ಬಾದಾಮಿ ಹಲ್ವ

Team Udayavani, Sep 28, 2019, 5:00 AM IST

ಬೇಕಾಗುವ ಸಾಮಗ್ರಿಗಳು
ಬಾದಾಮಿ: 1 ಕಪ್‌
ಸಕ್ಕರೆ: ಅರ್ಧ ಕಪ್‌
ನೀರು : ಆರು ಕಪ್‌
ತುಪ್ಪ: ಅರ್ಧ ಕಪ್‌
ಕೇಸರಿ ಎಳೆ : ಎಂಟು

ಮಾಡುವ ವಿಧಾನ: ಒಂದು ಪಾತ್ರೆಗೆ ನಾಲ್ಕು ಕಪ್‌ ನೀರನ್ನು ಸೇರಿಸಿ ಬಿಸಿ ಮಾಡಬೇಕು. ನೀರು ಚೆನ್ನಾಗಿ ಕುದಿದ ಬಳಿಕ ಬಾದಾಮಿಯನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. ದೊಡ್ಡ ಉರಿಯಲ್ಲಿ 8-10 ನಿಮಿಷಗಳ ಕಾಲ ಬೇಯಿಸಿ ಬೆಂದ ಬಳಿಕ ಸಿಪ್ಪೆ ತೆಗೆದು ಬಾದಾಮಿಯನ್ನು ಮಿಕ್ಸಿಯಲ್ಲಿ ಹಾಕಿ ಕಾಲು ಕಪ್‌ ನೀರನ್ನು ಸೇರಿಸಿ, ಮೃದುವಾಗಿ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಕಾಲು ಕಪ್‌ ನೀರನ್ನು ಬಿಸಿಮಾಡಿ. ಅದಕ್ಕೆ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ತಿರುವಿ ಮತ್ತು ಪಾಕ ಬರಲು ಬಿಡಿ. ಕೇಸರಿ ಎಳೆಯನ್ನು ಸೇರಿಸಿ. ಕೆಲವು ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ. ಅನಂತರ ಸಣ್ಣ ಉರಿಯಲ್ಲಿ ಇಡಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ. ಒಮ್ಮೆ ಕರಗಿದ ಮೇಲೆ, ರುಬ್ಬಿಕೊಂಡ ಬಾದಾಮಿ ಪೇಸ್ಟ್‌ಅನ್ನು ಸೇರಿಸಿ. ಮಿಶ್ರಣವು ತುಪ್ಪದೊಂದಿಗೆ ಬೆರೆಸಿ ಹರಳಿನ ಸ್ಥಿರತೆ ಬರುವ ತನಕ 8-10 ನಿಮಿಷಗಳ ಕಾಲ ನಿರಂತರವಾಗಿ ತಿರುವುತ್ತಲೇ ಇರಿ. ಒಮ್ಮೆ ಸ್ಥಿರತೆಗೆ ಬಂದ ಮೇಲೆ ಸಕ್ಕರೆ ಪಾಕವನ್ನು ಸೇರಿಸಿ. ತುಪ್ಪವು ಬೇರ್ಪಡುವವರೆಗೆ ಚೆನ್ನಾಗಿ ಮಿಶ್ರಗೊಳಿಸಿ. ಉರಿಯನ್ನು ಆರಿಸಿ. ಹಲ್ವಸವಿಯಲು ಸಿದ್ಧ.

ಸ್ವಾತಿ, ಮಂಗಳಾದೇವಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪ್ರತಿದಿನ‌ ಅಸ್ವಾದಿಸಲ್ಪಡುವ ಆಹಾರಗಳಲ್ಲಿ ಚಪಾತಿ ಒಂದು. ಇದನ್ನು "ಇಂಡಿಯನ್‌ ಬ್ರೆಡ್‌' ಎಂದು ಕರೆಯುತ್ತಾರೆ. ಸಂಪೂರ್ಣ ಗೋಧಿ ಹಿಟ್ಟಿನಿಂದ ಮಾಡುವ ಚಪಾತಿ ಇತರ...

  • ಹೋಳಿಗೆಯನ್ನು ನಾವು ಎಲ್ಲ ಕಾರ್ಯಕ್ರಮಗಳಲ್ಲೂ ಬಳಸುತ್ತೇವೆ. ಇದೊಂದು ಹೆಚ್ಚಾಗಿ ಸಿಹಿಯಾದ ಖಾದ್ಯವಾಗಿದ್ದು, ಕೆಲವೊಮ್ಮೆ ಖಾರದ ಹೋಳಿಗೆಯನ್ನೂ ತಯಾರಿಸಲಾಗುತ್ತದೆ....

  • ಧೋಕ್ಲಾ ಗುಜರಾತಿ ಪಾಕಪದ್ಧತಿಯ ವಿಶೇಷತೆಗಳಲ್ಲಿ ಇದು ಒಂದಾಗಿದೆ. ಗುಜರಾತಿ ಪಾಕಪದ್ಧತಿಯಲ್ಲಿ ಸಾಕಷ್ಟು ರುಚಿಯಾದ ಮತ್ತು ಉತ್ತಮ ವಾದ ತಿಂಡಿಗಲ್ಲಿ ಧೋಕ್ಲಾ ಅಗ್ರಸ್ಥಾನ...

  • ಖಾರ ಹೋಳಿಗೆ ಬೇಕಾಗುವ ಸಾಮಗ್ರಿಗಳು ತೊಗರಿಬೇಳೆ- 2 ಕಪ್‌ ಕಡಳೆಬೇಳೆ- 1 ಕಪ್‌ ಹಸಿಮೆಣಸಿನಕಾಯಿ- 5 ಜೀರಿಗೆ - 1 ಚಮಚ ತೆಂಗಿನ ತುರಿ- 1 ಕಪ್‌ ಅರಶಿನ- ಒಂದು ಚಿಟಿಕೆ ಶುಂಠಿ-...

  • ಮಕರ ಸಂಕ್ರಾಂತಿಯು ಹಿಂದೂಗಳ ವಿಶೇಷ ದಿನವಾಗಿದ್ದು, ಈ ದಿನ ಎಲ್ಲ ಊರುಗಳಲ್ಲೂ ವಿಶೇಷ ತಿಂಡಿಗಳನ್ನು ಮಾಡುತ್ತಾರೆ. ದೇವರ ಪ್ರಸಾದವಾಗಿ ಅಥವಾ ಹಬ್ಬದ ಸಂಭ್ರಮಕ್ಕಾಗಿ...

ಹೊಸ ಸೇರ್ಪಡೆ