಂದ ಬೆಳೆಯುತ್ತಿರುವ ಗರ್ಭದ ಪೋಷಣೆ ಮಾತ್ರವಲ್ಲ  ತಾಯಿಯ ಶಾರೀರಿಕ ಪೋಷಣೆಯೂ ಆಗುತ್ತದೆ. ಹೀಗಾಗಿ ಸರಿಯಾದ ಆಹಾರ ರಕ್ತ, ಧಾತು, ಮಾಂಸ, ಮೂಳೆಗಳ ಪೋಷಣೆ ಮಾಡುವುದು ಮಾತ್ರವಲ್ಲ ಔಷಧದಂತೆಯೂ ಕೆಲಸ ಮಾಡುತ್ತದೆ. ಇದಕ್ಕಾಗಿ ಆಯುರ್ವೇದ ಶಾಸ್ತ್ರದಲ್ಲಿ ಪ್ರತಿಯೊಂದು ಮಾಸದಲ್ಲಿ ಯಾವ ರೀತಿಯ ಆಹಾರ ಸೇವನೆ ಅಗತ್ಯ ಎಂಬುದನ್ನು ಹೇಳುತ್ತದೆ.

ಮೊದಲನೇ ಮಾಸದಲ್ಲಿ ಜೇಷ್ಠ ಮಧು, ಚಂದನದೊಂದಿಗೆ ಸಿದ್ಧಪಡಿಸಿದ ತಣ್ಣನೆಯ ಹಾಲು, ದ್ರವ ಆಹಾರ ಸೇವಿಸಬಹುದು. ಎರಡನೇ ಮಾಸದಲ್ಲಿ ಸಕ್ಕರೆಯ ಜತೆಗೆ ತಣ್ಣನೆಯ ಹಾಲು, ಎಳನೀರು, ಹಣ್ಣಿನ ರಸ, ಗಂಜಿಯನ್ನು ಸೇವಿಸಬಹುದು. ಆದರೆ ಹುಳಿ ಪದಾರ್ಥಗಳೊಂದಿಗೆ ಅನಾನಸ್‌, ಪಪ್ಪಾಯ, ಕಬ್ಬಿನ ರಸವನ್ನು ವರ್ಜಿಸುವುದು ಉತ್ತಮ.

ಮೂರನೇ ಮಾಸದಲ್ಲಿ ತುಪ್ಪ, ಹಾಲು, ಜೇನು ತುಪ್ಪದೊಂದಿಗೆ ಅನ್ನವನ್ನು ಮಿಶ್ರ ಮಾಡಿ ಸೇವಿಸಬಹುದು. ಆದರೆ ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ ತುಪ್ಪ ಮತ್ತು ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಕೂಡದು. ಇದಲ್ಲದೇ ಎರಡನೇ ಮಾಸದಲ್ಲಿ  ಹೇಳಿರುವ ಹಣ್ಣುಗಳ ಸೇವನ ಕ್ರಮವನ್ನು ಪಾಲಿಸಬಹುದು.

ನಾಲ್ಕನೇ ಮಾಸದಲ್ಲಿ ಬೆಣ್ಣೆ, ಮೊಸರನ್ನ, ಎಳೆನೀರು, ಹಣ್ಣಿನ ರಸ ಅದರಲ್ಲೂ ಹೃದ್ಯ ಹಣ್ಣುಗಳಾದ ಮಾವಿನಕಾಯಿ, ಬದರ, ದಾಳಿಂಬೆ, ತರಕಾರಿಗಳಾದ ಕುಂಬಳಕಾಯಿ, ಬೂದುಕುಂಬಳಕಾಯಿ, ಸೋರೆಕಾಯಿ ಇತ್ಯಾದಿಗಳನ್ನು ಸೇವಿಸಬಹುದು. ಮಾಂಸವನ್ನು ಸೇವಿಸುವವರು ಮೀಟ್‌ ಸೂಪ್‌ ಮತ್ತು ಕೋಳಿ ಮಾಂಸವನ್ನು ಸೇವಿಸಬಹುದು.

5ನೇ ತಿಂಗಳಲ್ಲಿ ಹಾಲು, ಬೆಣ್ಣೆ, ಅಕ್ಕಿ ಹಾಲು, ತುಪ್ಪ, ಮಾಂಸವರ್ಧಕ ಆಹಾರಗಳಾದ ಮೀಟ್‌ ಸೂಪ್‌, ಉದ್ದಿನ ಬೇಳೆ ಉಪಯೋಗಿಸಿ ಮಾಡಿದ ಆಹಾರ, ರಕ್ತವರ್ಧಕ ಆಹಾರ ಅಂದರೆ ದಾಳಿಂಬೆ, ಸಪೋಟ, ಸೇಬು, ಪಾಲಕ್‌, ಬೀಟ್‌ರೂಟ್‌, ಪಾಲಕ್‌, ಸೀಬೆ ಹಣ್ಣು, ಬೆಟ್ಟದ ನೆಲ್ಲಿಕಾಯಿ ಇತ್ಯಾದಿಗಳನ್ನು ಸೇವಿಸಬಹುದು.

6ನೇ ಮಾಸದಲ್ಲಿ ತುಪ್ಪ ಅನ್ನ, ಅನ್ನದ ಗಂಜಿ, ಗೋ ಕ್ಷೀರದೊಂದಿಗೆ ಸಿದ್ಧಪಡಿಸಿದ ತುಪ್ಪ, ಬಲ್ಯ ಮತ್ತು ವರ್ಣ ಮೂಲಿಕೆಗಳು ಸೇವಿಸಬಹುದು.  7ನೇ ಮಾಸದಲ್ಲಿ ಅತಿಯಾಗಿ ಉಪ್ಪು ಮತ್ತು ನೀರನ್ನು ಸೇವಿಸಬಾರದು. ನವೆಯಂಥ ತೊಂದರೆಗಳಿದ್ದರೆ ಮಜ್ಜಿಗೆಯ ಜತೆಗೆ ಬದರು ಕಷಾಯ ಸೇವನೆ ಉತ್ತಮ.  8ನೇ ಮಾಸದಲ್ಲಿ ಬಾರ್ಲಿ ಮತ್ತು ಹಾಲಿನ ಮಿಶ್ರಣವನ್ನು ಸೇವಿಸಬಹುದು. ಲೋದ್ರಮೂಲಿಕೆಯ ಪ್ರಯೋಗವನ್ನು ಮಾಡಬಹುದು. ಎಲ್ಲ ತಿಂಗಳೂ ಮತ್ತು ಕೊನೆಯ ತಿಂಗಳಿನಲ್ಲಿ  ಲಕ್ಷಣಗಳಿಗೆ ಅನುಗುಣವಾದ ಔಷಧ ಮೂಲಿಕೆಗಳ ಪ್ರಯೋಗವನ್ನು ಆಯುರ್ವೇದದಲ್ಲಿ  ಮಾಡಲಾಗುತ್ತದೆ.

ಯೋಗಾಭ್ಯಾಸ ಹೀಗಿರಲಿ :

ಆರೋಗ್ಯ ವೃದ್ಧಿಸುವ ಯೋಗಾಭ್ಯಾಸವನ್ನು ಗರ್ಭಿಣಿಯರೂ ಮಾಡಬಹುದು. ಆದರೆ ಇದು ಸರಳವಾಗಿ ಮಾಡುವಂಥ ಯೋಗಾಭ್ಯಾಸ. ತಾಯಿಯಾಗಲು ಬಯಸುವವರು ಅರ್ಧಕಟಿ ಚಕ್ರಸಾನ, ಪಾದಹಸ್ತಾಸನ, ಭುಜಂಗಾಸನ, ಧನುರಾಸನ, ಶಲಭಾಸನ, ನಾಡಿಶುದ್ಧಿ ಪ್ರಾಣಾಯಾಮ ಅಭ್ಯಾಸ ಮಾಡಿದರೆ ಒಳ್ಳೆಯದು. ಇನ್ನು  ಮೊದಲನೇ ತ್ತೈಮಾಸಿಕದಲ್ಲಿ ಅರ್ಧಕಟಿ ಚಕ್ರಾಸನ, ಅರ್ಧ ಚಕ್ರಾಸನ, ಚಯರ್‌ನಲ್ಲಿ  ಕುಳಿತು ಸೂರ್ಯ ನಮಸ್ಕಾರ, ಶವಾಸನ, ನಾಡಿಶುದ್ಧಿ ಪ್ರಾಣಾಯಾಮ, ಭ್ರಮರಿ ಇತ್ಯಾದಿ ಉಸಿರಾಟದ ವ್ಯಾಯಾಮ, ಎರಡನೇ ತ್ತೈಮಾಸಿಕದಲ್ಲಿ ಪ್ರಸಾರಿತ ಪಾದಹಸ್ತಾಸನ, ಶೀತಲಿ ಶೀತಕಾರಿಗಳನ್ನು ಯೋಗಾಭ್ಯಾಸಕ್ಕೆ ಸೇರಿಸಿಕೊಳ್ಳಬಹುದು. ಮೂರನೇ ತ್ತೈಮಾಸಿಕದಲ್ಲಿ  ಹಿಂದೆ ಹೇಳಿರುವ ಅಭ್ಯಾಸದೊಂದಿಗೆ ಮಲಾಸನ, ಉಪವಿಷ್ಠ ಕೋನಸಾನ, 36ನೇ ವಾರದ ಅನಂತರ ಬದ್ಧಕೋನಾಸನ, ಚಂದ್ರ ಅನುಲೋಮ, ವಿಲೋಮ, ಪ್ರಾಣಾಯಾಮದೊಂದಿಗೆ ಧ್ಯಾನ, ಜಪ, ಮಂತ್ರವನ್ನು ಎಲ್ಲ  ತಿಂಗಳಲ್ಲೂ ಮಾಡಬಹುದು.  ಪ್ರತಿಯೊಬ್ಬ  ಮಹಿಳೆಯೂ ಅನನ್ಯ. ಅದೇ ರೀತಿ ನವ ಮಾಸದ ಪಯಣವೂ ಭಿನ್ನವಾಗಿರುತ್ತದೆ. ಹೀಗಾಗಿ ಇಲ್ಲಿ ಹೇಳಿರುವ ವಿಚಾರಗಳನ್ನು ಪಾಲಿಸುವ ಮೊದಲು ತಜ್ಞರ ಸಲಹೆ ಪಡೆಯುವುದು ಅಗತ್ಯ.

 

-ಡಾ| ಮೇಘನಾ, ಡಬ್ಲಿನ್‌, ಐರ್ಲೆಂಡ್‌

ಟಾಪ್ ನ್ಯೂಸ್

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ghjghjfghjfg

ಲಾಕ್ ಡೌನ್ ಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ: ಜನತೆಗೆ ಸುರೇಶ್ ಕುಮಾರ್ ಮನವಿ

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

ಕೋವಿಡ್ ಸೋಂಕಿಗೆ ಹೆದರಿದ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ!

ಕೋವಿಡ್ ಸೋಂಕಿಗೆ ಹೆದರಿದ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ!

Success is the state or condition of meeting a defined range of expectations. It may be viewed as the opposite of failure

ಮೊದಲ ಅವಕಾಶದಲ್ಲೇ ಆಕಾಶಕ್ಕೆ ಏಣಿ ಇಡುವ ಪ್ರಯತ್ನ ಮೂರ್ಖತನದ ಪರಮಾವಧಿ

fgdfgrtrtr

ಬಿಗ್‍ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ.ನೀಡಿದ ನಟ ಸುದೀಪ್

ಬೈಕ್ ನಿಂದ ಕೆಳಕ್ಕೆ ಬಿದ್ದ ಮಹಿಳೆಗೆ ಆರೈಕೆ ಮಾಡಿ ಮಸ್ಕಿ ಶಾಸಕ ತುರವಿಹಾಳ

ಬೈಕ್ ನಿಂದ ಕೆಳಕ್ಕೆ ಬಿದ್ದ ಮಹಿಳೆಗೆ ಆರೈಕೆ ಮಾಡಿದ ಮಸ್ಕಿ ಶಾಸಕ ತುರವಿಹಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dementia

ಡಿಮೆನ್ಶಿಯಾ ಹೊಂದಿರುವ ವ್ಯಕ್ತಿಗಳ ಆರೈಕೆಗಾಗಿ ಕೆಲವು ಸಲಹೆಗಳು

Serious disease that haunts India

ಭಾರತವನ್ನು ಕಾಡುತ್ತಿರುವ ಗಂಭೀರ ಕಾಯಿಲೆ :ಪಿತ್ತಜನಕಾಂಗದ ಕೊಬ್ಬು

health article

ಕೊರೊನಾ ಕಾಲದಲ್ಲಿ ಕುಸುಮ ರೋಗಿಗಳು

Food intake

ಹಿತಮಿತವಾಗಿರಲಿ ಆಹಾರ ಸೇವನೆ

Women and Mental Health

ಮಹಿಳೆಯರು ಮತ್ತು ಮಾನಸಿಕ ಆರೋಗ್ಯ

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

jkhjkuuyi

ಕೆ.ಬಿ. ಶಾಣಪ್ಪ ನಿಧನಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸಂತಾಪ

Disinfectant spray

ಸೋಂಕು ನಿವಾರಕ ಸಿಂಪಡಣೆ

Survey in each village for prevention of infection

ಸೋಂಕು ತಡೆಗೆ ಪ್ರತಿ ಗ್ರಾಮದಲ್ಲಿ ಸಮೀಕ್ಷೆ ನಡೆಸಿ

ghjghjfghjfg

ಲಾಕ್ ಡೌನ್ ಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ: ಜನತೆಗೆ ಸುರೇಶ್ ಕುಮಾರ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.