ಗುಡ್ಡಗಾಡಿನ ಕಸರತ್ತಿಗೆ, ಹೀರೋ ಎಕ್ಸ್‌ ಪಲ್ಸ್‌ 200

ಟಾಪ್‌ ಗೇರ್‌

Team Udayavani, May 13, 2019, 6:15 AM IST

ಎಕ್ಸಪಲ್ಸ್‌ 200 ಬೈಕ್‌ಗೆ ಸ್ಟೀಲ್‌ ಎಂಜಿನ್‌ ಗಾರ್ಡ್‌ ಇದೆ. ಇದರಿಂದ ಕೊರಕಲು ಪ್ರದೇಶಗಳಲ್ಲಿ ಹೋಗುವಾಗ ಎಂಜಿನ್‌ಗೆ ಹಾನಿಯಾಗುವುದನ್ನು ತಪ್ಪಿಸಬಹುದು. ಈ ಬೈಕ್‌ 210 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿದೆ. ಹಾಗಾಗಿ, ಗುಡ್ಡುಗಾಡು ಪ್ರದೇಶದಲ್ಲೂ ಸುಗಮವಾಗಿ ಚಾಲನೆ ಮಾಡಬಹುದು…

ಅಡ್ವೆಂಚರ್‌ ಅಂದರೆ ಈಗಿನ ಜಮಾನಾದ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಬೈಕ್‌ ರೈಡ್‌ ಅಂದರೆ ಯುವಕರು ಹುಚ್ಚೆದ್ದು ಕುಣಿಯುತ್ತಾರೆ. ಭಾರತದಲ್ಲಿ ಅಡ್ವೆಂಚರ್‌ ಬೈಕ್‌ಗಳು ಕಡಿಮೆ. ಹಿಮಾಲಯನ್‌ ಅಡ್ವೆಂಚರ್‌ ಬೈಕ್‌ ಮಾರುಕಟ್ಟೆಗೆ ಬಂದಿದ್ದು ಬಿಟ್ಟರೆ, ಬೇರೆ ಭಾರತೀಯ ಬೈಕ್‌ಗಳು ಬಂದಿಲ್ಲ.

ಈ ಮೊದಲು ಹೀರೋ ಕಂಪನಿ, ಇಂಪಲ್ಸ್‌ ಹೆಸರಿನ 150 ಸಿಸಿ ಅಡ್ವೆಂಚರ್‌ ಮಾದರಿಯ ಬೈಕನ್ನು ಮಾರುಕಟ್ಟೆಗೆ ಬಿಟ್ಟಿತ್ತಾದರೂ ಬಳಿಕ ಹೋಂಡಾದೊಂದಿಗೆ ಒಪ್ಪಂದದಿಂದ ಬೇರ್ಪಟ್ಟ ಬಳಿಕ 2016ರಲ್ಲಿ ಅದು ತೆರೆಮರೆಗೆ ಸರಿಯಿತು.

ಇಂಪಲ್ಸ್‌ ಬೈಕ್‌ಗೆ ಒಂದಷ್ಟು ಬೇಡಿಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅದೇ ಮಾದರಿಯ ಸ್ವಂತ ವಿನ್ಯಾಸದ ಬೈಕ್‌ ಅನ್ನು ಹೀರೋ ಮೊನ್ನೆಯಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಬೈಕ್‌ನ ಹೆಸರನ್ನು ಅದು ಎಕ್ಸ್‌ಪಲ್ಸ್‌ 200 ಎಂದು ಇಟ್ಟಿದ್ದು ಈ ಹಿಂದಿನ ದಿಲ್ಲಿ ಮೋಟಾರ್‌ ಶೋದಲ್ಲಿ ಇದನ್ನು ಪ್ರದರ್ಶಿಸಿತ್ತು.

ಹೇಗಿದೆ ಬೈಕ್‌?
ಇದು 200 ಸಿಸಿ ಬೈಕ್‌, ಎತ್ತರಿಸಿದ ಶಾಕ್ಸ್‌ಗಳು, ದೊಡ್ಡ ಇಂಧನ ಟ್ಯಾಂಕ್‌, ಡಿಜಿಟಲ್‌ ಮೀಟರ್‌, ಸಿಂಗಲ್‌ ಚಾನೆಲ್‌ ಎಬಿಎಸ್‌ ವ್ಯವಸ್ಥೆ, ಸುಧಾರಿತ ಬ್ರೇಕಿಂಗ್‌, ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್‌ಇಡಿ ಲೈಟ್‌ಗಳನ್ನು ಇದು ಹೊಂದಿದೆ. ಸೀಟುಗಳು ಉದ್ದವಿದ್ದು, ಹಿಂದಿನ ಗ್ರ್ಯಾಬ್‌ರೈಲ್‌ನಲ್ಲಿ ಟೂರಿಂಗ್‌ ವೇಳೆ ಸರಕುಗಳನ್ನು ಇಡುವಂತಿದೆ.

ಸೈಲೆನ್ಸರ್‌ ಅನ್ನು ಎತ್ತರಿಸಿ ಕೊಡಲಾಗಿದ್ದು, ನೀರಿರುವ ಸ್ಥಳದಲ್ಲೂ ನಿರಾಯಾಸ ಚಾಲನೆ ಸಾಧ್ಯ. ಎಲ್ಲದಕ್ಕಿಂತ ಹೆಚ್ಚಾಗಿ 210 ಎಂ.ಎಂ. ಗ್ರೌಂಡ್‌ ಕ್ಲಿಯರೆನ್ಸ್‌ ನೀಡಲಾಗಿದೆ. ಇದರಿಂದ ಕಠಿಣ ಗುಡ್ಡಗಾಡಿನ ಪ್ರದೇಶದಲ್ಲೂ ಸುಗಮವಾಗಿ ಬೈಕ್‌ ಚಾಲನೆ ಸುಗಮವಾಗಿ ಮಾಡಬಹುದು.

ಅನುಕೂಲಗಳು
ಸ್ಟೀಲ್‌ ಎಂಜಿನ್‌ಗಾರ್ಡ್‌ ಇದೆ. ಇದರಿಂದ ಕೊರಕಲು ಪ್ರದೇಶಗಳಲ್ಲಿ ಸವಾರಿ ವೇಳೆ ಎಂಜಿನ್‌ಗೆ ಆಗುವ ಹಾನಿ ತಪ್ಪಿಸಬಹುದು. ಎಲ್‌ಇಡಿ ಲೈಟ್‌ಗಳು ಪ್ರಕಾಶಮಾನವಾಗಿವೆ.

ಮುಂಭಾಗ 190 ಎಂ.ಎಂ. ಮತ್ತು ಹಿಂಭಾಗ 170 ಎಂ.ಎಂ.ನ ಸಸ್ಪೆನ್ಷನ್‌ ಇದ್ದು ಆರಾಮದಾಯಕವಾಗಿದೆ. ಹಿಂಭಾಗ 21 ಇಂಚಿನ ಟಯರ್‌ ಮತ್ತು ಮುಂಭಾಗ 18 ಇಂಚಿನ ಸಿಎಟ್‌ ಟಯರ್‌ ಇದ್ದು ಹೆಚ್ಚು ಗ್ರಿಪ್‌ ಹೊಂದಿದೆ. ಬ್ರೇಕಿಂಗ್‌ಗಾಗಿ ಹಿಂಭಾಗದಲ್ಲಿ 220 ಎಂ.ಎಂ. ಡಿಸ್ಕ್ ಮತ್ತು ಮುಂಭಾಗದಲ್ಲಿ 276 ಎಂ.ಎಂ. ಡಿಸ್ಕ್ ಹೊಂದಿದೆ. ಒಟ್ಟು 154 ಕೆ.ಜಿ. ಹೊಂದಿದ್ದು ಹ್ಯಾಂಡ್ಲಿಂಗ್‌ಗೆ ಅನುಕೂಲಕರವಾಗಿದೆ.

ಎಂಜಿನ್‌ ಸಾಮರ್ಥ್ಯ
199.6 ಸಿಸಿಯ 2 ವಾಲ್ವ್ ನ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಇದಕ್ಕಿದೆ. 18.4 ಬಿಎಚ್‌ಪಿ ಶಕ್ತಿ ಮತ್ತು 17.1 ಎನ್‌.ಎಂ.ಟಾರ್ಕ್‌ ಇದರಲ್ಲಿದೆ. 5 ಸ್ಪೀಡ್‌ ಗಿಯರ್‌ ಬಾಕ್ಸ್‌ , ಫ್ಯೂಯಲ್‌ ಇಂಜೆಕ್ಷನ್‌ ಸಿಸ್ಟಂ ಹೊಂದಿದೆ. ಲೆಕ್ಕಾಚಾರ ಹಾಕುವುದಾದರೆ 200 ಸಿಸಿ ಬೈಕ್‌ಗೆ ಈ ಸಾಮರ್ಥ್ಯ ಕಡಿಮೆಯೇ. ಆದರೂ ಹೀರೋ ತನ್ನ ಮಾರುಕಟ್ಟೆ ಪ್ಲಾನ್‌ಗೆ ಅನುಗುಣವಾಗಿ ಬೈಕ್‌ ಅನ್ನು ಹೀಗೆ ರೂಪಿಸಿದೆ.

ತಾಂತ್ರಿಕ ಮಾಹಿತಿ
199.6 ಸಿಸಿ
18.4 ಬಿಎಚ್‌ಪಿ ಶಕ್ತಿ
17.1 ಎನ್‌.ಎಂ.ಟಾರ್ಕ್‌
ಸಿಂಗಲ್‌ ಚಾನೆಲ್‌ ಎಬಿಎಸ್‌
ಫ್ಯೂಯಲ್‌ ಇಂಜೆಕ್ಷನ್‌
ಡಿಜಿಟಲ್‌ ಮೀಟರ್‌

— ಈಶ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ