ಇದೀಗ ಜಿಯೋ ನ್ಯೂಸ್ ಲಭ್ಯ; “ನಿಮ್ಮ ಸುದ್ದಿ, ನಿಮ್ಮ ಭಾಷೆ”

Team Udayavani, Apr 12, 2019, 12:26 PM IST

ಮುಂಬೈ: ಜಿಯೋ ಮಾರುಕಟ್ಟೆಗೆ ಹೊಸದಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಆಧಾರಿತ ಸೇವೆ ((www.jionews.com) ರೂಪದಲ್ಲಿ ಜಿಯೋ ನ್ಯೂಸ್ ಎಂಬ ಕ್ರಾಂತಿಕಾರಿ ಡಿಜಿಟಲ್ ಉತ್ಪನ್ನವನ್ನು ಪರಿಚಯಿಸಿದೆ. ಈ ಆ್ಯಪ್ ಅನ್ನು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ನಿಂದ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಜಿಯೋ ನ್ಯೂಸ್ ಉತ್ತಮ ಸಂದರ್ಭದಲ್ಲಿಯೇ ಲಾಂಚ್ ಆಗಿದ್ದು, ಭಾರತೀಯರಿಗೆ 2019ರ ಲೋಕಸಭಾ ಚುನಾವಣೆಯ ಬಗ್ಗೆ, ಐಪಿಎಲ್ 2019, ಕ್ರಿಕೆಟ್ ವಿಶ್ವಕಪ್ 2019ರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದೆ. ಇದಲ್ಲದೇ ಭಾರತ ಮತ್ತು ವಿಶ್ವದಾದ್ಯಂತದ ನಡೆಯುವ ಪ್ರಮುಖ ಘಟನೆಗಳನ್ನು ಈ ಆಪ್ ಮೂಲಕವೇ ತಿಳಿದುಕೊಳ್ಳಲು ಅವಕಾಶ ನೀಡಲಿದೆ. ಈ ಆಪ್ ಬಳಸುವವರು ಇತ್ತೀಚಿನ ಸುದ್ದಿಗಳನ್ನು ಪಡೆಯುವುದಲ್ಲದೇ. ಬ್ರೇಕಿಂಗ್ ನ್ಯೂಸ್, ಲೈವ್ ಟಿವಿ, ವೀಡಿಯೊಗಳನ್ನು, ನಿಯತಕಾಲಿಕೆಗಳನ್ನು, ಪತ್ರಿಕೆಗಳನ್ನು ಓದುವುದು ಮತ್ತು ಇನ್ನು ಹೆಚ್ಚಿನ ಸೇವೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಒಂದೇ ಆಪ್‌ನಲ್ಲಿ ಸರ್ವವೂ ದೊರೆಯಲಿದೆ.

ಜಿಯೋ ನ್ಯೂಸ್ 12ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ತನ್ನ ಬಳಕೆದಾರರಿಗೆ ತಮ್ಮದೇ ಭಾಷೆಯಲ್ಲಿ ಸುದ್ದಿಯನ್ನು ಪಡೆಯಲು ಅವಕಾಶವನ್ನು ಮಾಡಿಕೊಟ್ಟಿದೆ. ತಮ್ಮ ಭಾಷೆಯಲ್ಲಿಯೇ ಆದ್ಯತೆಗಳನ್ನು ಆರಿಸುವ ಮೂಲಕ ಅವರ ಓದುವ ಅನುಭವವನ್ನು ವೈಯಕ್ತೀಕರಿಸಲು ಮುಂದಾಗಿದೆ. ಜಿಯೋ ನ್ಯೂಸ್ ಆಪ್ ನಲ್ಲಿ ಭಾರತ ಮತ್ತು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ 150+ ಲೈವ್ ನ್ಯೂಸ್ ಚಾನಲ್ ಗಳು, 800+ ಮ್ಯಾಗಜೀನ್ ಗಳು, 250+ ಸುದ್ದಿಪತ್ರಿಕೆಗಳು, ಪ್ರಸಿದ್ಧ ಬ್ಲಾಗ್ ಗಳು ಮತ್ತು ಸುದ್ದಿ ವೆಬ್‌ಸೈಟ್‌ಗಳನ್ನು ಕಾಣಬಹುದಾಗಿದೆ.

ಜಿಯೋ ನ್ಯೂಸ್ ತನ್ನ ಬಳಕೆದಾರರಿಗೆ ಸಾಧ್ಯವಾದಷ್ಟು ವೇಗವಾಗಿ ಉತ್ತಮ ಸುದ್ದಿಯನ್ನು ತಲುಪಿಸುವ ಕಾರ್ಯ ಮಾಡಲಿದೆ. ಕ್ರೀಡೆಗಳು, ಮನರಂಜನೆ, ವ್ಯಾಪಾರ, ತಂತ್ರಜ್ಞಾನ, ಜೀವನಶೈಲಿ, ಫ್ಯಾಷನ್, ವೃತ್ತಿ, ಆರೋಗ್ಯ, ಜ್ಯೋತಿಷ್ಯ, ಹಣಕಾಸು ಮತ್ತು ಇನ್ನೂ ಹೆಚ್ಚಿನ ಆಸಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಬಳಕೆದಾರರು ತಮ್ಮ ಮುಖಪುಟವನ್ನು ಸಂಪೂರ್ಣವಾಗಿ ವೈಯಕ್ತಿಕಗೊಳಿಕೊಳ್ಳುವ ಅವಕಾಶವು ದೊರೆಯಲಿದೆ. ಅಐ – AI & ML (ಕೃತಕ ಬುದ್ದಿಮತ್ತೆ ಮತ್ತು ಯಾಂತ್ರಿಕ ಕಲಿಕೆ) ತಂತ್ರಜ್ಞಾನದೊಂದಿಗೆ, ಜಿಯೋ ನ್ಯೂಸ್ ಸಾವಿರಾರು ಸುದ್ದಿ ಮೂಲಗಳನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಅದರಿಂದ ಬಳಕೆದಾರರಿಗೆ ಬೇಕಾದ ವಿಷಯವನ್ನು ಹೆಚ್ಚು ಸೂಕ್ತವಾಗಿ ತೋರಿಸುತ್ತದೆ.

ದೇಶದಾದ್ಯಂತದ ಎಲ್ಲಾ ಪ್ರಮುಖ ಮತ್ತು ಜನಪ್ರಿಯ ಟಿವಿ ಸುದ್ದಿ ವಾಹಿನಿಗಳನ್ನು ಒಳಗೊಂಡಿರುವ 150+ ಲೈವ್ ಟಿವಿಯನ್ನು ಬಳಕೆದಾರರು ಈ ಆಪ್‌ನಲ್ಲಿ ಕಾಣಬಹುದು. ಇದಲ್ಲದೇ ಬಾಲಿವುಡ್, ಫ್ಯಾಶನ್, ಹೆಲ್ತ್, ಆಟೋಮೋಟಿವ್, ಟೆಕ್ನಾಲಜಿ, ಕ್ರೀಡಾ ಮತ್ತು ಇನ್ನು ಹೆಚ್ಚಿನ ವಿಷಯಗಳಿಗೆ ಸಂಬಂಧಿಸಿದ ಟ್ರೆಂಡಿಂಗ್ ವೀಡಿಯೊಗಳನ್ನು ಜಿಯೋ ನ್ಯೂಸ್ ಆಪ್‌ನಲ್ಲಿ ನೋಡಿ ಆನಂದಿಸಬಹುದು.

ಓದುವುದಕ್ಕೆ ಆದ್ಯತೆ ನೀಡುವವರಿಗೆ, ಅವರು ವಿವಿಧ ವರ್ಗಗಳಲ್ಲಿ 800+ ನಿಯತಕಾಲಿಕೆಗಳನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದೆ. ದೇಶಾದ್ಯಂತದ ಪ್ರಕಟವಾಗುವ ದಿನಪತ್ರಿಕೆಗಳು ಜಿಯೋ ನ್ಯೂಸ್ನಲ್ಲಿ ಕಾಣಿಸಿಕೊಳ್ಳುತ್ತದೆ.

ಜಿಯೋ ನ್ಯೂಸ್ ಆಪ್‌ ಜಿಯೋ ಎಕ್ಸ್‌ಪ್ರೆಸ್ ನ್ಯೂಸ್, ಜಿಯೋ ಮ್ಯಾಗ್ಸ್ ಮತ್ತು ಜಿಯೋ ನ್ಯೂಸ್ ಪೇಪರ್ಸ್ ಆಪ್‌ಗಳನ್ನು ಒಳಗೊಂಡ ಸೇವೆಯಾಗಲಿದ್ದು, ಇದರಲ್ಲಿ ಹೆಚ್ಚುವರಿಯಾಗಿ ಲೈವ್ ಟಿವಿ ಮತ್ತು ವೀಡಿಯೋಗಳು ಕೊಡುಗೆಯಾಗಿ ದೊರೆಯಲಿದೆ. ಈಗಾಗಲೇ ಈ ಮೂರು ಆಪ್‌ಗಳನ್ನು ಬಳಕೆ ಮಾಡುತ್ತಿರುವವರು ಬಳಕೆದಾರರು ಜಿಯೋ ನ್ಯೂಸ್ ಆಪ್‌ಗೆ ಸೇರ್ಪಡೆಯಾಗಲಿದ್ದಾರೆ. ಇದಲ್ಲದೇ ಜಿಯೋ ಬಳಕೆದಾರರಲ್ಲದವರಿಗೂ ಪ್ರೀಮಿಯಮ್ ಆಯ್ಕೆಯ ಮೂಲಕ ಜಿಯೋ ನ್ಯೂಸ್ ಆಪ್ ಬಳಕೆಗೆ ಅವಕಾಶವನ್ನು ಮಾಡಿಕೊಟ್ಟಿದೆ.

ಜಿಯೋ ನ್ಯೂಸ್ ಬಳಕೆದಾರರು ಸುದ್ಧಿ ಓದುವ ಮತ್ತು ನೋಡುವ ವಿಧಾವನ್ನು ಬದಲಾವಣೆಯನ್ನು ಮಾಡಲಿದ್ದು, ಹೊಸ ಅನುಭವನ್ನು ನೀಡಲಿದೆ. ಜಿಯೋ ನ್ಯೂಸ್ ಆಪ್ ‘ನಿಮ್ಮ ಸುದ್ದಿ. ನಿಮ್ಮ ಭಾಷೆ’ ಎಂಬ ಸಂಕಲ್ಪದಿಂದ ಕಾರ್ಯನಿರ್ವಹಿಸಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ