ಕಿಸಾನ್ ಸಮ್ಮಾನ್ ಯೋಜನೆ 20.48 ಲಕ್ಷ ಫಲಾನುಭವಿಗಳು ಅನರ್ಹರು!
Team Udayavani, Jan 11, 2021, 7:40 AM IST
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೂ. 20.48 ಲಕ್ಷ ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ) ಅಡಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಸರಕಾರ ನೀಡಿರುವ ಉತ್ತರದಲ್ಲಿ ಇದು ಬಹಿರಂಗವಾಗಿದೆ. ಯಾವ್ಯಾವ ರಾಜ್ಯಗಳಲ್ಲಿ ಅನರ್ಹ ಫಲಾನುಭವಿಗಳಿಗೆ ಎಷ್ಟು ಹಣ ವರ್ಗಾವಣೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಅನರ್ಹರು ಎಂದರೆ ಯಾರು? :
ಸರಕಾರ ಈ ಯೋಜನೆಯನ್ನು ಆರಂಭಿಸುವಾಗ ಕೆಲವು ಮಾನದಂಡಗಳನ್ನು ಉಲ್ಲೇಖೀಸಿತ್ತು. ಅವುಗಳಲ್ಲಿ ಪ್ರಮುಖವಾಗಿ ಕೃಷಿ ಭೂಮಿಯ ಗಾತ್ರ ಮತ್ತು ತೆರಿಗೆ ಪಾವತಿಯ ಮಿತಿಯನ್ನು ನೀಡಲಾಗಿತ್ತು. ಈ ಅರ್ಹತೆಗಳ ಸಹಿತ ಇನ್ನಿತರ ಕೆಲವು ಮಾನದಂಡಗಳನ್ನು ಪೂರೈಸದ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಅಂಥ ರೈತರನ್ನು ಅನರ್ಹ ಫಲಾನುಭವಿಗಳೆಂದು ಪರಿಗಣಿಸಲಾಗಿದೆ.
1,364 ಕೋ. ರೂ. ಜಮೆ :
2019ರಲ್ಲಿ ಪ್ರಾರಂಭವಾದ ಪಿಎಂ-ಕಿಸಾನ್ ಯೋಜನೆ ಅಡಿಯಲ್ಲಿ 20.48 ಲಕ್ಷ ಅನರ್ಹ ಫಲಾನುಭವಿಗಳಿಗೆ ಜುಲೈ 2020ರ ವೇಳೆಗೆ 1,364 ಕೋಟಿ ರೂ. ಗಳನ್ನು ಬ್ಯಾಂಕ್‌ಗೆ ಜಮೆ ಮಾಡಲಾಗಿದೆ. ಇದು ಒಂದರ್ಥದಲ್ಲಿ ಯೋಜನೆ ಅನುಷ್ಠಾನದಲ್ಲಿನ ವೈಫಲ್ಯವಾಗಿದ್ದು, ಸಮರ್ಪಕವಾಗಿ ಮಾಹಿತಿಗಳನ್ನು ಸಂಗ್ರಹಿಸದೇ ರೈತರ ಪಟ್ಟಿಯನ್ನು ಸರಕಾರಕ್ಕೆ ಕಳುಹಿಸಿರುವುದು ಇದಕ್ಕೆ ಮೂಲ ಕಾರಣ.
ಹಣವನ್ನು ಹಿಂಪಡೆಯಲಾಗುವುದು? :
ಆರ್‌ಟಿಐ ಅರ್ಜಿದಾರ ವೆಂಕಟೇಶ್ ನಾಯಕ್ ಅವರು ಈ ಅಂಕಿಅಂಶಗಳನ್ನು ಸರಕಾರದಿಂದ ಪಡೆದಿ¨ªಾರೆ. ಸರಕಾರ ನೀಡಿರುವ ಉತ್ತರದ ಪ್ರಕಾರ ಅನರ್ಹ ಫಲಾನುಭವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಶೇ. 55.58ರಷ್ಟು ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಉಳಿದ ಶೇ. 44.41ರಷ್ಟು ಜನರು ಯೋಜನೆಗೆ ಬೇಕಾದ ಅರ್ಹತೆಯನ್ನು ಹೊಂದಿಲ್ಲದವರಾಗಿದ್ದಾರೆ. ಅನರ್ಹ ಫಲಾನುಭವಿಗಳಿಗೆ ಪಾವತಿಸಿದ ಮೊತ್ತವನ್ನು ವಸೂಲಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದೂ ಸರಕಾರ ತನ್ನ ಉತ್ತರದಲ್ಲಿ ತಿಳಿಸಿದೆ ಎಂದು ನಾಯಕ್ ಹೇಳಿದ್ದಾರೆ.
ಎಲ್ಲೆಲ್ಲಿನ ರೈತರು? :
ಪಂಜಾಬ್, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಅನರ್ಹ ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ. ಒಟ್ಟು ಅನರ್ಹ ಫಲಾನುಭವಿಗಳಲ್ಲಿ ಶೇ. 23.6ರಷ್ಟು (ಅಂದರೆ 4.74 ಲಕ್ಷ)ಮಂದಿಯನ್ನು ಹೊಂದಿರುವ ಪಂಜಾಬ್ ಅಗ್ರಸ್ಥಾನದಲ್ಲಿದೆ. ಇದರ ಬಳಿಕ ಅಸ್ಸಾಂ ಶೇ. 16.8ರಷ್ಟು (3.45 ಲಕ್ಷ ಫಲಾನುಭವಿಗಳು) ಅನರ್ಹ ಫಲಾನುಭವಿಗಳನ್ನು ಹೊಂದಿದೆ. ಅನರ್ಹ ಫಲಾನುಭವಿಗಳ ಪೈಕಿ ಶೇ. 13.99ರಷ್ಟು (2.86 ಲಕ್ಷ ಫಲಾನುಭವಿಗಳು)ಮಂದಿ ಮಹಾರಾಷ್ಟ್ರದವರಾಗಿ¨ªಾರೆ. ಹೀಗಾಗಿ ಅನರ್ಹ ಫಲಾನುಭವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ. 54.03)ಮಂದಿ ಈ ಮೂರು ರಾಜ್ಯಗಳಿಗೆ ಸೇರಿದವರಾಗಿ¨ªಾರೆ.
ಸಿಕ್ಕಿಂನಲ್ಲಿ ಅತೀ ಕಡಿಮೆ :
ಪಂಜಾಬ್, ಅಸ್ಸಾಂ ಮತ್ತು ಮಹಾರಾಷ್ಟ್ರದ ಬಳಿಕ ಗುಜರಾತ್ ಹಾಗೂ ಉತ್ತರ ಪ್ರದೇಶ ರಾಜ್ಯಗಳಿವೆ. ಗುಜರಾತ್ ಶೇ. 8.05 (1.64 ಲಕ್ಷ ಫಲಾನುಭವಿಗಳು) ಮತ್ತು ಉತ್ತರ ಪ್ರದೇಶ ಶೇ. 8.01ರಷ್ಟು (1.64 ಲಕ್ಷ)ಮಂದಿ ಫಲಾನುಭವಿಗಳು ಅನರ್ಹರಾಗಿದ್ದಾರೆ. ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಮಾತ್ರ ಅತೀ ಕಡಿಮೆ ಪ್ರಮಾಣದಲ್ಲಿ ಅನರ್ಹ ಫಲಾನುಭವಿಗಳಿದ್ದಾರೆ.
ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ?:
ಈ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವರ್ಷಕ್ಕೆ ಒಟ್ಟು 6,000 ರೂ. ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಈ ಹಣವನ್ನು ಮೂರು ಕಂತುಗಳಲ್ಲಿ ತಲಾ 2,000ರೂ.ಗಳಂತೆ ನೀಡಲಾಗುತ್ತದೆ. ಯೋಜನೆಯ ಅರ್ಹ ಫಲಾನುಭವಿಗಳು ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಇನ್ನು ಸ್ಥಳೀಯ ಪತ್ವಾರಿ, ಕಂದಾಯ ಅಧಿಕಾರಿ ಮತ್ತು ನೋಡಲ್ ಅಧಿಕಾರಿಗಳನ್ನು ರಾಜ್ಯ ಸರಕಾರ ನಾಮನಿರ್ದೇಶನ ಮಾಡಿದೆ. ಈ ವರೆಗೆ ಸುಮಾರು 11 ಕೋಟಿ ರೈತರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444