ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ 2.3 ನೋಕಿಯಾ ಕೈರೋ

ಒಮ್ಮೆ ಚಾರ್ಜ್‌ ಮಾಡಿದ್ದರೆ 2 ದಿನ ಬಾಳಿಕೆ

Team Udayavani, Dec 14, 2019, 5:15 PM IST

ಹೊಸದಿಲ್ಲಿ: ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಆವಿಷ್ಕಾರ ನಡೆಯುತ್ತಲೇ ಇರುತ್ತದೆ. ಹೊಸ ಹೊಸ ಮಾದರಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಕ್ಕಾಗಿ ಪ್ರತಿಯೊಂದು ಕಂಪನಿಗಳು ಒಂದಲ್ಲ ಒಂದು ಸರ್ಕಸ್‌ ಮಾಡುತ್ತಲ್ಲೇ ಇರುತ್ತವೆ. ಇದೀಗ ಅಂತಹ ವಿನೂತನ ಕಾರ್ಯಕ್ಕೆ ನೋಕಿಯಾ ಕಂಪನಿ ಮುಂದಾಗಿದ್ದು, ಮತ್ತೂಂದು ಸ್ಮಾರ್ಟ್‌ ಫೋನ್‌ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ.

2.3 ನೋಕಿಯಾ ಕೈರೋ
ಕಳೆದ ವಾರ ಈಜಿಫ್ಟ್ ನಲ್ಲಿ ಬಿಡುಗಡೆಯಾಗಿರುವ ನೋಕಿಯಾದ ಬಜೆಟ್‌ ಮೊಬೈಲ್‌ 2.3, ಕೈರೋ ಸ್ಮಾರ್ಟ್‌ ಪೋನ್‌ ಅನ್ನು ಶೀಘ್ರದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುತ್ತದೆ ಎಂದು ಕಂಪನಿ ಟ್ವಿಟರ್‌ ಮೂಲಕ ತಿಳಿಸಿದ್ದು, ನೋಕಿಯಾ ಸ್ಮಾರ್ಟ್‌ಫೋನ್‌ ವೈಶಿಷ್ಟಗಳಿಗೆ ಸಂಬಂಧ ಪಟ್ಟಂತೆ ಎರಡು ತುಣಕುಗಳ ವಿಡಿಯೋ ಹಂಚಿಕೊಂಡಿದೆ. ಮೊದಲ ಟೀಸರ್‌ನಲ್ಲಿ ನೋಕಿಯಾ 2.3ನ ಬ್ಯಾಟರಿ ಸಾಮರ್ಥ್ಯ ಹಾಗೂ ಎರಡನೇ ಟೀಸರ್‌ನಲ್ಲಿ ಮೊಬೈಲ್‌ ಫೀಚರ್‌ ಬಗ್ಗೆ ಮಾಹಿತಿ ನೀಡಲಾಗಿದೆ.

ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ
ನೋಕಿಯಾ 2.3 ಸ್ಮಾರ್ಟ್ಫೋನ್ 6.2 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಜತೆಗೆ ಎಚ್‌ಡಿ 720/1520 ಪಿಕ್ಸೆಲ್‌ ರೆಸಲ್ಯೂಷನ್‌ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ವಾಟರ್‌ಡ್ರಾಪ್‌ ಶೇಪ್‌ ಡಿಸ್‌ಪ್ಲೇ ವಿನ್ಯಾಸವನ್ನು ಒಳಗೊಂಡಿದ್ದು, ಮೀಡಿಯಾ ಟೆಕ್‌ ಹಿಲಿಯೊ ಎ22 ಕ್ವಾಡ್‌ ಕೋರ್‌ ಪೊ›ಸೆಸರ್‌ ಸಾಮರ್ಥ್ಯವಿದೆ.

2ಜಿಬಿ ರ್ಯಾಮ್‌
ಆ್ಯಂಡ್ರಾಯ್ಡ್ 9 ಪೈ ಒಎಸ್‌ ಸಿಸ್ಟಮ್‌ವಿರುವ ಈ ಮೊಬೈಲ್‌ ಅಲ್ಲಿ 2ಜಿಬಿ ರ‍್ಯಾಮ್ ಮತ್ತು 32ಜಿಬಿ ಇಂಟರ್‌ನಲ್‌ ಮೆಮೊರಿ ಕೆಪಾಸಿಟಿ ಇದ್ದು, ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ರಿರ್ಯ ಕ್ಯಾಮೆರಾ 2.2 ಅಪರ್‌ಚರ್‌ನೊಂದಿಗೆ 13ಎಂಪಿ ಸೆನ್ಸಾರ್‌ ಅನ್ನು ಹೊಂದಿದೆ. ಜತೆಗೆ ಸೆಕಂಡರಿ ಕ್ಯಾಮೆರಾದಲ್ಲಿ 2ಎಂಪಿ ಸೆನ್ಸಾರ್‌ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 5ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ.

2ದಿನ ಬಾಳಿಕೆ ಬರುತ್ತದೆ
ಈ ಮೊಬೈಲ್‌ ವಿಶಿಷ್ಟವೆಂದರೆ ಒಮ್ಮೆ ಮೊಬೈಲ್‌ ಅನ್ನು ಚಾರ್ಜ್‌ ಮಾಡಿದ್ದರೆ ಎರಡು ದಿನಗಳವರೆಗೆ ಬಾಳಿಕೆ ಬರುತ್ತದೆ ಎನ್ನಲಾಗುತ್ತಿದ್ದು, 4,000ಎಂಹೆಚ್‌ ಸಾಮರ್ಥ್ಯದ ಬ್ಯಾಟರಿಯನ್ನು ನೋಕಿಯಾ 2.3 ಕೈರೋ ಹೊಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...