ಡಿ. 16ರ ರಿಂದ ಹೊಸ ಪೋರ್ಟಬಿಲಿಟಿ ನಿಯಮ ಜಾರಿ

3 ದಿನದೊಳಗಾಗಿ ಸೇವೆ ಪೂರೈಸಬೇಕೆಂದ ಟ್ರಾಯ್‌

Team Udayavani, Dec 15, 2019, 8:24 PM IST

ಹೊಸದಿಲ್ಲಿ: ಟೆಲಿಕಾಂ ಸೆಕ್ಟರ್‌ ರೆಗ್ಯೂಲೇಟರ್‌ (ಟ್ರಾಯ್‌) ವಿಭಿನ್ನವಾದ ಪೋರ್ಟಿಂಗ್‌ ಸಿಸ್ಟಂ ಜಾರಿಗೆ ತರಲು ಮುಂದಾಗಿದೆ. ಈ ಹೊಸ ವ್ಯವಸ್ಥೆಯ ಪ್ರಕಾರ, ಮೊಬೈಲ್‌ ಸಂಸ್ಥೆಗಳಿಗೆ ಹೊಸ ಷರತ್ತನ್ನು ವಿಧಿಸಲಾಗಿದ್ದು, ಪ್ರಾಂತೀಯ ಸೇವಾಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೊಬೈಲ್‌ ಪೋರ್ಟಿಂಗ್‌ ಸೇವೆಯನ್ನು ಮೂರು ಕೆಲಸದ (ವರ್ಕಿಂಗ್‌ ಡೇ) ದಿನದೊಳಗೆ ಪೂರ್ಣಗೊಳಿಸಿ ಕೊಡಬೇಕಾಗಿ ಆದೇಶ ಹೊರಡಿಸಿದೆ.

ಈ ಹೊಸ ನಿಯಮ ಡಿಸೆಂಬರ್‌ 16 ರಿಂದ ಜಾರಿಗೆ ಬರಲಿದ್ದು, ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲಗಳಾಗಲಿವೆ ಎಂದು ಟೆಲಿಕಾಂ ನಿಯಂತ್ರಣ ಅಥಾರಿಟಿ (ಟ್ರಾಯ್‌) ಅಭಿಪ್ರಾಯಪಟ್ಟಿದೆ. ಅಲ್ಲದೇ, ಒಂದು ವಲಯದಿಂದ ಇನ್ನೊಂದು ವಲಯಕ್ಕೆ ಪೋರ್ಟಿಂಗ್‌ ಕೆಲಸವನ್ನು ಒಂದು ವಾರದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎನ್ನುವ ನಿಯಮವನ್ನು ಟೆಲೆಕಾಂ ಸೆಕ್ಟರ್‌ ಮೊಬೈಲ್‌ ಸಂಸ್ಥೆಗಳಿಗೆ ಹಾಕಿದೆ.

ಟ್ರಾಯ್‌ ಮೊಬೈಲ್‌ ಸಂಖ್ಯೆಯ ಪೊರ್ಟಿಬಿಲಿಟಿ (ಎಂಎನ್‌ ಪಿ) ಪ್ರಕ್ರಿಯೆಯನ್ನು ಸಂಸ್ಥೆ ಪರಿಷ್ಕರಿಸಿದ್ದು, ಚಂದಾದಾರರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಪೋರ್ಟ್‌ ಮಾಡಲು ಅರ್ಹರಾದಾಗ ಮಾತ್ರ ಯುಪಿಸಿಯನ್ನು ನೀಡಲಾಗುತ್ತದೆ ಎಂದು ಟ್ರಾಯ್‌ ಹೇಳಿದೆ. ಅಲ್ಲದೇ, ಪರಿಷ್ಕೃತ ಪ್ರಕ್ರಿಯೆಯನ್ನು ಡಿಸೆಂಬರ್‌ 16ರಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ನೂತನ ನಿಯಮದ ಅನ್ವಯದಂತೆ…
– ಪೋರ್ಟಬಿಲಿಟಿ ಮಾಡಬೇಕೆಂದು ಇಚ್ಛಿಸುವ ಗ್ರಾಹಕರು ಪೋಸ್ಟ್ ಪೈಡ್‌ ಮೊಬೈಲ್‌ ಸಂಪರ್ಕದ ಬಿಲ್‌ ಪಾವತಿಯನ್ನು ಪೋರ್ಟ್‌ ಮಾಡುವ ಮೊದಲು ಪಾವತಿ ಮಾಡಿರಬೇಕು.

– ಪೋರ್ಟೆಬಿಲಿಟಿಗೊಳಿಸಿದ ನೆಟ್‌ವರ್ಕ್‌ ಅನ್ನು ಕನಿಷ್ಠ 90 ದಿನಗಳು ಸಕ್ರಿಯವಾಗಿಡಬೇಕು. ಅನಂತರ ಬೇಕಾದರೆ ಪುನ: ಮತ್ತೂಂದು ನೆಟ್‌ವರ್ಕ್‌ಗೆ ಪೋರ್ಟ್‌ ಆಗಬಹುದು.

– ಪೋರ್ಟ್‌ ಮಾಡುವ ಮುನ್ನ ಚಂದಾದಾರರು ಯಾವ ಸಂಸ್ಥೆಯ ಸೇವೆಯಿಂದ ಹೊರಬರಲು ಬಯಸುತ್ತಾರೋ, ಆ ಸಂಸ್ಥೆಯ ಎಕ್ಸಿಟ್‌ ನಿಯಮಗಳನ್ನು ಉಲ್ಲಂಘಿಸಬಾರದು.

– ಮೊಬೈಲ್‌ ಸಂಖ್ಯೆಯನ್ನು ಪೋರ್ಟ್‌ ಮಾಡುವುದನ್ನು ಯಾವ ನ್ಯಾಯಾಲಯವು ನಿಷೇಧಿಸುವುದಿಲ್ಲ ಮತ್ತು ಪೋರ್ಟ್‌ ಮಾಡುವುದು ಕಾನೂನಿನ ಉಲ್ಲಂಘನೆಯಲ್ಲ.

– ನೀವು ಈಗಾಗಲೇ ಪೋರ್ಟಬಿಲಿಟಿಗಾಗಿ ಅರ್ಜಿಯನ್ನು ನೀಡಿದ್ದರೆ ಮತ್ತೂಮ್ಮೆ ನಿಮ್ಮ ಮೊಬೈಲ್‌ ಸಂಖ್ಯೆ ಪೋರ್ಟಬಿಲಿಟಿಗೆ ಅರ್ಹವಾಗುವುದಿಲ್ಲ.

– ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಪ್ರತಿ ಪೋರ್ಟಿಂಗ್‌ ಸೇವೆಗೆ 6.46 ರೂ. ಮೊತ್ತವನ್ನು ವಹಿವಾಟು ಶುಲ್ಕವಾಗಿ ವಿಧಿಸುತ್ತದೆ.

ಎಂಎನ್‌ಪಿ ಎಂದರೇನು?
ಮೊಬೈಲ್‌ ನಂಬರ್‌ ಪೋರ್ಟಬಿಲಿಟಿ ಈ ಮೂಲಕ ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಬದಲಾಯಿಸದೆ ಒಂದು ಆಪರೇಟರ್‌ನಿಂದ ಮತ್ತೂಂದು ಆಪರೇಟರ್‌ಗೆಪೋರ್ಟ್‌ ಮಾಡಿಕೊಳ್ಳಬಹುದು.

ಉದಾ: ಏರ್‌ಟೆಲ್‌ ಟು ಜಿಯೋ, ಜಿಯೋ ಟು ವೊಡಾಫೋನ್‌. ಈ ವೇಳೆ ಕಂಪೆನಿ ಬದಲಿಸಿದರೂ ನಿಮ್ಮ ನಂಬರ್‌ ಬದಲಾವಣೆ ಆಗುವುದಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ