ಬಾಳೆಹಣ್ಣಿನ ಬೊಂಬಾಟ್‌ ತಿನಿಸು

Team Udayavani, Jun 14, 2019, 4:06 PM IST

ಮಳೆಗಾಲದಲ್ಲಿ ಸುಲಭವಾಗಿ ಸಿಗುವ ಹಣ್ಣೆಂದರೆ ಬಾಳೆಹಣ್ಣು. ಮನೆಯ ಹಿತ್ತಲಿನಲ್ಲೇ ಬಾಳೆಗಿಡ ಇದ್ದರಂತೂ, ಬಾಳೆಹಣ್ಣಿಗೆ ಕೊರತೆಯಾಗದು. ಮಳೆ ಬೀಳುವಾಗ ಬಾಳೆಹಣ್ಣು ತಿಂದರೆ ಶೀತವಾಗುತ್ತದೆ. ಬೇಗ ಕಳಿತು, ಕಪ್ಪಾಗುವ ಹಣ್ಣನ್ನು ಎಸೆಯಲೂ ಮನಸ್ಸು ಬರುವುದಿಲ್ಲ. ಆಗ ಏನು ಮಾಡಬಹುದು ಗೊತ್ತೇ? ಅದರಿಂದ ಥರಹೇವಾರಿ ವ್ಯಂಜನಗಳನ್ನು ತಯಾರಿಸಬಹುದು.

1. ಬಾಳೆ ಹಣ್ಣಿನ ಪಡ್ಡು (ಎರಿಯಪ್ಪ)
ಬೇಕಾಗುವ ಸಾಮಗ್ರಿ: ಕಳಿತ ಬಾಳೆ ಹಣ್ಣು -4, ಅಕ್ಕಿ-1 ಕಪ್‌, ತೆಂಗಿನ ತುರಿ-1/2 ಕಪ್‌, ಬೆಲ್ಲ-1/4 ಕಪ್‌, ಉಪ್ಪು, ಎಣ್ಣೆ.

ಮಾಡುವ ವಿಧಾನ: ತೊಳೆದ ಅಕ್ಕಿಯನ್ನು, ತೆಂಗಿನತುರಿ, ಬೆಲ್ಲ, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ. ನಂತರ ಬಾಳೆಹಣ್ಣು ಹಾಕಿ ಎರಡು ಸುತ್ತು ರುಬ್ಬಿ. ಈ ಮಿಶ್ರಣವನ್ನು ಸಣ್ಣ ಲಿಂಬೆ ಗಾತ್ರದ ಉಂಡೆ ಮಾಡಿ, ಎಣ್ಣೆಯಲ್ಲಿ ಕರಿಯಿರಿ. ಈ ಖಾದ್ಯಕ್ಕೆ ಜಾಮೂನಿನ ರುಚಿಯಿದೆ.

2. ಬಾಳೆ ಹಣ್ಣಿನ ಕಡಬು (ಪಾತೋಳಿ)
ಬೇಕಾಗುವ ಸಾಮಗ್ರಿ: ಅಕ್ಕಿ -1 ಕಪ್‌, ಬಾಳೆಹಣ್ಣು-3, ಬೆಲ್ಲ-1/4 ಕಪ್‌, ತೆಂಗಿನ ತುರಿ -1/4 ಕಪ್‌, ಲವಂಗ, ಏಲಕ್ಕಿ, ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು, ಬೆಲ್ಲ, ತೆಂಗಿನ ತುರಿ, ಲವಂಗ, ಏಲಕ್ಕಿ, ಉಪ್ಪು ಹಾಕಿ ರುಬ್ಬಿ. ಬಾಳೆಎಲೆಯನ್ನು ಸಣ್ಣದಾಗಿ ಹರಿದು, ಈ ಹಿಟ್ಟನ್ನು ಸೌಟಿನಲ್ಲಿ ಹಾಕಿ ಹರಡಿ. ಕುಕ್ಕರ್‌ ಪಾತ್ರೆಯಲ್ಲಿ ನೀರಿಟ್ಟು, ಒಂದು ತಟ್ಟೆಯ ಮೇಲೆ ಹಿಟ್ಟು ಸವರಿದ ಬಾಳೆಎಲೆಯನ್ನು ಮಡಚಿ, ಹಬೆಯಲ್ಲಿ ಬೇಯಿಸಿದರೆ ಬಿಸಿ ಬಿಸಿ ಕಡುಬು ರೆಡಿ.

3. ಬಾಳೆ ಹಣ್ಣಿನ ಸಿಹಿಬಾತ್‌
ಬೇಕಾಗುವ ಸಾಮಗ್ರಿ: ಬಾಳೆ ಹಣ್ಣು -1 ಕಪ್‌, ಸಕ್ಕರೆ- 4 ಕಪ್‌, ತುಪ್ಪ-2 ಕಪ್‌, ಬೆಲ್ಲದ ಪುಡಿ ಸ್ವಲ್ಪ, ಕೇಸರಿ ಒಂದು ಎಸಳು, ಹಾಲು -1 ಕಪ್‌. ರವೆ-1/2 ಕಪ್‌.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಹಾಲು ಹಾಕಿ, ತುಪ್ಪ, ಕೇಸರಿ ಬೆರೆಸಿ ಸಣ್ಣಗೆ ಕುದಿಸಿ. ಅದಕ್ಕೆ ಬಾಳೆಹಣ್ಣಿನ ಹೋಳನ್ನು ಹಾಕಿ ಸ್ವಲ್ಪ ಮಗುಚಿ ಕೆಳಗಿಳಿಸಿ. ಬಾಣಲೆಯಲ್ಲಿ ರವೆ ಹುರಿದುಕೊಂಡು, ಅದಕ್ಕೆ 4 ಕಪ್‌ ನೀರು, ಸಕ್ಕರೆ ಹಾಕಿ, ತುಪ್ಪ ಹಾಕಿ ಕೈ ಆಡಿಸುತ್ತಾ ಇರಿ. ಹದವಾದ ಪಾಕ ಬಂದಾಗ, ಹಾಲು, ಬಾಳೆಹಣ್ಣು ಹಾಕಿ, ತುಪ್ಪ ಪಾಕ ಬಿಟ್ಟಾಗ, ಏಲಕ್ಕಿ ಸೇರಿಸಿ.

4. ಬಾಳೆಹಣ್ಣು- ಬೆಲ್ಲದ ವ್ಯಂಜನ
ಬೇಕಾಗುವ ಸಾಮಗ್ರಿ: ಹಣ್ಣಾದ ಬಾಳೆಹಣ್ಣು- 1ಕಪ್‌, ತುರಿದ ಬೆಲ್ಲ-1ಕಪ್‌, ತೆಂಗಿನತುರಿ -1/2 ಕಪ್‌, ಏಲಕ್ಕಿ ಪುಡಿ

ಮಾಡುವ ವಿಧಾನ: ಬಾಳೆಹಣ್ಣನ್ನು ಸಣ್ಣದಾಗಿ ಹೋಳು ಮಾಡಿ ತೆಂಗಿನತುರಿ, ಬೆಲ್ಲ ಹಾಗೂ ಏಲಕ್ಕಿ ಪುಡಿ ಬೆರೆಸಿ ಮಿಶ್ರಣ ಮಾಡಿದರೆ ವ್ಯಂಜನ ರೆಡಿ. ಇದನ್ನು ಚಪಾತಿ, ಪೂರಿ ಜೊತೆ ತಿನ್ನಲು ಸೊಗಸಾಗಿರುತ್ತೆ.

5.ಬಾಳೆ ಹಣ್ಣಿನ ಗೊಜ್ಜು
ಬೇಕಾಗುವ ಸಾಮಗ್ರಿ: ಕಳಿತ ಬಾಳೆಹಣ್ಣು- 5, ತೆಂಗಿನತುರಿ- 1/2 ಕಪ್‌, ಬೆಲ್ಲ- 1/2 ಕಪ್‌, ಹುರಿದ ಮೆಂತ್ಯೆ, ಬ್ಯಾಡಗಿ ಮೆಣಸು -2

ಮಾಡುವ ವಿಧಾನ: ತೆಂಗಿನತುರಿಯ ಜೊತೆಗೆ ಹುರಿದ ಮೆಂತ್ಯೆ, ಬ್ಯಾಡಗಿ ಮೆಣಸು ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ಬಾಳೆಹಣ್ಣಿನ ಹೋಳುಗಳನ್ನು ಸೇರಿಸಿ, ಸಾಸಿವೆ- ಇಂಗು ಹಾಕಿ ಒಗ್ಗರಣೆ ಹಾಕಿದರೆ ಗೊಜ್ಜು ತಯಾರು.

6. ಬಾಳೆಹಣ್ಣಿನ ಸ್ಯಾಂಡ್‌ವಿಚ್‌
ಬೇಕಾಗುವ ಸಾಮಗ್ರಿ: ಬ್ರೆಡ್‌- 2 ಸ್ಲೆ„ಸ್‌, ಬಾಳೆಹಣ್ಣಿನ ಸಣ್ಣ ತುಣುಕು, ಕಾಳುಮೆಣಸಿನ ಪುಡಿ
ಮಾಡುವ ವಿಧಾನ: ಬ್ರೆಡ್‌ ಅನ್ನು ಕಾವಲಿ ಮೇಲಿಟ್ಟು ಬಿಸಿ ಮಾಡಿ, ಬಾಳೆಹಣ್ಣಿನ ತುಣುಕುಗಳನ್ನಿಟ್ಟು, ಕಾಳುಮೆಣಸಿನ ಪುಡಿ ಸಿಂಪಡಿಸಿ. ಬ್ರೆಡ್‌ನ‌ ಎರಡೂ ಬದಿ ಕೆಂಪಾಗುವ ತನಕ ಬಿಸಿ ಮಾಡಿ.

– ಚಪಾತಿ ಹಿಟ್ಟಿಗೆ ಬಾಳೆಹಣ್ಣಿನ ತುಣುಕುಗಳನ್ನು ಸೇರಿಸಿ, ಚೆನ್ನಾಗಿ ನಾದಿ, ಬಾಳೆಹಣ್ಣಿನ ಚಪಾತಿ ಮಾಡಬಹುದು.
-ಕಳಿತ ಬಾಳೆಹಣ್ಣು, ತುಪ್ಪ, ಮೊಸರು, ಹಾಲು, ಜೇನುತುಪ್ಪ ಸೇರಿಸಿದರೆ ಅದುವೇ ಪಂಚಾಮೃತ.
– ಬಾಳೆಹಣ್ಣನ್ನು ಉದ್ದಕ್ಕೆ ಹಚ್ಚಿ ಎರಡು ಭಾಗ ಮಾಡಿ. ಬಿಸಿ ಕಾವಲಿಯ ಮೇಲೆ ಕೆಂಪಾಗುವವರೆಗೆ ಬಿಸಿ ಮಾಡಿ, ಟೊಮೆಟೊ ಸಾಸ್‌ ಜೊತೆ ತಿನ್ನಬಹುದು.
– ಕಳಿತ ಬಾಳೆಹಣ್ಣಿನ ಹೋಳು, ಹಾಲು, ಸಕ್ಕರೆ, ಏಲಕ್ಕಿ ಪುಡಿ ಹಾಕಿದರೆ ಬಾಳೆಹಣ್ಣಿನ ಮಿಲ್ಕ್ಶೇಕ್‌ ರೆಡಿ

-ಹೀರಾ ರಮಾನಂದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೇಕರಿಯಲ್ಲಿ ನೂರು ಬಗೆಯ ಸ್ವೀಟ್‌ಗಳು ಸಿಗುತ್ತವಾದರೂ, ಮನೆಯಲ್ಲಿ ಮಾಡುವ ಸಿಹಿತಿಂಡಿಗಳಿಗೆ ಅವು ಸಮನಾಗುವುದಿಲ್ಲ. ಅದರಲ್ಲೂ, ಉಂಡೆ, ಹೋಳಿಗೆ, ಕರ್ಜಿಕಾಯಿಯಂಥ...

  • ಗೋರಿಕಾಯಿ, ಸಾಮಾನ್ಯವಾಗಿ ಎಲ್ಲ ಕಾಲದಲ್ಲಿ ಸಿಗುವಂಥ ತರಕಾರಿ. ಚವಳಿಕಾಯಿ ಅಂತಲೂ ಕರೆಸಿಕೊಳ್ಳುವ ಈ ತರಕಾರಿಯ ಪಲ್ಯ, ಸಾಂಬಾರು ಕೆಲವರಿಗೆ ಇಷ್ಟವಾಗುವುದಿಲ್ಲ....

  • ಮಲೆನಾಡಿನ ಮನೆಗಳಲ್ಲಿ ತಂಬುಳಿ ಇಲ್ಲದೆ ಊಟವೇ ನಡೆಯದು. "ಭೋಜನೆ ತಂಬುಳೀಂ ಚೈವ, ಶಯನೆ ಕಂಬಳಿ ಪ್ರಿಯಂ' ಎಂದು ಸುಭಾಷಿತ ಹೇಳುತ್ತದೆ. ಅಂದರೆ ಊಟಕ್ಕೆ ತಂಬುಳಿ ಇರಬೇಕು,...

  • ದಸರಾ ರಜೆ ಇರೋದ್ರಿಂದ ನೆಂಟರು ಮನೆಗೆ ಬಂದಿದ್ದಾರೆ. ಅವರು ಮೆಚ್ಚುವಂಥ ತಿಂಡಿ ಮಾಡಬೇಕು. ಏನು ಮಾಡ್ಹೋದು ಎಂದು ಬಹಳಷ್ಟು ಮಹಿಳೆಯರು ಯೋಚನೆಯಲ್ಲಿದ್ದಾರೆ. ದಸರೆಯ...

  • ನೆನೆಸಿದ ಕಾಳುಗಳನ್ನು ಬೇಯಿಸಿ ಮಾಡಿದ ಪದಾರ್ಥಕ್ಕೆ ಉಸುಳಿ, ಹುಸಲಿ, ಗುಗ್ಗರಿ ಅನ್ನುತ್ತಾರೆ. ತಯಾರಿಸಲು ಸುಲಭ, ತಿನ್ನಲು ರುಚಿಕರ ಅನ್ನಬಹುದಾದ ಈ ಖಾದ್ಯ, ಆರೋಗ್ಯಕ್ಕೂ...

ಹೊಸ ಸೇರ್ಪಡೆ