ಇನ್ಮುಂದೆ ಹೆಚ್ಚು ಲೈಕ್ಸ್ ಬಂದಿಲ್ಲವೆಂದು ಕೊರಗಬೇಡಿ: Facebook ತಂದಿದೆ ಹೊಸ ಫೀಚರ್!

Team Udayavani, Sep 4, 2019, 6:30 PM IST

ಕ್ಯಾಲಿಫೋರ್ನಿಯಾ: ಫೇಸ್ ಬುಕ್ ಬಳಕೆದಾರರಿಗೆ ಸಂತಸದ ಸುದ್ದಿ. ಇನ್ನು ಮುಂದೆ ತಮ್ಮ ಪೋಸ್ಟ್ ಗಳಿಗೆ  ಕಡಿಮೆ ಲೈಕ್ಸ್ ಬಂದು ಇತರರೆದುರೂ ಅವಮಾನವಾಯಿತಲ್ಲಾ ಎಂದು ಕೊರಗಬೇಕಾಗಿಲ್ಲ. ಹೆಚ್ಚು ಲೈಕ್ಸ್ ಬರಬೇಕೆಂದು ಇತರರನ್ನು ಟ್ಯಾಗ್ ಮಾಡುವ ಅವಶ್ಯಕತೆಯೂ ಇಲ್ಲ. ಫೇಸ್ ಬುಕ್ ಹೊಸ ಫೀಚರ್ ಒಂದನ್ನು ಪರಿಚಯಿಸುತ್ತಿದ್ದು ಇದು ಬಳಕೆದಾರರಿಗೆ ಬಹಳ ಉಪಯುಕ್ತವಾಗಿದೆ.

ಫೇಸ್ ಬುಕ್ ಬಳಕೆದಾರರು ತಮ್ಮ ಪೋಸ್ಟ್  ಗಳಿಗೆ ಎಷ್ಟು ಜನ ಲೈಕ್ಸ್ ಹಾಗೂ ಕಮೆಂಟ್ಸ್ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸದೆ ಗೌಪ್ಯವಾಗಿಡುವಂತಹ ಹೊಸ ಆಯ್ಕೆ ಬಂದಿದೆ . ಇದು  ಪೋಸ್ಟ್ ಮಾಡಿದವರಿಗೆ ಮಾತ್ರ ಎಷ್ಟು ಲೈಕ್ಸ್, ಕಮೆಂಟ್ಸ್ ಹಾಗೂ ಶೇರ್ ಆಗಿದೆ ಎಂಬುದನ್ನು ತೋರ್ಪಡಿಸುತ್ತದೆ.

ಪೋಸ್ಟ್ ಕೆಳಗೆ ಕಾಣುವ ಲೈಕ್ಸ್ ಆಯ್ಕೆಯನ್ನು ಗೋಚರಿಸದಂತೆ (ಹೈಡ್) ಮಾಡುವ ಕ್ರಮಕ್ಕೆ ಮುಂದಾಗಿರುವ ಫೇಸ್ ಬುಕ್ ನ ಈ ನಿರ್ಧಾರದ ಹಿಂದೆ  ಪ್ರಮುಖ ಕಾರಣವೇ ಇದೆ. ಜನರು ತಮ್ಮ ಪೋಸ್ಟ್ ಗಳಿಗೆ ಬರುವ ಕಡಿಮೆ ಲೈಕ್ಸ್ ಗಳಿಂದ ಹೆಚ್ಚು ನಿರುತ್ಸಾಹಗೊಳ್ಳುತ್ತಾರೆ ಮತ್ತು ಹೊಸ ಪೋಸ್ಟ್ ಹಾಕುವುದನ್ನು ನಿಲ್ಲಿಸುತ್ತಾರೆ ,ಇದರಿಂದ ಫೇಸ್ ಬುಕ್  ಎಂಗೇಜ್ ಮೆಂಟ್ ಕಡಿಮೆಯಾಗುತ್ತದೆ ಎಂಬುದೇ ಅದರ ಈ ನಿರ್ಧಾರಕ್ಕೆ ಕಾರಣ.

ಹಾಗಾಗಿ ಪೋಸ್ಟ್ ಮಾಡಿದ ವ್ಯಕ್ತಿಗಳಿಗೆ ಮಾತ್ರ ಎಷ್ಟು ಲೈಕ್ಸ್ ಬಂದಿದೆ ಎಂದು ಗೋಚರಿಸುವಂತೆ ಮಾಡುವುದರಿಂದ ಒಂದೆಡೆ ಬಳಕೆದಾರ ಸಂತುಷ್ಟನಾಗಿ, ಕಡಿಮೆ ಲೈಕ್ಸ್ ಬಂದರೆ ಮರೆಮಾಚಿ ಹೆಚ್ಚು ಲೈಕ್ಸ್ ಬಂದರೆ ಇತರರಿಗೂ ತೋರಿಸುತ್ತಾನೆ. ಇದರಿಂದ ಕಡಿಮೆ ಲೈಕ್ಸ್ ಬಂದಾಗ ಆಗುವ ಬೇಸರ ತಪ್ಪುತ್ತದೆ. ಇನ್ನೊಬ್ಬರ ಕಾಮೆಂಟ್ಸ್ ಬಾಕ್ಸ್ ಒಳಗೆ ಇಣುಕುವುದು ಕೂಡ ಕಡಿಮೆಯಾಗುತ್ತದೆ.

ಈಗಾಗಲೇ ಈ ಹೊಸ ಫೀಚರ್ ಕೆಲವು ರಾಷ್ಟ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿತ್ತು . ಇದೀಗ ವಿಶ್ವದಾದ್ಯಂತ ಜಾರಿಗೆ ಬಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ