ಸುದ್ದಿ ಕೋಶ: ವಿಶ್ವದಲ್ಲೇ ಅತಿ ಹಗುರ, ಅಗ್ಗ ಜೈಹಿಂದ್ 1ಎಸ್
Team Udayavani, Jul 15, 2018, 6:00 AM IST
ಅಂಗೈನಲ್ಲಿ ಹಿಡಿಯಬಹುದಾದ ಉಪಗ್ರಹ
ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿ ಗುಂಪೊಂದು ಸೇರಿ ವಿಶ್ವದ ಅತಿ ಹಗುರ ಮತ್ತು ಅಗ್ಗದ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ್ದಾರೆ. ಕೇವಲ 15 ಸಾವಿರ ರೂ. ವೆಚ್ಚದಲ್ಲಿ “ಜೈಹಿಂದ್ 1ಎಸ್’ ಸ್ಯಾಟಲೈಟ್ ಅಭಿವೃದ್ಧಿ ಪಡಿಸಲಾಗಿದ್ದು, ಇದು ಮಧ್ಯಮಗಾತ್ರದ ಮೊಟ್ಟೆಗಿಂತ ಸ್ವಲ್ಪ ಕಡಿಮೆಯೇ ತೂಕ ಹೊಂದಿದೆ. ಇದರ ಹೊರಭಾಗದ ಕೇಸ್ ಅನ್ನು 3ಡಿ ಪ್ರಿಂಟ್ ಮಾಡಲಾಗಿದೆ. ಅಂಗೈನಲ್ಲಿ ಹಿಡಿಯ ಬಹು ದಾದಂಥ ಈ ಉಪಗ್ರಹದ ಉಡಾವಣೆ ಆಗಸ್ಟ್‌ನಲ್ಲಿ ನೆರವೇರಲಿದೆ.
ಉಡಾವಣೆ ಹೇಗೆ?
ಮುಂದಿನ ತಿಂಗಳು ನಾಸಾದ ಘಟಕದಲ್ಲಿ ಈ ಉಪಗ್ರಹದ ಉಡಾವಣೆ ನಡೆಯಲಿದೆ. ಬಲೂನ್ ಸಹಾಯದಿಂದ ಇದನ್ನು ಉಡಾಯಿ ಸಲಾಗುತ್ತದೆ. ನಿರ್ದಿಷ್ಟ ಎತ್ತರಕ್ಕೆ ಸಾಗಿದ ಬಳಿಕ, ಉಪಗ್ರಹವು ಸಂಪರ್ಕ ಕಡಿದು ಕೆಳಕ್ಕೆ ಬೀಳುತ್ತದೆ.
ವಿದ್ಯಾರ್ಥಿಗಳಿಂದಲೇ ಅಭಿವೃದ್ಧಿ
ಚೆನ್ನೈ ಸಮೀಪದ ಕೆಳಂಬಕ್ಕಮ್‌ನ ಹಿಂದು ಸ್ಥಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಜಿನಿಯರಿಂಗ್ ವಿದ್ಯಾರ್ಥಿ ಗಳಾದ ಕೆ.ಜೆ. ಹರಿಕೃಷ್ಣನ್, ಪಿ. ಅಮರನಾಥ್, ಜಿ. ಸುಧಿ ಮತ್ತು ಟಿ. ಗಿರಿಪ್ರಸಾದ್ ಅವರು ಈ ಉಪಗ್ರಹದ ಕತೃìಗಳು. ಇವರು 40 ಅಡಿ ಎತ್ತರದಲ್ಲಿ ಉಪಗ್ರಹದ ಪ್ರಾಯೋಗಿಕ ಪರೀಕ್ಷೆ ನಡೆಸಿ, ಕಳೆದ ವಾರವೇ ನಾಸಾಗೆ ಕಳುಹಿಸಿಕೊಟ್ಟಿದ್ದಾರೆ.
ಉಪಯೋಗ
ಜೈಹಿಂದ್ ಉಪಗ್ರಹವು 22 ಬಗೆಯ ಹವಾ ಮಾನದ ಸ್ಥಿತಿಗತಿಯನ್ನು ವಿವರಿಸುವ ಸಾಮರ್ಥ್ಯ ಹೊಂದಿದ್ದು, ಅದರ ದತ್ತಾಂಶ ಗಳನ್ನು ಇನ್-ಬಿಲ್ಟ್ ಎಸ್‌ಡಿ ಕಾರ್ಡ್‌ನಲ್ಲಿ ಸಂಗ್ರಹಿಸಿಡುತ್ತದೆ. ಉಪಗ್ರಹದಲ್ಲಿರುವ ಸೆನ್ಸರ್ ಮಾಡ್ಯುಲ್‌ಗಳು ಗಾಳಿಯಲ್ಲಿನ ಆದ್ರì ತೇವಾಂಶದ ಒತ್ತಡ, ವಾಸ್ತವಿಕ ತೇವಾಂಶದ ಒತ್ತಡ ಸೇರಿದಂತೆ ಬೇರೆ ಬೇರೆ ಹವಾಗುಣಗಳನ್ನು ಅಳೆಯಬಲ್ಲದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸುಳ್ಯ: ಪ್ರಗತಿಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ
ಜ್ಞಾನವಾಪಿ ಶಿವಲಿಂಗದ ಕುರಿತು ಫೇಸ್ಬುಕ್ ಪೋಸ್ಟ್ ಮಾಡಿದ ದೆಹಲಿ ಪ್ರಾಧ್ಯಾಪಕರ ಬಂಧನ
ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ ಉದಯ ಚೌಟ ಇನ್ನಿಲ್ಲ
ಇಂದಿನ ಗ್ರಹಬಲ: ಈ ರಾಶಿಯವರಿಂದು ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡಬೇಡಿ
ಧಾರವಾಡದಲ್ಲಿ ಭೀಕರ ಅಪಘಾತ: ಮರಕ್ಕೆ ಕ್ರೂಸರ್ ಢಿಕ್ಕಿ; ಮಕ್ಕಳು ಸೇರಿ ಸ್ಥಳದಲ್ಲೇ 7 ಜನ ಸಾವು