BMW ಸೆಡಾನ್

Team Udayavani, Aug 26, 2019, 3:05 AM IST

ಐಷಾರಾಮಿ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯೂ, ನಗರ ಪ್ರದೇಶದ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಮೂರು ಸೆಡಾನ್‌ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಿಎಂಡಬ್ಲ್ಯೂ 320ಡಿ ನ್ಪೋರ್ಟ್ಸ್, ಬಿಎಂಡಬ್ಲ್ಯೂ 320ಡಿ ಲಕ್ಸುರಿಲೈನ್‌ ಹಾಗೂ ಬಿಎಂಡಬ್ಲ್ಯೂ 330ಐ ಎಮ್‌ ನ್ಪೋರ್ಟ್ಸ್ ಹೀಗೆ ಮೂರು ಮಾದರಿಯಲ್ಲಿ 3-ಸಿರೀಸ್‌ ಕಾರುಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಜಗತ್ತಿನ ಪತಿಷ್ಠಿತ ವಾಹನ ತಯಾರಿಕಾ ಸಂಸ್ಥೆ ಬಿ.ಎಂ.ಡಬ್ಲ್ಯೂ ಐಷಾರಾಮಿ ಓಡಾಟವನ್ನು ಇನ್ನಷ್ಟು ಉನ್ನತೀಕರಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಕಾರುಗಳಿಂದ, ಗ್ರಾಹಕರು ತಮ್ಮ ನಿರೀಕ್ಷೆಗೂ ಮೀರಿದ ಚಾಲನಾನುಭವ ಪಡೆಯಬಹುದಾಗಿದೆ. ಬಿಎಂಡಬ್ಲ್ಯೂ ಸಂಸ್ಥೆ ಕೂಡ, ಐಷಾರಾಮಿ ಓಡಾಟ ಬಯಸುವ ನಗರ ಪ್ರದೇಶದ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡೇ 3-ಸಿರೀಸ್‌ ಕಾರುಗಳನ್ನು ತಯಾರಿಸಿದೆ. ಇತ್ತೀಚಿಗಷ್ಟೆ ಗುರುಗ್ರಾಮ್‌ನ ಥ್ರಿಲ್‌ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯೂ ಇಂಡಿಯಾದ ಅಧ್ಯಕ್ಷ ರುದ್ರತೇಜ್‌ ಸಿಂಗ್‌ ಈ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.

ಅತ್ಯಾಧುನಿಕ ಎಂಜಿನಿಯರಿಂಗ್‌ ತಂತ್ರಜ್ಞಾನ ಬಳಸಿ ಕಾರಿನ ಒಳವಿನ್ಯಾಸ ಮಾಡಲಾಗಿದೆ. ಇನ್ನೋವೇಟಿವ್‌ ಟೆಕ್ನಾಲಜೀಸ್‌ ವಿನ್ಯಾಸವು ಅತ್ಯಂತ ಆಕರ್ಷಕವಾಗಿದೆ. ಹೊರ ಮೇಲ್ಮೆ„ಕೂಡ ನ್ಪೋರ್ಟ್ಸ್ ಲುಕ್‌ನಲ್ಲಿದೆ. ಬಿಎಂಡಬ್ಲ್ಯೂ ಸಂಸ್ಥೆಯ 3- ಟರ್ಬೋ ಇಂಜಿನ್‌ ಹೊಂದಿರುವ ಈ ಕಾರುಗಳು, ಪೆಟ್ರೋಲ್‌ ಹಾಗೂ ಡೀಸೆಲ್‌ ಎರಡು ವಿಧದಲ್ಲೂ ಲಭ್ಯವಿದೆ. ಬಿಎಂಡಬ್ಲ್ಯೂ 320ಡಿ ನ್ಪೋರ್ಟ್ಸ್ ಹಾಗೂ 320ಡಿ ಲಕ್ಸುರಿ ಲೈನ್‌ ವಿನ್ಯಾಸದ ಕಾರಿಗೆ ಡೀಸೆಲ್‌ ಅಥವಾ ಪೆಟ್ರೋಲ್‌ ಬಳಸಬಹುದು. ಬಿಎಂಡಬ್ಲ್ಯೂ330ಐ ಎಂ ನ್ಪೋರ್ಟ್ಸ್ ಕಾರು ಪೆಟ್ರೋಲ್‌ ಬಳಕೆಯಲ್ಲಿ ಲಭ್ಯವಿದೆ.

ಬೆಲೆ ಎಷ್ಟು?: ಮಿನರಲ್‌ ಗ್ರೇ (ಕಂದು) ಮತ್ತು ಮೆಡಿಟೇರಿಯನ್‌ ಬ್ಲೂ ಮಿಶ್ರಿತ(ನೀಲಿ), ಕಪ್ಪು ಹಾಗೂ ಬಿಳಿ ಬಣ್ಣದ ಮೇಲ್ಮೆ„ ವಿನ್ಯಾಸವಿದೆ. ಬಿಎಂಡಬ್ಲೂ 320ಡಿ ನ್ಪೋರ್ಟ್ಸ್- 41.40 ಲಕ್ಷ ರೂ, 320ಡಿ ಲಕ್ಸುರಿ ಲೈನ್‌-46.90 ಲಕ್ಷ ರೂ.ಹಾಗೂ ಎಂ ನ್ಪೋರ್ಟ್ಸ್ 47.90 ಲಕ್ಷ ರೂ. ಎಕ್ಸ್‌ ಶೋ ರೂಂ ಬೆಲೆಯಾಗಿದೆ. ಚೆನ್ನೈನ ಬಿಎಂಡಬ್ಲ್ಯೂ ಗ್ರೂಪ್‌ ಪ್ಲಾಂಟ್‌ನಲ್ಲಿ ತಯಾರಾಗಿರುವ ಆಲ್‌ ನ್ಯೂ ಬಿಎಂಡಬ್ಲ್ಯೂ 3 ಶ್ರೇಣಿ ಭಾರತದ ಎಲ್ಲ ಬಿಎಂಡಬ್ಲ್ಯೂ ಮಳಿಗೆಗಳಲ್ಲಿ ದೊರೆಯಲಿದೆ.

ಹಣಕಾಸು ಸೌಲಭ್ಯ: 3- ಸೀರೀಸ್‌ ಗ್ರಾಹಕರ ಆದ್ಯತೆಯ ಹಣಕಾಸು ಯೋಜನೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ. ಅದಕ್ಕೆ ಬಿಎಂಡಬ್ಲ್ಯೂ ಇಂಡಿಯಾ ಹಣಕಾಸು ಸೇವೆ ಸುಲಭವಾಗಿ ನೆರವಾಗುತ್ತದೆ. ಬಿಎಂಡಬ್ಲ್ಯೂ ಸರ್ವಿಸ್‌ ಇನ್‌ಕ್ಲೂಸಿವ್‌ ಮತ್ತು ಬಿಎಂಡಬ್ಲ್ಯೂ ಸರ್ವಿರ್ಸ್‌ ಇನ್‌ಕ್ಲೂಸಿವ್‌ ಪ್ಲಸ್‌ಆಲ್‌ 3-ಸಿರೀಸ್‌ ಮಾಲೀಕತ್ವದ ವೆಚ್ಚ ಕಡಿಮೆ ಮಾಡಲಿದೆ. ಗ್ರಾಹಕರ ಅವಧಿ, ಆದ್ಯತೆಯ ಮೈಲೇಜ್‌ ಆಧರಿಸಿ ಸರ್ವಿಸ್‌ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ.

ವಿಶೇಷ ಸೌಲಭ್ಯಗಳು: ಆಟೊಮ್ಯಾಟಿಕ್‌ ಏರ್‌ಕಂಡೀಷನಿಂಗ್‌ ಥ್ರೀ-ಝೋನ್‌ ಇನ್ನಷ್ಟು ಖುಷಿ ನೀಡುತ್ತದೆ. ಗೆಸ್ಟರ್‌ ಕಂಟ್ರೋಲ್‌, ವೈರ್‌ಲೆಸ್‌ಚಾರ್ಜಿಂಗ್‌ ಮತ್ತು ವೈರ್‌ ಲೆಸ್‌ ಆಪಲ್‌ ಕಾರ್‌ಪ್ಲೇ, ಮಾಡ್ರನ್‌ಕಾಕ್‌ಪಿಟ್‌ಕಾನ್ಸೆಪ್ಟ್, ಬಿಎಂಡಬ್ಲ್ಯೂ ಲೈವ್‌ ಕಾಕ್‌ಪಿಟ್‌, ಅತ್ಯಾಧುನಿಕ ಬಿಎಂಡಬ್ಲ್ಯೂ ಆಪರೇಟಿಂಗ್‌ ಸಿಸ್ಟಂ 7.0, 3ಡಿ ನ್ಯಾವಿಗೇಷನ್‌, ಸ್ಟೀರಿಂಗ್‌ ವ್ಹೀಲ್‌ ಹಿಂಬದಿ 12.3 ಇಂಚು ಡಿಜಿಟಲ್‌ ಇನ್ಸ್‌ಟ್ರಾಮೆಂಟ್‌ ಡಿಸ್‌ಪ್ಲೆ, 10.25 ಇಂಚು ಕಂಟ್ರೋಲ್‌ ಡಿಸ್‌ಪ್ಲೆ, ಆಟೊ ಸ್ಟಾರ್ಟ್‌-ಸ್ಟಾಪ್‌, ಬ್ರೇಕ್‌-ಎನರ್ಜಿ ರೀಜನರೇಷನ್‌, ಎಲೆಕ್ಟ್ರಾನಿಕ್‌ ಪವರ್‌ ಸ್ಟೀರಿಂಗ್‌ ಸೇರಿದಂತೆ ಹತ್ತಾರು ವಿನೂತನ ಆಯ್ಕೆಗಳನ್ನು ಇದು ಹೊಂದಿದೆ.

ಚಾಲಕನ ಧ್ವನಿಗೆ ಸ್ಪಂದಿಸುತ್ತೆ!: ಈ ಮೂರು ಕಾರುಗಳಿಗೂ ಧ್ವನಿಗೆ ಪ್ರತಿಕ್ರಿಯಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕಾರು ಚಾಲಕ ಸೆಟ್‌ ಮಾಡಿದ ತನ್ನ ಧ್ವನಿಯನ್ನು ಇದು ಗುರುತಿಸುತ್ತದೆ. ಚಾಲಕ ಕಾರಿನಲ್ಲಿ ಕುಳಿತು ಸ್ಟೇರಿಂಗ್‌ ಹಿಡಿದ ಬಳಿಕ ಸಂವಹನ ನಡೆಸಿದರೆ, ಆತನ ಧ್ವನಿಯನ್ನು ಗುರುತಿಸಿ ತಕ್ಷಣವೇ ಪ್ರತಿಕ್ರಿಯಿಸುತ್ತದೆ. ಅಲ್ಲದೇ, ಕಾರನ್ನು ಸ್ಪರ್ಶಿಸುವವರಿಗೂ ಎಚ್ಚರಿಸುತ್ತದೆ.

ಸ್ಮಾರ್ಟ್‌ ಪಾರ್ಕಿಂಗ್‌: ಕಾರಿನ ಹಿಂಭಾಗ ಮತ್ತು ಮುಂಭಾಗದಲ್ಲಿ ವಿಶೇಷ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಪಾರ್ಕಿಂಗ್‌ ಮಾಡುವ ಹಾಗೂ ಕಿರಿದಾದ ಸ್ಥಳದಲ್ಲಿ ಚಾಲನೆ ಮಾಡುವ ಸಂದರ್ಭದಲ್ಲಿ 50 ಮೀಟರ್‌ವರೆಗಿನ ದೃಶ್ಯಗಳನ್ನು ಸೆರೆಹಿಡಿದು, 50 ಮೀಟರ್‌ ಸ್ಥಳದಲ್ಲಿನ ವಸ್ತುಗಳನ್ನು ಚಾಲಕನ ಗಮನಕ್ಕೆ ತರುತ್ತದೆ. ಹಾಗೆಯೇ ಪಾರ್ಕಿಂಗ್‌ ಸಂದರ್ಭದಲ್ಲಿ ವಾಯ್ಸ ತಂತ್ರಜ್ಞಾನ ಬಳಸಿ ಸೂಕ್ತವಾದ ಸ್ಥಳದಲ್ಲಿ ಫ‌ರ್ಪೆಕ್ಟ್ ಪಾರ್ಕಿಂಗ್‌ ಮಾಡಬಹುದಾಗಿದೆ. ರಸ್ತೆಗಳ ಉಬ್ಬು, ತಗ್ಗುಗಳಲ್ಲೆಲ್ಲಾ ಕಾರು ಚಲಾಯಿಸುವಾಗ ಪ್ರಯಾಣಿಕರು ಓಲಾಡದಂತೆ ನಿಯಂತ್ರಿಸಿ ಸ್ಮೂತ್‌ ಅನುಭವವನ್ನು ನೀಡಲು, ಡ್ರೈವಿಂಗ್‌ ಕಂಫರ್ಟ್‌ ಲಿಫ್ಟ್‌ ಡ್ರ್ಯಾಂಪ್‌ ಕಂಟ್ರೋಲರ್‌ಅನ್ನು ಅಳವಡಿಸಿದೆ.

* ರಾಜು ಖಾರ್ವಿ ಕೊಡೇರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ