ಜೀವನ್ಮುಖಿ: ಬದುಕಿನಲ್ಲಿ ಭರವಸೆಯ ಬೆಳಕಿಗೆ ಕಾಯುವವರು ನಾವು!

Team Udayavani, Aug 30, 2019, 5:30 AM IST

ಸಾಗರದ ಕಥೆಯೊಂದಿದೆ…
ಒಮ್ಮೆ ಒಂದು ಮಗು ಬಂದು ಸಾಗರ ತೀರದಲ್ಲಿ ನಿಂತು ನೋಡುತ್ತಿತ್ತಂತೆ. ಎಷ್ಟು ಹೊತ್ತಾದರೂ ನೀರಿಗೆ ಇಳಿಯಲು ಏಕೋ ಹಿಂಜರಿಕೆ. ನೀರಿಗೆ ಇಳಿಯಲೇ ಇಲ್ಲ. ಸಮುದ್ರಕ್ಕೂ ಕಂಡು ಬೇಸರವಾಗತೊಡಗಿತು. ಎಷ್ಟು ಮುದ್ದಾದ ಮಗು, ನನ್ನಲ್ಲಿ ಆಡುತ್ತಿಲ್ಲವಲ್ಲ ಎಂದು ಮೆಲ್ಲಗೆ ಶಾಂತವಾಗತೊಡಗಿತು. ಬಳಿಕ, ಮಗುವಲ್ಲಿ ಬಂದು ಸಮುದ್ರ ಕೇಳಿತಂತೆ, ‘ಯಾಕೋ ಮಗು, ಬರುವುದಿಲ್ಲವೇ?’ ಎಂದು. ಅದಕ್ಕೆ ಮಗು, ’ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ. ಮತ್ತೆ ಸಮುದ್ರ, ’ಹಾಗಾದರೆ ನಿನಗೆ ನೀರು ಇಷ್ಟವಿಲ್ಲವೇ?’ ಎಂದು ಕೇಳಿತು. ಅದಕ್ಕೂ ಮಗು, ’ಇದೆ, ಆದರೆ  ಇದಲ್ಲ’ ಎಂದಿತು.

ಸಮುದ್ರಕ್ಕೆ ಅಚ್ಚರಿಯಾಯಿತು. ‘ನೀರಿಗ್ಯಾವ ವ್ಯತ್ಯಾಸವಿದೆ? ಅಲ್ಲಿಯದು, ಇಲ್ಲಿಯದು ಅಂತ. ಆ ನೀರು, ಈ ನೀರು ಅಂತ. ಎಲ್ಲ ಒಂದೇ. ಬಾ, ಒಮ್ಮೆ ಆಡು ನಿನಗೆ ಗೊತ್ತಾಗುತ್ತೆ’ ಎಂದು ಹೇಳಿತಂತೆ. ಅದರೂ ಮಗು ತನ್ನ ನಿರ್ಧಾರ ಬದಲಿಸಲಿಲ್ಲ. ಸಮುದ್ರಕ್ಕೇಕೋ ಅನುಮಾನ ಮೂಡಿತು. ’ನನ್ನನ್ನು ಕಂಡರೆ ‘ಯವೇ?’ ಎಂದು ಕೇಳಿದಾಗ ಮೆಲ್ಲನೆ ಮಗು, ಹೌದೋ ಅಲ್ಲವೋ ಎಂಬಂತೆ ತಲೆಯಾಡಿಸಿತು.

ತತ್ ಕ್ಷಣ ಸಮುದ್ರ, ’ಅದಕ್ಕೇನೂ ಭಯ ಪಡಬೇಡ. ಏನೂ ಆಗದು. ನಾನೇ ಆ ಸಮುದ್ರ. ನಿನಗೇನೂ ಆಗುವುದಿಲ್ಲ’ ಎಂದು ಹೇಳಿ ಭರವಸೆ ಕೊಟ್ಟ ತಕ್ಷಣ ಮಗುವಿನ ಮುಖದಲ್ಲಿ ನಗೆ ಅರಳಿತು. ಪುಟ್ಟ ಪಾದಗಳೊಡನೆ ಓಡಿ ಹೋಗಿ ಸಮುದ್ರಕ್ಕೆ ಬಿತ್ತು.

ಬದುಕಲ್ಲೂ ಅಷ್ಟೇ. ಒಂದು ಭರವಸೆಗೆ ಕಾಯುತ್ತಿರುತ್ತೇವೆ. ಅದು ಸಿಕ್ಕರೆ ಎಷ್ಟು ದೂರವಾದರೂ ನಡೆದು ಹೋಗುತ್ತೇವೆ. ಇದು ಖಂಡಿತಾ ಸುರಕ್ಷತೆಯ ನೆಲೆಯಲ್ಲ, ಭರವಸೆಯದ್ದು. ಮತ್ತೊಂದು ಪುಟ್ಟ ಮಗು ಹೀಗೆ ಹೊರಗೆ ಸುರಿಯುತ್ತಿರುವ ಮಳೆ ಕಂಡು, ಅಂಗಳದಲ್ಲಿ ಹರಿದು ಹೋಗುವ ನೀರಿನಲ್ಲಿ ತೇಲಿಬಿಡಲು ಕಾಗದದ ದೋಣಿ ಹಿಡಿದು ಸಜ್ಜಾಗಿದ್ದಾನೆ.

ಆದರೆ ಅವನು ನೋಡುತ್ತಿರುವುದು ಮತ್ತ್ಯಾವುದೋ ಗಾಳಿ ಬಂದು ನನ್ನ ದೋಣಿಯನ್ನು ಎತ್ತಿಕೊಂಡು ಹೋದರೆ ಎಂಬ ಆತಂಕದಿಂದ ಆಕಾಶದತ್ತ ನೋಡುತ್ತಾನೆ. ಅಂಥದ್ದೇನೂ ಇಲ್ಲ ಎಂಬ ಗ್ಯಾರಂಟಿ ಸಿಕ್ಕ ಮೇಲೆ ದೋಣಿಯನ್ನು ತೇಲಿ ಬಿಡುತ್ತಾನೆ.

ಬದುಕು ಹಾಗೆಯೇ. ಸಮುದ್ರ ಥರವೂ ಹೌದು, ಗಾಳಿ ಥರವೂ ಹೌದು. ಅದೇ ಹೊತ್ತಿನಲ್ಲಿ ಶಾಂತವೂ ಹೌದು. ಹಾಗಾಗಿಯೇ ಭರವಸೆ ಹುಡುಕುವುದು ತಪ್ಪಲ್ಲ, ಅದು ಯಾವ ರೂಪದಲ್ಲಾದರೂ ಬರಬಹುದು. ಆದರೆ ಗ್ರಹಿಸಿ ಗುರುತಿಸುವ ಸಾಮರ್ಥ್ಯ ಇರಬೇಕು. ಇಲ್ಲದಿದ್ದರೆ ನಾವು ಮಹತ್ವದ್ದನ್ನು ಕಳೆದುಕೊಳ್ಳುತ್ತೇವೆ.

ಸಂದರ್ಭದ ಮುಖಾಮುಖಿಯಾಗುವುದು ಅತ್ಯಂತ ಅಗತ್ಯ. ಅದಾಗದೇ ಏನೂ ಸಿಗದು. ಯಾಕೆಂದರೆ ಹಲವು ಬಾರಿ ಸಂದರ್ಭಗಳು – ಸನ್ನಿವೇಶಗಳು ನಿರ್ಧಾರಗಳನ್ನು ಕೈಗೊಳ್ಳುತ್ತೇವೆಯೇ ಹೊರತು ನಮ್ಮ ಬುದ್ಧಿಯಲ್ಲ!

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ