ವಾಟ್ಸ್‌ ಆ್ಯಪ್‌ಗೆ ಮತ್ತೂಂದು ವೈರಸ್‌ ದಾಳಿ

Team Udayavani, Nov 18, 2019, 6:36 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ವಾಟ್ಸ್‌ಆ್ಯಪ್‌ನಲ್ಲಿ ಇಸ್ರೇಲ್‌ ಮೂಲದ ಪೆಗಾಸಸ್‌ ವೈರಸ್‌ ದಾಳಿ ಪ್ರಕರಣ ಮಾಸುವ ಮುನ್ನವೇ, ಮತ್ತೊಂದು ಮಾದರಿಯ ಸೈಬರ್‌ ದಾಳಿಯ ಭೀತಿ ಆವರಿಸಿದೆ. ಅಜ್ಞಾತ ಮೊಬೈಲ್‌ ಸಂಖ್ಯೆಯಿಂದ ಎಂಪಿ 4 ಮಾದರಿಯ ವೀಡಿಯೋ ತುಣುಕುಗಳನ್ನು ವಾಟ್ಸ್‌ಆ್ಯಪ್‌ ಜಾಲದಲ್ಲಿ ಹರಿಬಿಡಲಾಗುತ್ತಿದೆ.

ಇದು ಬಳಕೆದಾರರ ಖಾತೆಗೆ ಬಂದು, ಖಾತೆದಾರರು ಆ ವೀಡಿಯೋ ಪ್ಲೇ ಮಾಡಿದರೆ, ತತ್‌ಕ್ಷಣವೇ ಅದರಲ್ಲಿನ ವೈರಸ್‌ಗಳು ಮೊಬೈಲ್‌ ಹೊಕ್ಕು ಮೊಬೈಲ್‌ನಲ್ಲಿನ ಮಾಹಿತಿ ಕದಿಯುತ್ತವೆ ಎಂದು ಹೇಳಲಾಗಿದೆ. ‘ಭಾರತೀಯ ಕಂಪ್ಯೂಟರ್‌ಗಳ ತುರ್ತು ಪರಿಸ್ಥಿತಿ ಸ್ಪಂದನಾ ಪಡೆ (ಸಿಇಆರ್‌ಟಿ)’, ಈ ಮಾದರಿಯ ವೈರಸ್‌ ದಾಳಿಯು ಅತ್ಯಂತ ತೀವ್ರವಾದ ಘಾಸಿ ಮಾಡುವ ವೈರಸ್‌ಗಳ ಪಟ್ಟಿಗೆ ಇದನ್ನು ಸೇರಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ