ಎಲೆಕ್ಟ್ರಿಕ್‌ ವಿಮಾನ ಯಶಸ್ವಿ ಹಾರಾಟ : ವಿಶ್ವದ ಮೊದಲ ವಿದ್ಯುತ್‌ ಚಾಲಿತ ವಿಮಾನ ಸಂಚಾರ

Team Udayavani, Dec 13, 2019, 1:20 AM IST

ವಾಂಕೂವರ್‌: ವಿದ್ಯುಚ್ಛಕ್ತಿ ಬಳಸಿ ಹಾರಾಟ ನಡೆಸುವ ವಿಶ್ವದ ಮೊದಲ ವಾಣಿಜ್ಯಿಕ ವಿಮಾನದ ಹಾರಾಟ ಯಶಸ್ವಿಯಾಗಿ ನಡೆದಿದೆ. ಕೆನಡಾದ ವಾಂಕೂವರ್‌ನಲ್ಲಿ ಹದಿನೈದು ನಿಮಿಷಗಳ ಕಾಲ ವಿಮಾನ ಹಾರಾಟ ನಡೆಸಿದೆ. ವೈಮಾನಿಕ ಇಂಧನದಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸಿಯಾಟಲ್‌ ಮೂಲದ ಮಾಗ್ನಿ ಎಕ್ಸ್‌ ಹಾರ್ಬರ್‌ ಏರ್‌ ಜಂಟಿಯಾಗಿ ಆರು ಸೀಟ್‌ಗಳು ಇರುವ ವಿಮಾನವನ್ನು ಅಭಿವೃದ್ಧಿಪಡಿಸಿದೆ. ಮಾಗ್ನಿ ಎಕ್ಸ್‌, ಹಾರ್ಬರ್‌ ಏರ್‌ ಜತೆ ಗೂಡಿ ವಿಮಾನದ ಮೋಟರ್‌ ವಿನ್ಯಾಸ ಮಾಡಿದೆ. ಡಿಎಚ್‌ಸಿ-2 ಡೆ ಹ್ಯಾಲಿಲ್ಯಾಂಡ್‌ ಬೇವರ್‌ ಎಂಬ ಸಮುದ್ರ ವಿಮಾನಕ್ಕೆ ವಿದ್ಯುತ್‌ನಿಂದ ಚಾಲನೆಗೊಳ್ಳುವ ಮೋಟರ್‌ ಅಳವಡಿಸಲಾಗಿತ್ತು.

ಹಾರ್ಬರ್‌ ಏರ್‌ನ ಸಂಸ್ಥಾಪಕ ಗ್ರೆಗ್‌ ಮ್ಯಾಕ್‌ ಡೊಗಾಲ್‌ ಅದನ್ನು ಹಾರಿಸಿದ್ದಾರೆ. ಅವರ ಜತೆಗೆ ಇನ್ನೂ ಐವರು ಮಂದಿ ಹಾರಾಟ ನಡೆಸಿ, ವಿದ್ಯುತ್‌ ಚಾಲಿತ ವಿಮಾನದ ಮೊದಲ ಅನುಭವ ಪಡೆದರು. ವಿದ್ಯುಚ್ಛಕ್ತಿಯಿಂದ ವಿಮಾನ ಹಾರಾಟ ನಡೆಸಲು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸುವುದೇ ಈ ಹಾರಾಟದ ಉದ್ದೇಶವಾಗಿತ್ತು. ಲೀಥಿಯಂ ಬ್ಯಾಟರಿ ಮೂಲಕ 160 ಕಿಮೀ ದೂರ ಹಾರಾಟ ನಡೆಸುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಗ್ನಿ ಎಕ್ಸ್‌ ನ ಸಿಇಒ ಮ್ಯಾಕ್ಸಿ ಗರ್ನಾರ್ಕಿ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...