ಜಿಯೋ-ಒನ್ ಪ್ಲಸ್ 6ಟಿ ಅನ್ ಲಾಕ್ ಆಫರ್, ಕೂಡಲೇ ಕ್ಯಾಶ್ ಬ್ಯಾಕ್ 

Team Udayavani, Oct 31, 2018, 3:56 PM IST

ಬೆಂಗಳೂರು: ಜಿಯೋ-ಒನ್ ಪ್ಲಸ್ 6ಟಿ ಅನ್ ಲಾಕ್ ದಿ ಸ್ಪೀಡ್ ಆಫರ್ ನೀಡಿದ್ದು, ಇದೀಗ 299 ರೂ.ನ ಮೊದಲ ಪ್ರಿಪೇಯ್ಡ್ ರಿಚಾರ್ಜ್ ಮೇಲೆ 5,400 ರೂ.ಇನ್ ಸ್ಟಂಟ್ ಕ್ಯಾಶ್ ಬ್ಯಾಕ್ ನೀಡುವುದಾಗಿ ಘೋಷಿಸಿದೆ.

ಇದು ವರ್ಧಿತ ಹೈಸ್ಪೀಡ್ ಡಾಟಾ ಅನುಭವವನ್ನು ತರಲು ಹಾಗೂ  ಒನ್ ಪ್ಲಸ್ ಹಾಗೂ ಜಿಯೋ ಬಳಕೆದಾರರಿಗೆ ಗ್ರಾಹಕ ಸ್ನೇಹಿ ಆಫರ್ ನೀಡುವ ಸಲುವಾಗಿ ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್ವರ್ಕ್ ಆಗಿರುವ ಜಿಯೋದೊಂದಿಗಿನ ತನ್ನ ಸಹಭಾಗಿತ್ವ ಪ್ರಕಟಿಸಿದೆ.

ತನ್ನ ಮುಂಬರುವ ಫ್ಲಾಗ್ಶಿಪ್ ಡಿವೈಸ್, ಒನ್ ಪ್ಲಸ್ 6ಟಿನೊಂದಿಗೆ, ಈ ಬ್ರಾಂಡ್ ಗ್ರಾಹಕರಿಗೆ ಹಿಂದೆಂದೂ ಕಂಡರಿಯದ ಜಿಯೋ ಒನ್ಪ್ಲಸ್ 6ಟಿ ಅನ್ ಲಾಕ್ ದಿ ಸ್ಪೀಡ್ ಆಫರ್ ಅನ್ನು ನೀಡಲಿದೆ. ಇದು ಎಲ್ಲಾ ಒನ್ ಪ್ಲಸ್ 6ಟಿ ಹಾಗೂ ಜಿಯೋ ಬಳಕೆದಾರರಿಗೆ ಅನೂಹ್ಯವಾದ ಕೊಡುಗೆ ನೀಡಲಿದೆ.

ಒನ್ ಪ್ಲಸ್ 6ಟಿ ಅಕ್ಟೋಬರ್ 30ರಂದು ರಾತ್ರಿ 8:30ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿರುವ ಕೆಡಿಜೆಡಬ್ಲ್ಯೂ ಸ್ಟೇಡಿಯಂನಲ್ಲಿ ಬಿಡುಗಡೆಗೊಂಡಿದೆ. 2018ರ ನವೆಂಬರ್ 2ರಿಂದ ಎಲ್ಲಾ ಆನ್ ಲೈನ್ ಮತ್ತು ಆಫ್ ಲೈನ್ ವಿಧಾನಗಳಲ್ಲಿ ಒನ್ ಪ್ಲಸ್ 6ಟಿ ಮಾರಾಟ ಆರಂಭವಾಗಲಿದೆ.

ಜಿಯೋ  ಒನ್ ಪ್ಲಸ್ 6ಟಿ ಅನ್ ಲಾಕ್ ದಿ ಸ್ಪೀಡ್ ಆಫರ್:

ಮೊದಲ ಬಾರಿಗೆ ಈ ರೀತಿಯ ಆಫರ್ ನೀಡಲಾಗುತ್ತಿದ್ದು, ಇದು 299 ರೂ.ನ ಮೊದಲ ಪ್ರಿಪೇಯ್ಡ್ ರಿಚಾರ್ಜ್ ಮೇಲೆ 5,400 ರೂ.ನ ಇನ್ಸ್ಟಂಟ್ ಕ್ಯಾಶ್ಬ್ಯಾಕ್ ಒದಗಿಸಲಿದೆ. ಈ ಆಫರ್ ಹೊಂದುವವರು ಮೈಜಿಯೋ ಆ್ಯಪ್ ನಲ್ಲಿ ತಲಾ 150 ರೂ. ಮೌಲ್ಯದ 36 ವೋಚರ್ ಗಳ ರೂಪದಲ್ಲಿ ಕ್ಯಾಶ್ ಬ್ಯಾಕ್ ಪಡೆಯಲಿದ್ದಾರೆ. ಗ್ರಾಹಕರು ಈ ವೋಚರ್ ಗಳನ್ನು 299 ರೂ.ನ ನಂತರದ ರಿಚಾರ್ಜ್ ವೇಳೆ ರಿಡೀಮ್ ಮಾಡಿಕೊಳ್ಳಬಹುದು. ಆಗ ಗ್ರಾಹಕರು ಕೇವಲ 149 ರೂ. ಬೆಲೆ ನೀಡಿದಂತಾಗುತ್ತದೆ. ಈ ಪ್ಲಾನ್ ಅಡಿಯಲ್ಲಿ 28 ದಿನಗಳ ಕಾಲ ಪ್ರತಿದಿನ 3ಜಿಬಿ 4ಜಿ ಡಾಟಾ ಹೊಂದಬಹುದು, ಅನಿಯಮಿತ ಧ್ವನಿ ಕರೆಗಳು, ಎಸ್ಎಂಎಸ್ ಸಿಗಲಿದೆ. ಜತೆಗೆ ಜಿಯೋದ ಪ್ರೀಮಿಯಂ ಅಪ್ಲಿಕೇಶನ್ ಗಳನ್ನೂ ಹೊಂದಬಹುದಾಗಿದೆ. 36 ರಿಚಾರ್ಜ್ ಗಳ ಮೂಲಕ 3ಟಿಬಿಯಷ್ಟು 4ಜಿ ಡಾಟಾವನ್ನು ಗ್ರಾಹಕರು ಹೊಂದಲಿದ್ದಾರೆ.

ಜಿಯೋ-ಒನ್ ಪ್ಲಸ್ 6ಟಿ ಡಿವೈಸ್ ಗಳ ಲಭ್ಯತೆ:

ಜಿಯೋ ಅನ್ ಲಾಕ್ ದಿ ಸ್ಪೀಡ್ ಆಫರ್ ಒನ್ ಪ್ಲಸ್ 6ಟಿ ಖರೀದಿಸುವ ಪ್ರಸ್ತುತ ಇರುವ ಹಾಗೂ ಹೊಸ ಜಿಯೋ ಗ್ರಾಹಕರಿಬ್ಬರಿಗೂ ಲಭಿಸಲಿದೆ. ಗ್ರಾಹಕರು ರಿಲಯನ್ಸ್ ಡಿಜಿಟಲ್ ಸ್ಟೋರ್, ಮೈಜಿಯೋ ಸ್ಟೋರ್ಸ್, ಜಿಯೋ ರಿಟೈಲರ್ಸ್ ಮತ್ತು ಮೈಜಿಯೋ ಆಪ್ ನಲ್ಲಿ 299 ರೂ. ಮೊದಲ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಾಗ ಈ ಆಫರ್ ಲಭ್ಯವಾಗಲಿದೆ. ಮೈಜಿಯೋ ಆಪ್ ಮೂಲಕ ನಂತರದ ರಿಚಾರ್ಜ್ ಮಾಡಿಕೊಂಡಾಗ ಮಾತ್ರ ಈ ಕ್ಯಾಶ್ ಬ್ಯಾಕ್ ವೋಚರ್ ಗಳನ್ನು ರಿಡೀಮ್ ಮಾಡಿಕೊಳ್ಳಬಹುದಾಗಿದೆ.

ನೆಟ್ ವರ್ಕ್ ಅನುಕೂಲ:

ಜಿಯೋ, ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್ ವರ್ಕ್ ಆಗಿದ್ದು, ಇದು ಭಾರತ ಮತ್ತು ಭಾರತೀಯರ ಗೇಮ್ ಚೇಂಜರ್ ಆಗಿದೆ.  ಜಿಯೋ ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್ ವರ್ಕ್ ಆಗಿದೆ ಮತ್ತು ದೇಶದ ಅತಿವೇಗದ ನೆಟ್ ವರ್ಕ್ ಆಗಿ ಸತತವಾಗಿ ರಾಂಕ್ ಗಳಿಸಿದೆ. ಜಿಯೋದ ಸುಧಾರಿತ ತಂತ್ರಜ್ಞಾನ, ಹೈಸ್ಪೀಡ್ ಡಾಟಾ, ಉಚಿತ ಎಚ್ ಡಿ ಧ್ವನಿ ಮತ್ತು ಪ್ರೀಮಿಯಂ ಕಂಟೆಂಟ್ ನೊಂದಿಗೆ ಒನ್ ಪ್ಲಸ್ 6ಟಿ ಬಳಕೆದಾರರು ತಡೆರಹಿತ ಹೈ ಸ್ಪೀಡ್ ಡಾಟಾ ಅನುಭವ ಪಡೆಯಲು ಸಾಧ್ಯವಾಗಲಿದೆ  ಮತ್ತು ಡಿವೈಸ್ ನ ನೈಜ ಸಾಮರ್ಥ್ಯ ಕಾಣಲಿದ್ದಾರೆ. ಭಾರತದಾದ್ಯಂತ 4ಜಿ ನೆಟ್ ವರ್ಕ್ ಹಾಗೂ ಧ್ವನಿ ಸೇವೆಗಳನ್ನು (ವೋಲ್ಟೆ) ಒದಗಿಸುತ್ತಿರುವ ಏಕೈಕ ನೆಟ್ ವರ್ಕ್ ಜಿಯೋ ಆಗಿದೆ.

ಹೊಸ ಒನ್ ಪ್ಲಸ್ 6ಟಿ:

ಹೊಸ ಒನ್ ಪ್ಲಸ್ 6ಟಿ ಫ್ಯೂಚರಿಸ್ಟಿಕ್ ಸ್ಕ್ರೀನ್ ಅನ್ ಲಾಕ್ ತಂತ್ರಜ್ಞಾನದೊಂದಿಗಿನ ಕಂಪನಿಯ ಮೊದಲ ಡಿವೈಸ್ ಆಗಿದೆ, ಇದರಲ್ಲಿ ದೊಡ್ಡನೆಯ 3700 ಎಂಎಎಚ್ ಬ್ಯಾಟರಿ ಇದೆ, ಜತೆಗೆ ಒನ್ ಪ್ಲಸ್ ಜನಪ್ರಿಯ ಅತಿವೇಗದಲ್ಲಿ ಚಾರ್ಜ್ ಆಗುವ ತಂತ್ರಜ್ಞಾನವೂ ಇರಲಿದೆ. ಕ್ವಾಲ್ ಕಮ್ ನ ಫ್ಲಾಗ್ ಶಿಪ್ ಪ್ರೊಸೆಸರ್, ಸ್ನಾಪ್ ಡ್ರಾಗನ್ 845 ಎಸ್ಒಸಿಯೂ ಇದರಲ್ಲಿರಲಿದೆ. ಆಕ್ಸಿಜನ್ ಒಎಸ್ ಸಾಫ್ಟ್ ವೇರ್ ಇದರಲ್ಲಿದೆ. ಎಐ ಆಧಾರಿತ ಆಲ್ಗೊರಿತಂ ಸೇರ್ಪಡೆ ಮಾಡಲಾಗಿದ್ದು, ಇದು ರಾತ್ರಿ ವೇಳೆ ಬ್ಯಾಕ್ ಗ್ರೌಂಡ್ ಬಳಕೆ ಕಡಿಮೆ ಮಾಡಲಿದೆ. ಇದರಿಂದಾಗಿ ಪವರ್ ಬಳಕೆಯೂ ತಗ್ಗಲಿದೆ.

ಒನ್ ಪ್ಲಸ್ ಬಗ್ಗೆ:

ಒನ್ ಪ್ಲಸ್ ಒಂದು ಜಾಗತಿ ಮೊಬೈಲ್ ತಂತ್ರಜ್ಞಾನ ಸಂಸ್ಥೆಯಾಗಿದ್ದು. ಒನ್ ಪ್ಲಸ್ ಯಾವತ್ತೂ ನಿಂತ ನೀರಾಗುವುದಿಲ್ಲ ಎಂಬ ಮಂತ್ರದೊಂದಿಗೆ ಕಾರ್ಯಾಚರಿಸುವ ಸಂಸ್ಥೆ. ಉನ್ನತ ಕಾರ್ಯಕ್ಷಮತೆಯ ಹಾರ್ಡ್ ವೇರ್ ಹಾಗೂ ಪ್ರೀಮಿಯಂ ಬಿಲ್ಡ್ ಗುಣಮಟ್ಟದೊಂದಿಗಿನ ಆಕರ್ಷಕ ವಿನ್ಯಾಸದ ಡಿವೈಸ್ ಗಳನ್ನು ನಿರ್ಮಿಸುತ್ತದೆ. ಬಳಕೆದಾರರು ಹಾಗೂ ಅಭಿಮಾನಿಗಳ ಸಮುದಾಯದೊಂದಿಗೆ ಬಲಿಷ್ಠವಾದ ಬಂಧವನ್ನು ನಿರ್ಮಿಸಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ