ಆಕರ್ಷಕ ಆಫ‌ರ್‌ ಘೋಷಿಸಿದ ಮಾರುತಿ ಸುಜುಕಿ

Team Udayavani, Oct 15, 2019, 9:10 PM IST

2020ರ ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್‌-6 ನಿಯಮದಂತೆ ತನ್ನ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವ ಬದಲಾವಣೆ ತಂದಿರುವ ಮಾರುತಿ ಸುಜುಕಿ ಸಂಸ್ಥೆ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಬಿಎಸ್‌-6 ವಾಹನಗಳ ಖರೀದಿ ಮೇಲೆ ಭರ್ಜರಿ ಆಫ‌ರ್‌ಗಳನ್ನು ನೀಡಿದೆ.

ಕಳೆದ ತಿಂಗಳು ದಸರಾ ಸಂಭ್ರಮಕ್ಕಾಗಿ ಆಯ್ದು ಕಾರುಗಳ ಮೇಲೆ ಭರ್ಜರಿ ಆಫ‌ರ್‌ ನೀಡಿದ್ದ ಮಾರುತಿ ಸುಜುಕಿಯ ಪುನ: ದೀಪಾವಳಿ ಆಫ‌ರ್‌ ಘೋಷಣೆ ಮಾಡಿದ್ದು, ಮಾರುತಿ ಸುಜುಕಿಯ ಆಲ್ಟೊ ಖರೀದಿ ಮೇಲೆ ರೂ.40 ಸಾವಿರ ಕ್ಯಾಶ್‌ ಡಿಸ್ಕೌಂಟ್‌ ಸೇರಿದಂತೆ ರೂ.20 ಸಾವಿರ ಎಕ್ಸ್‌ಚೆಂಜ್‌ ಆಫ‌ರ್‌ನ್ನು ನೀಡಲಾಗಿದೆ.

ಈ ತಿಂಗಳಾಂತ್ಯದ ತನಕ ಈ ಆಫ‌ರ್‌ ಲಭ್ಯವಿರಲಿದ್ದು,  ಆಯ್ದ ಡೀಲರ್ಸ್‌ಗಳ ಮೂಲಕ ಹೆಚ್ಚು ಆಫ‌ರ್‌ಗಳನ್ನು ನೀಡಲಿದೆ.

ಸರಕಾರ ಕಾರ್ಪೊರೇಟ್‌ ತೆರಿಗೆ ದರವನ್ನು ಹತ್ತು ಪ್ರತಿ ಶತ ರಷ್ಟು ಕಡಿತಗೊಳಿಸಿದ ಅನಂತರದ ದಿನಗಳಲ್ಲಿ ಮಾರುತಿ ತನ್ನ ಆವೃತ್ತಿಯ ಎಲ್ಲಾ ಕಾರುಗಳ ಬೆಲೆಯಲ್ಲಿ ಸುಮಾರು 5000 ರೂಗಳನ್ನು ಕಡಿತಗೊಳಿಸಿದ್ದು, ಮಾರುತಿ ಸುಜುಕಿ ವಿಟಾರಾ ಬ್ರೆಜಾ ವಾಹನದ ಮೇಲೆ 97,000 ರೂ.ಗಳವರೆಗೆ ರಿಯಾಯಿತಿಯನ್ನು ನೀಡುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...

  • ನಗರದ ಕೇಂದ್ರ ಭಾಗವಾದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಬಸ್‌ ನಿಲುಗಡೆಗೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ....