ಅಗ್ಗದ ಲ್ಯಾಪ್‌ಟಾಪ್‌ಗೆ ಹೆಚ್ಚಿದೆ ಬೇಡಿಕೆ

Team Udayavani, May 10, 2019, 6:00 AM IST

ತಂತ್ರಜ್ಞಾನ ಕ್ಷೇತ್ರ ಮುಂದುವರಿದಿದ್ದು, ಮನುಷ್ಯ ಮಾಡುವ ಅನೇಕ ಕೆಲಸಗಳನ್ನು ಒಂದು ಕಂಪ್ಯೂಟರ್‌ ಮಾಡುತ್ತಿದೆ. ಡೆಸ್ಕ್ಟಾಪ್‌ ಕಂಪ್ಯೂಟರ್‌ ಖರೀದಿಗಿಂತ ಈಗ ಲ್ಯಾಪ್‌ಟಾಪ್‌ಗೆ ಬೇಡಿಕೆ ಹೆಚ್ಚುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಲೇಜುಗಳು ಪ್ರಾರಂಭವಾಗಲಿದ್ದು, ಉನ್ನತ ವಿದ್ಯಾಭ್ಯಾಸಕ್ಕೆ ಲ್ಯಾಪ್‌ಟಾಪ್‌ಗ್ಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಲ್ಯಾಪ್‌ಟಾಪ್‌ ಖರೀದಿ ಜೋರಾಗಿದೆ.

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಐ ಬಾಲ್‌ ಸಂಸ್ಥೆಯ ಕಾಂಪ್‌ಬುಕ್‌ ಲ್ಯಾಪ್‌ಟಾಪ್‌ ಕೇವಲ ಸುಮಾರು 9,500 ರೂ. ಗೆ ಆಫರ್‌ ಮುಖೇನ ದೊರೆಯಲಿದೆ. 11.6 ಇಂಚ್‌ ಲ್ಯಾಪ್‌ಟಾಪ್‌ ಇದಾಗಿದ್ದು, ಇಂಟೆಲ್‌ ಆಟಮ್‌ ಪ್ರೊಸೇಸರ್‌ ಹೊಂದಿದೆ. 2 ಜಿಬಿ ಡಿಡಿಆರ್‌ 3 ರ್ಯಾಮ್‌, 32 ಬಿಟ್‌ ವಿಂಡೋಸ್‌ 10 ಆಪರೇಟಿಂಗ್‌ ಸಿಸ್ಟಮ್‌ ಇದೆ. ಈ ಲ್ಯಾಪ್‌ಟಾಪ್‌ ಗಾತ್ರ ಚಿಕ್ಕದಿರುವ ಕಾರಣ ಸುಲಭವಾಗಿ ಕೊಂಡೊಯ್ಯಬಹುದು.

ಮೊಬೈಲ್‌ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಲಾವಾ ತಯಾರಿಕೆಯ 2 ಜಿಬಿ ರ್ಯಾಮ್‌, 32 ಜಿಬಿ ಸ್ಟೋರೇಜ್‌ ವಿಂಡೋಸ್‌ 10 ಹೊಂದಿರುವ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿದೆ. 12.5 ಇಂಚ್‌ ಹೊಂದಿರುವ ಈ ಲ್ಯಾಪ್‌ಟಾಪ್‌ ಬೆಲೆ ಸುಮಾರು 13 ಸಾವಿರ ರೂ.ಗಳು.

ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ಲ್ಯಾಪ್‌ಟಾಪ್‌ಗ್ಳಲ್ಲಿ ಸಾಮಾನ್ಯ ಕೆಲಸವಲ್ಲದೆ, ಹೆಚ್ಚಿನ ಕೆಲಸ ಇದ್ದರೆ (ಗ್ರಾಫಿಕ್‌, ವಿಡಿಯೋ ಎಡಿಟಿಂಗ್‌ ಇತರೇ) ಉತ್ತಮ ಸಾಮರ್ಥ್ಯವುಳ್ಳ ಲ್ಯಾಪ್‌ಟಾಪ್‌ ಖರೀದಿ ಉತ್ತಮ. ಲ್ಯಾಪ್‌ಟಾಪ್‌ ಉತ್ಪಾದನ ಕ್ಷೇತ್ರದಲ್ಲಿ ಹೆಸರುಗಳಿಸಿದ ಏಸುಸ್‌ ಸಂಸ್ಥೆಯು ಕಡಿಮೆ ಬೆಲೆಯ ಲ್ಯಾಪ್‌ ಟಾಪ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದಕ್ಕೆ ಒಂದು ಬಾರಿ ಫುಲ್‌ ಚಾರ್ಜ್‌ ಮಾಡಿದರೆ 10 ಗಂಟೆಗಳ ವರೆಗೆ ಬ್ಯಾಕ್‌ಅಪ್‌ ಬರುತ್ತದೆ. 64 ಬಿಟ್‌ ವಿಂಡೋಸ್‌ 10 ಹೊಂದಿದ್ದು, 2 ಜಿಬಿ ರ್ಯಾಮ್‌ 32 ಜಿ.ಬಿ. ಸ್ಟೋರೇಜ್‌ ಹೊಂದಿದೆ. 15 ಸಾವಿರ ರೂ. ಗೆ ಲಭ್ಯವಿದೆ.

ಏಸರ್‌ ಸಂಸ್ಥೆಯ 500 ಜಿಬಿ ಸ್ಟೋರೇಜ್‌ ಹೊಂದಿರುವ ಲ್ಯಾಪ್‌ಟಾಪ್‌ಗೆ ಬೇಡಿಕೆ ಇದ್ದು, ಇಂಟೆಲ್‌ ಸೆಲಾÅನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌ ಹೊಂದಿದೆ. 2 ಜಿಬಿ ರ್ಯಾಮ್‌, 15.6 ಇಂಚ್‌ ಡಿಸ್‌ಪ್ಲೇ ಇದ ರ ಲ್ಲಿದೆ. ಮಾರುಕಟ್ಟೆಯಲ್ಲಿ ಸುಮಾರು 16 ಸಾವಿರರೂ. ಗೆ ಈ ಲ್ಯಾಪ್‌ಟಾಪ್‌ ಲಭ್ಯ. ಎಚ್‌ಪಿ ಸಂಸ್ಥೆಯ 14 ಇಂಚಿನ ಲ್ಯಾಪ್‌ಟಾಪ್‌ 4 ಜಿಬಿ ರ್ಯಾಮ್‌, 500 ಜಿಬಿ ಸ್ಟೋರೇಜ್‌, ಹೊಂದಿದ್ದು, 19 ಸಾವಿರ ರೂ. ಗೆ ಲಭ್ಯ ವಿದೆ. 500 ಜಿಬಿ ಸ್ಟೋರೇಜ್‌, 4 ಜಿಬಿ ರ್ಯಾಮ್‌, ಲಿನೆಕ್ಸ್‌ ಆಪರೇಟಿಂಗ್‌ ಸಿಸ್ಟಮ್‌ ಹೊಂದಿರುವ ಡೆಲ್‌ ಲ್ಯಾಪ್‌ಟಾಪ್‌ ಬೆಲೆ ಸುಮಾರು 21 ಸಾವಿರ ರೂ. ಆಗಿದೆ.

ಲ್ಯಾಪ್‌ಟಾಪ್‌ ಖರೀದಿಗೂ ಮುನ್ನ …
ಲ್ಯಾಪ್‌ಟಾಪ್‌ ಪರದೆಯ ಆಯ್ಕೆ, ಡಿಸೈನಿಂಗ್‌, ರ್ಯಾಮ್‌, ಸ್ಟೋರೇಜ್‌ ಸಾಮರ್ಥ್ಯ, ವಿಡಿಯೋ ಎಡಿಟಿಂಗ್‌, ಗ್ರಾಫಿಕ್ಸ್‌ ಗೇಮಿಂಗ್‌ ಸೌಲಭ್ಯ, ನಿಮಗೆ ಬೇಕಾದ ಪ್ರೊಸೆಸರ್‌, ಜನರೇಷನ್‌, ಟಚ್‌ ಸ್ಕ್ರೀನ್‌, ತೂಕ ಮುಂತಾದ ವಿಚಾರ ಬಗ್ಗೆ ತಿಳಿದುಕೊಂಡು ಖರೀದಿ ಮಾಡುವುದು ಉತ್ತಮ. ಇಎಂಐ ಮುಖೇನವೂ ಲ್ಯಾಪ್‌ಟಾಪ್‌ ಖರೀದಿ ಮಾಡಬಹುದು. ಅವುಗಳ ಲಭ್ಯತೆ ಬಗ್ಗೆ ಸಂಬಂಧಪಟ್ಟವರಲ್ಲಿ ಕೇಳಿ ಮಾಹಿತಿ ಪಡೆದುಕೊಳ್ಳುವುದು ಅಗತ್ಯ.

ಬರಲಿದೆ ಸಿಮ್‌ ಇರೋ ಲ್ಯಾಪ್‌ಟಾಪ್‌ !
ಕಡಿಮೆ ಬೆಲೆಯ ಡೇಟಾ, ಉಚಿತ ಕರೆಗಳ ಸೌಲಭ್ಯದ ಜತೆ 4ಜಿ ಫೀಚರ್‌ ಫೋನ್‌ ಬಿಡುಗಡೆ ಮಾಡಿದ್ದ ಜಿಯೋ ಸಂಸ್ಥೆ ಈಗ ಕಡಿಮೆ ಬೆಲೆಯಲ್ಲಿ ಸಿಮ್‌ ಹೊಂದಿರುವ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ತೀರ್ಮಾನ ಮಾಡುತ್ತಿದೆ. ವಿಂಡೋಸ್‌ 10 ಒಎಸ್‌ ಇರುವ ಲ್ಯಾಪ್‌ಟಾಪ್‌ಗ್ಳಲ್ಲಿ ಸಿಮ್‌ಗಳನ್ನು ಅಳವಡಿಸುವುದರ ಕುರಿತು ಯೋಚಿಸುತ್ತಿದೆ. ಇದರೊಂದಿಗೆ ಲ್ಯಾಪ್‌ಟಾಪ್‌ ಸದಾ ಅಂತರ್ಜಾಲ ವ್ಯವಸ್ಥೆ ಹೊಂದಿರುವ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನೇನು ಕೆಲವು ಸಮಯಗಳಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಅಂಗಡಿಗಳಲ್ಲಿ ಲ್ಯಾಪ್‌ಟಾಪ್‌ ಖರೀದಿಗೆ ಹೆಚ್ಚಿನ ಮಂದಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಕೆಲವು ಮಂದಿ ಇಎಂಐ ಸೌಲಭ್ಯ ಕೇಳುತ್ತಿದ್ದಾರೆ. ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ ಖರೀದಿ ಕೂಡ ಹೆಚ್ಚಿದೆ.
– ಶ್ರವಂತ್‌,
ಸೇಲ್ಸ್‌ ಮ್ಯಾನೇಜರ್‌

ಲ್ಯಾಪ್‌ಟಾಪ್‌ ಅನಿವಾರ್ಯ
ನಾನು ಉನ್ನತ ವಿದ್ಯಾಭ್ಯಾಸ ಪಡೆಯಲಿದ್ದು, ಲ್ಯಾಪ್‌ಟಾಪ್‌ ಖರೀದಿ ಅನಿವಾರ್ಯವಾಗಿದೆ. ಬಜೆಟ್‌ ವಿಚಾರವಾಗಿ ನನ್ನ ಮೊದಲ ಆಯ್ಕೆ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗ್ಳು. ಮಾರುಕಟ್ಟೆಯಲ್ಲಿ ಒಳ್ಳೆಯ ಕಾನ್ಫಿಗ್ರೇಷನ್‌ವುಳ್ಳಂತಹ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗ್ಳೂ ಇವೆ.
ಸತೀಶ್‌ ಕುಮಾರ್‌
ಕಾಲೇಜು ವಿದ್ಯಾರ್ಥಿ

ಆನ್‌ಲೈನ್‌ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ ಖರೀದಿ ಆನ್‌ಲೈನ್‌ನಲ್ಲಿ ಹೆಚ್ಚಾಗುತ್ತಿದೆ. ಏಕೆಂದರೆ, ಸಾಮಾನ್ಯ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್‌ ಸಿಗುತ್ತಿದೆ. ಸಾಮಾನ್ಯ ಶಾಪ್‌ಗ್ಳಲ್ಲಿ ಲ್ಯಾಪ್‌ಟಾಪ್‌ ಖರೀದಿಗೆ ಆಯ್ಕೆಗಳು ಕಡಿಮೆ ಇರುತ್ತದೆ. ಆದರೆ, ಆನ್‌ಲೈನ್‌ನಲ್ಲಿ ವಿವಿಧ ಕಂಪೆನಿಗಳ ಆಯ್ಕೆ ಇದ್ದು, ಬೆಲೆ ನೋಡಿ ಖರೀದಿ ಮಾಡುತ್ತಾರೆ.

-ನವೀನ್‌ ಭಟ್‌, ಇಳಂತಿಲ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ