ಆಂಡ್ರಾಯ್ಡ್ 10: ಇದರಲ್ಲಿರುವ ಹೊಸ ಫೀಚರ್ಸ್ ಯಾವುದು ಗೊತ್ತಾ ?

Team Udayavani, Aug 26, 2019, 8:00 AM IST

ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಹಲವು ಅಪ್ ಡೇಟ್ ವರ್ಷನ್ ಗಳನ್ನು ಈಗಾಗಲೇ ಕಂಡಿದೆ. ಇತ್ತೀಚಿಗೆ ಅಪ್ ಡೇಟ್ ಆದ  ಹೊಸ ಆವೃತ್ತಿಯನ್ನು ಆಂಡ್ರಾಯ್ಡ್ ಕ್ಯೂ ಎಂದು ಕರೆಯಲಾಗಿತ್ತಾದರೂ ಅಧಿಕೃತವಾಗಿ ಅಂಡ್ರಾಯ್ಡ್ 10 ಎಂದು ಹೆಸರಿಸಲಾಗಿದೆ.

ಇದರ ಮುಂದಿನ ಅವೃತ್ತಿ ಆಂಡ್ರಾಯ್ಡ್ 11 ಓಎಸ್ ಆಗಿರಲಿದೆ . ಆಂಡ್ರಾಯ್ಡ್ 10ರ ಲೋಗೋ ಕೂಡ ಬದಲಾಗಿದ್ದು  ಗ್ರೀನ್ ನಿಂದ ಬ್ಲ್ಯಾಕ್ ಗೆ ಬದಲಾಗಿದೆ .

ಆಂಡ್ರಾಯ್ಡ್ 10 ನಲ್ಲಿ ಸಿಗುವ ಪ್ರಮುಖ ಫೀಚರ್ಸ್ ಗಳು:

1) ಲೊಕೇಶನ್  ಅನುಮತಿ ಆಯ್ಕೆ:  ಇಂದಿನ ಬಹುತೇಕ  ಆಂಡ್ರಾಯ್ಡ್ ಆ್ಯಪ್ ಗಳು ಲೊಕೇಶನ್ ಎನೆಬಲ್ ಮಾಡುವಂತೆ ನೋಟಿಫಿಕೇಶನ್ ಕಳುಹಿಸುತ್ತವೆ. ಬಳಕೆದಾರರು ಸಹ ಆ್ಯಕ್ಸಸ್ ನೀಡಿರುತ್ತಾರೆ. ಅದರೂ ಆ್ಯಪ್ ಬಳಸದಿದ್ದ ಸಂದರ್ಭದಲ್ಲಿ ಕೂಡ ಬ್ಯಾಕ್ ಗ್ರೌಂಡ್ ನಲ್ಲಿ  ಲೊಕೇಶನ್ ಟ್ರ್ಯಾಕ್ ಆಗಿ ಖಾಸಗಿ ಮಾಹಿತಿ ಸೋರಿಕೆಯಾಗುವ ಅಪಾಯಗಳೇ ಹೆಚ್ಚಿರುತ್ತವೆ. ಆದರೆ ಆಂಡ್ರಾಯ್ಡ್ 10 ಓಎಸ್ ಬಳಕೆದಾರರಿಗೆ ಲೊಕೇಶನ್ ಕಂಟ್ರೋಲ್ ಮಾಡುವ ಹೆಚ್ಚಿನ ಅವಕಾಶಗಳನ್ನು ಒದಗಿಸಲಿದ್ದು ಆ್ಯಪ್ ಬಳಸದಿದ್ದಾಗೆ ಲೊಕೇಶನ್ ಟ್ರ್ಯಾಕ್ ಮಾಡುವುದಿಲ್ಲ.

2 ) ಹೊಸ ಪ್ರೈವಸಿ ಫೀಚರ್: ಕೆಲವು ಆ್ಯಪ್ ಗಳು ಅನಗತ್ಯವಾಗಿ ಕಾಂಟ್ಯಾಕ್ಟ್ ಮತ್ತು ಗ್ಯಾಲರಿ ಆ್ಯಕ್ಸಸ್ ಕೇಳುತ್ತವೆ. ಇದನ್ನು ನಿಯಂತ್ರಿಸುವ ಆಯ್ಕೆ ಆಂಡ್ರಾಯ್ಡ್ 10 ನಲ್ಲಿದೆ. ಸ್ಮಾರ್ಟ್ ಫೋನ್ ನಲ್ಲಿ ಏನೇ ಬದಲಾವಣೆ ಮಾಡಿದರೂ ಬಳಕೆ್ದಾರರ ಆನುಮತಿ ಕೇಳುವ ಆಯ್ಕೆಯೂ ಇರಲಿದೆ.

3) ವಿಶೇಷ ಆಡಿಯೋ ಫೀಚರ್: ಆಂಡ್ರಾಯ್ಡ್ 10 ಓಎಸ್ ನಲ್ಲಿ ಒಂದೇ ವೇಳೆಗೆ ಆಡಿಯೋ ಕೇಳುವ  ಮತ್ತು  ಆಡಿಯೋ ರೆಕಾರ್ಡ್ ಮಾಡಬಹುದಾದ ಆಯ್ಕೆಯೂ ಇರಲಿದೆ. ವಾಯ್ಸ್ ರೆಕಾರ್ಡಿಂಗ್ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಒಟ್ಟಿಗೆ ಬಳಸಬಹುದಾಗಿದೆ.

4) ಬಬಲ್ಸ್ ನೋಟಿಫಿಕೇಶನ್ : ನೋಟಿಫಿಕೇಶನ್ ಗಳ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ಬಬಲ್ಸ್ ನೋಟಿಫೀಕೇಶನನ್ನು ಪರಿಚಯಿಸಲಾಗಿದೆ. ಇದರಲ್ಲಿ ಮಲ್ಟಿ ಟಾಸ್ಕ್ಗಳ ನಡುವೆಯೂ ಕೂಡ ನೋಟಿಫಿಕೇಶನನ್ನು ನೋಡುವ ಆಯ್ಕೆ ಇರಲಿದೆ. ಅದರ ಜೊತೆಗೆ ನೋಟಿಫಿಕೇಶನನ್ನು ಆಫ್  ಮಾಡುವ ಸ್ವತಂತ್ರ್ಯವೂ ಬಳಕೆದಾರರಿಗಿದೆ.

5) ಬ್ಯಾಟರಿ ಉಳಿಕೆಗೆ ಡಾರ್ಕ್ ಮೋಡ್ ಆಯ್ಕೆ: ಹೊಸ ಆಂಡ್ರಾಯ್ಡ್ 10 ಓಎಸ್ ನಲ್ಲಿ ಡಾರ್ಕ್ ಮೋಡ್ ಆಯ್ಕೆ ಇರಲಿದ್ದು ಇದು ಬ್ಯಾಟರಿ ಉಳಿಕೆಗೆ ಸಹಾಯ ಮಾಡುತ್ತದೆ. ಅದರ ಜೊತೆಗೆ ರಾತ್ರಿ ವೇಳೆ ಮೊಬೈಲ್ ಬಳಸುವಾಗ ಇರುವ ಹೆಚ್ಚಿನ  ಬ್ರೈಟ್ನೆಸ್ ಗೆ ಮುಕ್ತಿ ನೀಡುತ್ತದೆ.

6) QR ಕೋಡ್ ಮತ್ತುWIFI : ಪ್ರಸ್ತುತ ಸ್ಮಾರ್ಟ್ ಫೋನ್ ಗಳಲ್ಲಿ WIFI ಕನೆಕ್ಟ್  ಮಾಡಿಕೊಳ್ಳಬೇಕಿದ್ದರೆ ಪಾಸ್ ವರ್ಡ್ ಆಗತ್ಯವಾಗಿ ಬೇಕು. ಆದರೆ ಹೊಸ ಆಂಡ್ರಾಯ್ಡ್ 10 ಓಎಸ್ ನಲ್ಲಿ ಪಾಸ್ ವರ್ಡ್ ಬದಲು QR ಕೋಡ್ ಕಾಣಿಸಿಕೊಳ್ಳಲಿದೆ. ಇದನ್ನು ಸ್ಕ್ಯಾನ್ ಮಾಡಿ ಸುಲಭವಾಗಿ ವೈಫೈ ಕನೆಕ್ಟ್ ಮಾಡಿಕೊಳ್ಳಬಹುದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ