ವಿಂಡ್‌ಶೀಲ್ಡ್‌   ಸ್ಪ್ರೇಯರ್‌ ರಿಪೇರಿ ಹೇಗೆ?

Team Udayavani, Jan 10, 2020, 4:24 AM IST

ಪ್ರಯಾಣದ ವೇಳೆ ಕಾರಿನ ವಿಂಡ್‌ಶೀಲ್ಡ್‌ (ಮುಂಭಾಗದ ಗಾಜು) ಕೊಳೆಯಾಗಿದ್ದರೆ ನಾವು ಅದಕ್ಕೆ ಸ್ಟೀರಿಂಗ್‌ ಕೆಳಗಿನ ಸ್ಪ್ರೇಯರ್‌ ಲಿವರ್‌ ಅದುಮಿ ನೀರು ಎರಚುತ್ತೇವೆ. ಇದೇ ವೇಳೆ ವೈಪರ್‌ ಕೂಡ ಚಾಲೂ ಆಗಿ ವಿಂಡ್‌ಶೀಲ್ಡ್‌ ಶುಚಿಯಾಗುತ್ತದೆ. ಆದರೆ ಕೆಲವೊಮ್ಮೆ ಸ್ಟ್ರೇಯರ್‌ನಲ್ಲಿ ನೀರು ಬರುವುದಿಲ್ಲ. ಇದಕ್ಕೆ ಕಾರಣಗಳೇನು ನೋಡೋಣ?

ಕಸದ ಸಮಸ್ಯೆ
ಕಾರಿನ ಬಾನೆಟ್‌ ಮೇಲೆ ನೀರು ಎರಚುವ ಪುಟ್ಟ ಸ್ಪ್ರೇಯರ್‌ ಇರುತ್ತದೆ. ಇದರ ಕಣ್ಣುಗಳಲ್ಲಿ ಕಸ ಕಟ್ಟಿಕೊಂಡಿದ್ದರೆ, ನೀರು ಸರಿಯಾಗಿ ವಿಂಡ್‌ಶೀಲ್ಡ್‌ಗೆ ಸ್ಪ್ರೇ ಆಗಲಾರದು. ಇದನ್ನು ಸರಿಪಡಿಸಲು ಪುಟ್ಟ ಸೂಜಿ ತೆಗೆದುಕೊಳ್ಳಿ ಅದರಿಂದ ಸ್ಪ್ರೆಯರ್‌ಗೆ ಚುಚ್ಚಿ, ಕಸ ಹೋಗುವಂತೆ ಮಾಡಿ ಅಥವಾ ಪ್ರಶರ್‌ ಇರುವ ಗಾಳಿ ಹಿಡಿದರೂ ಆಗುತ್ತದೆ.

ಪೈಪ್‌ ಹಾಳಾಗಿದ್ದರೆ
ವಿಂಡ್‌ಶೀಲ್ಡ್‌ ಶುಚಿಗೊಳಿಸಲು ವಾಟರ್‌ ಟ್ಯಾಂಕ್‌ನಿಂದ ಪುಟ್ಟ ಪೈಪ್‌ ಒಂದು ಬರುತ್ತದೆ. ಇದು ಕಾರಿನ ಚಕ್ರದ ಎದುರಿನ ಬಂಪರ್‌ನಿಂದ ಬಾನೆಟ್‌ ಹಿಂಭಾಗದ ಮೂಲಕ ಬರುತ್ತದೆ. ಇದು ತುಂಡಾಗಿದ್ದರೆ ನೀರು ಬರಲಾರದು. ಸಮಸ್ಯೆಗಳಿದ್ದರೆ ಅದನ್ನು ಬದಲಾಯಿಸಬೇಕು.

ವಾಶರ್‌ ಪಂಪ್‌ ಕನೆಕ್ಟರ್‌ ಮತ್ತು ಫ್ಯೂಸ್‌
ನೀರು ಹಾಯಿಸಲು ವಾಟರ್‌ ಟ್ಯಾಂಕ್‌ನಲ್ಲಿ ಒಂದು ಪುಟ್ಟದಾದ ಪಂಪ್‌ ಇರುತ್ತದೆ. ಈ ಪಂಪ್‌ಗೆ ವಿದ್ಯುತ್‌ ಸೌಕರ್ಯ ಕಲ್ಪಿಸುವ ಒಂದು ಪುಟ್ಟ ಕನೆಕ್ಟರ್‌ ಇರುತ್ತದೆ. ಕನೆಕ್ಟರ್‌ ಹಾಳಾಗಿದ್ದರೆ ಪಂಪ್‌ ಚಾಲೂ ಆಗದು. ಅಲ್ಲದೇ ಇದಕ್ಕೆ ಪ್ರತ್ಯೇಕ ಫ್ಯೂಸ್‌ ಕೂಡ ಇದ್ದು ಫ್ಯೂಸ್‌ ಹಾಳಾಗಿದ್ದರೆ ಪಂಪ್‌ ಚಾಲೂ ಆಗದು. ಡ್ಯಾಶ್‌ ಬೋರ್ಡ್‌ ತಳಭಾಗದಲ್ಲಿರುವ ಫ್ಯೂಸ್‌ ಬಾಕ್ಸ್‌ ತೆಗೆದು, ನಿರ್ದಿಷ್ಟ ಫ್ಯೂಸ್‌ ಹುಡುಕಿ ಬದಲಾಯಿಸಬೇಕು. ಕನೆಕ್ಟರ್‌ ಹಾಳಾಗಿದ್ದರೆ ಹೊಸ ಕನೆಕ್ಟರ್‌ ಹಾಕುವುದೇ ದಾರಿ.

ಪಂಪ್‌ ಕೆಟ್ಟುಹೋಗಿದ್ದರೆ
ಕೆಲವೊಮ್ಮೆ ಪಂಪ್‌ ಹಾಳಾಗುವ ಸಾಧ್ಯತೆ ಇರುತ್ತದೆ. ಇದನ್ನು ಕಂಡುಹಿಡಿಯುವುದು ಸುಲಭ. ಪಂಪ್‌ ಹಾಳಾಗಿದ್ದರೆ ನೀವು ಬಟನ್‌ ಅದುಮಿದರೂ ಪಂಪ್‌ ಚಾಲೂ ಆಗುವುದಿಲ್ಲ. ಸರಿಯಾಗಿದ್ದರೆ ಸಣ್ಣದಾದ ಶಬ್ದ ಕೇಳಿಸುತ್ತದೆ. ಪಂಪ್‌ ಹಾಳಾಗಿದ್ದರೆ ಟ್ಯಾಂಕ್‌ ಬದಿಯಲ್ಲಿರುವ ಪಂಪ್‌ ಅನ್ನು ತೆಗೆದು ಹೊಸದು ಹಾಕಿ. ಹಾಗೆಯೇ ರಿಯರ್‌ ವಿಂಡೋಗೆ ಪ್ರತ್ಯೇಕ ಮೋಟಾರ್‌ ಇದ್ದು, ಅದರ ಸಮಸ್ಯೆ ಇದ್ದರೂ ಇದೇ ರೀತಿ ಪರಿಶೀಲಿಸಬಹುದು.

ಹೀಗೆ ಮಾಡಿ
ವಿಂಡ್‌ಶೀಲ್ಡ್‌ ಶುಚಿಗೊಳಿಸಲು ವಾಟರ್‌ ಟ್ಯಾಂಕ್‌ಗೆ ಕೇವಲ ನೀರು ಹಾಕುವುದಕ್ಕಿಂತ ಸೋಪಿನ ನೀರು/ಶ್ಯಾಂಪೂ ನೀರು ಬಳಕೆ ಉತ್ತಮ. ಮೊದಲು 2 ಎಂ.ಎಲ್‌ನಷ್ಟು ಶ್ಯಾಂಪೂ ಇದಕ್ಕೆ ಹಾಕಿ ಬಳಿಕ ನೀರು ಹಾಕಿ. ಬಳಿಕ ಬಳಕೆ ವೇಳೆ ಇದು ನೊರೆಯಾಗಿ ಬರುತ್ತದೆ ಮತ್ತು ನೀರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಗಾಜನ್ನು ಶುಚಿಗೊಳಿಸುತ್ತದೆ.

-ಈಶ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ