ಫ್ಯುಯೆಲ್‌ ಪಂಪ್‌ ಸಮಸ್ಯೆ ನಿವಾರಣೆ ಹೇಗೆ?

Team Udayavani, May 17, 2019, 6:00 AM IST

ಕಾರುಗಳಲ್ಲಿ ಎಂಜಿನ್‌ ಚಾಲನೆಗೆ ನಿರಂತರ ಇಂಧನ ಪೂರೈಕೆಯಾಗುತ್ತಿರಬೇಕು. ಇಂಧನ ಅಡೆತಡೆ ಇಲ್ಲದಂತೆ ಪೂರೈಕೆಗೆ ನೆರವಾಗುವುದು ಫ್ಯುಯೆಲ್‌ ಪಂಪ್‌ಗ್ಳು. ಒಂದು ರೀತಿಯಲ್ಲಿ ವ್ಯಾಕ್ಯೂಮ್‌ ವ್ಯವಸ್ಥೆಯಂತೆ ಇದು ಕಾರ್ಯನಿರ್ವಹಿಸುತ್ತದೆ. ಟ್ಯಾಂಕ್‌ನಲ್ಲಿ ಜೋಡಣೆಯಾಗಿರುವ ಈ ಫ್ಯುಯೆಲ್‌ ಪಂಪ್‌ ಕಾರು ಸುಸ್ಥಿತಿಯಲ್ಲಿರಲು ಅಗತ್ಯ ಕೂಡ. ಫ್ಯುಯೆಲ್‌ ಪಂಪ್‌ಗ್ಳಲ್ಲಿ ಎರಡು ಮಾದರಿಗಳಿವೆ. ಎಲೆಕ್ಟ್ರಿಕ್‌ ಮತ್ತು ಮೆಕಾನಿಕಲ್‌. ಆಧುನಿಕ ಕಾರುಗಳಲ್ಲಿ ಎಲೆಕ್ಟ್ರಿಕ್‌ ಫ್ಯುಯೆಲ್‌ ಪಂಪ್‌ಗ್ಳು ಸಾಮಾನ್ಯ. ಆಧುನಿಕ ಫ್ಯುಯೆಲ್‌ ಪಂಪ್‌ಗ್ಳು ಇಂಧನ ಟ್ಯಾಂಕ್‌ನಿಂದ ಇಂಧನವನ್ನು ಎಳೆದುಕೊಳ್ಳುವುದರೊಂದಿಗೆ ಇಂಧನ ಮತ್ತು ಗಾಳಿಯನ್ನು ಫಿಲ್ಟರ್‌ ಮಾಡಿ ದಹನಕ್ಕೆ ಅನುಕೂಲ ಮಾಡಿಕೊಡುತ್ತವೆ.

ಫ್ಯುಯೆಲ್‌ ಪಂಪ್‌ ಶಬ್ದ
ಕಾರಿನ ಇಗ್ನಿಶನ್‌ ಆನ್‌ ಆದ ಕೂಡಲೇ ಒಂದು ಸಣ್ಣ ಮೋಟರ್‌ ಚಾಲೂ ಆದ ರೀತಿಯ ಶಬ್ದ 2 ಸೆಕೆಂಡ್‌ಗಳ ಕಾಲ ಕೇಳಬಹುದು. ಈ ಶಬ್ದ ನಿಮಗೆ ಸರಿಯಾಗಿ ಕೇಳಿಸದಿದ್ದರೆ, ಕಾರಿನ ಎಲ್ಲ ಗಾಜುಗಳನ್ನು ಬಂದ್‌ ಮಾಡಿ ಕಾರಿನೊಳಗೆ ಕೂತು ಮತ್ತೆ ಇಗ್ನಿಶನ್‌ ಆನ್‌ ಮಾಡಿ. ಒಂದು ವೇಳೆ ಆಗಲೂ ಕೇಳಿಸದಿದ್ದರೆ ಫ್ಯುಯೆಲ್‌ ಪಂಪ್‌ನಲ್ಲಿ ದೋಷವಿದೆ ಎಂದರ್ಥ. ಫ್ಯುಯೆಲ್‌ ಪಂಪ್‌ನಲ್ಲಿ ರಿಲೀಫ್ ವಾಲ್‌ ಎಂದಿದ್ದು, ಇದು ಹಾಳಾದರೆ, ಎಂಜಿನ್‌ಗೆ ಹೆಚ್ಚು ಇಂಧನವನ್ನು ಪೂರೈಸುತ್ತದೆ. ಇದರಿಂದ ಮೈಲೇಜ್‌ ಕೊರತೆಯಾಗಬಹುದು. ಒಂದು ನಿರ್ದಿಷ್ಟ ವೇಗದಲ್ಲಿ ನೀವು ಹೋಗುತ್ತಿದ್ದರೆ, ಅಕ್ಸಲರೇಟರ್‌ ಹೆಚ್ಚು ಅದುಮದೆ ಇದ್ದರೂ ಏಕಾಏಕಿ ಕಾರು ಪಿಕಪ್‌ ಪಡೆದರೆ ಫ್ಯುಯೆಲ್‌ ಪಂಪ್‌ ಹಾಳಾಗಿ ಹೆಚ್ಚಿನ ಇಂಧನ ಪೂರೈಸುತ್ತಿದೆ ಎಂದರ್ಥ.

ಪರಿಹಾರವೇನು?
ಇಂಧನ ಪೈಪ್‌ನಲ್ಲಿ ಸಮಸ್ಯೆ, ಕಸ ಸಿಕ್ಕಿಹಾಕಿಕೊಂಡಿದ್ದರೆ, ಅವು ಗಳನ್ನು ಶುಚಿಗೊಳಿಸಬಹುದು. ಆದರೆ ಕಾರ್ಯವೆಸಗದೇ ಇದ್ದ ಸಂದರ್ಭಗಳಲ್ಲಿ ಅವುಗಳನ್ನು ಬದಲಾಯಿಸ ಬೇಕಾಗುತ್ತದೆ. ಫ್ಯುಯೆಲ್‌ ಪಂಪ್‌ಗ್ಳು ನಾಲ್ಕೈದು ವರ್ಷಕ್ಕೂ ಹೆಚ್ಚು ಬಾಳಿಕೆ ಬರುತ್ತವೆ. ಕಲಬೆರಕೆ, ಕೆಟ್ಟ ಇಂಧನದಿಂದ ಸಮಸ್ಯೆಯಾಗಬಹುದು. ಮೆಕ್ಯಾನಿಕ್‌ಗಳು ಇದನ್ನು ಬದಲಿಸಿಕೊಡಬಲ್ಲರು.

ಫ್ಯುಯೆಲ್‌ ಪಂಪ್‌ ಹಾಳಾದರೆ ಏನಾಗುತ್ತದೆ?
ಫ್ಯುಯೆಲ್‌ ಪಂಪ್‌ ಹಾಳಾದರೆ ಪ್ರಮುಖವಾಗಿ ನಾಲ್ಕು ಸಮಸ್ಯೆಗಳು ಷ್ಟಿಯಾಗಬಹುದು.

ಫ್ಯುಯೆಲ್‌ ಪಂಪ್‌ನಲ್ಲಿ ಶಬ್ದ
ಸ್ವಲ್ಪ ಕಿಲೋಮೀಟರ್‌ ಓಡಿದ ಬಳಿಕ ಎಂಜಿನ್‌ ಸ್ಥಗಿತ (ಇಂಧನ ಸರಿಯಾಗಿ ಪೂರೈಕೆಯಾಗದೆ)
ಎಂಜಿನ್‌ ಸ್ಟಾರ್ಟ್‌ ಆಗಲು ಸಮಸ್ಯೆ
ಹೈವೇ ಚಾಲನೆ ವೇಳೆ ಎಂಜಿನ್‌ ಪವರ್‌ನಲ್ಲಿ ಸಮಸ್ಯೆ

ಏನು ಮಾಡಬೇಕು?
ಫ್ಯುಯೆಲ್‌ ಪಂಪ್‌ ಹಾಳಾಗಿರುವುದನ್ನು ಕಂಡುಹುಡುಕಲು ಕೆಲವೊಂದು ವಿಧಾನಗಳಿವೆ.
ಇಂಧನ ಟ್ಯಾಂಕ್‌ ಪರಿಶೀಲಿಸಿ: ಒಂದು ವೇಳೆ ಕಾರು ಸ್ಟಾರ್ಟ್‌ ಆಗುತ್ತಿಲ್ಲ ಎಂದಾದರೆ ಮೊದಲು ಸಾಕಷ್ಟು ಇಂಧನ ಇದೆಯೇ ಎಂದು ಪರಿಶೀಲಿಸಿ.

-  ಈಶ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ