ದೇಹಕ್ಕೆ ತಂಪು ಈ ಜೋಳದ ನುಚ್ಚು
Team Udayavani, Apr 11, 2021, 4:40 PM IST
ಬಿಸಿಲಿನ ಬೇಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತವೆ. ಕೇವಲ ದೇಹ ತಂಪಾದರೆ ಸಾಲದು, ಆರೋಗ್ಯದ ಕಡೆಗೂ ಗಮನ ಕೊಡಬೇಕಾಗುತ್ತದೆ.
ಬೇಸಿಗೆಯಲ್ಲಿ ಎಳನೀರು ಸೇವನೆ ಉತ್ತಮ. ಅದರ ಜತೆಗೆ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಮತ್ತು ದೇಹವನ್ನು ತಂಪಾಗಿಸುವ ಕೆಲವು ಖಾದ್ಯಗಳನ್ನು ಮನೆಯಲ್ಲಿ ತಯಾರಿಸಬಹುದು. ಹಾಗಾದರೆ ನಾವಿಂದು ಜೋಳದ ನುಚ್ಚು (ಸಂಕಟಿ) ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು:
ನೀರಿನಲ್ಲಿ ನೆನೆಸಿಟ್ಟ ಒಂದು ಅಥವಾ ಎರಡ ಕಪ್ಪ ಜೋಳದ ನುಚ್ಚು (ಮನೆಯ ಸದಸ್ಯರ ಪ್ರಮಾಣದ ಮೇಲೆ), ನೀರು, ಉಪ್ಪು, ಜೀರಿಗೆ, ಹಸಿ ಶುಂಠಿ, ಬೆಳ್ಳುಳ್ಳು, ಈರುಳ್ಳಿ, ಕೊತ್ತಂಬರಿ.
ಮಾಡುವ ವಿಧಾನ:
ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಬೇಕು.
ನೀರು ಕುದಿಯುತ್ತಿರುವಾಗ ನೆನೆಸಿಟ್ಟ ಜೋಳದ ನುಚ್ಚನ್ನು ಹಾಕುತ್ತಾ ತಿರುವ ಬೇಕು. (ಏಕೆಂದರೆ ಗಟ್ಟಿ ಆಗುವ ಸಾಧ್ಯತೆ ಇರುತ್ತದೆ)
ಸ್ವಲ್ಪ ಗಟ್ಟಿ ಪ್ರಮಾಣವಾಗುವವರೆಗೂ ತಿರುವುತ್ತಿರಬೇಕು. ಒಂದು ಹದಕ್ಕೆ ಬಂದ ನಂತರ ಅದಕ್ಕೆ ಸಣ್ಣಗೆ ಹೆಚ್ಚಿಟ್ಟ ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ, ಹಸಿ ಶುಂಠಿ, ಜೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು.
ಜೋಳದ ನುಚ್ಚು ತಯಾರಾದ ಮೇಲೆ ಮಜ್ಜಿಗೆ ಅಥವಾ ಟೊಮೆಟೊ ರಸಂನೋದಿಗೆ ಸೇವಿಸಿದರೆ ದೇಹವೂ ತಂಪು, ಹೊಟ್ಟೆಯೂ ತುಂಬುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾಬುಕಳ ಸೇತುವೆ ಮೇಲೆ ಬೈಕ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ವೀರ ಸಾವರ್ಕರ್ ಚಿತ್ರ ಕಿತ್ತವರಿಗೆ ಉಗ್ರ ಶಿಕ್ಷೆಯಾಗಲಿ: ಶೋಭಾ ಕರಂದ್ಲಾಜೆ
ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ
ನೆಹರೂ ಭಾವಚಿತ್ರ ಕೈ ಬಿಟ್ಟಿರುವುದು ಸಣ್ಣತನದ ರಾಜಕಾರಣ: ಎಚ್.ಡಿ.ಕೆ
ಅಮೃತ ಮಹೋತ್ಸವ ಹಿನ್ನೆಲೆ: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ