ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದ BSNL : ವ್ಯಾಲಿಡಿಟಿಯಲ್ಲಿ ಹೆಚ್ಚಳ, ಅಧಿಕ ಡೇಟಾ

Team Udayavani, Nov 8, 2019, 8:05 AM IST

ಮಣಿಪಾಲ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ನಷ್ಟದಲ್ಲಿದ್ದರು ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದ್ದು, ಗ್ರಾಹಕರಿಗೆ ಹೊಸ ಡೇಟಾ ಆಫರ್ ಒಂದನ್ನು ನೀಡಿದೆ. ಹೆಚ್ಚಿನ ಡೇಟಾ ಸೌಲಭ್ಯ ಜೊತೆಗೆ ಅಧಿಕ ವ್ಯಾಲಿಡಿಟಿ ಸೌಲಭ್ಯ ಸೇರಿದಂತೆ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ತನ್ನ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನಿನಲ್ಲೂ ಬದಲಾವಣೆಯನ್ನು ತಂದಿದ್ದು ಇದು ಗ್ರಾಹಕರ  ಉತ್ಸಾಹವನ್ನು ಹೆಚ್ಚಿಸಿದೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ತಮ್ಮ ಹಳೇಯ ಪ್ರೀಪೇಯ್ಡ್ ಪ್ಲ್ಯಾನ್ ​​​ವೊಂದನ್ನು ನವೀಕರಸಿ ಕೆಲವೊಂದು ಬದಲಾವಣೆಯನ್ನು ಮಾಡಿ, ಹೊಸ ಪರಿಷ್ಕೃತ ಪ್ಯಾಕ್ ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ ಸಂಸ್ಥೆ 1,699 ರೂ.ವಿನ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಷ್ಕರಿಸಿದೆ. 1,699ರೂ. ವಿನ ಪ್ರಿಪೇಯ್ಡ್​ ಪ್ಲಾನ್​ ಈ ಮೊದಲು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿತ್ತು. ಇದೀಗ ಪರಿಷ್ಕರಿಸಿ ಬಿಡುಗಡೆ  ಮಾಡಿದ ಪ್ಲಾನ್​ನಲ್ಲಿ ಹೆಚ್ಚುವರಿ  60 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಇದರಿಂದ ಇನ್ನು ಮುಂದೆ 425 ದಿನಗಳ ವ್ಯಾಲಿಡಿಟಿಯನ್ನು ಇರಲಿದೆ.

ಅದರ ಜೊತೆಗೆ ಗ್ರಾಹಕರು 1,6999 ರೂ. ವಿನ ಪ್ಲಾನ್ ರಿಚಾರ್ಜ್ ಮಾಡಿದರೆ ದಿನಕ್ಕೆ 2GB  ಇದ್ದ ಡೇಟಾವನ್ನು 3ಜಿಬಿ ಗೆ ಏರಿಸಲಾಗಿದೆ. ಅದರೊಂದಿಗೆ ಅನಿಯಮಿತ ಲೋಕಲ್ ಹಾಗೂ ಎಸ್​​ಟಿಡಿ ಕರೆ ಹಾಗೂ ದಿನಕ್ಕೆ 100 ಎಸ್ಎಮ್ಎಸ್ ಉಚಿತವಾಗಿ ದೊರೆಯಲಿದೆ. ಈ ಕೊಡುಗೆ ಸೀಮಿತ ಅವಧಿಯಾಗಿದ್ದು 30ನವೆಂಬರ್  2019 ರವರೆಗೆ ಮಾತ್ರ ಲಭ್ಯವಿರಲಿದೆ.

ಹಲವು ಗ್ರಾಹಕರು ವಾರ್ಷಿಕ ಅವಧಿಯ ಪ್ಲ್ಯಾನ್‌ಗಳನ್ನು ಹೆಚ್ಚಾಗಿ ಬಯಸುತ್ತಾರೆ. ಹೀಗಾಗಿಯೇ ಇತರೆ ಟೆಲಿಕಾಂಗಳು ಸಹ 1699ರೂ.ಗಳಿಗೆ ವಾರ್ಷಿಕ ಪ್ಲ್ಯಾನ್‌ ಪರಿಚಯಿಸಿವೆ. ಆದ್ರೆ ಖಾಸಗಿ ಟೆಲಿಕಾಂಗಳ ವಾರ್ಷಿಕ ಪ್ಲ್ಯಾನಿನಲ್ಲಿ 365 ದಿನಗಳ ವ್ಯಾಲಿಡಿಟಿ ನೀಡುತ್ತವೆ. ಉಳಿದಂತೆ ಪ್ರತಿದಿನ ಉಚಿತ ಡೇಟಾ(ಏರ್‌ಡೆಲ್ 1.4GB, ಜಿಯೋ1.5GB), ಉಚಿತ ಕರೆಗಳ ಸೌಲಭ್ಯ, ಉಚಿತ ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ನೀಡುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ