ಅಕ್ಕಿ ವಡಾ ಮತ್ತು ಕಾಯಿ ಚಟಿ
Team Udayavani, Aug 8, 2017, 4:05 AM IST
ಬೇಕಾಗುವ ಸಾಮಗ್ರಿ:
ಅಕ್ಕಿ- 3 ಲೋಟ, ಜೀರಿಗೆ- 2 ಟೀ ಚಮಚ, ಬೆಲ್ಲ – 3 ಟೀ ಚಮಚ, ಉಪ್ಪು$ ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ಚಟ್ನಿ ಮಾಡಲು: ತೆಂಗಿನಕಾಯಿ – 1 ಬಟ್ಟಲು, ಒಣಮೆಣಸು 3- 5, ಈರುಳ್ಳಿ 1, ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ 2 ಚಮಚ.
ತಯಾರಿಸುವ ವಿಧಾನ:
ಅಕ್ಕಿಯನ್ನು 3 ಗಂಟೆಗಳ ಕಾಲ ನೆನೆಸಿ, ತೊಳೆದು, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಂಡು, ಒಂದು ಬಾಣಲೆಗೆ ಹಾಕಿ ಕಾಯಿಸಿ. ಕಾಯಿಸುವಾಗ ಉಂಡೆ ಆಗದ ಹಾಗೆ ಸೌಟಿನಿಂದ ತಿರುವುತ್ತಿರಿ. ತಳ ಬಿಟ್ಟ ಮೇಲೆ ಇಳಿಸಿ. ತಣ್ಣಗಾದ ಮೇಲೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮೃದುವಾಗುವವರೆಗೆ ನಾದಬೇಕು. ನಂತರ ಚಿಕ್ಕ- ಚಿಕ್ಕ ಉಂಡೆಯನ್ನು ಮಾಡಿ ಪೂರಿ ತರಹ ತಟ್ಟಿ ಎಣ್ಣೆಯಲ್ಲಿ ಉಬ್ಬಿಬರುವವರೆಗೆ ಕರಿಯಬೇಕು. ಇದು ಕಾಯಿ ಚಟ್ನಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.
ಕಾಯಿ ಚಟ್ನಿ ಮಾಡುವ ವಿಧಾನ: ಒಂದು ಬಟ್ಟಲು ತೆಂಗಿನಕಾಯಿಯನ್ನು ತುರಿದು, ಅದಕ್ಕೆ ಈರುಳ್ಳಿ, ಒಣಮೆಣಸು, ಸಕ್ಕರೆ ಮತ್ತು ಉಪ್ಪನ್ನು ಹಾಕಿ ಹದವಾಗಿ ರುಬ್ಬಿಕೊಳ್ಳಿ. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಹಾಕಿದರೆ ಚಟ್ನಿ ರೆಡಿ. ಇದು ಅಕ್ಕಿ ರೊಟ್ಟಿ, ಅಕ್ಕಿ ವಡಾ, ಚಪಾತಿ ಮತ್ತು ಪೂರಿಯೊಂದಿಗೆ ತಿನ್ನಲು ಬಲು ರುಚಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ