ಭಾರತಕ್ಕೆ ಗ್ಯಾಲಾಕ್ಸಿ ಫೋಲ್ಡ್‌

Team Udayavani, Oct 2, 2019, 5:37 AM IST

ಹೊಸದಿಲ್ಲಿ: ಬಹುನಿರೀಕ್ಷಿತ ಸ್ಯಾಮ್‌ಸಂಗ್‌ “ಗ್ಯಾಲಾಕ್ಸಿ ಫೋಲ್ಡ್‌’ ಭಾರತದಲ್ಲಿ ಬಿಡುಗಡೆಯಾಗಿದೆ. ಫೆಬ್ರವರಿಯಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದಿದ್ದ ಕಂಪನಿಯ ಸಮಾರಂಭದಲ್ಲಿ ಭಾರತದಲ್ಲಿ ಈ ಫೋನನ್ನು ಶೀಘ್ರವೇ ಬಿಡುಗಡೆ ಮಾಡುವು ದಾಗಿ ಕಂಪೆನಿ ಘೋಷಿಸಿತ್ತು. ಅಂದಹಾಗೆ, ಇದು 4.6 ಇಂಚು ಬಾಹ್ಯ ಡಿಸ್‌ಪ್ಲೇ ಹೊಂದಿದ್ದು, 7.3 ಇಂಚು ಅಗಲದ ಫೋಲ್ಡಿಂಗ್‌ ಪರದೆ ಹೊಂದಿದೆ. ಶಕ್ತಿಶಾಲಿಯಾದ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ 855 ಪ್ರಾಸೆಸರ್‌, 512 ಜಿಬಿ ಸಂಗ್ರಹ ಸಾಮರ್ಥ್ಯ ಹಾಗೂ 12 ಜಿಬಿ ರ್ಯಾಮ್‌ ಹೊಂದಿದೆ. ಬ್ಯಾಟರಿ 4,380 ಎಂಎಎಚ್‌ ಸಾಮರ್ಥ್ಯದ್ದು. ಇದರ ಬೆಲೆ 1,64,999 ರೂ.!


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ