ನಮ್ಮ ಉಳಿತಾಯ ಹೀಗಿದ್ದರೆ ಚೆನ್ನ


Team Udayavani, Jan 10, 2021, 1:15 AM IST

tdy-14

ಕೋವಿಡ್‌ ಜಗತ್ತಿಗೆ ಹಲವು ಪಾಠಗ ಳನ್ನು ಕಲಿಸಿದೆ. ಅದರಲ್ಲೂ ವಿಶೇಷ ವಾಗಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ನಾವು ಕಳೆದ ವರ್ಷ ಕಲಿತ ಪಾಠಗಳನ್ನು ಈ ವರ್ಷ ಕಾರ್ಯ ರೂಪಕ್ಕೆ ತಂದರೆ ಮುಂಬರುವ ಆರ್ಥಿಕ ಸಂಕಷ್ಟಗಳಿಂದ ಪಾರಾಗ ಬಹುದು. ಅವುಗಳಲ್ಲಿ ಪ್ರಮುಖವಾಗಿ ಉಳಿತಾಯಕ್ಕೆ ಸಂಬಂಧಿಸಿ ಪ್ರತಿಯೊ ಬ್ಬರೂ ಕೆಲವೊಂದು ವಿಷಯಗಳನ್ನು ನೆನಪಿಡಲೇಬೇಕು.

ಭವಿಷ್ಯಕ್ಕೊಂದಿಷ್ಟು  ಉಳಿತಾಯ: ಕೋವಿಡ್‌ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ, ವೇತನ ಕಡಿತದಿಂದಾಗಿ ಅನೇಕ ಕುಟುಂಬಗಳ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವಂತಾಗಿದೆ. ತಿಂಗಳ ಭತ್ತೆಯಲ್ಲಿ ಒಂದಿಷ್ಟು ಉಳಿತಾಯ ಮಾಡಬೇಕು ಎಂಬ ಸತ್ಯದ ಅರಿವು ಎಲ್ಲರಿಗೂ ಆಗಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ತಮ್ಮ ಆದಾಯಕ್ಕನುಗುಣವಾಗಿ ಖರ್ಚು ಮಾಡುವುದು ಸೂಕ್ತ.

ವಿವಿಧೆಡೆ ಹೂಡಿಕೆ: ಹೂಡಿಕೆ ಮಾಡುವಾಗ ಒಂದೇ ವಲಯದಲ್ಲಿ ಹಣ ತೊಡಗಿಸುವುದು ಅಪಾಯ ಕಾರಿ ಎಂಬುದನ್ನು ಕೋವಿಡ್‌ ಕಾಲ ಸಾಬೀತು ಪಡಿಸಿದೆ. ಉದಾಹರ ಣೆಗೆ ಚಿನ್ನದ ಮೇಲೆ ಹಣ ಹೂಡು ವುದು ವ್ಯರ್ಥ ಎಂಬುದು ಕೆಲವರ ಅಭಿಪ್ರಾಯವಾಗಿತ್ತು. 2020 ರಲ್ಲಿ ಬಂಗಾರದ ಬೆಲೆ ದಾಖಲೆ ಮಟ್ಟ ದಲ್ಲಿ ಏರಿಕೆ ಕಂಡಿದೆ. ಷೇರಿನಲ್ಲಿ ಹೂಡಿಕೆ ಮಾಡಿದವರು ಕೋವಿಡ್‌ ಆರಂಭದಲ್ಲಿ ನಷ್ಟದಲ್ಲಿದ್ದರೂ ಬಳಿಕ ಚಿರತೆಯಂತೆ ನೆಗೆದಿದೆ. ಹೀಗಾಗಿ ಒಂದೇ ವಲಯದಲ್ಲಿ ಹೂಡಿಕೆ ಮಾಡುವ ಬದಲು ಬದಲು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಣ ತೊಡಗಿಸಿದರೆ ರಿಸ್ಕ್ ಕಡಿಮೆ ಎಂಬುದನ್ನು ನಾವು ಇನ್ನಾದರೂ ಅರ್ಥೈಸಿಕೊಳ್ಳುವುದೊಳಿತು.

ತುರ್ತು ನಿಧಿ: ಕಾಯಿಲೆ, ಅಪಘಾತ ಅಥವಾ ಇನ್ನಿತರ ಯಾವುದೇ ಆಕಸ್ಮಿಕ ಘಟನೆಗಳ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವುದು ತುರ್ತು ನಿಧಿ.  ಇಂಥ ಅನಿರೀಕ್ಷಿತ ಸಂದರ್ಭಗಳಿಗಾಗಿ ತುರ್ತು ನಿಧಿ ಎಂದು ಒಂದಿಷ್ಟು ಉಳಿತಾಯ ಮಾಡುವುದು ಮುಖ್ಯ. ತೀರಾ ಅನಿವಾರ್ಯವಲ್ಲದ ಹೊರತು ಈ ನಿಧಿಯನ್ನು ಇನ್ನಿತರ ಉದ್ದೇಶಗಳಿಗಾಗಿ ಬಳಸಬಾರದು. ಭವಿಷ್ಯದಲ್ಲಿ ಎದುರಾಗುವ ಅನಿರೀಕ್ಷಿತ ವೆಚ್ಚಗಳಿಗಾಗಿ ಪ್ರತೀ ತಿಂಗಳು ಒಂದಿಷ್ಟು ಹಣ ಎತ್ತಿಡುವುದನ್ನು ಇಂದಿನಿಂದಲೇ ಆರಂಭಿಸೋಣ.

ಕಡಿಮೆ ಸಾಲ: ಸಾಲ ಕಡಿಮೆಯಾದಷ್ಟು ನೆಮ್ಮದಿ ಎಂಬ ವಾಸ್ತವ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ ದೊಡ್ಡ ದೊಡ್ಡ ಉದ್ಯಮಿಗಳಿಗೂ ಇದೀಗ ಅರಿವಾಗಿದೆ. ವೈಯಕ್ತಿಕ ಸಾಲ, ಕ್ರೆಡಿಟ್‌ ಕಾರ್ಡ್‌ ಬಿಲ್‌ಗ‌ಳು ಕಡಿಮೆಯಿದ್ದಷ್ಟು  ಒಳ್ಳೆಯದು.

ವಿಮೆ: 2020ರಲ್ಲಿ ಕೋವಿಡ್‌ ಅಲ್ಲದೆ ಚಂಡಮಾರುತಗಳು, ಪ್ರವಾಹ ಸಹಿತ ಹಲವು ಪ್ರಕೃತಿ ವಿಕೋಪಗಳು ಸಂಭವಿಸಿ ಜನರನ್ನು ತಲ್ಲಣಗೊಳಿಸಿದವು. ಇವೆಲ್ಲವುಗಳಿಂದಾಗಿ ಭಾರೀ ಪ್ರಮಾಣದ ಸಾವು-ನೋವು, ನಷ್ಟ  ಉಂಟಾಗಿದೆ. ಇದರ ಪರಿಣಾಮವಾಗಿ ವಿಮೆ ಎಷ್ಟು ಮುಖ್ಯ ಎಂಬುದರ ಅರಿವು ಜನರಿಗಾಗಿದೆ. ಕೋವಿಡ್‌ ಭಾದಿಸುವ ತನಕ ಆರೋಗ್ಯ ವಿಮೆ ಸಹಿತ ವಿವಿಧ ವಿಮೆಗಳನ್ನು ಮಾಡಿಸುವುದು ವ್ಯರ್ಥ ಎಂಬ ಭಾವನೆ ಹೊಂದಿದ್ದರು. ಆದರೆ ಈಗ ಟ್ರೆಂಡ್‌ ಬದಲಾಗಿದೆ. ಜೀವ ವಿಮೆ ಅತೀ ಆವಶ್ಯಕ ಎಂಬುದನ್ನು ಮನಗಂಡಿದ್ದಾರೆ. ಅಲ್ಲದೆ ವಾಹನ ವಿಮೆಯತ್ತಲೂ ಜನರು ಹೆಚ್ಚಿನ ಗಮನಹರಿಸುವ ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.

ಟಾಪ್ ನ್ಯೂಸ್

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

ಅನಂತ ನಾಗೇಶ್ವರನ್‌ ನೂತನ ಸಿಇಎ

ನೂತನ ಸಿಇಎ ಆಗಿ ಅನಂತ ನಾಗೇಶ್ವರನ್ ಅಧಿಕಾರ ಸ್ವೀಕಾರ

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿ

ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿ

ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್‌ ಹಂತ, ಬಳಿಕ ನಾಕೌಟ್‌ ಹಂತ

ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್‌ ಹಂತ, ಬಳಿಕ ನಾಕೌಟ್‌ ಹಂತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಕಿಸಾನ್‌ ಸಮ್ಮಾನ್‌ ಯೋಜನೆ 20.48 ಲಕ್ಷ ಫ‌ಲಾನುಭವಿಗಳು ಅನರ್ಹರು!

ಕಿಸಾನ್‌ ಸಮ್ಮಾನ್‌ ಯೋಜನೆ 20.48 ಲಕ್ಷ ಫ‌ಲಾನುಭವಿಗಳು ಅನರ್ಹರು!

Mumbai-police

ಮುಂಬೈ; ಬಿಜೆಪಿ ಕಾರ್ಪೋರೇಟರ್ ಸೇರಿದಂತೆ ಕುಟುಂಬ ಸದಸ್ಯರು ಗುಂಡಿನ ದಾಳಿಗೆ ಬಲಿ

Dating-726

ಡೇಟಿಂಗ್ ಪ್ರಿಯರಿಗೆ ಬಂದಿದೆ ಫೇಸ್ಬುಕ್ಕಿನ ಹೊಸ ಆಪ್ಷನ್!

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

ಅನಂತ ನಾಗೇಶ್ವರನ್‌ ನೂತನ ಸಿಇಎ

ನೂತನ ಸಿಇಎ ಆಗಿ ಅನಂತ ನಾಗೇಶ್ವರನ್ ಅಧಿಕಾರ ಸ್ವೀಕಾರ

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.