ಮಾರುತಿ ಸುಜುಕಿ ಎಕ್ಸ್‌ಎಲ್‌ 6

Team Udayavani, Aug 30, 2019, 5:21 AM IST

ಮಾರುತಿ ಸುಜುಕಿ ಎಕ್ಸ್‌ಎಲ್‌6ನಲ್ಲಿ ಆರು ಸೀಟ್‌ಗಳು ಲಭ್ಯವಿದ್ದು ಸುಖಕರ ಪ್ರಯಾಣಕ್ಕೆ ಸಹಾಯಕವಾಗಿದೆ. 1.5 ಲೀ ಪೆಟ್ರೋಲ್‌ ಸಾಮರ್ಥ್ಯವಿದ್ದು, ಐದು ಮ್ಯಾನ್ಯುವಲ್‌, ನಾಲ್ಕು ಆಟೋಮ್ಯಾಟಿಕ್‌ ಸ್ಪೀಡ ಎಂಜಿನ್‌ ಹೊಂದಿದೆ. ಏಳು ಇಂಚಿನ ಟಚ್‌ ಸ್ಕ್ರೀನ್‌ ಇನಾ#ರ್ಮೇಶನ್‌ ಸಿಸ್ಟಮ್‌ ಇದೆ. ಆಟೋಮ್ಯಾಟಿಕ್‌ ಎಂಜಿನ್‌ಗೆ ಅಗತ್ಯವಾದ ರಸ್ತೆ ಮಾರ್ಗಸೂಚಿ ತಿಳಿಯಲು ಇದು ಸಹಾಯಕ. ಎಕ್ಸ್‌ಎಲ್‌6ನಲ್ಲಿ ನೂತನ ಎಂಪಿವಿ ಗೇಮ್ಸ್‌ಗಳನ್ನು ಅಳವಡಿಸಲಾಗಿದೆ. ಎಕ್ಸ್‌ಎಲ್‌6 ಎರ್ಟಿಗಾ ಮಾದರಿಯಾಗಿ ಕಂಡುಬಂದರೂ ನವೀಕೃತಗೊಂಡಿದೆ.

ಹವಾ ನಿಯಂತ್ರಣ ಹೊಂದಿದ್ದು ದೇಶದ ರಸ್ತೆಗಳ ಸಂಚಾರಕ್ಕೆ ಅನುಕೂಲಿಯಾಗಿದೆ. ಕೆಲವೊಂದು ಸುರಕ್ಷೆ ಮಾರ್ಗಸೂಚಿಗಳನ್ನು ನೀಡಿದೆ. ಲಕ್ಷ ಕಿ.ಮೀ. ಸಹಿತ ಐದು ವರ್ಷಗಳವರೆಗೆ ವಾರೆಂಟಿ ಇದ್ದು ನಾಲ್ಕು ಬಣ್ಣಗಳಲ್ಲಿ ಕಾರು ದೊರೆಯಲಿದೆ. ಈ ಕಾರಿನ ಮಾರುಕಟ್ಟೆಯ ಬೆಲೆ ಅಂದಾಜು 10 ಲಕ್ಷ ರೂ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ