ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮೋಟೋ ಜಿ 8 ಪ್ಲಸ್: ಏನಿದರ ವಿಶೇಷತೆ ? ಬೆಲೆ ಎಷ್ಟು ?

Team Udayavani, Oct 24, 2019, 4:00 PM IST

ಮಣಿಪಾಲ: ಮೋಟೋ ಕಂಪೆನಿ ಸಿದ್ದಪಡಿಸಿದ ಮೋಟೋ ಜಿ 8 ಪ್ಲಸ್  ಇಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು ಭಾರೀ ಕುತೂಹಲ ಕೆರಳಿಸಿದೆ. ಬ್ರೆಜಿಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಈ ಸ್ಮಾರ್ಟ್ ಫೋನ್ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದು ಮೋಟೋ ಜಿ 7 ಪ್ಲಸ್ ನ ಹೋಲಿಕೆಯನ್ನು ಹೊಂದಿದ್ದು  ಫೀಚರ್ ಗಳಲ್ಲಿ ಮಾತ್ರ ಕೆಲವೊಂದು ಬದಲಾವಣೆಗಳು ಕಂಡುಬರಲಿದೆ ಎಂದು ಅಂದಾಜಿಸಲಾಗಿದೆ.

ಮೋಟೋ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಿರುವ ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ ಮೂರು ಕ್ಯಾಮಾರಗಳು ಇರಲಿದ್ದು ​ 48 ಮೆಗಾಫಿಕ್ಸೆಲ್​ ಕ್ಯಾಮೆರಾದ ಜೊತೆಗೆ, 16 ಮೆಗಾಫಿಕ್ಸೆಲ್​ ವೈಡ್​ ಆ್ಯಂಗಲ್​ ಲೆನ್ಸ್​ ಮತ್ತು 5 ಮೆಗಾಫಿಕ್ಸೆಲ್​ ಡೆಪ್ತ್​​ ಸೆನ್ಸಾರ್​ ಅಳವಡಿಸಲಾಗಿದೆ. ಸೆಲ್ಫಿಗಾಗಿ 25 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ.

ಮೋಟೋ ಜಿ 8 ಪ್ಲಸ್  6.3 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇಯನ್ನು ಹೊಂದಿದ್ದು 1080*2280 ಫಿಕ್ಸೆಲ್  ರೆಶಲ್ಯೂಶನ್ ಒಳಗೊಂಡಿದೆ. ಅದರ ಜೊತೆಗೆ  ಆ್ಯಂಡ್ರಾಯ್ಡ್ 9 ಪೈ ನಿಂದ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಸ್ನ್ಯಾಪ್ ಡ್ರ್ಯಾಗನ್ 665 ಓಕ್ವಾ ಕೋರ್ ಎಸ್ ಒಸಿ ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ 4ಜಿಬಿ RAM ಮತ್ತು 64 ಜಿಬಿ ಸ್ಟೋರೆಜ್ ಮತ್ತು 128 ಜಿಬಿವರೆಗೆ ವಿಸ್ತರಿಸಬಹುದಾದ  ಆಂತರಿಕ ಸ್ಟೋರೆಜ್ ಅನ್ನು ಒಳಗೊಂಡಿದೆ.

ಮೋಟೋ ಜಿ8 ಪ್ಲಸ್​ ಸ್ಮಾರ್ಟ್​ಫೋನ್​ ನಲ್ಲಿ  4,000mAh​ ಬ್ಯಾಟರಿಯನ್ನು ನೀಡಲಾಗಿದೆ. ಜೊತೆಗೆ 3.5mm ಆಡಿಯೋ ಜಾಕ್​​, ಫಿಂಗರ್​ ಪ್ರಿಂಟ್​ ಸ್ಕ್ಯಾನರ್​ ನೀಡಲಾಗಿದೆ. ಮಾತ್ರವಲ್ಲದೆ, ಬ್ಲೂಟೂತ್​ ವಿ5, ಎಲ್​ಇಡಿ, ಡುಯೆಲ್​ ಸಿಮ್​, ವೈ-ಫೈ, ಹೆಚ್ಚುವರಿ ಲೇಸರ್ ಅಟೋಫೋಕಸ್ ಆಯ್ಕೆ ಕೂಡ ಇರಲಿದೆ. ಇದರ ಬೆಲೆ ​ ಬೆಲೆ 23,600 ರೂ. ವೆಂದು ಅಂದಾಜಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ