ಯೂಟ್ಯೂಬ್‌ ಮೂಲಕ ಸಂಪಾದಿಸಿ

Team Udayavani, Oct 2, 2019, 5:00 AM IST

ಈಗಿನ ಸಂದರ್ಭದಲ್ಲಿ ನಮಗೆ ಬೇಕಾದ ಹಾಗೆ ಕೆಲಸ ಸಿಗುವುದು ಬಲು ಕಷ್ಟ. ಒಂದಿಷ್ಟೂ ಸಂಪಾದನೆ ಮಾಡಬೇಕು, ಒಳ್ಳೆಯ ಉದ್ಯೋಗ ಪಡೆಯಬೇಕೆನ್ನುವುದು ಎಲ್ಲರಲ್ಲೂ ಇರುವಂತಹ ಕನಸು. ಆದರೆ ಇಂದು ಉದ್ಯೋಗ ಸಿಗಬೇಕಾದರೆ ಅಷ್ಟೇ ಸರ್ಕಸ್‌ ಮಾಡಬೇಕಾಗುತ್ತದೆ. ಸಧ್ಯದ ಬೆಳವಣಿಗೆಯಲ್ಲಿ ಸಿಕ್ಕ ಸಿಕ್ಕ ಕಂಪೆನಿಗಳಿಗೆ ರೆಸ್ಯೂಮ್‌ಗಳನ್ನು ಕಳುಹಿಸುವುದೇ ಕೆಲವರಿಗೆ ಒಂದು ಕೆಲಸವಾಗಿದೆ. ಈ ಪರಿಸ್ಥಿತಿಯಲ್ಲಿ ಯಾವುದನ್ನೂ ನಂಬುವಂತಿಲ್ಲ ಸ್ವಂತ ಸಾಮರ್ಥ್ಯವೊಂದನ್ನು ಬಿಟ್ಟು. ಇವತ್ತು ಅದೆಷ್ಟೋ ಜನರು ತಮ್ಮಲ್ಲಿರುವ ಕೌಶಲಗಳಿಂದಲೇ ಆರಾಮವಾಗಿ ಸಂಪಾದನೆ ಮಾಡುತ್ತಿದ್ದಾರೆ. ಅಂತಹ ಅನೇಕ ಆಯ್ಕೆಗಳು ನಮ್ಮ ನಡುವಲ್ಲಿದೆ. ಇಂತಹ ಕೆಟಗರಿಗೆ ಬೀಳುವಂಥದ್ದು ಯೂಟ್ಯೂಬರ್‌

ಕಾಲೇಜಿಗೆ ಹೋಗುತ್ತ ಒಂದಷ್ಟು ಸಂಪಾದನೆ ಮಾಡಬಯಸುವವರು ತಂತ್ರಜ್ಞಾನದ ಮೊರೆ ಹೋಗಬಹುದು. ಈ ತಂತ್ರಜ್ಞಾನ ಸಂಪಾದನೆಗೆ ಅನೇಕ ಅವಕಾಶಗಳನ್ನು ಒದಗಿಸುತ್ತಿವೆ. ಇವುಗಳಲ್ಲಿ ಒಂದು ಯೂಟ್ಯೂಬ್‌. ಯೂಟ್ಯೂಬ್‌ನಲ್ಲಿ ಸ್ವಂತ ಚಾನೆಲ್‌ ಆರಂಭಿಸಿ ನಿರಂತರವಾಗಿ ನಿಮಗೆ ತಿಳಿದಿರುವ ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡು ಹಣ ಗಳಿಸಬಹುದು. ಈ ಮೂಲಕ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಹಣ ಸಂಪಾದಿಸುವ ದಾರಿಯನ್ನು ಕಂಡುಕೊಳ್ಳಬಹುದು.

ನಿಮ್ಮದೇ ಯೂಟ್ಯೂಬ್‌ ಚಾನಲ್‌ ಮಾಡಿ
ಪ್ರತಿಯೊಬ್ಬರಲ್ಲೂ ಇಂದು ಸ್ಮಾರ್ಟ್‌ ಫೋನ್‌ ಇದೆ. ಸ್ಮಾರ್ಟ್‌ ಫೋನಿನಲ್ಲಿ ಗೂಗಲ್‌ ಅಕೌಂಟ್‌ ಮೂಲಕ ಯೂಟ್ಯೂಬ್‌ ಚಾನಲ್‌ ಅನ್ನು ಕ್ರಿಯೇಟ್‌ ಮಾಡಬಹುದು. ನಿಮಗೆ ತಿಳಿದಿರುವಂತಹ ಮತ್ತು ನೀವು ಕೌಶಲ ಹೊಂದಿರುವಂತಹ ವಿಷಯಗಳನ್ನು ಆಯ್ಕೆ ಮಾಡಿ ನಿಮ್ಮ ಯೂಟ್ಯೂಬ್‌ ಮೂಲಕ ಜನರಿಗೆ ಪ್ರಚುರ ಪಡಿಸಬಹುದು. ನೀವು ಕೊಡುವ ಕಂಟೆಂಟ್‌ ಗುಣಮಟ್ಟದ್ದಾಗಿದ್ದರೆ ಜನರು ನಿಮ್ಮ ಯೂಟ್ಯೂಬ್‌ ಚಾನಲ್‌ ಅನ್ನು ಅನುಸರಿಸುತ್ತಾರೆ.

ವಿಷಯದ ಆಯ್ಕೆ
ಯೂಟ್ಯೂಬ್‌ ನಲ್ಲಿ ಅನೇಕ ವಿಧದ ವೀಕ್ಷಕರು ಇದ್ದಾರೆ. ತಮಗೆ ಗೊತ್ತಿರದ ವಿಷಯಗಳ ಮೇಲೆ ಅವರು ನಿತ್ಯ ಯೂಟ್ಯೂಬ್‌ನಲ್ಲಿ ಮಾಹಿತಿ ಸಂಗ್ರಹಿಸುತ್ತಾ ಇರುತ್ತಾರೆ. ಹೀಗಾಗಿ ಜನರಿಗೆ ಮಾಹಿತಿ ನೀಡುವಂಥ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವೀಡಿಯೋಗಳನ್ನು ತಯಾರಿಸಿ ನಿಮ್ಮ ಚಾನೆಲ್‌ನಲ್ಲಿ ಹಂಚಿಕೊಳ್ಳಬಹುದು.

ಸಿನೆಮಾ ವಿಮರ್ಶೆ
ನೀವು ಯಾವೊಂದು ಸಿನೆಮಾವನ್ನು ಕೂಡ ತಪ್ಪದೆ ವೀಕ್ಷಿಸುತ್ತಿದ್ದೀರಿ ಮತ್ತು ವಿಮರ್ಶೆ ಮಾಡುವ ಕೌಶಲ ನೀವು ಹೊಂದಿರುವುದಾದರೆ ಮನೆಯಲ್ಲೇ ಕುಳಿತು ನೀವು ನೋಡಿಸ ಹೊಸ ಸಿನೆಮಾವನ್ನು ವಿಮರ್ಶೆ ಮಾಡಿ ಹಣ ಗಳಿಸಬಹುದು.

ತಂತ್ರಜ್ಞಾನ ಮಾಹಿತಿ
ನೀವು ತಂತ್ರಜ್ಞಾನದ ಬಗ್ಗೆ ಎಕ್ಸ್‌ಪರ್ಟ್‌ ಆಗಿದ್ದರೆ ನೀವು ಮನೆಯಲ್ಲೇ ಕುಳಿತು ತಂತ್ರಜ್ಞಾನದ ಬಗ್ಗೆ ಜನರಿಗೆ ನಿಮ್ಮ ಚಾನಲ್‌ ಮೂಲಕ ಸಂಕ್ಷಿಪ್ತವಾಗಿ ವಿವರಣೆ ನೀಡಬಹುದು. ಹೀಗೆ ಹತ್ತಾರು ವಿಷಯದ ಮೇಲೆ ನಿಮ್ಮಲ್ಲಿ ಅಡಗಿಕೊಂಡಿರುವ ಕೌಶಲವನ್ನು ಪರಿಗಣಿಸಿ ಯೂಟ್ಯೂಬ್‌ನಲ್ಲಿ ಹಣ ಗಳಿಸಬಹುದು.

ಹಣ ಗಳಿಕೆ ಹೇಗೆ
ನೀವು ಹಾಕುವ ವಿಡಿಯೋಗಳಿಗೆ ತುಂಬಾ ಪ್ರಮಾಣದ ವೀಕ್ಷಕರು ಸಬ್‌ಸ್ಕ್ರಬರ್‌ ಇದ್ದರೆ ಜಾಹೀರಾತುಗಳ ಜತೆ ಕೈಜೋಡಿಸಬಹುದು. ವಿಡಿಯೋಗಳಿಗೆ ಬರುವ ಜಾಹೀರಾತಿನ ಆಧಾರದ ಮೇಲೆ ಡಾಲರ್‌ ರೂಪದಲ್ಲಿ ಹಣ ಸಿಗುತ್ತದೆ.

ಪೂರ್ವ ಸಿದ್ಧತೆ ಮುಖ್ಯ
ಯೂಟ್ಯೂಬ್‌ ಅಕೌಂಟ್‌ ಕ್ರಿಯೇಟ್‌ ಮಾಡುವುದು ಕಷ್ಟದ ಕೆಲಸವಲ್ಲ. ಆದರೆ ಜನರಿಗೆ ನಿಮ್ಮ ಚಾನಲ್‌ ಸ್ವೀಕರಿಸಬೇಕಾದರೆ ನೀವು ಕೆಲವೊಂದು ಪೂರ್ವ ಸಿದ್ಧತೆ ಮಾಡಬೇಕಾಗುತ್ತದೆ.

·  ನೀವು ಜನರೆದುರು ಪ್ರಸ್ತುತ ಪಡಿಸುವ ವಿಷಯ ಹೊಸದಾಗಿರಬೇಕು.
·  ಜನರಿಗೆ ಅದು ಉಪಯುಕ್ತವಾಗಿರಬೇಕು
·  ವಿಷಯ ಸಂಗ್ರಹಣೆ ಮತ್ತು ತಾಂತ್ರಿಕ ಕೆಲಸಗಳು ಅಚ್ಚುಕಟ್ಟಾಗಿರಬೇಕು.
·  ಜನರೊಂದಿಗೆ ನಿತ್ಯ ಸಂಪರ್ಕವಿರಬೇಕು.
·  ಅನೇಕ ಜನರ ಸಂಪರ್ಕವಿರಬೇಕು.
·  ಕಾಪಿ ರೈಟ್ಸ್ ಮತ್ತು ವಿವಾದಾತ್ಮಕ ವಿಷಯಗಳ ಬಗ್ಗೆ ಎಚ್ಚರ ಅಗತ್ಯ.

 ವಿಶ್ವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ