ನಿಮ್ಮ ವಾಟ್ಸಪ್ ಚಾಟ್ ಗಳನ್ನು ಫಿಂಗರ್ ಪ್ರಿಂಟ್ ಮೂಲಕ ಹೇಗೆ ಲಾಕ್ ಮಾಡಬಹುದು ?

Team Udayavani, Sep 14, 2019, 6:30 PM IST

ಮಣಿಪಾಲ: ಕಳೆದ ಐದು ತಿಂಗಳಿಂದ ವಾಟ್ಸಪ್ ತನ್ನ  ಐಓಎಸ್ ಮತ್ತು ಆ್ಯಂಡ್ರಾಯ್ಡ್ ಆವೃತ್ತಿಗಳಲ್ಲಿ ಹೊಸ ಹೊಸ ಅಪ್ಡೇಟ್ ಗಳನ್ನು ಹೊರತರುತ್ತಲೇ ಇದೆ. ಆದರೇ ಎಲ್ಲಾ ಅಪ್ಡೇಟ್ ವರ್ಷನ್ ಗಳು ಬೇಟಾ ಆವೃತ್ತಿಗಾಗಿ ಮಾತ್ರ ಸೀಮಿತವಾಗಿದೆ.  ಇದೀಗ ಜನಪ್ರಿಯ  ಆ್ಯಪ್ ವಾಟ್ಸಪ್ ಬಳಕೆದಾರರ ಪ್ರೈವೆಸಿಗಾಗಿ ಫಿಂಗರ್ ಪ್ರಿಂಟ್ ಲಾಕ್ ಫೀಚರನ್ನು ಹೊರತಂದಿದೆ.

ಇದು ಇತ್ತೀಚಿಗೆ ಬಿಡುಗಡೆಯಾದ ಎಲ್ಲಾ ಐಫೋನ್ ಮತ್ತು ಆ್ಯಂಡ್ರಾಯ್ಡ್ ಗಳಲ್ಲಿ ಲಭ್ಯವಿದ್ದು ಪ್ರೈವೆಸಿಗೆ ಮತ್ತಷ್ಟು ನೆರವಾಗಲಿದೆ. ಇದರ ಮೂಲಕ ಪ್ರತಿ ಚಾಟ್ ಗೂ ಫಿಂಗರ್ ಪ್ರಿಂಟ್ ಲಾಕ್ ಮಾಡಬಹುದಾಗಿದ್ದು ಬಳಕೆಗೂ ಸುಲಭವಾಗಲಿದೆ. ಈಗಾಗಲೇ ಹೈ ಎಂಡ್ ಮಾದರಿಯ ಆ್ಯಪಲ್ ಐಪೋನ್ ಗಳು, ಟಚ್ ಐಡಿ ಫೇಸ್ ಐಡಿ ಸೇರಿದಂತೆ ಹಲವು ಉನ್ನತ ಫೀಚರ್ಸ್ ಅನ್ನು ಒಳಗೊಂಡಿದೆ. ಇದೀಗ ಆ್ಯಂಡ್ರಾಯ್ಡ್ ಬೇಟಾ ವರ್ಷನ್ ಗಳಲ್ಲೂ ಹೊಸತನದ ಫಿಂಗರ್ ಪ್ರಿಂಟ್ ಲಾಕ್ ಫೀಚರ್ ಸೇರಿಕೊಂಡಿದ್ದು  ಬಳಕೆದಾರರ ಮನ ಆಕರ್ಷಿಸಿದೆ.

ಫಿಂಗರ್ ಪ್ರಿಂಟ್ ಮೂಲಕ ವಾಟ್ಸಾಪ್ ಚಾಟ್ ಲಾಕ್ ಮಾಡುವ ವಿಧಾನ:

ಐಓಎಸ್ :

1)ವಾಟ್ಸಪ್ ವರ್ಷನ್ 2.19.20 ಗೆ ಅಪ್ ಡೇಟ್ ಆಗಿರಲಿ

2) ವಾಟ್ಸಪ್  ಸೆಟ್ಟಿಂಗ್ ನಲ್ಲಿ ಪ್ರೈವೆಸಿ ಆಯ್ಕೆ

3) ಸ್ಕ್ರೀನ್ ಲಾಕ್ ಆಯ್ಕೆಯನ್ನು ಟ್ಯಾಪ್ ಮಾಡಿ ಸ್ಕ್ಯಾನ್ ಮಾಡಿ.

4) ಅದರ ಜೊತೆಗೆ ಟಚ್ ಐಡಿ ಮತ್ತು ಫೇಸ್ ಐಡಿಯನ್ನು ಕೂಡ ಬಳಸಬಹುದು.

ಆ್ಯಂಡ್ರಾಯ್ಡ್:

  • ವಾಟ್ಸಪ್ ವರ್ಷನ್ 2.19.221 ಗೆ ಅಪ್ ಡೇಟ್ ಆಗಿರಲಿ
  • ವಾಟ್ಸಪ್ ಸೆಟ್ಟಿಂಗ್ >ಅಕೌಂಟ್ > ಪ್ರೈವೆಸಿ
  • ಫಿಂಗರ್ ಪ್ರಿಂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಅದನ್ನು ಸಕ್ರೀಯಗೊಳಿಸಿ.
  • ನಿಮ್ಮ ಬೆರಳ ಸ್ಕ್ಯಾನ್ ಸೆಟ್ ಮಾಡಿ ಅನಂತರ ಬಳಸಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ