ಹಬ್ಬಕ್ಕೆ ಹೊಸದೂಟ ಕುಂದ

Team Udayavani, Jun 5, 2019, 11:42 AM IST

ಹಬ್ಬ ಬಂತೆಂದರೆ ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿ ಯಾವ ಅಡುಗೆ ಮಾಡಬಹುದು ಎಂದು ಯೋಚಿಸುತ್ತೇವೆ. ಕಡಿಮೆ ಸಾಮಗ್ರಿ ಬಳಸಿ ಕಡಿಮೆ ಸಮಯದಲ್ಲಿ ತಯಾರಾಗುವ ಅಡುಗೆಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಮನೆಯಲ್ಲಿ ಸರಳವಾಗಿ ಮಾಡಿಕೊಳ್ಳುವ ಕುಂದ ನಿಮ್ಮ ಮನೆಯವರಿಗೆಲ್ಲ ಇಷ್ಟವಾಗಬಹುದು.
ಮಾಡುವ ವಿಧಾನ
ಒಂದು ಬಾಣಲೆಗೆ ಹಾಲನ್ನು ಹಾಕಿ ದೊಡ್ಡ ಉರಿಯಲ್ಲಿ ಕುದಿಸಿಕೊಳ್ಳಬೇಕು. ಅನಂತರ ಅದು ಸ್ವಲ್ಪ ದಪ್ಪ ಹದ ಬರುವ ವರೆಗೆ ಕುದಿಸಿಕೊಳ್ಳಬೇಕು (ಸುಮಾರು ಅರ್ಧ ಲೀ ಆಗುವ ವರೆಗೆ). ಅನಂತರ ಹದವಾದ ಹಾಲಿಗೆ 1 ಕಪ್‌ ಮೊಸರು ಸೇರಿಸಿ ಇದಕ್ಕೆ ಅರ್ಧ ಕಪ್‌ ಸಕ್ಕರೆ ಹಾಕಿ ಸಕ್ಕರೆ ಕರಗುವ ವರೆಗೆ ಕೈಯಾಡಿಸಬೇಕು. ಹಾಲಿಗೆ ಮೊಸರನ್ನು ಹಾಕಿರುವುದರಿಂದ ಹಾಲು ಒಡೆಯುತ್ತದೆ ಹಾಗಾಗಿ ಅದನ್ನು ಬೀಡದಂತೆ ದೊಡ್ಡ ಉರಿಯಲ್ಲಿ ಕಲಕುತ್ತಾ ಇರಬೇಕು. ಮತ್ತೂಂದು ಬಾಣಲೆಗೆ ಒಂದು ಕಪ್‌ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ ನೀರನ್ನು ಹಾಕದೆ ಅದನ್ನು ಕರಗಿಸಿಕೊಳ್ಳಬೇಕು. ಸಕ್ಕರೆ ಹದವಾಗಿ ಕರಗಿದ ಬಳಿಕ ಅದನ್ನು ಕುದಿಯುತ್ತಿರುವ ಹಾಲಿನ ಮಿಶ್ರಣಕ್ಕೆ ಸೇರಿಸಿ ಹದವಾಗಿ ಇನ್ನೊಮ್ಮೆ ಕುದಿಸಿಕೊಳ್ಳಬೇಕು. ನಂತರ ಅದರಲ್ಲಿರುವ ನೀರು ಆವಿಯಾಗುವ ವರೆಗೆ ಕಲಕಬೇಕು. ಇದು ಸ್ವಲ್ಲ ಮಟ್ಟಿನ ಗಟ್ಟಿ ಮಿಶ್ರಣ ಬಂದ ನಂತರ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಬೇಕು ಈಗ ಸಿಹಿ ಸಿಹಿಯಾದ ಕುಂದ ಸವಿಯಲು ಸಿದ್ಧವಾಗಿರುತ್ತದೆ. ಅದರ ಮೇಲೆ ಗೋಡಂಬಿ ದ್ರಾಕ್ಷಿ ಗಳಿಂದ ಸಿಂಗರಿ ಸಿದರೆ ಸಿಹಿ ಸಿಹಿ ಯಾದ ಕುಂದ ಸಿದ್ಧ.

ಬೇಕಾಗುವ ಸಾಮಗ್ರಿl
ಹಾಲು-1ಲೀ.
ಮೊಸರು -1 ಕಪ್‌
ಸಕ್ಕರೆ-1 ಕಪ್‌
ಏಲಕ್ಕಿ ಪುಡಿ- ಸ್ವಲ್ಪ (ಎರಡರಿಂದ ಮೂರು)
ಗೋಡಂಬಿ -2ರಿಂದ 3
ದ್ರಾಕ್ಷಿ- 4ರಿಂದ 5

-  ಪ್ರೀತಿ ಭಟ್‌ ಗುಣವಂತೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹಬ್ಬ ಬಂತೆದರೆ ಸಾಕು, ಏನು ಮಾಡುವುದು? ಎಂಬುದು ಹೆಂಗಸರಿಗೆ ಯಾವಾಗಲೂ ಇರುವ ಸಮಸ್ಯೆ. ಮಾಡಿದ್ದೇ ಮಾಡಿದರೆ ಮನೆಯಲ್ಲಿ ತಿನ್ನುವವರು ಯಾರು ಇಲ್ಲ. ಎಲ್ಲರೂ ಏನಾದರೂ...

  • ತಮಿಳನಾಡಿನಲ್ಲಿ ವಿಶೇಷವಾಗಿರುವ ಮಾಲಾಡು ಹಬ್ಬಗಳ ಸಮಯದಲ್ಲಿ ಮಾಡುತ್ತಾರೆ. ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ತಿಂಡಿ ಇದಾಗಿದೆ. ಮಾಡುವ ವಿಧಾನ ಮೊದಲು...

  • ನಾಗರಪಂಚಮಿಗೆ ತುಳುನಾಡಿನಲ್ಲಿ ವಿಶೇಷವಾದ ಪ್ರಾಮುಖ್ಯತೆಯಿದೆ. ನಾಗದೇವರನ್ನು ಆರಾಧಿಸುವ ಈ ಹಬ್ಬದಲ್ಲಿ ಹಬ್ಬದೂಟಕ್ಕೂ ಅಷೇ ಪ್ರಾಮುಖ್ಯತೆಯಿದೆ. ಹಬ್ಬದ ಸಂದರ್ಭದಲ್ಲಿ...

  • ದೇಹಕ್ಕೆ ಬೇಕಾಗಿರುವ ಪೋಷಕಾಂಶವನ್ನು ಒದಗಿಸುವ ನಿಟ್ಟಿನಲ್ಲಿ ತರಕಾರಿಗಳು ನಮಗೆ ಹೆಚ್ಚು ಸಹಕಾರಿ. ದೇಹಕ್ಕೆ ಬೇಕಾದ ವಿಟಾಮಿನ್‌ಗಳನ್ನು ಪೂರೈಸುವ ಕೆಲಸವನ್ನು...

  • ಉಪ್ಪುನೀರಲ್ಲಿ ಹಾಕಿಟ್ಟ ಸೋಳೆಯನ್ನು ಚೆನ್ನಾಗಿ ತೊಳೆದು,ನೀರಿನಲ್ಲಿ 3ಗಂಟೆಗಳ ಕಾಲ ನೆನೆಸಿಡಬೇಕು.ಅದರಲ್ಲಿರುವ ಹೆಚ್ಚಿನ ಉಪಿನಾಂಶ ಕಡಿಮೆಯಾಗುತ್ತದೆ. ಅನಂತರ...

ಹೊಸ ಸೇರ್ಪಡೆ