ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಯಶಸ್ವಿ ಐದು ವರ್ಷ ಪೂರ್ಣಗೊಳಿಸುವುದೇ?

Team Udayavani, Nov 29, 2019, 4:53 PM IST

ಮಣಿಪಾಲ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಯಶಸ್ವಿ ಐದು ವರ್ಷ ಪೂರ್ಣಗೊಳಿಸುವುದೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಅದರಲ್ಲಿ ಆಯ್ದ ಕೆಲವೊಂದು ಈ ಕೆಳಗಿದೆ.

ಕೆ ಎಸ್ ಕೃಷ್ಣ; ಒಬ್ಬೂಬರದು ಒಂದ್ದೊಂದು ರೀತಿಯ ಸಿದ್ದಾಂತ, ಎತ್ತು ಎರಿಗೇಳೆದರೆ ಕೋಣ ನೀರಿಗೆ ಇಳಿದಂತೆ, ಆದ್ದರಿಂದ 5 ವರ್ಷ ಆಡಳಿತ ತುಂಬಾ ತುಂಬಾ ಅಸಾಧ್ಯ

ಲೋಕೇಶ್ ಅಕ್ರಿಕಟ್ಟೆ: ಈ ಸರ್ಕಾರ 5 ವರ್ಷ ಆಡಳಿತ ನಡೆಸುತ್ತದೆ. ಶಿವಸೇನೆಗೆ ಅಧಿಕಾರ ಸಿಗುತ್ತಾ ಇರುದು ಇದು ಮೊದಲ ಸಲ. ಕಾಂಗ್ರೆಸ್ ಮತ್ತು ಎನ್ ಸಿಪಿ ಗೆ ಬಿಜೆಪಿಯನ್ನು ಅಧಿಕಾರದಿಂದ ಇಳಿಸಬೇಕು.

ಮಂಗಳೂರು ಕುವರ; ಯಾವುದೇ ಕಾರಣಕ್ಕೂ ಕರ್ನಾಟಕದ ರೀತಿ ಆಗಬಾರದು. ಎಲ್ಲಾ ಮೂರು ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು 5 ವರ್ಷ ಚೆನ್ನಾಗಿ ಆಡಳಿತ ನೀಡಬೇಕು ಇದನ್ನು ನೋಡಿ ಬೋಢ ಕೊರಗಿ, ಕೊರಗಿ ಸಾಯಬೇಕು

ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಇಲ್ಲಾ. ಉದ್ಧವ್ ನ ಸಮಯಸಾಧಕತನದಿಂದ ಹುಟ್ಟಿದ ಈ ಸರ್ಕಾರ 1 ವರ್ಷ ನಿಂತರು ಹೆಚ್ಚು. ಯಾವುದೇ ಕನಿಷ್ಠ ಸಿದ್ದಾಂತವಿಲ್ಲದೆ ಕೇವಲ ಅಧಿಕಾರದ ಆಸೆಗೆ ರಚಿಸಿಕೊಂಡಿರುವ ಈ ಸರ್ಕಾರ ಯಾವುದೇ ರೀತಿಯಲ್ಲೂ ಮುಂದುವರಿಯೋಲ್ಲ. ಶಿವಸೇನೆ ಈ ಅವಕಾಶವಾದಿತನಕ್ಕೆ ಭಾರಿ ಬೆಲೆ ತೆರಲಿದೆ.

ವಾದಿರಾಜ ತಂತ್ರಿ: ಐದು ವರ್ಷ ಸರ್ಕಾರ ಇರುವುದು ಕಷ್ಟ ಇದೆ. ಏಕೆಂದರೆ ಉದ್ಧವ್ ಠಾಕ್ರೆ ಯಶಸ್ವಿ ಜನಪ್ರಿಯ ಆದ್ರೆ ಪವಾರ್ ಮತ್ತು ಕಾಂಗ್ರೆಸ್ ಗೆ ಮುಂದೆ ಬೆಳೆಯಲು ಕಷ್ಟ ಇರುವುದರಿಂದ ಅವರು ಬೆಳೆಯುವ ಲಕ್ಷಣಗಳು ಕಂಡರೆ ಅಲ್ಲಿಗೆ ಮುಳುಗಿಸುವ ಸಾದ್ಯತೆ ಇದೆ.ಮತ್ತು ಮರಾಠ ಮೀಸಲಾತಿ 80 ಘೋಷಣೆ ಉಳಿದ ರಾಜ್ಯದ ಜೊತೆ ಸಂಘರ್ಷ ಸಾಧ್ಯತೆ ಇದೆ.

ಮಾಸ್ತಿ ನಾಯಕ್: ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಿದ ಬಿಜೆಪಿ ಚಾಳಿ ಅಲ್ಲಿ ಮುಂದುವರೆಯದಿದ್ದರೆ ಗ್ಯಾರಂಟಿ ಮಹಾರಾಷ್ಟ್ರದ ಮೈತ್ರಿ ಸರಕಾರ 5 ವರ್ಷಗಳ ಕಾಲ ಪೂರ್ಣ ಆಡಳಿತ ನಡೆಸಿ ಮುಂದೆ ಮತ್ತೆ ಅಧಿಕಾರಕ್ಕೂ ಬರುತ್ತದೆ . ಈ ಬಿಜೆಪಿ ಮಂದಿಗೆ ಅಧಿಕಾರ ಇಲ್ಲಾ ಅಂದ್ರೆ ಅವರಹತ್ತಿರ ಸರಿಯಾಗಿ ಉಸಿರಾಡಲೂ ಕೂಡ ಆಗೊದಿಲ್ಲ ಅನ್ನೊದು ಗ್ಯಾರಂಟಿ ಆಗಿದೆ .

ಸುರೇಶ್: ಜಗಳ ಆಡದೇ ಉತ್ತಮ ವಾದ ಆಡಳಿತ ಕೊಟ್ಟರೆ ಖಂಡಿತ ಇರುತ್ತದೆ. ಇಲ್ಲ ಅಂದರೆ ಜಿಂತಾತ ಜಿಂತಾತನೇ.

ಬಸವರಾಜ ಮಸೊತಿ; ಶಿವಸೇನಾ ಪಕ್ಷದ ತತ್ವ ಸಿದ್ಧಾಂತಗಳು ಅರಬಿ ಸಮುದ್ರದ ಪಾಲಾಯಿತು.ಬೆಳಗಾಂವಿ ಮರಾಠಿಗರ ಮೇಲೆ ರಾಜಕೀಯ ಮಾಡುವ ಶಿವಸೇನಾ ಗಡಿವಿವಾದ ಬಗೆಹರಿಸಲು ಮುಂದಾಗಬೇಕು. ಶರದ ಪವಾರ ಯಾವಾಗ ಸರ್ಕಾರ ಬಿಳಿಸುತ್ತಾರೆ ತಿಳಿಯುವುದಿಲ್ಲ.

ನಿತ್ಯಾನಂದ ಬ್ರಹ್ಮಾವರ್;ಆರೇ ತಿಂಗಳಲ್ಲಿ ಹಲವಾರು ವಿಷಯಗಳಲ್ಲಿ ಭಿನ್ನಮತದಿಂದಾಗಿ “ಹಿಂದೂ ಸಿದ್ಧಾಂತ” ಕೈ ಬಿಡಲು ಸಾಧ್ಯವಿಲ್ಲ ಎಂಬ ನೆಪದಿಂದ ಮತ್ತೆ ಎನ್ ಡಿಎಗೆ ವಾಪಾಸಾಗದಲಿದೆ ಶಿವಸೇನೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ