ಸುದ್ದಿ ಕೋಶ: ಶತಮಾನದ ಖಗೋಳ ಕೌತುಕಕ್ಕೆ ಇನ್ನೊಂದೇ ದಿನ

Team Udayavani, Jul 26, 2018, 6:00 AM IST

ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣ ಜು.27ರಂದು ನಡೆಯಲಿದೆ. ಸುಮಾರು 1 ಗಂಟೆ 43 ನಿಮಿಷಗಳ ಕಾಲ ನಡೆಯಲಿರುವ ಈ ಗ್ರಹಣ ಪ್ರಕ್ರಿಯೆಯ ಮೊದಲ ಭಾಗ ಭಾರತದಲ್ಲಿ ಗೋಚರಿಸಲಿದೆ. ಇದೇ ಅವಧಿಯಲ್ಲಿ ಚಂದ್ರನು ಕೆಂಪುವರ್ಣಕ್ಕೆ (ಸೂಪರ್‌ ಮೂನ್‌) ತಿರುಗಲಿರುವ ಮತ್ತೂಂದು ರೋಚಕ ವಿದ್ಯಮಾನವೂ ಜರುಗಲಿರುವುದು ಈ ಬಾರಿಯ ಚಂದ್ರಗ್ರಹಣದ ಕುತೂಹಲವನ್ನು ಇಮ್ಮಡಿಗೊಳಿಸಿದೆ. 

ಸೂಪರ್‌ ಮೂನ್‌ ವಿಶೇಷ
ಇದೇ ಗ್ರಹಣಕಾಲದಲ್ಲೇ ಮಂಗಳಗ್ರಹವು ಭೂಮಿಯ ಸಮೀಪಕ್ಕೆ ಬರುವುದರಿಂದ ಚಂದ್ರನು ಕೆಂಪಾಗಿ ಕಂಗೊಳಿಸುತ್ತಾನೆ. ಸುಮಾರು 100 ನಿಮಿಷಕ್ಕೂ ಹೆಚ್ಚು ಕಾಲ ಈ ಬಣ್ಣ ಶಶಿಯ ಮೇಲೆ ಕಂಗೊಳಿಸುತ್ತದೆ.

ಗ್ರಹಣದ ಅವಧಿ
ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ, ಜುಲೈ 27ರ ಮಧ್ಯರಾತ್ರಿ 11:44ಕ್ಕೆ ಆರಂಭವಾಗಿ ಬೆಳಗಿನ ಜಾವ 4:58ಕ್ಕೆ ಮುಕ್ತಾಯಗೊಳ್ಳಲಿದೆ. ಗ್ರಹಣದ ಈ ಉಚ್ಛಾ†ಯ ಸ್ಥಿತಿ 1:51ರಿಂದ 2:43ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸುವುದರಿಂದ ಚಂದ್ರ ಮಸುಕಾಗಿ ಕಾಣುತ್ತಾನೆ. ಹಾಗಾಗಿ, ಚಂದ್ರಗ್ರಹಣವನ್ನು ಸ್ಪಷ್ಟವಾಗಿ ನೋಡಲು ರಾತ್ರಿ 1 ಗಂಟೆ ಸೂಕ್ತ ಸಮಯ ಎಂದಿದ್ದಾರೆ ವಿಜ್ಞಾನಿಗಳು.  

1:43 ಗ್ರಹಣದ ಒಟ್ಟು ಕಾಲಾವಧಿ
ರಾತ್ರಿ 11:44 ಗ್ರಹಣ ಆರಂಭದ ಸಮಯ
ಮುಂಜಾನೆ  4:58 ಗ್ರಹಣ ಮುಕ್ತಾಯದ ಸಮಯ
ರಾತ್ರಿ 2:00 ಗ್ರಹಣ ವೀಕ್ಷಣೆಗೆ ಸುಸಮಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ