ಮಂಗಳೂರು: 30ಗಂಟೆಗಳ ಕೋಡಿಂಗ್ ಹ್ಯಾಕಥಾನ್ ಸ್ಪರ್ಧೆ ಆರಂಭ

Team Udayavani, Apr 15, 2019, 2:05 PM IST

ಮಂಗಳೂರು: ಡ್ರೀಮ್ ಸಾಫ್ಟ್ ಇನ್ನೋವೆಷನ್ ಸಂಸ್ಥೆ ಹಾಗೂ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಮತ್ತು ಮ್ಯಾನೇಜ್ ಮೆಂಟ್ ಸಹಯೋಗದೊಂದಿಗೆ ನಡೆದ ಎರಡು ದಿನಗಳ ಕಾಲದ 30ಗಂಟೆಗಳ ಕೋಡಿಂಗ್ ಹ್ಯಾಕಥಾನ್ ಮತ್ತು ಗೇಮಥಾನ್ ಟೆಕ್ ಸ್ಪರ್ಧೆ ನಡೆಯಿತು.

ಏಪ್ರಿಲ್ 14ರಂದು ಮಂಗಳೂರಿನಲ್ಲಿ ಟೆಕ್ ಸ್ಪರ್ಧೆಗೆ ವಿಧ್ಯುಕ್ತ ಚಾಲನೆ ನೀಡಲಾಗಿತ್ತು. ಭಾನುವಾರ ಸಂಜೆವರೆಗೆ ಈ ಹ್ಯಾಕಥಾನ್, ಗೇಮಥಾನ್ ಹಾಗೂ ಕಾರ್ಯಾಗಾರ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ನಲ್ಲಿ ನಡೆದಿತ್ತು.

99ಗೇಮ್ಸ್ ಕಾರ್ಯಾಚರಣೆಗಳ ಸಹಾಯಕ ಉಪಾಧ್ಯಕ್ಷ ಅನಿಲ ಅಂದ್ರಾದೆ ಟೆಕ್ ಸ್ಪರ್ಧೆಯನ್ನು ಉದ್ಘಾಟಿಸಿದ್ದರು.  ಡಿಫರೆಂಟ್ ಸೊಲ್ಯುಷನ್ ನ ಸಿಇಒ ಮತ್ತು ಕಾರ್ಯಾಚರಣಾ ವ್ಯವಸ್ಥಾಪಕ ಪ್ರದೀಪ್ ರಾಜ್, ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ನ ಸಂಶೋಧನಾ ಮತ್ತು ಕನ್ಸಲ್ಟೆನ್ಸಿ ನಿರ್ದೇಶಕ ಡಾ. ಮಂಜಪ್ಪ ಸಾರಥಿ, ಟೆಕ್ ಸೊಲ್ಯೂಷನ್ಸ್ ನ ಕಿರಣ್ ಶ್ಯಾಮ್, ಡ್ರೀಮ್ ಸಾಫ್ಟ್ ಸಹ ಸಂಸ್ಥಾಪಕ ಸಚಿನ್ ಗಣೇಶ್ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ